Search
  • Follow NativePlanet
Share

ಚಂಬಾ - ಅನ್ವೇಷಿಸಲು ಅವಕಾಶವಿರುವ ಸ್ವರ್ಗ!

14

ಉತ್ತರಾಖಂಡದ ತೆಹ್ರಿ ಗಡ್ವಾಲ್ ಜಿಲ್ಲೆಯ ಅತಿ ಸುಂದರ ಗಿರಿಧಾಮವೇ ಚಂಬಾ. ಸಮುದ್ರ ಮಟ್ಟದಿಂದ 1524 ಮೀ ಎತ್ತರದಲ್ಲಿರುವ ಈ ಗಿರಿಧಾಮದ ಪ್ರದೂಷಣ ರಹಿತ ನೈಸರ್ಗಿಕ ಸೌಂದರ್ಯವು ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ದೇವದಾರು ಮತ್ತು ಪೈನ್ ಮರಗಳಿಂದ ಆವೃತವಾಗಿರುವ ಚಂಬಾ ಪ್ರಕೃತಿ ಪ್ರಿಯರಿಗೆ ಸ್ವರ್ಗಸದೃಶವಾದ ತಾಣವಾಗಿದೆ.

ಆಪಲ್, ಎಪ್ರಿಕಾಟ್ ತೋಟಗಳು ಹಾಗು ಸುಂದರ ರೊಡೊಡೆಂಡ್ರೋನ್ (ದೊಡ್ಡ ಹೂ ಬಿಡುವ ಗುಲ್ಮ ಮರ) ಗಳಿಗೆ ಹೆಸರುವಾಸಿಯಾಗಿರುವ ಈ ಗಿರಿಧಾಮವು ಹತ್ತಿರದಲ್ಲೇ ಇರುವ ತೆಹ್ರಿ ಆಣೆಕಟ್ಟು, ಸುರ್ಕಾಂದಾ ದೇವಿ ದೇವಸ್ಥಾನ ಮತ್ತು ರಿಷಿಕೇಶಕ್ಕೆ ಹೋಗುತ್ತಿರುವ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಜನಪ್ರಿಯ ತಾಣಗಳಾದ ಗಬ್ಬರ್ ಸಿಂಗ್ ನೇಗಿಯವರ ಸ್ಮಾರಕ ಮತ್ತು ಶ್ರೀ ಬಾಗೇಶ್ವರ ಮಹಾದೇವ್ ಮಂದಿರಗಳದ್ದೂ  ಈ ಯಶಸ್ಸಿನಲ್ಲಿ ಸಿಂಹ ಪಾಲಿದೆ.

ಗಬ್ಬರ್ ಸಿಂಗ್ ನೇಗಿಯವರ ಸ್ಮಾರಕವು ಚಂಬಾದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಇದನ್ನು  1913 ರಲ್ಲಿ ಗಡ್ವಾಲ್ ರೈಫಲ್ಸ್ ನಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸಿದ್ದ ಠಾಕೂರ್ ಗಬ್ಬರ್ ಸಿಂಗ್ ಅವರ ಗೌರವಾರ್ಥವಾಗಿ  1925 ರಲ್ಲಿ ನಿರ್ಮಿಸಲಾಯಿತು. ಮೊದಲನೆಯ ಜಾಗತಿಕ ಯುದ್ಧದ ಸಮಯದಲ್ಲಿ, ತಮ್ಮ ಸೈನ್ಯದ ತುಕಡಿಯೊಂದಿಗೆ ನೇಗಿಯವರು ಜರ್ಮನಿಯಲ್ಲಿ ಹೋರಾಡಿ ಗೆದ್ದಿದ್ದರು. ಅವರ ಶೌರ್ಯ, ಕೆಚ್ಚೆದೆಯನ್ನು ಮೆಚ್ಚಿ ಮರಣಾನಂತರ ಅವರಿಗೆ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ವಿಕ್ಟರಿ ಕ್ರಾಸ್ ನೀಡಿ ಗೌರವಿಸಲಾಯಿತು. ಪ್ರತಿ ವರ್ಷ ಏಪ್ರಿಲ್ 21ರಂದು ಗಡ್ವಾಲ್ ದಳ ಈ ಮಹಾನ್ ಯೋಧನಿಗೆ ತನ್ನ ಗೌರವಯುತ ಕಾಣಿಕೆ ಅರ್ಪಿಸುತ್ತದೆ.

ಚಂಬಾದ ಮತ್ತೊಂದು ಪ್ರಖ್ಯಾತ ಪ್ರವಾಸಿ ಆಕರ್ಷಣೆ ಎಂದರೆ ಶ್ರೀಬಾಗೇಶ್ವರ ಮಹಾದೇವ್ ಮಂದಿರ. ಹಿಂದೂಗಳ ಅಧಿದೇವತೆಯಾದ ಭಗವಾನ ಶಿವನ ದೇವಾಲಯವಾಗಿರುವ ಇಲ್ಲಿಗೆ ಪ್ರತಿ ವರ್ಷ ಅನೇಕ ಭಕ್ತರು ಭೇಟಿ ನೀಡಿ ಆ ಭೋಲೆನಾಥನ ಆಶಿರ್ವಾದ ಪಡೆಯುವರು. ಪ್ರಸ್ತುತ ಈ ದೇವಸ್ಥಾನದಲ್ಲಿರುವ ಶಿವ ಲಿಂಗವು ನಿಗೂಢವಾಗಿ ನೆಲದಡಿಯಿಂದ ಕಾಣಿಸಿಕೊಂಡಿದ್ದು ಎಂದು ನಂಬಲಾಗಿದೆ. ಶಿವರಾತ್ರಿಯನ್ನು ಇಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ.

ಪ್ರಯಾಣಿಕರು/ಪ್ರವಾಸಿಗರು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಚಂಬಾ ತಲುಪಬಹುದು.  ಹತ್ತಿರದ ವಾಯುನೆಲೆ ಡೆಹ್ರಾಡೂನ್ ನಲ್ಲಿರುವ ಜಾಲಿ ಗ್ರಾಂಟ್. ಇದು  ಚಂಬಾದಿಂದ 80 ಕಿ.ಮೀ ದೂರದಲ್ಲಿದೆ ಮತ್ತು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೂ ಒಳ್ಳೆಯ  ಸಂಪರ್ಕ ಹೊಂದಿದೆ. ಪ್ರವಾಸಿಗರು ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳ ಮೂಲಕ ಚಂಬಾಗೆ ತೆರಳಬಹುದು.

ಇನ್ನು, ಚಂಬಾನಿಂದ 60 ಕಿಮೀ ದೂರದಲ್ಲಿರುವ ರಿಷಿಕೇಶ್ ರೈಲು ನಿಲ್ದಾಣವು ಹತ್ತಿರದ ರೈಲ್ವೆ ತುದಿಯಾಗಿದೆ. ಇಲ್ಲೂ ಕೂಡ ಪ್ರವಾಸಿಗರು ಗಿರಿಧಾಮ ತಲುಪಲು ಟ್ಯಾಕ್ಸಿಗಳನ್ನು ಬಾಡಿಗೆ ಪಡೆಯಬಹುದು. ಇಲ್ಲಿಂದ ರಸ್ತೆ ಮಾರ್ಗಗಳು ವಿವಿಧ ಹತ್ತಿರದ ನಗರಗಳಿಗೆ ಸಂಪರ್ಕಿಸಲ್ಪಟ್ಟಿದೆ. ಶ್ರೀನಗರ, ಡೆಹ್ರಾಡೂನ್, ತೆಹ್ರಿ, ದೇವಪ್ರಯಾಗ್, ಉತ್ತರಕಾಶಿ, ಮಸ್ಸೂರಿ ಮತ್ತು ರಿಷಿಕೇಶ್ ನಂತಹ ಹತ್ತಿರದ ನಗರಗಳಿಂದ ಚಂಬಾಗೆ ಅನೇಕ ಬಸ್ಸುಗಳು ಲಭ್ಯವಿವೆ. ಅಲ್ಲದೆ ಟ್ಯಾಕ್ಸಿಗಳೂ ಬಾಡಿಗೆಗೆ ದೊರೆಯುತ್ತವೆ.

ಮಧ್ಯಮ ಮತ್ತು ಆಹ್ಲಾದಕರ ವಾತಾವರಣವಿರುವ ಕಾರಣ ಚಂಬಾ ಗಿರಿಧಾಮವು ವರ್ಷಪೂರ್ತಿ ಭೇಟಿಗರನ್ನು ಸ್ವಾಗತಿಸುತ್ತದೆ. ಬೇಸಿಗೆ ಕಾಲದಲ್ಲಿ ಇಲ್ಲಿನ  ಗರಿಷ್ಠ ತಾಪಮಾನ 30 ° C ಆಗಿದ್ದರೆ ಕನಿಷ್ಠ ತಾಪಮಾನ 14 ° C ನ ಆಸುಪಾಸಿನಲ್ಲಿರುತ್ತದೆ. ಜುಲೈ ತಿಂಗಳಿನಲ್ಲೇ ಪಾದಾರ್ಪಣೆ ಮಾಡುವ   ಮಾನ್ಸೂನ್  ಚಂಬಾದಲ್ಲಿ ಸಾಧಾರಣ ಮಳೆ ಸುರಿಸುತ್ತದೆ. ಮಳೆಗಾಲದ ನಂತರವೆ ಬರುವ ಚಳಿಗಾಲವು ನವಂಬರ್ ತಿಂಗಳಲ್ಲಿ ಈ ಗಿರಿಧಾಮವನ್ನು ಪ್ರವೇಶಿಸುತ್ತಿದ್ದು ಈ ಕಾಲದಲ್ಲಿ ಕನಿಷ್ಠ ತಾಪಮಾನ 4°C ದಾಖಲಾಗುತ್ತದೆ.

ಪ್ರಯಾಣಿಕರು ವರ್ಷದ ಯಾವುದೇ ಕಾಲದಲ್ಲಾದರೂ ಚಂಬಾಗೆ ಭೇಟಿ ನೀಡಬಹುದು. ಆದರೆ, ಚಳಿಗಾಲದಲ್ಲಿ ಇಲ್ಲಿನ ಭೇಟಿ ರೊಮಾಂಚಕಾರಿಯಾಗಿರುತ್ತದೆ. ಹಾಗೆಯೇ, ಮಾರ್ಚ್ ಮತ್ತು ಜೂನ್ ನಡುವಿನ ಅವಧಿಯನ್ನು ಹೊರನೋಟ ಹಾಗೂ ಇತರೆ ಹೊರಾಂಗಣ ಚಟುವಟಿಕೆಗಳಿಗೆ ಆದರ್ಶ ಕಾಲವೆಂದು ಪರಿಗಣಿಸಲಾಗುತ್ತದೆ.

ಚಂಬಾ ಪ್ರಸಿದ್ಧವಾಗಿದೆ

ಚಂಬಾ ಹವಾಮಾನ

ಉತ್ತಮ ಸಮಯ ಚಂಬಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಚಂಬಾ

  • ರಸ್ತೆಯ ಮೂಲಕ
    ರಸ್ತೆ ಮಾರ್ಗದಿಂದ ಚಂಬಾವು ಅನೇಕ ಹತ್ತಿರದ ನಗರಗಳ ಸಂಪರ್ಕವನ್ನು ಹೊಂದಿದೆ. ಹಲವಾರು ಐಷಾರಾಮಿ ಮತ್ತು ಸಾಮಾನ್ಯ ಬಸ್ಸುಗಳು ಡೆಹ್ರಾಡೂನ್, ರಿಷಿಕೇಶ್, ಮಸ್ಸೂರಿ, ದೇವಪ್ರಯಾಗ, ತೆಹ್ರಿ, ಉತ್ತರಕಾಶಿ ಮತ್ತು ಶ್ರೀನಗರ ಸ್ಥಳಗಳಿಂದ ಇಲ್ಲಿಗೆ ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರಿಷಿಕೇಶದ ರೈಲ್ವೆ ನಿಲ್ದಾಣವು ಚಂಬಾದಿಂದ 60 ಕಿ.ಮೀ ದೂರದಲ್ಲಿದ್ದರೂ ಇದೇ ಇಲ್ಲಿಗೆ ಹತ್ತಿರದ ರೈಲುತುದಿಯಾಗಿದೆ. ಈ ರೈಲು ನಿಲ್ದಾಣವು ದೇಶದ ವಿವಿಧ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರವಾಸಿಗರು ಚಂಬಾ ತಲುಪಲು ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿಗಳನ್ನು ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಡೆಹ್ರಾಡೂನ್ ನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವು ಚಂಬಾಗೆ ಹತ್ತಿರದ ವಾಯುನೆಲೆಯಾಗಿದ್ದು ಚಂಬಾದಿಂದ ಇದು ಸುಮಾರು 80 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣಕ್ಕೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕವೂ ಇದೆ. ಪ್ರವಾಸಿಗರು ಈ ಗಿರಿಧಾಮ ತಲುಪಲು ವಿಮಾನನಿಲ್ದಾಣದಿಂದ ಟ್ಯಾಕ್ಸಿ ಬಾಡಿಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat