Search
  • Follow NativePlanet
Share
» »530ಮೆಟ್ಟಿಲುಗಳನ್ನು ಹತ್ತಿ ಹೋದರೆ ಮಾತ್ರ ಈ ಮರಳೇಶ್ವರನ ದರ್ಶನ ಸಿಗುತ್ತೆ

530ಮೆಟ್ಟಿಲುಗಳನ್ನು ಹತ್ತಿ ಹೋದರೆ ಮಾತ್ರ ಈ ಮರಳೇಶ್ವರನ ದರ್ಶನ ಸಿಗುತ್ತೆ

ಮರಳೇಶ್ವರ ದೇವಾಲಯದ ಬಗ್ಗೆ ಕೇಳಿದ್ದೀರಾ? ಇದು ಶಿವನಿಗೆ ಸಮರ್ಪಿತವಾದ ಒಂದು ಪುರಾತನ ದೇವಾಲಯ. ಈ ದೇವಾಲಯದ ದರ್ಶನ ಪಡೆಯಲು ನೀವು 530 ಮೆಟ್ಟಿಲುಗಳನ್ನು ಹತ್ತಬೇಕು. ಇದು ಚಿಕ್ಕ ದೇವಸ್ಥಾನವಾಗಿದೆ. ಈ ಮೆಟ್ಟಿಲು ಹತ್ತುವುದು ಯಾತ್ರಿಕರನ್ನು ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ಬನ್ನಿ ಈ ದೇವಾಲಯ ಎಲ್ಲಿದೆ ಇದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಧಾರೇಶ್ವರ ಜಲಪಾತ

ಧಾರೇಶ್ವರ ಜಲಪಾತ

PC: Prabodh
ಇದು ಪವಿತ್ರ ದೇವಾಲಯವನ್ನು ತಲುಪಲು ಆರೋಹಣವು ಸುಂದರ ದೃಶ್ಯಾವಳಿಗಳನ್ನು ಹೊಂದಿದೆ. ಸಮೃದ್ಧವಾದ ಪರ್ವತ ನದಿಯ ಬವ ಕಣಿವೆ, ಬೃಹತ್ ಪರ್ವತಗಳು ಮತ್ತು ಘಟ್ಟಗಳ ನೋಟವು ಅದರ ಸರಳತೆ ಮತ್ತು ಸೌಂದರ್ಯದಿಂದ ನಿಮ್ಮನ್ನು ಆಕರ್ಷಿಸುತ್ತದೆ. ಪ್ರಶಾಂತ ದೇವಾಲಯದ ಅಂಗಣದಿಂದ ಧಾರೇಶ್ವರ ಜಲಪಾತವನ್ನು ನೋಡಬಹುದಾಗಿದೆ. ಮಾನ್ಸೂನ್ ಹೊರತುಪಡಿಸಿ ಇತರ ಋತುಗಳಲ್ಲಿ ನೀವು ಈ ದೈವಿಕ ದೇವಸ್ಥಾನವನ್ನು ಭೇಟಿ ಮಾಡಿದರೆ, ದೇವಸ್ಥಾನದ ಶಾಂತ ವಾತಾವರಣದಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಜಲಪಾತದ ಅಡಿಯಲ್ಲಿ ನೀರಿನಲ್ಲಿ ಸ್ನಾನ ಮಾಡುವ ಅವಕಾಶ ಸಿಗುತ್ತದೆ.

ನಾಗದೋಷ ನಿವಾರಣೆಗೆ ಎಂದಾದರೂ ಕುಡುಪು ಕ್ಷೇತ್ರಕ್ಕೆ ಹೋಗಿದ್ದೀರಾ?ನಾಗದೋಷ ನಿವಾರಣೆಗೆ ಎಂದಾದರೂ ಕುಡುಪು ಕ್ಷೇತ್ರಕ್ಕೆ ಹೋಗಿದ್ದೀರಾ?

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

PC:Pranav011
ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಸಂಗಮೇಶ್ವರ ಉಪವಿಭಾಗದಲ್ಲಿರುವ ಮರಳೇಶ್ವರ ದೇವಾಲಯವು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿದೆ ಮತ್ತು NH17 ನಿಂದ 50 ಕಿಲೋಮೀಟರ್ ದೂರದಲ್ಲಿದೆ. ರಸ್ತೆಯ ಮೂಲಕ ತಲುಪಲು ಸುಮಾರು ಒಂದೂವರೆ ಗಂಟೆಗಳಿರುತ್ತದೆ. ಮಲೆಲೇಶ್ವರ ಗುಹೆ ದೇವಾಲಯವು ಸಹ್ಯಾದ್ರಿ ಪರ್ವತ ಶ್ರೇಣಿಯ ಮೇಲಿದ್ದು, ಸುಂದರವಾದ ದೃಶ್ಯಗಳನ್ನು ಹೊಂದಿದೆ.

ಮಹಾಶಿವರಾತ್ರಿ

ಮಹಾಶಿವರಾತ್ರಿ

PC:Pranav011
ಈ ಪವಿತ್ರ ದೇವಾಲಯಕ್ಕೆ ಭಾರತದಾದ್ಯಂತದ ಭಕ್ತರು ಭೇಟಿ ನೀಡುತ್ತಾರೆ. ವಿಶೇಷವಾಗಿ ಮಹಾಶಿವರಾತ್ರಿ ಮತ್ತು ಮಕರ ಸಂಕ್ರಾಂತಿಯ ಸಮಯದಲ್ಲಿ ಈ ದೇವಾಲಯದಲ್ಲಿ ಭಕ್ತರ ಸಾಗರವೇ ಹರಿದು ಬರುತ್ತದೆ. ಶಿವರಾತ್ರಿ ಹಾಗೂ ಸಂಕ್ರಾಂತಿಯನ್ನು ಇಲ್ಲಿನ ಮುಖ್ಯ ಉತ್ಸವಗಳೆಂದು ಪರಿಗಣಿಸಲಾಗುತ್ತದೆ. ದೇವಸ್ಥಾನದ ಅಡಿಪಾಯವನ್ನು ಪರಶುರಾಮ ನಿಂದ ಮಾಡಲಾಗಿದೆ ಎಂದು ನಂಬಲಾಗಿದೆ . ಮರಳೇಶ್ವರ ದೇವಸ್ಥಾನದ ತಾಣವು ಒಂದು ದೊಡ್ಡ ಚಾರಣ ತಾಣವಾಗಿದೆ ಮತ್ತು ಸಾಹಸ ಪ್ರೀಯರಿಗೆ ಉತ್ತಮ ತಾಣವಾಗಿದೆ. ಈ ದೇವಸ್ಥಾನಕ್ಕೆ ಭೇಟಿಕೊಡುವುದು ದೇವರ ಮತ್ತು ಪ್ರಕೃತಿಯ ನಡುವಿನ ಒಂದು ಸಂಪೂರ್ಣ ಮುಖಾಮುಖಿಯಾಗಿದೆ.

ಬೆಂಗಳೂರು ಹೊರವಲಯದಲ್ಲಿರುವ ಹೇಸರಘಟ್ಟ ಸರೋವರವನ್ನೊಮ್ಮೆ ಸುತ್ತಾಡಿ ಬನ್ನಿ ಬೆಂಗಳೂರು ಹೊರವಲಯದಲ್ಲಿರುವ ಹೇಸರಘಟ್ಟ ಸರೋವರವನ್ನೊಮ್ಮೆ ಸುತ್ತಾಡಿ ಬನ್ನಿ

ಪುರಾಣದ ಪ್ರಕಾರ

ಪುರಾಣದ ಪ್ರಕಾರ

PC:Pranav01
ಮರಳೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಅತ್ಯಂತ ಅಸಾಮಾನ್ಯ ವಿದ್ಯಮಾನವು ಯಾತ್ರಾರ್ಥಿಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ, ಅದೇನೆಂದರೆ ಈ ದೇವಾಲಯದ ಸಂಕೀರ್ಣದಲ್ಲಿ ನಾಗರ ಹಾವುಗಳ ಉಪಸ್ಥಿತಿ. ಶಿವನು ಈ ಹಾವಿನೊಂದಿಗೆ ಇಲ್ಲಿ ವಾಸಿಸುತ್ತಿದ್ದನೆಂದು ವ್ಯಾಪಕವಾಗಿ ನಂಬಲಾಗಿದೆ. ಈ ದೇವಾಲಯದಲ್ಲಿರುವ ಹಾವುಗಳು ಅಪಾಯಕಾರಿಯಲ್ಲ ಜೊತೆಗೆ ಯಾರಿಗೂ ಕಚ್ಚೋದಿಲ್ಲವಂತೆ. ಭಕ್ತರು ಈ ಹಾವುಗಳನ್ನು ಮುಟ್ಟಬಹುದು. ಈವರೆಗೂ ಈ ಹಾವಿನಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎನ್ನಲಾಗುತ್ತದೆ.

ಪರಿಪೂರ್ಣ ವಾರಾಂತ್ಯದ ತಾಣ

ಪರಿಪೂರ್ಣ ವಾರಾಂತ್ಯದ ತಾಣ

PC:Pranav011

ಇತ್ತೀಚಿನ ದಿನಗಳಲ್ಲಿ ಈ ಹಾವುಗಳೂ ಕಾಣಿಸಿಕೊಳ್ಳುವುದು ಬಹಳ ಕಡೆಮೆಯಾಗಿದೆ. ಯಾಕೆಂದರೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಭಯದಿಂದಾಗಿ, ಅವರು ಮಾಡುವ ಕೀಟಲೆಗಳಿಂದಾಗಿ ಹಾವುಗಳು ಕಾಣಿಸಿಕೊಳ್ಳುವುದೇ ಅಪರೂಪವಾಗಿದೆ.
ಈ ಸ್ಥಳವು ಸಾಹಸಪ್ರೀಯರಲ್ಲಿ ಬಹಳ ಜನಪ್ರಿಯವಾಗಿದೆ. ಸಹ್ಯಾದ್ರಿ ಶ್ರೇಣಿ ಸೌಂದರ್ಯ ಮತ್ತು ಬೆರಗುಗೊಳಿಸುವ ಧಾರೇಶ್ವರ ಜಲಪಾತ , ಸುತ್ತಲೂ ಸಮೃದ್ಧ ಹಸಿರು ಮತ್ತು ಆಹ್ಲಾದಕರ ಮಾರ್ಗಗಳು ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಹೊಂದಿದ್ದು ಪ್ರಕೃತಿ ಪ್ರೇಮಿಗಳಿಗೆ ಪರಿಪೂರ್ಣ ವಾರಾಂತ್ಯದ ತಾಣವಾಗಿದೆ.

ಕನಕಪುರದಲ್ಲಿರುವ ಈ ಅತ್ಯುತ್ತಮ ತಾಣಗಳನ್ನು ನೋಡಿದ್ದೀರಾಕನಕಪುರದಲ್ಲಿರುವ ಈ ಅತ್ಯುತ್ತಮ ತಾಣಗಳನ್ನು ನೋಡಿದ್ದೀರಾ

3 ದಿನಗಳ ಚಾರಣ

ಮರಳೇಶ್ವರ ದೇವಸ್ಥಾನವನ್ನು ತಲುಪಲು ಚಿಪ್ಲುನ್ ಮೂಲಕ ಚಾರಣವು ಹೆಲ್ವಾಕ್‌ನಿಂದ ಚಾಂಡೋಲಿ ಅರಣ್ಯ ಮೂಲಕ 3 ದಿನಗಳ ಚಾರಣವನ್ನು ಕೈಗೊಳ್ಳಬೇಕು. ಇದು ಒಂದು ದಿನದ ಟ್ರೆಕ್ ಆಗಿಲ್ಲದ ಕಾರಣ, ಸ್ಥಳಗಳನ್ನು ದಿನಗಳಿಗೆ ಅನುಸಾರವಾಗಿ ಬೇರ್ಪಡಿಸಬೇಕಾಗುತ್ತದೆ ಮೊದಲ ದಿನ, ಚಾರಣಕರು ರಾಮ್ ಘಾಲ್, ಭೈರವ್ ಘಡ್ ಮತ್ತು ಪತಾರ್ಪುಂಜ್ ಗ್ರಾಮವನ್ನು ತಲುಪಬಹುದು. ಎರಡನೇ ದಿನ ದಟ್ಟವಾದ ಚಂದೋಲಿ ಅರಣ್ಯ ಮತ್ತು ಚಂದೇಲ್ ಗ್ರಾಮದ ಮೂಲಕ ಪ್ರಚಿತ್ ಘಡ್ ಅನ್ನು ತಲುಪಬಹುದು. ಮತ್ತು ಮೂರನೆಯ ದಿನದಲ್ಲಿ ಕುಂಡಿ ಗ್ರಾಮ, ಮಹೀಮರ್ ಘಡ್, ಮತ್ತು ಮರಳೇಶ್ವರವನ್ನು ತಲುಪಬಹುದು. ಒಂದು ಹಳ್ಳಿಗಳಲ್ಲಿ ಯೋಜಿತವಾಗಿ ತಂಗಿದ್ದಲ್ಲಿ ಇದು 4 ರಿಂದ 5 ದಿನಗಳವರೆಗೆ ರೋಮಾಂಚನಕಾರಿ ಸಾಹಸಮಯ ಚಾರಣ ಆಗಬಹುದು.

ನಡೆಯುವ ಉತ್ಸವಗಳು

ನಡೆಯುವ ಉತ್ಸವಗಳು

ಮರಳೇಶ್ವರ ದೇವಸ್ಥಾನದಲ್ಲಿ ಹಲವಾರು ಉತ್ಸವಗಳನ್ನು ಆಚರಿಸಲಾಗುತ್ತದೆ. ಭಕ್ತರು ವಿಶೇಷವಾಗಿ ಈ ಉತ್ಸವದ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡಲು ಇಚ್ಛಿಸುತ್ತಾರೆ. ಮಕರ ಸಂಕ್ರಾಂತಿಯ ವೇಳೆ ಕೂಡಾ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ದಿನದಂದು ಗಿರಿಜಾದೇವಿ ಮತ್ತು ಮರಳೇಶ್ವರನ ಮದುವೆಯು ನಡೆದಿದೆ ಎಂದು ನಂಬಲಾಗಿದೆ ಮತ್ತು ಈ ಉತ್ಸವದಲ್ಲಿ ಭಕ್ತರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸ್ಥಳೀಯರು ಮತ್ತು ಪ್ರವಾಸಿಗರು ಈ ಸಂದರ್ಭದಲ್ಲಿ ಸಂತೋಷದಿಂದ ಪಾಲ್ಸೊಳ್ಳುತ್ತಾರೆ. ಮಹಾಶಿವರಾತ್ರಿ ಹಾಗೂ ತ್ರಿಪುರ ಪೂರ್ಣಿಮಾದಂದು ಜಾತ್ರೆಯನ್ನೂ ಆಯೋಜಿಸಲಾಗುತ್ತದೆ.

ಟ್ರಕ್ಕಿಂಗ್ ಸಮಯದಲ್ಲಿ ಇವುಗಳನ್ನು ಗಮನದಲ್ಲಿಟ್ಟುಕೊಳ್ಳಿ

ಪ್ರವಾಸಿಗರು ಪರ್ವತ ರಸ್ತೆ ಮೂಲಕ ಹಾದು ಹೋಗಲು ಟ್ರೆಕ್ಕಿಂಗ್ ಶೂಗಳನ್ನು ಧರಿಸಬೇಕು. 530 ಮೆಟ್ಟಿಲುಗಳನ್ನು ಏರಿದ ನಂತರ ದೇವಾಲಯವು ತಲುಪ ಬಹುದು. ಉತ್ತಮ ಟ್ರೆಕ್ಕಿಂಗ್ ಸೂಟ್‌ಗಳನ್ನು ಧರಿಸಿರಿ ಮತ್ತು ಸಾಕಷ್ಟು ಆಹಾರ ಮತ್ತು ನೀರನ್ನು ಒಯ್ಯಬಹುದು. ಪ್ರಥಮ ಚಿಕಿತ್ಸೆ ಕಿಟ್ ನಿಮ್ಮೊಂದಿಗಿಟ್ಟುಕೊಳ್ಳಿ. ನೀವು ಸಸ್ಯ ಮತ್ತು ಪ್ರಾಣಿಗಳಿಗೆ ತೊಂದರೆ ಮಾಡಬೇಡಿ . ನೀವು ನಾಗರಹಾವು ಮತ್ತು ಇತರ ಹಾವುಗಳನ್ನು ನೋಡಿದರೆ, ದಯವಿಟ್ಟು ಅವುಗಳಿಗೆ ಹಾನಿ ಮಾಡಬೇಡಿ. ಜಲಪಾತದ ಅಡಿಯಲ್ಲಿ ನೀವು ಸ್ನಾನ ಮಾಡುವಾಗ ಜಾಗರೂಕರಾಗಿರಿ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಪ್ರಯಾಣಿಕರು ಸಂಗಮೇಶ್ವರ ಅಥವಾ ದೇವ್ರುಖ್ ನಿಂದ ರಾಜ್ಯ ಸಾರಿಗೆ ಬಸ್ಸುಗಳನ್ನು ಪಡೆದುಕೊಳ್ಳಬಹುದು. ಇವುಗಳು ಕ್ರಮವಾಗಿ 30 ಮತ್ತು 18 ಕಿಲೋಮೀಟರ್ ದೂರದಲ್ಲಿರುವ ಪ್ರಮುಖ ಪಟ್ಟಣಗಳಾಗಿವೆ. ರಿಕ್ಷಾಗಳು ಅಥವಾ ಟ್ಯಾಕ್ಸಿಗಳು ಸಹ ಲಭ್ಯವಿದೆ. ಇವು ನಿಮ್ಮನ್ನು ದೇವಾಲಯದ ಆವರಣಕ್ಕೆ ಬಿಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X