Search
  • Follow NativePlanet
Share
» »ಎರಡನೇಯ "ಮಾನಸಸರೋವರ" ಮಣಿಮಹೇಶ

ಎರಡನೇಯ "ಮಾನಸಸರೋವರ" ಮಣಿಮಹೇಶ

By Vijay

ಇದನ್ನು ಎರಡನೇಯ ಮಾನಸ ಸರೋವರ/ಮಾನಸರೋವರ ಎಂದರೂ ತಪ್ಪಾಗಲಾರದು. ಮಾನಸ ಸರೋವರ ಅತ್ಯಂತ ಪವಿತ್ರ ಸರೋವರವಾಗಿದ್ದು ಟಿಬೆಟ್ ದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಮಾನಸ ಸರೋವರದ ನಂತರದಲ್ಲಿ ಈ ಸರೋವರಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ ಹಾಗೂ ಇದು ಭಾರತದಲ್ಲೆ ಬರುತ್ತದೆ. ಇದೆ ಮಣಿಮಹೇಶ.

ಹಿಂದುಗಳಲ್ಲಿ ಸಾಮಾನ್ಯವಾಗಿ ಮಾನಸ ಸರೋವರ ಯಾತ್ರೆ ಅತ್ಯಂತ ಪ್ರಮುಖ ಯಾತ್ರೆ ಎಂದು ಹೇಳಲಾಗುತ್ತದೆ. ಮಾನಸ ಸರೋವರದ ಒಂದು ಹನಿ ನೀರನ್ನು ಸೇವಿಸಿದವನು ಇಹ ಲೋಕದಲ್ಲಿ ಮಾಡಿದ ಎಲ್ಲ ಪಾಪ ಕರ್ಮಗಳಿಂದ ಮುಕ್ತನಾಗಿ ಸಾವಿನ ನಂತರ ಕೈಲಾಸ ಸೇರುತ್ತಾನೆ ಎಂಬ ಅಚಲವಾದ ನಂಬಿಕೆಯಿದೆ.

ಜಾಗ್ರತೆ! ಈ ಟ್ರೆಕ್ಕುಗಳು ಬಲು ಅಪಾಯಕಾರಿ!

ಇಷ್ಟೊಂದು ಪವಿತ್ರವಾಗಿದೆ ಮಾನಸ ಸರೋವರ. ಆದರೆ ನಿಮಗಿದು ಗೊತ್ತೆ ಮಾನಸ ಸರೋವರದ ನಂತರದಲ್ಲಿಯೆ ಸ್ಥಾನ ಪಡೆದಿದೆ ಮಣಿಮಹೇಶ ಕೆರೆ. ಸಾಕಷ್ಟು ಭಕ್ತಿ-ಶೃದ್ಧೆಯಿಂದ ಅಗಸ್ಟ್ ಹಾಗೂ ಸೆಪ್ಟಂಬರ್ ಮಾಸಗಳಲ್ಲಿ ಮಾಡಲಾಗುವ ಅತಿ ಪವಿತ್ರ ಯಾತ್ರೆಗಳಲ್ಲಿ ಒಂದಾಗಿದೆ ಮಣಿಮಹೇಶ ದರ್ಶನ ಪಡೆಯುವ ಯಾತ್ರೆ.

ಮಣಿ ಮಹೇಶ ಅಥವಾ ಮಣಿಮಹೇಶ ಎಂದು ಕರೆಯಲಾಗುವ ಈ ಕೆರೆ/ಸರೋವರವು ಧಾರ್ಮಿಕವಾಗಿ ಹೆಚ್ಚು ಆಕರ್ಷಿಸಲ್ಪಡುವ ಭಾರತದ ಕೆಲವು ಪ್ರಮುಖ ತೀರ್ಥ ಕ್ಷೇತ್ರ ಅಥವಾ ಕೆರೆಗಳ ಪೈಕಿ ಒಂದಾಗಿದೆ. ಈ ಪುಣ್ಯದಾಯಕ ಕೆರೆಯ ಹಾಗೂ ಕ್ಷೇತ್ರದ ಕುರಿತು ಈ ಲೇಖನದ ಮೂಲಕ ಹೆಚ್ಚು ವಿಷಯ ತಿಳಿಯಿರಿ.

ಮಣಿಮಹೇಶದ ಮಹಿಮೆ:

ಮಣಿಮಹೇಶದ ಮಹಿಮೆ:

ಇದೊಂದು ಅತ್ಯಂತ ಎತ್ತರದಲ್ಲಿ ಅಂದರೆ ಸುಮಾರು ಸಮುದ್ರ ಮಟ್ಟದಿಂದ 14000 ಅಡಿಗಳಷ್ಟು ಎತ್ತರದಲ್ಲಿ ಸ್ಥಿತವಿರುವ ಅದ್ಭುತ ಕೆರೆಯಾಗಿದೆ.

ಚಿತ್ರಕೃಪೆ: Jaryal007

ಮಣಿಮಹೇಶದ ಮಹಿಮೆ:

ಮಣಿಮಹೇಶದ ಮಹಿಮೆ:

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೌರ್ ಪ್ರದೇಶದಲ್ಲಿ ಕಂಡುಬರುವ ಹಿಮಾಲಯ ಪರ್ವತ ಶ್ರೇಣಿಯ ಪೀರ್ ಪಾಂಜಾಲ್ ಶ್ರೇಣಿಯ ಮಣಿಮಹೇಶ ಕೈಲಾಸ ಶಿಖರದದ ಸ್ಥಿತವಿರುವ ಕೆರೆಯಾಗಿದೆ. ಪೀರ್ ಪಾಂಜಾಲ್ ಪರ್ವತ ಶ್ರೇಣಿ.

ಚಿತ್ರಕೃಪೆ: Just Jimish

ಮಣಿಮಹೇಶದ ಮಹಿಮೆ:

ಮಣಿಮಹೇಶದ ಮಹಿಮೆ:

ಮಣಿಮಹೇಶಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಂತಕ್ಥೆಗಳು ಪ್ರಚಲಿತದಲ್ಲಿವೆ. ಈ ಕೆರೆಯನ್ನು ಸ್ವತಃ ಶಿವನೆ ಗಿರಿಜಾದೇವಿ ಎಮ್ತಲೂ ಕರೆಯಲ್ಪಡುವ ಪಾರ್ವತಿಯನ್ನು ಮದುವೆಯಾದ ಬಳಿಕ ನಿರ್ಮಿಸಿದ ಎನ್ನಲಾಗುತ್ತದೆ.

ಚಿತ್ರಕೃಪೆ: Hiranmay

ಮಣಿಮಹೇಶದ ಮಹಿಮೆ:

ಮಣಿಮಹೇಶದ ಮಹಿಮೆ:

ಇಲ್ಲಿ ವಾಸಿಸುವ ಗಡ್ಡಿ/ಗದ್ದಿ ಜನಾಂಗದವರು ಶಿವನ ಆರಾಧಕರಾಗಿದ್ದು ಅವರು ನಂಬುವಂತೆ ಶಿವನು ಅವರಿಗೆ ಸಾಂಪ್ರದಾಯಿಕವಾದ ಶಿರತ್ರಾಣವೊಂದನ್ನು ನೀಡಿದ್ದಾನೆ ಎನ್ನಲಾಗುತ್ತದೆ. ಅಲ್ಲದೆ ಈ ಪ್ರದೇಶದಲ್ಲಿ ಆವಾಗಾವಾಗ ಜರುಗುವ ಪ್ರಕೂರಿ ವಿಕೋಪಗಳು ಶಿವನಿಗೆ ಕೋಪ ಬಂದಿರುವುದನ್ನು ಸೂಚಿಸುತ್ತದೆ ಎಂದು ಹೇಳಾಲಾಗುತ್ತದೆ.

ಚಿತ್ರಕೃಪೆ: LKLakhotia

ಮಣಿಮಹೇಶದ ಮಹಿಮೆ:

ಮಣಿಮಹೇಶದ ಮಹಿಮೆ:

ಕೇವಲ ಶಿವ ಮಾತ್ರವಲ್ಲದೆ ವಿಷ್ಣುವಿನ ವೈಕುಂಠವೂ ಇಲ್ಲಿಯೆ ನೆಲೆಸಿದೆ ಎಂದು ನಂಬಲಾಗುತ್ತದೆ. ಮಣಿಮಹೇಶಕ್ಕೆ ತೆರಳುವ ಸಂದರ್ಭದಲ್ಲಿ ಧಾಂಚೊ ಎಂಬಲ್ಲಿ ಕಂಡುಬರುವ ನೀರಿನ ಜಲಪಾತ ಹಾಗೂ ಸುತ್ತಮುತ್ತಲಿನ ಪರಿಸರ ಸ್ವತಃ ವಿಷ್ಣು ವಾಸಿಸುವ ಸ್ವರ್ಗವೆಂದೆ ನಂಬಲಾಗಿದೆ.

ಚಿತ್ರಕೃಪೆ: Ashish3724

ಮಣಿಮಹೇಶದ ಮಹಿಮೆ:

ಮಣಿಮಹೇಶದ ಮಹಿಮೆ:

ವರ್ಷದಲ್ಲಿ ಆರು ತಿಂಗಳುಗಳ ಕಾಲ ಮಾತ್ರವಷ್ಟೆ ಶಿವನು ಇಲ್ಲಿನ ಕೈಲಾಸ ಪರ್ವತದಲ್ಲಿ ತಂಗಿರುತ್ತಾನೆ ಎಂದು ನಂಬಲಾಗುತ್ತದೆ. ಹೀಗೆ ಶಿವನು ಬೇರೆ ಲೋಕಕ್ಕೆ ಪ್ರಯಾಣ ಬೆಳೆಸುವ ಸಂದರ್ಭವನ್ನು ಅದ್ದೂರಿಯಿಂದ ಇಲ್ಲಿ ಆಚರಿಸಲಾಗುತ್ತದೆ ಹಾಗೂ ಈ ಉತ್ಸವವು ಸಾಮಾನ್ಯವಾಗಿ ಅಗಸ್ಟ್ ಇಲ್ಲವೆ ಸೆಪ್ಟಂಬರ್ ತಿಂಗಳಿನಲ್ಲಿ ಬರುತ್ತದೆ.

ಚಿತ್ರಕೃಪೆ: Truewebsolution

ಮಣಿಮಹೇಶದ ಮಹಿಮೆ:

ಮಣಿಮಹೇಶದ ಮಹಿಮೆ:

ನಂತರ ಶಿವನು ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿಯ ಸಂದರ್ಭದಂದು ತನ್ನ ಮದುವೆಯ ಹಿಂದಿನ ದಿನ ಇಲ್ಲಿ ಮರಳುತ್ತಾನೆ ಎಂಬ ಪ್ರತೀತಿಯಿದೆ. ಹಾಗಾಗಿ ಪಾರ್ವತಿಯ ದೇವಾಲಯವು ಈ ತಾಣದಲ್ಲಿ ಕಂಡುಬರುತ್ತದೆ.

ಚಿತ್ರಕೃಪೆ: Varun Shiv Kapur

ಮಣಿಮಹೇಶದ ಮಹಿಮೆ:

ಮಣಿಮಹೇಶದ ಮಹಿಮೆ:

ಅಗಸ್ಟ್-ಸೆಪ್ಟಂಬರ್ ತಿಂಗಳಿನಲ್ಲಿ ಹಲವು ಸಂಘಟನೆಗಳು ಹಾಗೂ ಹಿಮಾಚಲಪ್ರದೇಶ ಸರ್ಕಾರದ ವತಿಯಿಂದ ತೀರ್ಥ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ. ಹದಸರ್ ಎಂಬ ಸ್ಥಳದಿಂದ ಭಕ್ತಾದಿಗಳು ಹಾಗೂ ಸಾಧುಗಳು ಬರಿಗಾಲಿನಲ್ಲೆ ಸುಮಾರು ಹದಿನಾಲ್ಕು ಕಿ.ಮೀ ಚಾರಣ ಮಾಡಿ ಮಣಿಮಹೇಶ್ವರ ತಲುಪುತ್ತಾರೆ. ಇದನ್ನು ಮಣಿಮಹೇಶ ಯಾತ್ರೆ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Hiranmay

ಮಣಿಮಹೇಶದ ಮಹಿಮೆ:

ಮಣಿಮಹೇಶದ ಮಹಿಮೆ:

ಇದೊಂದು ಕಠಿಣವಾದ ಚಾರಣವಾಗಿದ್ದು ಸುಮಾರು ಎರಡು ದಿನಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಎಲ್ಲ ರೀತಿಯ ಆಹಾರ ಹಾಗೂ ವೈದ್ಯಕೀಯ ಸೇವೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿರುತ್ತದೆ.

ಚಿತ್ರಕೃಪೆ: Ashish3724

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more