India
Search
  • Follow NativePlanet
Share
» »ದಕ್ಷಿಣ ಕಾಶ್ಮೀರದ ಅದ್ಭುತ ಮಾರ್ತಾಂಡ ದೇವಾಲಯ!

ದಕ್ಷಿಣ ಕಾಶ್ಮೀರದ ಅದ್ಭುತ ಮಾರ್ತಾಂಡ ದೇವಾಲಯ!

By Vijay

ಸಂಸ್ಕೃತ ಭಾಷೆಯಲ್ಲಿ ಸೂರ್ಯ ದೇವರಿಗೆ ಇರುವ ಮತ್ತೊಂದು ಹೆಸರು ಮಾರ್ತಾಂಡ. ಅಂದರೆ ಈ ದೇವಾಲಯವು ಸೂರ್ಯ ದೇವರಿಗೆ ಮುಡಿಪಾದ ಅದ್ಭುತ ದೇವಾಲಯ. ಈ ದೇವಾಲಯ ರಚನೆ ಅತ್ಯಂತ ಅದ್ಭುತ ಹಾಗೂ ಒಂದೆ ಕ್ಷಣದಲ್ಲಿ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ ರೀತಿಯಲ್ಲಿದೆ.

ನಿಜಕ್ಕೂ ನಾವು ಇಂದು ಇದರ ಸ್ಥಿತಿಯನ್ನು ನೋಡಿದಾಗ ಬೇಸರವಾಗದೆ ಇರಲಾರದು. ಏಕೆಂದರೆ ಕಣಿವೆ ನಾಡು ಕಾಶ್ಮೀರ ಪ್ರಾಂತ್ಯದಲ್ಲಿ ಪ್ರಾಯಶಃ ನೋಡಬಹುದಾದ ಅತ್ಯಂತ ವೈಭವೋಪೇತದ ರಚನೆ ಇದಾಗಿದ್ದಿರಬಹುದೆಂದರೂ ತಪ್ಪಾಗಲಾರದು. ಆದರೆ ಮುಸ್ಲಿಮ್ ದಾಳಿಕೋರರಿಂದ ಒಂದು ವರ್ಷಗಳ ಕಾಲ ಸತತವಾಗಿ ಆಕ್ರಮಣಗಳನ್ನು ಸಹಿಸಿ, ಇಂದು ಅವಶೇಷಾವಸ್ಥೆಯಲ್ಲಿರುವುದನ್ನು ನೋಡಿದಾಗ ಬೇಸರವಾಗುತ್ತದೆ.

ಅಚ್ಚರಿಗೊಳಿಸುವ ಸೂರ್ಯ ದೇಗುಲಗಳು

ಆದಾಗ್ಯೂ ಮುಸ್ಲಿಮ್ ದಾಳಿ ಕೋರರು ಒಂದು ವರ್ಷದ ತನಕ ನಿರಂತರವಾಗಿ ಈ ದೇವಾಲಯವನ್ನು ನಾಶ ಮಾಡುವುದಕ್ಕೆ ಹರಸಾಹಸ ಪಟ್ಟರೂ ಅವರಿಂದ ಅದನ್ನು ಸಂಪೂರ್ಣವಾಗಿ ನಾಶ ಮಾಡಲಾಗದಿರುವುದೆ ಭಾರತದ ಅತ್ಯದ್ಭುತ ಹಾಗೂ ಗಟ್ಟಿತನದ ನಿರ್ಮಾಣ ಕಾಮಗಾರಿಗಳಿಗೆ ಇದು ಸಾಕ್ಷಿಯಾಗಿ ನಿಲ್ಲುತ್ತದೆ.

ನೀವೇನಾದರೂ ಕಾಶ್ಮೀರಕ್ಕೆ ಭೇಟಿ ನೀಡಿದರೆ ಖಂಡಿತವಾಗಿಯೂ ಈ ಅದ್ಭುತ ದೇವಾಲಯವನ್ನೊಮ್ಮೆ ನೋಡಲು ಮರೆಯದಿರಿ. ಕಾಶ್ಮೀರದ ವಿಶಿಷ್ಟ ಶೈಲಿಯ ವಾಸ್ತುಶೈಲಿಗೆ ಉದಾಹರಣೆಯಾಗಿ ಈ ದೇವಾಲಯವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ ಹಾಗೂ ಇದರ ಸುತ್ತಮುತ್ತಲಿನ ಪರಿಸರವು ನಿಮ್ಮಲ್ಲಿ ಧನಾತ್ಮಕತೆಯಿಂದ ಪ್ರಶಾಂತತೆಯ ಅನುಭೂತಿಯನ್ನು ಕರುಣಿಸುತ್ತದೆ. ಈ ದೇವಾಲಯದ ಕುರಿತು ಪ್ರಸ್ತುತ ಲೇಖನದ ಮೂಲಕ ತಿಳಿಯಿರಿ.

ದಕ್ಷಿಣ ಕಾಶ್ಮೀರದ ಅದ್ಭುತ ದೇವಾಲಯ

ದಕ್ಷಿಣ ಕಾಶ್ಮೀರದ ಅದ್ಭುತ ದೇವಾಲಯ

ಈ ಸುಂದರ ದೇವಾಲಯವು ಪ್ರವಾಸಿಗರನ್ನು ಯಾವ ರೀತಿ ಮೋಡಿ ಮಾಡುತ್ತದೆಂದರೆ, ಎಷ್ಟು ಸಲ ನೋಡಿದರೂ ಕಮ್ಮಿಯೆ ಎನ್ನುವಂತೆ ಭಾವನೆ ಮೂಡಿಸುತ್ತದೆ. ಇದು ನಿರ್ಮಾಣವಾದ ಸ್ಥಳ, ನಿರ್ಮಾಣವಾದ ಬಗೆ ಹಾಗೂ ಇದರ ಸುತ್ತಮುತ್ತಲಿನ ಸೌಂದರ್ಯ ಹಾಗೆ ಅನಿಸಲು ಪ್ರಮುಖ ಕಾರಣಗಳಾಗಿವೆ.

ಚಿತ್ರಕೃಪೆ: Varun Shiv Kapur

ಹಲವು ಇತಿಹಾಸಕಾರರಿಗೆ ಪ್ರಿಯವಾದದ್ದು

ಹಲವು ಇತಿಹಾಸಕಾರರಿಗೆ ಪ್ರಿಯವಾದದ್ದು

ಇದೊಂದು ಅತಿ ಪ್ರಾಚೀನ ದೇವಾಲಯ. ಹಾಗಾಗಿ ಈ ದೇವಾಲಯದ ಕುರಿತು ಬ್ರಿಟೀಷ್ ಆಡಳಿತವಿದ್ದ ಸಂದರ್ಭದಲ್ಲಿನ ಅನೇಕ ಪುರಾತತ್ವ ಶಾಸ್ತ್ರಜ್ಞರು, ಇತಿಹಾಸಕಾರರು, ಭೂವಿಜ್ಞಾನಿಗಳು ಸಾಕಷ್ಟು ವಿವರಿಸಿದ್ದಾರೆ. ಕೆಲವರಂತೂ ಕಾಶ್ಮೀರ ಪ್ರಾಂತ್ಯದಲ್ಲಿರುವ ಪ್ರಾಯಶಃ ಅತಿ ಸುಂದರ ಸ್ಥಳದಲ್ಲಿ ಅತ್ಯದ್ಭುತ ಮನುಕುಲದ ರಚನೆ ಇದಾಗಿದೆ ಎಂದೂ ಸಹ ಕೊಂಡಾಡಿದ್ದಾರೆ.

ಚಿತ್ರಕೃಪೆ: Varun Shiv Kapur

ರೋಮಾಂಚನಗೊಳಿಸುವ ರಚನೆ

ರೋಮಾಂಚನಗೊಳಿಸುವ ರಚನೆ

ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಹಿಂದೆ ಕಾಶ್ಮೀರ ಪ್ರಾಂತ್ಯದಲ್ಲಿ ನಿರ್ಮಿಸಲಾಗುತ್ತಿದ್ದ ರಚನೆಗಳು ಭಾರತೀಯ ವಾಸ್ತುಶೈಲಿಯೊಂದಿಗೆ ಚೀನಾ, ಪರ್ಷಿಯನ್, ಗಾಂಧಾರ, ಗುಪ್ತ ಹಾಗೂ ರೋಮನ್ ಶೈಲಿಯ ಪ್ರಭಾವಗಳ ಸಾಮಾನ್ಯವಾಗಿ ಒಳಗೊಂಡಿರುತ್ತಿತ್ತು.

ಚಿತ್ರಕೃಪೆ: Varun Shiv Kapur

ಸುಭದ್ರವಾಗಿದೆ

ಸುಭದ್ರವಾಗಿದೆ

ಅಂತಹ ಒಂದು ಅನನ್ಯ ವಾಸ್ತುಶೈಲಿಗೆ ಉದಾಹರಣೆಯಾಗಿ ಕಂಡುಬರುತ್ತದೆ ಈ ಅದ್ಭುತ ಮಾರ್ತಾಂಡ ಸೂರ್ಯ ದೇವಾಲಯ. ಸುತ್ತಲೂ ಹಸಿರಿನ ನಡುವೆ ಭದ್ರವಾಗಿ ನಿಂತಿರುವ ಗಟ್ಟಿಗನಂತೆ ಕಲ್ಲಿನಿಂದ ಮಾಡಲಾದ ಈ ದೇವಾಲಯದ ರಚನೆಗಳು ಸಾಕಷ್ಟು ಕುತೂಹಲಕಾರಿಯಾಗಿ ಕಂಡುಬರುತ್ತವೆ.

ಚಿತ್ರಕೃಪೆ: Mike Prince

ಹಸಿರು ಬಿಳಿ ಬಣ್ಣವಾದಾಗ

ಹಸಿರು ಬಿಳಿ ಬಣ್ಣವಾದಾಗ

ಕಾಶ್ಮೀರ ಎಂದಾಗ ಹಿಮಪಾತವಾಗುವುದು ಒಂದು ಸಾಮಾನ್ಯ ವಿಷಯವೆ. ಇಂತಹ ಹಿಮಪಾತದ ಸಂದರ್ಭದಲ್ಲಿಯೂ ಸಹ ಈ ದೇವಾಲಯವು ಸಾಕಷ್ಟು ನಯನಮನೋಹರವಾಗಿ ಕಂಡುಬರುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಚಿತ್ರಕೃಪೆ: Varun Shiv Kapur

ಬಲು ಆಕರ್ಷಕ

ಬಲು ಆಕರ್ಷಕ

ಉಳಿದ ಸಮಯದಲ್ಲಿ ದೇವಾಲಯದ ಸುತ್ತಲೂ ಆವರಿಸಿರುತ್ತಿದ್ದ ದಟ್ಟ ಹಸಿರು, ಹಿಮಪಾತದ ಸಂದರ್ಭದಲ್ಲಿ ಶ್ವೇತ ವರ್ಣದಿಂದ ನಳ ನಳಿಸುವ ಶುಭ್ರ ಹಿಮದಿಂದ ಆವರಿಸಿರುತ್ತದೆ ಹಾಗೂ ಅದಕ್ಕೆ ಮತ್ತಷ್ಟು ಇಂಬು ನೀಡುತ್ತದೆ ದೇವಾಲಯದ ಶಿಲೆಗಳ ಬಣ್ಣ. ಬಣ್ಣಗಳ ಈ ಒಂದು ಸಂಯೋಗ ಅಥವಾ ಸಂಯೋಜನೆ ನೋಡಲು ಬಲು ಆಕರ್ಷಕವಾಗಿರುತ್ತದೆ.

ಚಿತ್ರಕೃಪೆ: Varun Shiv Kapur

ಯಂಗ್ ಹಸ್ಬಂಡ್ ಅವರ ಮಾತು

ಯಂಗ್ ಹಸ್ಬಂಡ್ ಅವರ ಮಾತು

ಪ್ರಸಿದ್ಧ ಬರಹಗಾರ ಫ್ರಾನ್ಸಿಸ್ ಯಂಗ್ ಹಸ್ಬಂಡ್ ಎಂಬ ಸಾಹಿತಿಯು ತನ್ನ ಒಂದು ಪುಸ್ತಕದಲ್ಲಿ ಈ ರೀತಿ ವಿವರಿಸಿದ್ದಾನೆ: ಜಗತ್ತಿನಲ್ಲೆ ಅತ್ಯುತ್ತಮ ವಾಸ್ತಿಶೈಲಿ ಹೊಂದಿರುವ ರಚನೆಗಳಲ್ಲಿ ಮಾರ್ತಾಂಡ ಸೂರ್ಯ ದೇವಾಲಯವು ಸಾಕಷ್ಟು ಎತ್ತರದಲ್ಲಿ ನಿಲ್ಲುತ್ತದೆ. ತಾಜ್ ಮಹಲ್, ಸೇಂಟ್ ಪೀಟರ್ ನಂತಹ ರಚನೆಗಳನ್ನು ನಿರ್ಮಿಸಲಾದ ಸ್ಥಳಗಳಿಗಿಂತಲೂ ಉತ್ತಮವಾದ ಸ್ಥಳದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು.

ಚಿತ್ರಕೃಪೆ: Mike Prince

ಆಕ್ರಮಣಗಳನ್ನು ತಡೆದು ನಿಂತಿವೆ!

ಆಕ್ರಮಣಗಳನ್ನು ತಡೆದು ನಿಂತಿವೆ!

ಶಿಲೆಗಳಲ್ಲಿ ಕೆತ್ತಲಾದ ಸುಮಾರು 84 ಖಂಬಗಳನ್ನು ಹೊಂದಿರುವ ಮಾರ್ತಾಂಡ ದೇವಾಲಯವು ಕೆತ್ತನೆಗಳಿಂದ ಕೂಡಿದೆಯಾದರೂ ಸತತ ದಾಳಿಯ ಪರಿಣಾಮದಿಂದಾಗಿ ಕೆತ್ತನೆಗಳು ಕಂದುಬರುವುದಿಲ್ಲ.

ಚಿತ್ರಕೃಪೆ: Varun Shiv Kapur

ಭಾರತೀಯ ಪುರಾತತ್ವ ಇಲಾಖೆ

ಭಾರತೀಯ ಪುರಾತತ್ವ ಇಲಾಖೆ

ಪ್ರಸ್ತುತ ಮಾರ್ತಾಂಡ ದೇವಾಲಯ ತಾಣವು ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದ್ದು, ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕ ಎಂದು ಘೋಷಿಸಲ್ಪಟ್ಟಿದೆ.

ಚಿತ್ರಕೃಪೆ: Varun Shiv Kapur

ಅಭಿವೃದ್ಧಿ

ಅಭಿವೃದ್ಧಿ

ಅಷ್ಟೆ ಅಲ್ಲ, ಇದನ್ನೊಂದು ಅದ್ಭುತ ಪ್ರವಾಸಿ ತಾಣವನ್ನಾಗಿ ಮಾಡಬೇಕಾದ ಅಗತ್ಯವಿದ್ದು ಆ ನಿಟ್ಟಿನಲ್ಲಿ ಈಗಾಗಲೆ ಸರ್ಕಾರದಿಂದ ಕೆಲವು ಪ್ರವಾಸಿ ಸೌಕರ್ಯಗಳನ್ನು ಒದಗಿಸಲಾಗಿದೆ. ಆದಾಗ್ಯೂ ಸರ್ಕಾರ ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಧಾರ್ಮಿಕ ಪ್ರವಾಸಿ ದೃಷ್ಟಿಯಿಂದ ಸೂರ್ಯನ ದರ್ಶನ ಕೋರಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಇದಕ್ಕೆ ಭೇಟಿ ನೀಡುವಂತೆ ಮಾಡಬೆಕಾಗಿದೆ ಎಂದು ಹಲವರ ಅಭಿಪ್ರಾಯವಾಗಿದೆ.

ಚಿತ್ರಕೃಪೆ: sandeepachetan.com travel photography

ಅನಂತನಾಗ್

ಅನಂತನಾಗ್

ಮಾರ್ತಾಂಡ ದೇವಾಲಯವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯ ಅನಂತನಾಗ್ ಪಟ್ಟಣದಿಂದ ಒಂಭತ್ತು ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ದುರದೃಷ್ಟವೆಂದರೆ ಜಮ್ಮು ಕಾಶ್ಮೀರ ಪ್ರವಾಸ ಮಾಡುವ ಬಹುತೇಕ ಪ್ರವಾಸಿಗರಿಗೆ ಈ ದೇವಾಲಯದ ಕುರಿತು ತಿಳಿದೆ ಇಲ್ಲ. ಹಾಗಾಗಿ ಇದೊಂದು ಕಾಲದ ಗರ್ಭದಲ್ಲಿ ಮುಳುಗಿ ಹೋಗುತ್ತಿರುವ ತಾಣವಾಗುತ್ತಿದೆ ಎಂದರೆ ತಪ್ಪಾಗಲಾರದು.

ಚಿತ್ರಕೃಪೆ: Varun Shiv Kapur

8 ನೇಯ ಶತಮಾನ!

8 ನೇಯ ಶತಮಾನ!

ಇನ್ನೂ ಇದರ ಪ್ರಾಚೀನತೆಯ ಕುರಿತು ಮಾತನಾಡುವುದಾದರೆ ಇದೊಂದು ಸಾಕಷ್ಟು ಪುರಾತನವಾದ ದೇವಾಲಯ ರಚನೆಯಾಗಿದ್ದು ಸುಮಾರು ಎಂಟನೇಯ ಶತಮಾನದಲ್ಲಿ ನಿರ್ಮಿತವಾದ ದೇವಾಲಯವಾಗಿದೆ.

ಚಿತ್ರಕೃಪೆ: Varun Shiv Kapur

ಕಾರ್ಕೋಟ

ಕಾರ್ಕೋಟ

8 ನೇಯ ಶತಮಾನದಲ್ಲಿದ್ದ ಕಾರ್ಕೋಟ ಸಾಮ್ರಾಜ್ಯದವರಿಂದ ಈ ದೇವಾಲಯದ ನಿರ್ಮಾಣವಗಿದೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ. 725-756 ರ ಮಧ್ಯದ ಸಮಯದಲ್ಲಿ ಈ ದೇವಾಲಯದ ನಿರ್ಮಾಣವಾಗಿರುವ ಅಂದಾಜು ಮಾಡಲಾಗಿದೆ.

ಚಿತ್ರಕೃಪೆ: Varun Shiv Kapur

ನಾಲ್ಕನೇಯ ಶತಮಾನ!

ನಾಲ್ಕನೇಯ ಶತಮಾನ!

ಅದಕ್ಕೂ ಮೊದಲು ಅಂದರೆ 370-500 ರ ಸಮಯದಲ್ಲಿ ನಿರ್ಮಿಸಲದ ಈ ದೇವಾಲಯಕ್ಕೆ ಸಂಬಂಧಿಸಿದ ಕೆಲವು ಸದೃಢವಾದ ಅಡಿಪಾಯಗಳು ಇಲ್ಲಿತ್ತೆಂದು ಕೆಲವು ಮೂಲಗಳ ಪ್ರಕಾರ ತಿಳಿದು ಬರುತ್ತದೆ. ಅಂದರೆ ದೇವಾಲಯ ರಚನೆ ಎಂಟನೇಯ ಶತಮಾನದಲ್ಲಾದರೂ ಇದರ ಮೂಲ ಅಡಿಪಾಯಗಳು ನಾಲ್ಕನೇಯ ಶತಮಾನದಲ್ಲೆ ಹಾಕಲ್ಪಟ್ಟಿದ್ದವು ಎನ್ನಲಾಗುತ್ತದೆ.

ಚಿತ್ರಕೃಪೆ: Varun Shiv Kapur

ತಾರೀಖ್ ಎ ಹಸನ್

ತಾರೀಖ್ ಎ ಹಸನ್

ಕಾಶ್ಮೀರದ ಕುರಿತು ಅತಿ ಪುರಾತನ ಮಾಹಿತಿಗಳನ್ನು ನೀಡುವ ತಾರೀಖ್- ಎ -ಹಸನ್ ಎಂಬ ಪುಸ್ತಕದ ಪ್ರಕಾರ, ದಕ್ಷಿಣ ಕಾಶ್ಮೀರದ ಕರೇವಾಸ್ ಎಂದು ಹೇಳಲಾಗುವ ದಪ್ಪ ಭೂಚದರದಿಂದ ಮಾಡಲಾದ ಭೂಮಿಯ ಮೇಲೆ ರಾಜಾ ರಣಾದಿತ್ಯನೆಂಬಾತನಿಂದ ನಿರ್ಮಿಸಲಾದ ಬಬುಲ್ ಎಂಬ ನಗರ ಒಂದಿತ್ತು.

ಚಿತ್ರಕೃಪೆ: Shaurya

ಇಂದು

ಇಂದು

ನಾಲ್ಕನೇಯ ಶತಮಾನದಲ್ಲಿ ರಾಜ್ಯಾಭಾರ ಮಾಡಿತ್ತಿದ್ದ ಈ ರಾಜ ತನ್ನ ಅರಮನೆಯ ಮುಂದೆ ಮಾರ್ತಾಂಡೇಶ್ವರಿಯ ದೇವಾಲಯವೊಂದನ್ನು ನಿರ್ಮಿಸುವ ಉದ್ದೇಶದಿಂದ ಅಡಿಪಾಯವೊಂದನ್ನು ಹಾಕಿ ದೇವಾಲಯವನ್ನು ನಿರ್ಮಿಸಿದ್ದ, ಆದರೆ ಅದು ಅಪೂರ್ಣವಾಗಿತ್ತು.

ಚಿತ್ರಕೃಪೆ: Varun Shiv Kapur

ಯಾವ ರಾಜನಿಂದ?

ಯಾವ ರಾಜನಿಂದ?

ಹೀಗೆ ಅಪೂರ್ಣಗೊಂಡಿದ್ದ ಆ ದೇವಾಲಯವನ್ನು ಮುಂದೆ ಎಂಟನೇಯ ಶತಮಾನದಲ್ಲಿ ಲಲಿತಾದಿತ್ಯ ಮುಕ್ತಪಿದನೆಂಬ ರಾಜನು ಪೂರ್ಣಗೊಳಿಸಿ ಅದನ್ನು ಸೂರ್ಯ ದೇವರಿಗೆ ಮುಡಿಪಾದ ಮಾರ್ತಾಂಡ ದೇವಾಲಯವನ್ನಾಗಿ ಮಾರ್ಪಡಿಸಿದ. ಹೀಗೆ ಮಾರ್ತಾಂಡ ದೇವಾಲಯವು ನಿರ್ಮಾಣವಾಯಿತು.

ಚಿತ್ರಕೃಪೆ: Varun Shiv Kapur

ನಾಶಗೊಂಡ ಬಗೆ

ನಾಶಗೊಂಡ ಬಗೆ

ಹೀಗೆ ನಿರ್ಮಾಣವಾದ ಮಾರ್ತಾಂಡ ದೇವಾಲಯವು ಕಾಶ್ಮೀರ ಪ್ರಾಂತ್ಯದಲ್ಲೆ ಅತ್ಯಂತ ಪ್ರಭಾವಶಾಲಿ ಹಾಗೂ ನಯನಮನೋಹರವಾದ ದಿವ್ಯ ದೇವಾಲಯವಾಗಿ ಗಮನ ಸೆಳೆದಿತ್ತು. ಕಾಲ ಉರುಳಿದಂತೆ ಈ ಪ್ರದೇಶದಲ್ಲಿ ಮುಸ್ಲಿಮ್ ದಾಳಿಕೋರರ ಆಗಮನವಾಯಿತು.

ಚಿತ್ರಕೃಪೆ: Varun Shiv Kapur

ಸಿಕಂದರ್

ಸಿಕಂದರ್

ಮುಂದೆ 15 ನೇಯ ಶತಮಾನದ ಸಂದರ್ಭದಲ್ಲಿ ಈ ಪ್ರದಏಶಕ್ಕೆ ಲಗ್ಗೆ ಇಟ್ಟು ಆಳಹತ್ತಿದ ಇಸ್ಲಾಮಿಕ್ ಆಡಳಿತಗಾರನಾದ ಸಿಕಂದರ್ ಬುತ್ಶಿಕನ್ ಎಂಬಾತನು ತನ್ನ ಸೈನಿಕರಿಗೆ ಈ ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡುವಂತೆ ಆದೇಶಿಸಿದ.

ಚಿತ್ರಕೃಪೆ: Shiva shanker prasad

ಪ್ರಯತ್ನ ವ್ಯರ್ಥ

ಪ್ರಯತ್ನ ವ್ಯರ್ಥ

ಹೀಗೆ ಆತನ ಸೈನಿಕರು ನಿರಂತರವಾಗಿ ಒಂದು ವರ್ಷದ ತನಕ ಆ ದೇವಾಲಯವನ್ನು ಸರ್ವನಾಶ ಮಾಡಲು ಎಲ್ಲಿಲ್ಲದ ಪ್ರಯತ್ನ ಪಟ್ಟರಾದರೂ ಅದ್ಭುತ ನಿರ್ಮಾಣದ ಕಾರಣದಿಂದಾಗಿ ಅವರು ಅದನ್ನು ಸಂಪೂರ್ಣವಾಗಿ ನಾಶ ಮಾಡಲು ವಿಫಲರಾದರು. ಹಾಗಾಗಿ ಅವಶೇಷದಲ್ಲಿದ್ದರೂ ಸಹ ತನ್ನ ಗಾಂಭೀರ್ಯತೆ ಹಾಗೂ ಸದೃಢತೆಯನ್ನು ಇಂದಿಗೂ ತೋರುತ್ತಿದೆ ಈ ಅದ್ಭುತ ದೇವಾಲಯ.

ಚಿತ್ರಕೃಪೆ: Neeraj.rakwal

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X