Search
  • Follow NativePlanet
Share
» »ಮರಿನಾ ಬೀಚ್‍ನಲ್ಲಿ ಈಜಲು ಹೋದರೆ ಏನಾಗುತ್ತದೆ ಗೊತ್ತ?

ಮರಿನಾ ಬೀಚ್‍ನಲ್ಲಿ ಈಜಲು ಹೋದರೆ ಏನಾಗುತ್ತದೆ ಗೊತ್ತ?

ಬೀಚ್ ಎಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಅದರಲ್ಲೂ ಯುವಕರಿಗೆ ಮತ್ತು ಮಕ್ಕಳಿಗೆ ನೀರಿನಲ್ಲಿ ಅಡ್ಡಾಡುವುದು ಎಂದರೆ ಬಲು ಇಷ್ಟ. ನಮ್ಮ ಭಾರತ ದೇಶದಲ್ಲಿ ಬೀಚ್‍ಗಳಿಗೇನು ಕೊರತೆ ಇಲ್ಲ. ಚೆನ್ನೈನಲ್ಲಿ ಮರಿನಾ ಬೀಚ್ ಎಂದರೆ ತುಂಬ ಪ್ರಸಿದ್ದಿ ಗಳಿಸಿರು

ಬೀಚ್ ಎಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಅದರಲ್ಲೂ ಯುವಕರಿಗೆ ಮತ್ತು ಮಕ್ಕಳಿಗೆ ನೀರಿನಲ್ಲಿ ಅಡ್ಡಾಡುವುದು ಎಂದರೆ ಬಲು ಇಷ್ಟ. ನಮ್ಮ ಭಾರತ ದೇಶದಲ್ಲಿ ಬೀಚ್‍ಗಳಿಗೇನು ಕೊರತೆ ಇಲ್ಲ. ಚೆನ್ನೈನಲ್ಲಿ ಮರಿನಾ ಬೀಚ್ ಎಂದರೆ ತುಂಬ ಪ್ರಸಿದ್ದಿ ಗಳಿಸಿರುವ ಸ್ಥಳವಾಗಿದೆ. ಈ ಬೀಚ್ ಸುಮಾರು 13 ಕಿ.ಮೀ ಉದ್ದವಿದೆ. ಇದು ಪ್ರಪಂಚದಲ್ಲಿನ ಅತ್ಯಂತ ದೊಡ್ಡ ಬೀಚ್‍ಗಳಲ್ಲಿ ಈ ಮರಿನಾ ಬೀಚ್ 2 ನೇ ಸ್ಥಾನವನ್ನು ಪಡೆದುಕೊಂಡಿದೆ.

ಅತ್ಯದ್ಭುತವಾದ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಅಪೂರ್ವವಾದ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಆದರೆ ಪ್ರಸ್ತುತ ಈ ಬೀಚ್ ಕಲುಷಿತವಾಗಿದೆ. ನಿರ್ಲಕ್ಷ್ಯ, ಪ್ರವಾಸಿಗರ ಅಜಾಗೂರುಕತೆಯಿಂದಾಗಿ ಮರಿನಾ ಬೀಚ್ ಕಲುಷಿತವಾಗಿದೆ. ಹಾಗಾಗದರೆ ಹೆಸರುವಾಸಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಈ ಮರಿನಾ ಬೀಚ್‍ನಲ್ಲಿ ಈಜಲು ಹೋದರೆ ಏನಾಗುತ್ತದೆ? ಎಂಬ ವಿಷಯವನ್ನು ಸಂಕ್ಷೀಪ್ತವಾದ ಮಾಹಿತಿಯನ್ನು ಲೇಖನದ ಮೂಲಕ ಪಡೆಯೋಣ.

ಮರಿನಾ ಬೀಚ್‍

ಮರಿನಾ ಬೀಚ್‍

ಮರಿನಾ ಬೀಚ್ ಎಂಬುದು ಭಾರತ ದೇಶದಲ್ಲಿನ ಚೆನ್ನೈ ನಗರದಲ್ಲಿದ ಬಂಗಾಳಕೊಲ್ಲಿ, ಹಿಂದೂ ಮಹಾಸಾಗರದ ಭಾಗವಾಗಿದೆ ಈ ಅದ್ಭುತವಾದ ಬೀಚ್. ಈ ಬೀಚ್ ಉತ್ತರದಲ್ಲಿರುವ ಫೊರ್ಟ್ ಸೆಂಟ್ ಜಾರ್ಜ್ ಸಮೀಪದ ಪ್ರದೇಶದಿಂದ ದಕ್ಷಿಣದಲ್ಲಿನ ಟ್ಯಾಯಾ ಗಾರ್‍ನವರೆಗೆ 13 ಕಿ.ಮೀ ವಿಸ್ತಾರವಾಗಿದೆ. ಇದು ಮರಳಿನಿಂದ ಕೂಡಿದೆ.

ಮರಿನಾ ಬೀಚ್‍

ಮರಿನಾ ಬೀಚ್‍

ಈ ಬೀಚ್ 1881 ರಲ್ಲಿ ರಹದಾರಿಗೆ ಸಾಕಷ್ಟು ಸಮೀಪದಲ್ಲಿ ವಿಸ್ತಾರವಿತ್ತು. 1881 ರಿಂದ 1886 ರವರೆಗೆ ಮದ್ರಾಸ್ ಸರ್ಕಾರವು ಈ ಬೀಚ್ ಅನ್ನು ಅಭಿವೃದ್ದಿ ಪಡಿಸಿ ಮರಿನಾ ಬೀಚ್ ಎಂದು ಕೂಡ ಹೆಸರನ್ನು ನೀಡಿದರು. ಉತ್ತರದಿಕ್ಕಿನ ಕಡೆ ಪ್ರವಾಹವಾಗುತ್ತಿತ್ತು, ಆದರೆ ಅದು ಪ್ರಸ್ತುತ ತನ್ನ ಸ್ಥಾನವನ್ನು ಮತ್ತಷ್ಟು ವಿಸ್ತಾರ ಮಾಡಿಕೊಂಡಿದೆ.

ಮರಿನಾ ಬೀಚ್‍

ಮರಿನಾ ಬೀಚ್‍

ಮರಿನಾ ತನ್ನ ಪ್ರಾಚೀನವಾದ ಸೌಂದರ್ಯಕ್ಕೆ ಹಾಗು ಆಹ್ಲಾದಕರವಾದ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಇದೊಂದು ಉತ್ತಮವಾದ ಪ್ರವಾಸಿ ತಾಣ ಕೂಡ ಆಗಿದೆ. ಈ ಸುಂದರವಾದ ಮರಿನಾ ಬೀಚ್‍ನಲ್ಲಿ ಕಾಲ ಕಳೆಯಲು ಹಲವಾರು ಪ್ರವಾಸಿಗರು ದಿನನಿತ್ಯ ಬೇಟಿ ನೀಡುತ್ತಿರುತ್ತಾರೆ. ಆದರೆ 20 ನೇ ಶತಮಾನದ ಮಧ್ಯಭಾಗದಲ್ಲಿ ಬೀಚ್‍ನ ನೀರು ಕಲುಷಿತವಾಗಿದೆ ಎಂದು ತಿಳಿದುಬಂದಿತು. ಪ್ಲಾಸ್ಟಿಕ್‍ನಂತಹ ವಸ್ತುಗಳಿಂದ ವಿಷಕಾರಿಯಾಗಿ ಈ ಸುಂದರವಾದ ಬೀಚ್ ಮಾರ್ಪಾಟಾಗಿತ್ತು.

ಮರಿನಾ ಬೀಚ್‍

ಮರಿನಾ ಬೀಚ್‍

ಕೆಲವು ಸ್ವಚ್ಛಂದ ಸಂಸ್ಥೆಗಳು ಮರಿನಾ ಬೀಚ್ ಅನ್ನು ಪರಿಶುಭ್ರತೆ ಮಾಡುವುದಕ್ಕೋಸ್ಕರ ಹಲವಾರು ಕ್ರಮವನ್ನು ತೆಗೆದುಕೊಂಡರು. ತಮ್ಮ ಸತತ ಪ್ರಯತ್ನಗಳಿಂದ ಬೀಚ್ ಅನ್ನು ಶುಭ್ರಗೊಳಿಸಿದರು.

ಮರಿನಾ ಬೀಚ್‍

ಮರಿನಾ ಬೀಚ್‍

ಮರಿನಾ ಬೀಚ್ ಎಂಬುದು ಒಂದು ಪ್ರವಾಸಿ ಆಕರ್ಷಣೆಯನ್ನು ಹೊಂದಿರುವ ತಾಣವಾಗಿದೆ. ಚೆನ್ನೈನಲ್ಲಿರುವ ಪ್ರವಾಸಿಗರೇ ಅಲ್ಲದೇ ದಕ್ಷಿಣ ಭಾರತದ ಹಲವಾರು ಪ್ರವಾಸಿಗರಿಗೆ ಈ ಬೀಚ್ ಅಚ್ಚು-ಮೆಚ್ಚು ಎಂದೇ ಹೇಳಬಹುದು. ಮುಖ್ಯವಾಗಿ ಈ ಬೀಚ್ ಹಲವಾರು ಅಂಗಡಿಗಳಿಂದ ಪ್ರಸಿದ್ಧಿ ಹೊಂದಿದೆ. ಈ ಅದ್ಭುತವಾದ ಸ್ಥಳವು ಪ್ರೇಮಿಗಳಿಗೆ ಅತ್ಯಂತ ಸೂಕ್ತವಾದ ಸ್ಥಳವೆಂದೇ ಹೇಳಬಹುದು.

ಮರಿನಾ ಬೀಚ್‍

ಮರಿನಾ ಬೀಚ್‍

ಸಮುದ್ರ ಎಂದರೆ ಪ್ರವಾಸಿಗರು ಸುಮ್ಮನೆ ಇರುತ್ತಾರೆಯೇ? ನೀರಿನಲ್ಲಿ ಅಡ್ಡಾಡಬೇಕು, ಆಟ ಆಡಬೇಕು ಎಂದು ಅನ್ನಿಸಿಯೇ ಅನ್ನಿಸುತ್ತದೆ. ಮರಿನಾ ಬೀಚ್‍ನಲ್ಲಿ ಅಲೆಗಳು ಹೆಚ್ಚಾಗಿ ಬರುತ್ತಿರುತ್ತವೆ. ಮರಿನಾ ಬೀಚ್‍ನಲ್ಲಿ ಸ್ನಾನ ಮಾಡುವುದು ಈಜಾಡುವುದು ಕಾನುನೂ ವಿರುದ್ಧವಾಗಿದೆ.

ಮರಿನಾ ಬೀಚ್‍

ಮರಿನಾ ಬೀಚ್‍

ಒಂದು ಕಾಲದಲ್ಲಿ "ದಿ ಮದ್ರಾಸ್ ಕಾರ್ಪೋರೇಷನ್" ಎಂದು ಕರೆಯುತ್ತಿದ್ದ "ಚೆನ್ನೈ ಕಾರ್ಪೋರೇಷನ್, 2008 ರಲ್ಲಿ ಮರಿನಾ ಪುನರುದ್ಧರಣ ಪ್ರಾಜೆಕ್ಟ್ ಪ್ರಾರಂಭ ಮಾಡಿತು. ಇದರಲ್ಲಿ ಭೂಭಾಗವನ್ನು, ನಡೆಯುವ ಮಾರ್ಗವನ್ನು, ಪ್ರವಾಸಿಗರು ಕೂರುವುದಕ್ಕೆ ವ್ಯವ್ಯಸ್ಥೆಗಳನ್ನು, ವಿಹಾರ ಪ್ರದೇಶಗಳು, ಲೈಟಿಂಗ್ಸ್‍ಗಳು ಹೀಗೆ ಹಲವಾರು ವ್ಯವ್ಯಸ್ಥೆಗಳನ್ನು ಚೆನ್ನೈ ಸರ್ಕಾರವು ನಿರ್ವಹಿಸಿತು. ಈ ಬೀಚ್‍ಗೆ ಸುಮಾರು 259.2 ಮಿಲಿಯನ್ ರೂಪಾಯಿಗಳು ಖರ್ಚು ಮಾಡಿತು.

ಮರಿನಾ ಬೀಚ್‍

ಮರಿನಾ ಬೀಚ್‍

ಗಾಂಧಿ ವಿಗ್ರಹದ ಹಿಂದೆ ಒಂದು ಸ್ಕೇಟಿಂಗ್ ರಿಂಗ್ ಇದೆ. ಇದು ಮರಿನಾ ಪುನರುದ್ಧರಣ ಪ್ರಾಜೆಕ್ಟ್‍ನ ಭಾಗವಾಗಿತ್ತು ಎಂದೇ ಹೇಳಬಹುದು. ಇಲ್ಲಿ ಕಾರ್ಮಿಕ ವಿಜಯೋತ್ಸವ ವಿಗ್ರಹ ಮತ್ತು ಲೈಟ್ ಹೌಸ್‍ಗಳ ಮಧ್ಯೆ 2.8 ಕಿ.ಮೀ ವಿಸ್ತಾರದ ಸುತ್ತ 14 ಗ್ಯಾಲರಿಗಳು ಕುಳಿತುಕೊಳ್ಳಲು ಅವಕಾಶವನ್ನು ಕಲ್ಪಿಸಿದರು.

ಮರಿನಾ ಬೀಚ್‍

ಮರಿನಾ ಬೀಚ್‍

ಮರಿನಾ ಬೀಚ್‍ನ ಎದುರಿಗೆ ವಿವೇಕಾನಂದ ಹೌಸ್ ಇದೆ. ಇಲ್ಲಿ 1897 ರಲ್ಲಿ 9 ವರ್ಷಗಳ ಕಾಲ ಗುರುವಾದ ಸ್ವಾಮಿ ವಿವೇಕಾನಂದರವರು ನಿವಾಸವಿದ್ದರು. ವಿವೇಕಾನಂದ ಹೌಸ್‍ನಲ್ಲಿ ವಿವೇಕಾನಂದರವರ ಜೀವನದ ಕುರಿತು ಮತ್ತು ಹಿಂದೂ ಮತದ ಕುರಿತು ಅವರಿಗಿದ್ದ ಒಲವಿನ ಕುರಿತು ಕೆಲವು ಚಿತ್ರಗಳ ಪ್ರದರ್ಶನವಿದೆ. ಈ ಪ್ರದರ್ಶನವನ್ನು ಕಾಣಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರಸ್ತೆ ಮಾರ್ಗದ ಮೂಲಕ
ಚೆನ್ನೈ ಒಂದು ದೊಡ್ಡ ಮಹಾನಗರವಾಗಿದೆ. ಈ ಮರಿನಾ ಬೀಚ್‍ಗೆ ತಮಿಳುನಾಡಿನ ಮೂಲೆ ಮೂಲೆಗಳಿಂದ ಹಲವಾರು ಬಸ್ಸುಗಳು ದೊರೆಯುತ್ತದೆ. ಇದರಿಂದಾಗಿ ಸುಲಭವಾಗಿ ತಲುಪಬಹುದಾಗಿದೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರೈಲ್ವೆ ನಿಲ್ದಾಣದ ಮೂಲಕ
ಚೆನ್ನೈನಲ್ಲಿನ ಸೆಂಟ್ರಲ್ ಎಗ್ಮೂರು, ತಂಬರಂ ಎಂಬ ಮೂರು ರೈಲ್ವೆ ನಿಲ್ದಾಣಗಳು ಇವೆ. ಚೆನ್ನೈನ ಈ ನಿಲ್ದಾಣಕ್ಕೆ ದೇಶದಿಂದ ಬರುವ ಹಲವಾರು ರೈಲುಗಳು ಸಂಪರ್ಕ ಸಾಧಿಸುತ್ತದೆ. ದೆಹಲಿಯಿಂದ ಈ ಸ್ಥಳಕ್ಕೆ ಹಲವಾರು ರೈಲುಗಳ ಸಂಪರ್ಕವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X