Search
  • Follow NativePlanet
Share
ಮುಖಪುಟ » ಸ್ಥಳಗಳು» ಮಯೂರ್ಭಂಜ್

ಮಯೂರ್ಭಂಜ ಪ್ರವಾಸೋದ್ಯಮ : ಪ್ರಕೃತಿ ಮಡಿಲಿನ ಸಮಾಧಾನ

22

ಮಯೂರ್ಭಂಜವು ಪ್ರವಾಸೋದ್ಯಮವು ಅದ್ಭುತವಾದ ದೃಶ್ಯಗಳು ಮತ್ತು ಧ್ವನಿಗಳನ್ನು ಹೊಂದಿದ್ದು,  ಇವುಗಳು ಇಲ್ಲರಿಗೂ ಅಹ್ವಾನವನ್ನು ನೀಡುತ್ತದೆ. ಇಲ್ಲಿ ಪ್ರತಿಯೊಂದು ಹಬ್ಬಗಳನ್ನು ಅನುಪಮ ವೈಭವ ಮತ್ತು ಆತ್ಮ ಗೌರವದೊಂದಿಗೆ ಆಚರಿಸಲಾಗುತ್ತದೆ. ಈ ಹಬ್ಬಗಳಿಗೆ ದೂರ ಮತ್ತು ಸಮೀಪದ ಸ್ಥಳಗಳ ಜನರು ಬರುತ್ತಾರೆ. ಈ ಸಮಯದಲ್ಲಿ ಅಪಾರವಾದ ಜನಸಂದಣಿ ಇರುತ್ತದೆ. ಚೈತ್ರ ಪರ್ವ ಉತ್ಸವದಲ್ಲಿ ದೇಶಾದ್ಯಂತ ಇರುವ ಪ್ರತಿಭಾನ್ವಿತ ವ್ಯಕ್ತಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ.  ಜನಮನ್ನಣೆಯನ್ನು ಗಳಿಸುತ್ತಾರೆ.

ಮಯೂರ್ಭಂಜವು ಉತ್ತಮ ಪ್ರವಾಸಿ ತಾಣಗಳಿಂದ ಸುತ್ತುವರೆದಿದ್ದು, ಈ ಸ್ಥಳಗಳು ಆಕರ್ಷಕವಾಗಿವೆ. ಮಯೂರ್ಭಂಜ ಪ್ರವಾಸೋದ್ಯಮಕ್ಕೆ ಬರಿಪಾದವು ನೀರೆರೆದಿದೆ. ಇಲ್ಲಿರುವ ರಾಷ್ಟ್ರೀಯ ಉದ್ಯಾನವನವಾದ ಸಿಮಿಲಿಪಾಲವು ಸಹ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ದೇವಕುಂಡದಲ್ಲಿರುವ ಭವ್ಯವಾದ ದೃಶ್ಯಾವಳಿಯು ಪ್ರವಾಸಿಗರ ಉಸಿರು ಕಟ್ಟುವಂತೆ ಮಾಡುತ್ತದೆ. ಖಿಚಿಂಗವು ಪ್ರವಾಸಿಗರಿಗೆ ಆ ಸ್ಥಳದಲ್ಲಿ ಅನೇಕ ವರ್ಷಗಳಿಂದ ಇರುವ ದೇವಾಲಯಗಳಿಗೆ ಪ್ರವಾಸ ಮಾಡುವ ಅವಕಾಶವನ್ನು ಒದಗಿಸುತ್ತದೆ.  

ಮಯೂರ್ಭಂಜ : ಖನಿಜಗಳ ಸ್ವರ್ಗ

ಮಯೂರರ್ಭಂಜ ಪ್ರದೇಶವು ತಾನು ಹೊಂದಿರುವ ಅಪಾರವಾದ ಖನಿಜಗಳ ನಿಕ್ಷೇಪಗಳಿಂದ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಈ ಪ್ರದೇಶದಲ್ಲಿರುವ ಖನಿಜ ಸಂಪನ್ಮೂಲಗಳು ಮಯೂರರ್ಭಂಜ ಪ್ರದೇಶದ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತವೆ. ಮಯೂರ್ಭಂಜ ಪ್ರದೇಶದ ವಿನ್ಯಾಸವು ಯಾವ ರೀತಿಯಾಗಿದೆ ಎಂದರೆ, ಭಾಗಶಃ ನಿಧಾನವಾಗಿ ಹರಿಯುತ್ತಿರುವ ನದಿಯೊಂದಿಗೆ ಉರುಳುತ್ತಿರುವ ಬೆಟ್ಟದಂತಿದೆ. ಆದಾಗ್ಯೂ ಈ ಪ್ರದೇಶದಲ್ಲಿ ಅಸಂಖ್ಯಾತ ಗಣಿಗಳು ಕಾಯನಿರ್ವಹಿಸುತ್ತಿವೆ. ಇದರಿಂದ ಹಾಳಾಗುತ್ತಿರುವ ಈ ಪ್ರದೇಶದ ನೈಸರ್ಗಿಕ ಭೂ ರಚನೆಯ ಗುಣಮಟ್ಟವನ್ನು ಸಿಮಿಲಿಪಾಲ ರಾಷ್ಟ್ರೀಯ ಉದ್ಯಾನವನವನ್ನು ನಿರ್ಮಿಸುವ ಮೂಲಕ ಉಳಿಸಿಕೊಳ್ಳಲಾಗಿದೆ. ಇದು ಮಯೂರ್ಭಂಜನ ಪ್ರವಾಸೋದ್ಯಮವನ್ನು ವರ್ಧಿಸುತ್ತಿದೆ ಅಲ್ಲದೇ ಅದನ್ನು ಜೀವಂತವಾಗಿರಿಸಿದೆ.

ಮಯೂರ್ಭಂಜ :  ಜೀವನದ ಸಂಭ್ರಮ ಮತ್ತು ಉತ್ಸಾಹ

ಮಯೂರ್ಭಂಜವು ಜೀವನದಲ್ಲಿ ಮತ್ತೆ ಸಂಭ್ರಮವನ್ನು ಮರಳಿ ತರುತ್ತದೆ. ಇಲ್ಲಿ ನಿರಂತರ ತೊರೆಯಂತೆ ಬರುವ ಸಾಲು ಹಬ್ಬಗಳು ಮತ್ತು ಜಾತ್ರೆಗಳು ಮಯೂÀರ್ಭಂಜ ಜನತೆಯನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತವೆ. ಅವರಿಗೆ ಶಕ್ತಿಯನ್ನು ಕೊಡುವ ಆಹಾರ ಎಂದರೆ ಮುಧಿ ( ಮಂಡಕ್ಕಿ). ಇದರಲ್ಲಿ ಯಾವುದೇ ಸಂಶಯವಿಲ್ಲ.  ಇದು ಈ ಪ್ರದೇಶದ  ಬೆಳಗಿನ ಪ್ರಧಾನ ಉಪಹಾರವಾಗಿದೆ.

ಪ್ರವಾಸಿಗರು ಇಲ್ಲಿ ವಿಶಿಷ್ಟವಾದ ಸ್ಮರಣಿಕೆಗಳನ್ನು ಖರೀದಿಸಬಹುದು. ಈ ತಾಟು ಮತ್ತು ಬಟ್ಟಲುಗಳ ಸ್ಮರಣಿಕೆಗಳು ಸಾಲ ಮರಗಳ ಎಲೆಯಿಂದ ತಯಾರಾಗುತ್ತವೆ. ಓರಿಸ್ಸಾದ ಪುರಿ ಜಗನ್ನಾಥನ ರಥಯಾತ್ರೆಯು ಮೊದಲನೇಯದಾದರೆ, ಬರಿಪಾದದ ಈ ರಥಯಾತ್ರಾ ಉತ್ಸವವು ಎರಡನೇಯದು. ಇಲ್ಲಿ ಹಬ್ಬಗಳು ಉಂಟು ಮಾಡುವ ಉತ್ಸಾಹ ಮತ್ತು ಸಂಭ್ರಮವನ್ನು ಶಬ್ದಗಳಲ್ಲಿ ಹಿಡಿದಿಡುವುದು ಖಂಡಿತವಾಗಿಯೂ ಅಸಾಧ್ಯದ ಮಾತೇ ಸರಿ. ಚಾಹು ನೃತ್ಯ ಮಯೂರರ್ಭಂಜದ ನೃತ್ಯಪ್ರಕಾರವಾಗಿದ್ದು , ಅದು ಅಲ್ಲಿನ ಆ ಪ್ರದೇಶಗಳ ಸಾಂಸ್ಕತಿಕ ಚಟುವಟಿಕೆಗಳಿಗೆ ವಿಶಿಷ್ಟ ಲಕ್ಷಣವನ್ನು ನೀಡಿದೆ.

ಮಯೂರ್ಭಂಜವನ್ನು ತಲುಪುವುದು ಹೇಗೆ?

ಇದು ಒರಿಸ್ಸಾದ ಪ್ರಮುಖ ಮತ್ತು ದೊಡ್ಡ ಜಿಲ್ಲೆಯಾದ್ದರಿಂದ, ಇಲ್ಲಿ ಸಾರಿಗೆ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುತ್ತದೆ. ನಿರಂತರವಾಗಿರುವ ರೈಲು ಮತ್ತು ಸಾರಿಗೆ ಸಂಪರ್ಕವು ಸ್ಥಳೀಯರನ್ನು ಮತ್ತು ಪ್ರವಾಸಿಗರನ್ನು  ಈ ಜಿಲ್ಲೆಯ ವಿವಿಧ ಸ್ಥಳಗಳಿಗೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ಒರಿಸ್ಸಾದ ಮೊದಲ ವಿಮಾನ ನಿಲ್ದಾಣವನ್ನು ಬ್ರಿಟಿಷ ವಸಾಹುತಗಾರಗು ನಿರ್ಮಿಸಿದರು. ಇವತ್ತು ಇದು 2 ಕೀಲೊ ಮೀಟರ ರನ ವೇ ಯನ್ನು ಹೊಂದಿದೆ.

ಮಯೂರ್ಭಂಜ ಹವಾಮಾನ

ಸಪ್ಟಂಬರ ಮತ್ತು ಮಾರ್ಚ ತಿಂಗಳುಗಳು ಮಯೂರ್ಭಂಜಕ್ಕೆ ಭೇಟಿ ಕೊಡಲು ಯೋಗ್ಯವಾಗಿದೆ. ಈ ಸಮಯದಲ್ಲಿ ತಾಪಮಾನವು ಆದ್ರ್ರತೆಯಿಂದ ಕೂಡಿರುತ್ತದೆ.

ಮಯೂರ್ಭಂಜ್ ಪ್ರಸಿದ್ಧವಾಗಿದೆ

ಮಯೂರ್ಭಂಜ್ ಹವಾಮಾನ

ಉತ್ತಮ ಸಮಯ ಮಯೂರ್ಭಂಜ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಯೂರ್ಭಂಜ್

  • ರಸ್ತೆಯ ಮೂಲಕ
    ಮಯೂರ್ಭಂಜನ ರಸ್ತೆ ಸಾರಿಗೆ ಸೌಲಭ್ಯವು ನಂಬಿಕೆ ಅರ್ಹವಾಗಿದೆ. ಸುಸಜ್ಜಿತ ರಸ್ತೆಗಳನ್ನು ಇದು ಹೊಂದಿದ್ದು, ನಿಯಮಿತ ಸಾರ್ವಜನಿಕ ಸಾರಿಗೆಗಳು, ಹವಾ ನಿಯಂತ್ರಿತ ಬಸ್ಸುಗಳು ಪ್ರಯಾಣಿಕರ ಸೇವೆಗಾಗಿ ಸದಾ ಸಿದ್ದವಿರುತ್ತವೆ. ಮಯೂರ್ಭಂಜ ನಗರ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಿಗೆ ನಿರಂತರವಾಗಿ ಉತ್ತಮ ಬಸ್ಸುಗಳ ಸೌಲಭ್ಯವಿದೆ. ಬರಿಪಾದ ನಗರವು ರಾಷ್ಟ್ರೀಯ ಹೆದ್ದಾರಿ 5 ರ ಆರಂಭಿಕ ಹಂತದಿಂದ 30 ಕೀಲೊ ಮೀಟರ ದೂರದಲ್ಲಿ ನೆಲೆಗೊಂಡಿದೆ. ಈ ಹೆದ್ದಾರಿಯು ನೇರವಾಗಿ ಚೆನ್ನೈಯೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಒರಿಸ್ಸಾವು ಈ ದೇಶದ ಅತ್ಯಂತ ಹಳೆಯ ರೇಲ್ವೆ ನಿಲ್ದಾಣಗಳಲ್ಲಿ ಒಂದು ಎಂದು ಹೆಸರುವಾಸಿಯಾಗಿದೆ. ಬರಿಪಾದವು ಮಹಾರಾಜ ಕೃಷ್ಣ ಚಂದ್ರ ಭಂಜದೇವರಿಂದಾಗಿ ಹೌರಾ – ಚೆನ್ನೈ ರೇಲ್ವೆ ಕಾರಿಡಾರನೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಭುವನೇಶ್ವರ ಮತ್ತು ಕಲ್ಕತ್ತಾ ನಗರಗಳಿಗೆ ಹೋಗುವ ಮತ್ತು ಬರುವ ರೇಲ್ವೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಇವುಗಳನ್ನು ಸ್ಥಳೀಯರು ಮತ್ತು ಪ್ರವಾಸಿಗರು ಸಾಕಷ್ಟು ಬಳಸುತ್ತಾರೆ.ಮಯೂರ್ಭಂಜ ನಗರಕ್ಕೆ ತಲುಪುವ ಅತ್ಯಂತ ಯೋಗ್ಯವಾದ ಮಾರ್ಗ ಎಂದರೆ ಕಲ್ಕತ್ತದವರೆಗೆ ವಿಮಾನ ಪ್ರಯಾಣ ಮಾಡುವುದು. ನಂತರ ರೇಲ್ವೆಯನ್ನು ಬಳಸಿ ಬರಿಪಾದವನ್ನು ತಲುಪುವುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಯೂರ್ಭಂಜ ನಗರಕ್ಕೆ ಅತ್ಯಂತ ಹತ್ತಿರವಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದರೆ ನೇತಾಜಿ ಸುಭಾಷ ಚಂದ್ರ ಬೋಸ ವಿಮಾನ ನಿಲ್ದಾಣ. ಇದು ಕಲಕತ್ತ ದಲ್ಲಿದ್ದು ಮಯೂರ್ಭಂಜನಿಂದ 248 ಕೀಲೊ ಮೀಟರ ದೂರದಲ್ಲಿದೆ. ಸೋನಾರಿ,ರೂರ್ಕೇಲಾ ಮತ್ತು ಬಿರ್ಸಾ ಮುಂಡಾ ವಿಮಾನ ನಿಲ್ದಾಣಗಳು ಮಯೂರ್ಭಂಜ ನಗರಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣಗಳಾಗಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City