Search
  • Follow NativePlanet
Share
ಮುಖಪುಟ » ಸ್ಥಳಗಳು » ಮಯೂರ್ಭಂಜ್ » ಹವಾಮಾನ

ಮಯೂರ್ಭಂಜ್ ಹವಾಮಾನ

ಚಳಿಗಾಲವು ಇಲ್ಲಿಗೆ ಭೇಟಿ ಕೊಡಲು ಅತ್ಯಂತ ಯೋಗ್ಯವಾದ ಸಮಯವಾಗಿದೆ. ಚಳಿಗಾಲವು ಸೂಕ್ತ ಸೂರ್ಯನ ಬೆಳಕು, ಆದ್ರ್ರತೆ, ಆಹ್ಲಾದಕತೆ, ತಾಪಮಾನ, ಮಳೆಗಳ ಉತ್ತಮ ಮಿಶ್ರಣವಾಗಿದೆ. ಆಗ ತಾಪಮಾನವು ಸುಮಾರು ಸರಾಸರಿ 28 ಡಿಗ್ರಿ ಸೆಲ್ಸಿಯಸನವರೆಗೆ ಇರುತ್ತದೆ. ಡಿಸಂಬರ ಮತ್ತು ಜನೇವರಿಯಲ್ಲಿ ತಂಪು ಹೆಚ್ಚಾಗಿರುತ್ತದೆ. ಆಗ ಇಲ್ಲಿನ ತಾಪಮಾನವು ಸುಮಾರು 15 ಡಿಗ್ರಿ ಸೆಲ್ಸಿಯಸನಷ್ಟು ಇರುತ್ತದೆ. ಅಕ್ಟೋಬರ ಅಂತ್ಯದಲ್ಲಿ ಆರಂಭವಾಗುವ ಚಳಿಗಾಲವು ಫೆಬ್ರುವರಿ ತಿಂಗಳ ಆರಂಭದವರೆಗೂ ಮುಂದುವರೆಯುತ್ತದೆ.

ಬೇಸಿಗೆಗಾಲ

ಮಯೂರ್ಭಂಜನ ಬೇಸಿಗೆ ಕಾಲವು ವಿದೇಶಿಗರ “ ದಿ ಗ್ರೇಟ ಇಂಡಿಯನ ಸಮ್ಮರ” ದ ನೀರಿಕ್ಷೆಗಳನ್ನು ಪೂರ್ಣಗೊಳಿಸುತ್ತದೆ. ಅಂದರೆ ಬೇಸಿಗೆ ಕಾಲದಲ್ಲಿ ಇಲ್ಲಿನ ತಾಪಮಾನ ಮತ್ತು ಶುಷ್ಕತನದ ಹವಾಮಾನವನ್ನು ಸಹಿಸಿಕೊಳ್ಳುವುದು ಪ್ರವಾಸಿಗರಿಗೆ ಅಸಾಧ್ಯವೇ ಸರಿ. ಇಲ್ಲಿ ಏಪ್ರೀಲ ಮತ್ತು ಮೇ ತಿಂಗಳುಗಳು  ವರ್ಷದಲ್ಲಿ ಅತಿ ತಾಪಮಾನ ಇರುವ ತಿಂಗಳುಗಳಾಗಿವೆ. ಆಗ ಇಲ್ಲಿನ ತಾಪಮಾನವು ಸುಮಾರು ಸರಾಸರಿ 35 ಡಿಗ್ರಿ ಸೆಲ್ಸಿಯಸನಷ್ಟು ಇರುತ್ತದೆ.

ಮಳೆಗಾಲ

ಮಯೂರ್ಭಂಜನ ಮಳೆಗಾಲವು ಈ ಮೂರು ಕಾಲಗಳಲ್ಲಿಯೇ ಧೀರ್ಘಾವಧಿಯನ್ನು ಹೊಂದಿದೆ. ಮೇ ತಿಂಗಳಿನಿಂದ ಅಕ್ಟೋಬರ ತಿಂಗಳಿನವರೆಗೂ ಇಲ್ಲಿ ಮಳೆಗಾಲ ಇರುತ್ತದೆ. ಅಗಸ್ಟನಲ್ಲಿ ಇಲ್ಲಿ ಅತಿ  ಹೆಚ್ಚಿನ ಮಳೆ ಆಗುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ ನಿಂದ 30 ಡಿಗ್ರಿ ಸೆಲ್ಸಿಯಸ ನಷ್ಟು ಇರುತ್ತದೆ.

ಚಳಿಗಾಲ

ಚಳಿಗಾಲವು ಪ್ರವಾಸಿಗರಿಗೆ ಉತ್ತಮ ದೃಶ್ಯ ಮತ್ತು ಧ್ವನಿಗಳ ಕೊಡುಗೆಯನ್ನು ನೀಡುತ್ತದೆ. ದೀಪಾವಳಿ ಮತ್ತು ನವರಾತ್ರಿಗಳನ್ನು ಚಳಿಗಾಲದ ತಿಂಗಳುಗಳಲ್ಲಿ  ಆಚರಿಸಲಾಗುತ್ತದೆ. ಈ ಹಬ್ಬಗಳು ಆನಂದವನ್ನು ಉಂಟು ಮಾಡುತ್ತದೆ. ಸಿಮಿಲಿಪಾಲ ರಾಷ್ಟ್ರೀಯ ಉದ್ಯಾನವನದ ವನ್ಯ ಜೀವಿಗಳನ್ನು ನೋಡಲು ಚಳಿಗಾಲವು ತುಂಬಾ ಸೂಕ್ತವಾದದ್ದು. ಏಕೆಂದರೆ ಈ ಸಮಯದಲ್ಲಿ ಮಳೆಗಾಲವು ತುಂಬಾ ಕನಿಷ್ಟ ಮಟ್ಟದಲ್ಲಿರುತ್ತದೆ.