Search
  • Follow NativePlanet
Share
» »ಮರವಂತೆ ಬೀಚ್ ನೋಡಲು ಹೊರಟ್ರಾ…ಬೆಟ್ಟ ಗುಡ್ಡಗಳು, ಕಾಡು, ನದಿ, ಸಮುದ್ರ ಎಲ್ಲವೂ ಈ ಮಾರ್ಗದಲ್ಲಿವೆ

ಮರವಂತೆ ಬೀಚ್ ನೋಡಲು ಹೊರಟ್ರಾ…ಬೆಟ್ಟ ಗುಡ್ಡಗಳು, ಕಾಡು, ನದಿ, ಸಮುದ್ರ ಎಲ್ಲವೂ ಈ ಮಾರ್ಗದಲ್ಲಿವೆ

ಕನ್ನಡಿಗರಿಗೆ ಮರವಂತೆ ಬೀಚ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಆದರೆ ಮತ್ತೆ ಮತ್ತೆ ನೋಡಬೇಕೆನಿಸುವ ಸ್ಥಳಗಳಲ್ಲಿ ಮರವಂತೆ ಬೀಚ್‌ ಕೂಡ ಒಂದು. ವಿಶೇಷವಾಗಿ ಮಳೆಗಾಲದಲ್ಲಿ ಇಲ್ಲಿನ ಅದ್ಭುತ ಸೌಂದರ್ಯವನ್ನು ನೋಡಿಯೇ ಸವಿಯಬೇಕು. ಇಲ್ಲಿಗೆ ಕುಂದಾಪುರದಿಂದ NH 38 ಮೂಲಕ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಬಹುದು. ಈ ಚತುಷ್ಪಥದಲ್ಲಿ ಕುಂದಾಪುರ-ಕಾರವಾರ ನಡುವೆ ಕೇವಲ 241 ಕಿ.ಮೀ. ಅಂತರವಿದೆ. ಅದು ನಿಮ್ಮನ್ನು ಬೇರೆ ಲೋಕಕ್ಕೆ ಕೊಂಡೊಯ್ಯುತ್ತದೆ. 17 ಕಿ.ಮೀ ನಂತರ, ನೀವು ಮರವಂತೆ ಬೀಚ್ ಮತ್ತು ತ್ರಾಸಿ ನಡುವೆ ಬರುತ್ತೀರಿ. ಇದು ಚತುಷ್ಪಥವಾಗಿದೆ.

ಇದರ ನಂತರ ಹೊನ್ನಾವರಕ್ಕೆ 79 ಕಿಮೀ ದೂರವಿದೆ. ಹೊನ್ನಾವರದಿಂದ ಗೋಕರ್ಣಕ್ಕೆ 88 ಕಿಮೀ ಮತ್ತು ಗೋಕರ್ಣದಿಂದ ಕಾರವಾರಕ್ಕೆ 57 ಕಿಮೀ ದೂರವಿದೆ. ಒಟ್ಟು 241 ಕಿ.ಮೀ ದೂರವನ್ನು ಕ್ರಮಿಸುವ ಮೂಲಕ ನೀವು ಕರಾವಳಿ ಪ್ರದೇಶದ ಅದ್ಭುತ ಸೌಂದರ್ಯವನ್ನು ನೋಡಬಹುದು. ಗೋಕರ್ಣ ಅಥವಾ ಹೊನ್ನಾವರದಲ್ಲಿ ರಾತ್ರಿ ತಂಗುವ ರೀತಿಯಲ್ಲಿ ಪ್ರವಾಸದ ಯೋಜನೆಯನ್ನು ಮಾಡಬಹುದು.

ಒಂದು ಕಡೆ ನದಿ, ಇನ್ನೊಂದು ಕಡೆ ಸಮುದ್ರ

ಮರವಂತೆ ಒಂದು ಸುಂದರವಾದ ಕಡಲತೀರ ಹೊಂದಿರುವ ಹಳ್ಳಿಯಾಗಿದ್ದು, ಅದರ ತೀರದಲ್ಲಿ ಮೈಲುಗಳಷ್ಟು ಬಿಳಿ ಮರಳನ್ನು ಹೊಂದಿದೆ, ಅದಕ್ಕಾಗಿಯೇ ಈ ಬೀಚ್ ಅನ್ನು ವರ್ಜಿನ್ ಬೀಚ್ ಎಂದೂ ಕರೆಯುತ್ತಾರೆ. ಸೌಪರ್ಣಿಕಾ ನದಿಯು ಸಮುದ್ರದಲ್ಲಿ ಹರಿಯುತ್ತದೆ. ನದಿ ಮತ್ತು ಸಮುದ್ರದ ನಡುವೆ, NH38 ನಾಲ್ಕು ಪಥವನ್ನು ತೆರೆಯಲಾಗಿದೆ. ಸಮುದ್ರಕ್ಕೆ ಸಮಾನಾಂತರವಾಗಿ ಹರಿಯುವ ನದಿ ಈ ರಸ್ತೆಯ ಅಂದವನ್ನು ಹೆಚ್ಚಿಸಿದೆ. ಇಂತಹ ಅಪರೂಪದ ಸಂಗಮ ನೋಡಲು ಸಿಗುವುದು ವಿರಳ. ಒಂದು ಕಡೆ ನದಿ ಮತ್ತು ಇನ್ನೊಂದು ಕಡೆ ಸಮುದ್ರದ ಅಲೆಗಳು ಹರಿಯುವ ಭಾರತದ ಮೊದಲ ರಸ್ತೆ ಇದಾಗಿದೆ. ಸಮೀಪದ ಗಂಗೊಳ್ಳಿ ಬಂದರಿನಲ್ಲಿ, ಪ್ರವಾಸಿಗರು ಮೀನುಗಾರರ ಜೊತೆ ಸೇರಿಕೊಳ್ಳಬಹುದು.

maravanthebeach1

ಒದ್ದೆಯಾದ ರಸ್ತೆಯಲ್ಲಿ ಬುಲೆಟ್ ಅಥವಾ ಖಾಸಗಿ ಕಾರಿನಲ್ಲಿ ಪ್ರಯಾಣಿಸುವುದು ನಿಜವಾದ ಮೋಜು. NH38 ಆಧುನಿಕ ರಸ್ತೆಗಳಲ್ಲಿ ಅತ್ಯಂತ ಸುಂದರವಾದ ರಸ್ತೆಯಾಗಿದೆ. ಪರ್ವತಗಳು, ಕಾಡು ಮತ್ತು ಸಮುದ್ರ ಎಲ್ಲವೂ ಈ ರಸ್ತೆಯಲ್ಲಿವೆ. ಕುಂದಾಪುರದಿಂದ ಕಾರವಾರ ಮಾರ್ಗದ ಉದ್ದ 241 ಕಿ.ಮೀ. ಈ ಮಾರ್ಗದ ಸುಮಾರು 4 ಕಿಮೀ ಸಮುದ್ರವನ್ನು ದಾಟುತ್ತದೆ. ಮರವಂತೆ ಬೀಚ್ ಈ ಮಾರ್ಗದ ಒಂದು ಬದಿಯಲ್ಲಿದೆ ಮತ್ತು ಇನ್ನೊಂದು ಬದಿಯಲ್ಲಿ ಸೌಪರ್ಣಿಕಾ ನದಿ ಕೆಲವು ಕಿಲೋಮೀಟರ್ ಮುಂದೆ ಹರಿದು ಅರಬ್ಬಿ ಸಮುದ್ರಕ್ಕೆ ಸೇರುತ್ತದೆ.

ತಲುಪುವುದು ಹೇಗೆ?

ಕಾರವಾರ ಮತ್ತು ಕುಂದಾಪುರ NH38 ನಲ್ಲಿವೆ. ನೀವು ಕುಂದಾಪುರ ಅಥವಾ ಕಾರವಾರದಿಂದ ಪ್ರಯಾಣ ಮಾಡಬಹುದು. ಮಡಗಾಂವದಿಂದ ಕಾರವಾರಕ್ಕೆ 66 ಕಿ.ಮೀ. ವಿಮಾನದಲ್ಲಿ ಪ್ರಯಾಣಿಸುವವರು ಗೋವಾ ಮತ್ತು ಮಂಗಳೂರಿಗೆ ಬಂದು ತಲುಪಬಹುದು. ಕೊಂಕಣ ರೈಲು ಮಾರ್ಗ ಇಲ್ಲಿಗೆ ನೇರ ಸಂಪರ್ಕ ಹೊಂದಿದೆ. ನಿಜಾಮುದ್ದೀನ್ ದೆಹಲಿಯಿಂದ, ಮಂಗಳೂರು ಎಕ್ಸ್‌ಪ್ರೆಸ್ ಕಾರವಾರ ಮತ್ತು ಕುಂದಾಪುರದಲ್ಲಿ ನಿಲ್ಲುತ್ತದೆ.

ಏನೆಲ್ಲಾ ನೋಡಬಹುದು?

ಇನ್ನು NH38 ರ 241 ಕಿಮೀ ಕರಾವಳಿ ಮಾರ್ಗವು ಕುಂದಾಪುರ ಮತ್ತು ಕಾರವಾರದ ನಡುವಿನ ಪ್ರವಾಸಿ ತಾಣವಾಗಿದೆ. ಕುಂದಾಪುರವು ಕರಾವಳಿ ಪಟ್ಟಣವಾಗಿದೆ. ಇದು ಕಡಲತೀರ ಮತ್ತು ಶ್ರೀ ಕುಂದೇಶ್ವರ ಮಂದಿರಕ್ಕೆ ನೆಲೆಯಾಗಿದೆ. ಇಲ್ಲಿ ಉಳಿದುಕೊಳ್ಳಲು ಹೋಟೆಲ್ ಲಭ್ಯವಿದೆ.

honnavar1

ಹೊನ್ನಾವರ

ಇದು ಕರಾವಳಿ ಪ್ರದೇಶದ ಸುಂದರ ನಗರ. ಇಲ್ಲಿ ಕಾಸರಗೋಡು ಬೀಚ್, ಭಾರತದ ಅತಿ ಉದ್ದದ ರೈಲ್ವೆ ಸೇತುವೆ, ಶರಾವತಿ ರೈಲ್ವೆ ಸೇತುವೆ, ಮ್ಯಾಂಗ್ರೋವ್, ಅಪ್ಸರಾ ಕೊಂಡ ಜಲಪಾತ, ಶರಾವತಿ ತೂಗು ಸೇತುವೆ, ದೇವರಮೋಟ್ ದ್ವೀಪ ಮತ್ತು ಬ್ಯಾಕ್ ವಾಟರ್ ಬೋಟ್ ಹಾಗೂ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಈ ಸ್ಥಳವನ್ನು ಬಾಲಿಗೆ ಪರ್ಯಾಯವಾಗಿ ನೋಡಲಾಗುತ್ತದೆ.

ಗೋಕರ್ಣ

ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದೇವಾಲಯಗಳ ನಗರವಾಗಿದೆ. ಇಲ್ಲಿನ ಜನಸಂಖ್ಯೆಯು ಸುಮಾರು 20 ಸಾವಿರ. ಇಲ್ಲಿನ ರಮಣೀಯ ಸ್ಥಳಗಳಲ್ಲಿ ಓಂ ಬೀಚ್, ಶಿವ ಮಹಾಬಲೇಶ್ವರ ದೇವಸ್ಥಾನ, ಹಾಫ್ ಮೂನ್ ಬೀಚ್ ಸೇರಿವೆ. ಶಾಂತಿ ಅರಸಿ ಬಂದವರಿಗೆ ಗೋಕರ್ಣ ಸ್ವರ್ಗ ಇದ್ದಂತೆ.

karwar

ಕಾರವಾರ

ಕಾರವಾರ ನಗರವು ಕಾಳಿ ನದಿಯ ದಡದಲ್ಲಿದೆ. ಕಾಳಿ ನದಿಯು ಅರಬ್ಬೀ ಸಮುದ್ರಕ್ಕೆ ಹೋಗಿ ಸೇರುತ್ತದೆ. ಕಾರವಾರದ ಸೀ ಫುಡ್ ತುಂಬಾ ಫೇಮಸ್. ಇಲ್ಲಿ ತಂಗುವ ಮೂಲಕ ರವೀಂದ್ರ ನಾಥ್ ಟ್ಯಾಗೋರ್ ಬೀಚ್, ಕಾರವಾರ ಬೀಚ್, ಐಎನ್‌ಎಸ್ ಚಾಪಲ್ ವಾರ್ ಮ್ಯೂಸಿಯಂ ಮತ್ತು ಕಾಳಿ ರಿವರ್ ಗಾರ್ಡನ್ ನೋಡಬಹುದು.

ಯಾವಾಗ ಹೋಗಬೇಕು?

ಮಾನ್ಸೂನ್ ನಿಂದ ಜನವರಿವರೆಗೆ

ಎಲ್ಲಿ ಉಳಿಯಬೇಕು?

ಕಾರವಾರ, ಗೋಕರ್ಣ ಮತ್ತು ಹೊನ್ನಾವರದಲ್ಲಿ ಅನೇಕ ಬಜೆಟ್ ಸ್ನೇಹಿ ಹೋಟೆಲ್‌ಗಳಿವೆ. ಸೀ ಫುಡ್ ಸೇರಿದಂತೆ ಕಾರವಾರದಲ್ಲಿ ದಕ್ಷಿಣ ಭಾರತದ ಆಹಾರ, ಉತ್ತರ ಭಾರತದ ಆಹಾರ ಲಭ್ಯವಿರುವುದರಿಂದ ಫುಡ್‌ ಪ್ರಿಯರು ಹೆಚ್ಚು ಯೋಚಿಸುವ ಅಗತ್ಯವಿಲ್ಲ.

More News

Read more about: beach udupi monsson travel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+