Search
  • Follow NativePlanet
Share
» »ಬೆಂಗಳೂರು ಬಳಿಯ ಮಾಕಳಿದುರ್ಗ ಬೆಟ್ಟ ಹತ್ತಿ!

ಬೆಂಗಳೂರು ಬಳಿಯ ಮಾಕಳಿದುರ್ಗ ಬೆಟ್ಟ ಹತ್ತಿ!

By Vijay

ವಾರಾಂತ್ಯ ಬಂತೆಂದರೆ ಸಾಕು, ಸಾಕಷ್ಟು ಉತ್ಸಾಹಿ ಬೆಂಗಳೂರಿಗರು ಹೆಗಲ ಮೇಲೊಂದು ಬ್ಯಾಗ್ ಹಾಕಿಕೊಂಡು ಬೈಕ್ ಅಥವಾ ಸೈಕಲ್ಲುಗಳನ್ನು ತೆಗೆದುಕೊಂಡು ನಗರದ ಗದ್ದಲಗಳಿಂದ ಕೊಂಚ ಕಾಲ ದೂರವಾಗಿರಲು, ಪ್ರಕೃತಿಯ ಒಡಲಿನಲ್ಲಿ ಅಲ್ಪ ಕಾಲ ಕಳೆಯಲೆಂದು ಬೆಳ್ಳಂಬೆಳಿಗ್ಗೆಯೆ ಎದ್ದು ಹೊರಟು ಬಿಡುತ್ತಾರೆ.

ನಿಮಗೂ ಸಹ ಅಂತಹ ಒಂದು ಕಡಿಮೆ ಖರ್ಚಿನಲ್ಲಿ, ಅತಿ ಹೆಚ್ಚು ಆನಂದ ಸಿಗುವ ಹಾಗೂ ಕಡಿಮೆ ಸಮಯವನ್ನು ತೆಗೆದುಕೊಳ್ಳುವ ಆದರೂ ರೋಮಾಂಚಕತೆಯಿಂದ ಕೂಡಿರುವ ಒಂದು ಸುಂದರವಾದ ಟ್ರೆಕ್ ಮಾಡಬೇಕೆ? ಹಾಗಿದ್ದಲ್ಲಿ ಬೆಂಗಳೂರು ಬಳಿಯ ಮಾಕಳಿ ದುರ್ಗಕ್ಕೊಮ್ಮೆ ಭೇಟಿ ನೀಡಿ.

ಪ್ರಸ್ತುತ ಲೇಖನದ ಮೂಲಕ ಮಾಕಳಿದುರ್ಗದ ಕುರಿತು ಹಾಗೂ ಅಲ್ಲಿಗೆ ಹೇಗೆ ಹೋಗಬೇಕೆಂಬುದರ ಕುರಿತು ಮಾಹಿತಿ ಪಡೆಯಿರಿ. ನಿಮ್ಮ ಸ್ನೇಹಿತರೊಡಗೂಡಿ ವಾರಾಂತ್ಯದಲ್ಲಿ ಹೀಗೊಂದು ಪ್ರವಾಸ ಮಾಡಲು ಮರೆಯದಿರಿ. ಅಲ್ಪ ಕಾಲವೆ ಆಗಲಿ ನಿಮಗಾಗುವ ಆನಂದ ಅಷ್ಟಿಷ್ಟಲ್ಲ ಹಾಗೂ ಸಿಗುವ ಅನುಭವ ಮರೆವಂಥದ್ದಲ್ಲ.

ಟ್ರೆಕ್

ಟ್ರೆಕ್

ಮಾಕಳಿ ದುರ್ಗ ಅಥವಾ ಮಾಕಳಿದುರ್ಗ ಒಂದು ಬೆಟ್ಟ ಕೋಟೆಯಾಗಿದ್ದು ಬೆಂಗಳೂರಿನಿಂದ ಸುಮಾರು 60 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಟ್ರೆಕ್ ಮಾಡಲು ಬಲು ಯೋಗ್ಯವಾದಂತಹ ಕೋಟೆಯಾಗಿದ್ದು ಸಾಕಷ್ಟು ರೋಮಾಂಚಕತೆಯನ್ನು ನೀಡುತ್ತದೆ.

ಚಿತ್ರಕೃಪೆ: Brunda Nagaraj

ಜಾಗೃತೆ

ಜಾಗೃತೆ

ಆದರೆ ಈ ಬೆಟ್ಟವನ್ನು ಸಲೀಸಾಗಿ, ಸರಳವಾಗಿ ನೀವು ಹತ್ತಬಹುದು ಎಂದು ಊಹಿಸಿದ್ದರೆ ಅದು ತಪ್ಪು. ಇದು ಕಷ್ಟಕರವಾದ ಟ್ರೆಕ್ ಅಲ್ಲದಿದ್ದರೂ ಸಾಕಷ್ಟು ತಾಳ್ಮೆಯನ್ನು ಪರೀಕ್ಷಿಸುವ ಟ್ರೆಕ್ ಅಥವಾ ಆರೋಹಣ ಕ್ರಿಯೆಯಾಗಿದೆ.

ಚಿತ್ರಕೃಪೆ: Brunda Nagaraj

ಸಾಕಷ್ಟಿವೆ

ಸಾಕಷ್ಟಿವೆ

ಈ ಚಾರಣದಲ್ಲಿ ಪ್ರಮುಖವಾಗಿ ನಿಮಗೆ ತಡೆಗಳನ್ನು ಒಡ್ಡುವ ಅಂಶಗಳೆಂದರೆ ಕಲ್ಲು-ಮುಳ್ಳಿನಿಂದ ಕೂಡಿರುವ ಹಾದಿ. ಏರುಆವಗ ಸಾಕಷ್ಟು ಜಾಗರೂಕತೆಯಿಂದ ಏರಬೇಕಾಗಿರುವುದು ಅವಶ್ಯಕ. ಒಮ್ಮೊಮ್ಮೆ ಕಲ್ಲುಗಳ ಮೇಲೆ ಕಾಲಿಡುವಾಗ ಅವು ಜಾರುತ್ತ ನಿಮ್ಮನ್ನೂ ಸಹ ಬಿಳಿಸುವಷ್ಟರ ಮಟ್ಟಿಗೆ ಯಶಸ್ವಿಯಾಗುತ್ತವೆ.

ಚಿತ್ರಕೃಪೆ: Brunda Nagaraj

ಸುಂದರ ದೃಶ್ಯ

ಸುಂದರ ದೃಶ್ಯ

ಸಮುದ್ರ ಮಟ್ಟದಿಂದ 4,430 ಅಡಿಗಳಷ್ಟು ಎತ್ತರದಲ್ಲಿರುವ ಮಾಕಳಿದುರ್ಗವು ವಾರಾಂತ್ಯದ ರಜಾ ಸ್ಮಾಯದಲ್ಲಿ ಅಥವಾ ಬಿಡುವಿದ್ದಾಗ ಸ್ನೇಹಿತರೊಂದಿಗೆ ಒಂದಿನದ ಮಟ್ಟಿಗೆ ತೆರಳಿಬರಬಹುದಾದ ಅದ್ಭುತ ಸ್ಥಳವಗಿರುವುದರಲ್ಲಿ ಸಂಶಯವೆ ಇಲ್ಲ.

ಚಿತ್ರಕೃಪೆ: Brunda Nagaraj

ಕಣ್ಮನ ಸೆಳೆತ

ಕಣ್ಮನ ಸೆಳೆತ

ಒಂದೊಮ್ಮೆ ಬೆಟ್ಟ ಏರಿದರೆ ಸಾಕು, ನೀವೆ ಬೆರಗಾಗುತ್ತೀರಿ. ಏಕೆಂದರೆ ಅಲ್ಲಿಂದ ಕಂಡುಬರುವ ದೃಶ್ಯ ಅಷ್ಟೊಂದು ನಯನಮನೋಹರವಾಗಿರುತ್ತದೆ. ಒಂದೆಡೆ ಕೆರೆಯನೊಂದನ್ನು ಕಾಣಬಹುದಾದರೆ ಇನ್ನೊಂದೆಡೆ ರೈಲಿನ ಕಂಬಿಯು ನೀಟಾಗಿ ಹರಡಿರುವುದನ್ನು ಅದೃಷ್ಟವಿದ್ದಲ್ಲಿ ಅದರ ಮೇಲೆ ರೈಲು ಶಿಸ್ತಿನ ಸಿಪಾಯಿಯಂತೆ ಸಾಗುತ್ತಿರುವುದನ್ನು ಕಂಡಾಗ ಮೈಮನ ಪುಳಕಿತವಾಗದೆ ಇರಲಾರದು.

ಚಿತ್ರಕೃಪೆ: Brunda Nagaraj

ವಿಸ್ಮಯಕರ

ವಿಸ್ಮಯಕರ

ಅದಕ್ಕೂ ಮೀರಿ ಇಲ್ಲಿ ಇನ್ನೊಂದು ವಿಶೇಷವಿದೆ. ಅದೆಂದರೆ ಸೌತ್ ಅಮೇರಿಕನ್ ಕಾಂಟಿನೆಂಟ್ ಹಿಲ್ ವ್ಯೂವ್. ಹೌದು ದಕ್ಷಿಣ ಅಮೆರಿಕದ ಪ್ರಖ್ಯಾತ ಗುಡ್ಡ ಪ್ರದೇಶದಂತೆಯೆ ಇಲ್ಲಿನ ನೋಟ ಕಂಡುಬರುವುದರಿಂದ ಅದನ್ನು ಹಾಗೆಯೆ ಕರೆಯಲಾಗುತ್ತದೆ. ಈ ನೋಟವು ಬಲು ಆಕರ್ಷಣೀಯವಾಗಿದೆ.

ಚಿತ್ರಕೃಪೆ: Brunda Nagaraj

ಐತಿಹಾಸಿಕ

ಐತಿಹಾಸಿಕ

ಅವಶೇಷಗಳ ರೂಪದಲ್ಲಿರುವ ಮಾಕಳಿದುರ್ಗ ಕೋಟೆಯು ಬೆಟ್ಟದ ಮೇಲಿದ್ದು ಐತಿಹಾಸಿಕತೆಯ ಸಾಕ್ಷಿಯನ್ನು ಒದಗಿಸುತ್ತದೆ. ಅಲ್ಲದೆ ಇಲ್ಲಿನ ಸೂರ್ಯೋದಯ ಹಾಗೂ ಸೂರ್ಯಾಸ್ತಗಳ ದೃಶ್ಯಾವಳಿಗಳೂ ಸಹ ಅಮೋಘವಾಗಿ ಕಂಡುಬರುತ್ತವೆ. ಈ ನೋಟಗಳು ಪ್ರವಾಸಿಗರ ಮನಸ್ಸಿನಲ್ಲಿ ಪ್ರಸನ್ನತೆಯ ಭಾವ ಮೂಡಿಸುತ್ತವೆ.

ಚಿತ್ರಕೃಪೆ: Brunda Nagaraj

ರೈಲು ನಿಲ್ದಾಣ

ರೈಲು ನಿಲ್ದಾಣ

ಮಾಕಳಿದುರ್ಗ ಹೆಸರಿನ ಚಿಕ್ಕ ಹಳ್ಳಿಯು ಬೆಟ್ಟದ ಬುಡದಲ್ಲೆ ನೆಲೆಸಿದ್ದು ತನ್ನದೆ ಆದ ಚಿಕ್ಕ ರೈಲು ನಿಲ್ದಾಣವನ್ನು ಹೊಂದಿದೆ. ಇನ್ನೂ ವಿಶೇಷವೆಂದರೆ ಪ್ರತಿ ದಿನ ಪ್ಯಾಸೆಂಜರ್ ರೈಲೊಂದು ಬೆಂಗಳೂರಿನಿಂದ ಮಾಕಳಿದುರ್ಗಕ್ಕೆ ತಲುಪಲು ಲಭ್ಯವಿದೆ. ಅದೆ ವಿಅಜಯವಾಡಾ-ಬೆಂಗಳೂರು ಪ್ಯಾಸೆಂಜರ್ ಗಾಡಿ.

ಚಿತ್ರಕೃಪೆ: Karthik Prabhu

ತಲುಪಬಹುದು!

ತಲುಪಬಹುದು!

ಹಾಗಾಗಿ ನೀವು ಬಾಡಿಗೆ ಕಾರನ್ನೆ ಅಥವಾ ಬೈಕುಗಳ ಮೇಲೆಯೆ ಇದನ್ನು ತಲುಪಬೇಕೆಂದಿಲ್ಲ. ಬಲು ಮಿತವ್ಯಯದ ಟ್ರೆಕ್ ನೀವು ನೋಡುತ್ತಿದ್ದರೆ ಬೆಂಗಳೂರಿನಿಂದ ಬೆಳಿಗ್ಗೆ 7 ಘಂಟೆಯ ನಂತರ ಹೊರಡುವ ರೈಲನ್ನು ಹಿಡಿದು ಒಂದು ಘಂಟೆ ಕಾಲು ನಿಮಿಷಗಳಲ್ಲಿ ಮಾಕಳಿದುರ್ಗಕ್ಕೆಲ್ಲ ತಲುಪಬಿಡಬಹುದು.

ಚಿತ್ರಕೃಪೆ: Brunda Nagaraj

ಮೂರು ಕಿ.ಮೀ

ಮೂರು ಕಿ.ಮೀ

ಮಾಕಳಿದುರ್ಗಕ್ಕೆ ಟ್ರೆಕ್, ರೈಲು ನಿಲ್ದಾಣದ ಬಳಿಯಿಂದಲೆ ಪ್ರಾರಂಭವಾಗುತ್ತದೆ. ನಿಖರವಾದ ಬೇಸ್ ಸ್ಥಳವು ನಿಲ್ದಾಣದಿಂದ ಮೂರು ಕಿ.ಮೀ ದೂರದಲ್ಲಿದ್ದು ದೇವಾಲಯವೊಂದರ ಮೂಲಕ ಹಾದು ಹೋಗುತ್ತದೆ. ಸ್ಥಳೀಯವಾಗಿ ಮಾರ್ಗದರ್ಶನ ಪಡೆದು ನಿಖರವಾದ ಸ್ಥಳವನ್ನು ತಲುಪಿ ಅಲ್ಲಿಂದ ಏರುವ ಕಾರ್ಯವನ್ನು ಪ್ರಾರಂಭಿಸಬಹುದು.

ಚಿತ್ರಕೃಪೆ: Brunda Nagaraj

ಮಳೆಗಾಲದಲ್ಲಿ ತುಂಬಿರುತ್ತೆ

ಮಳೆಗಾಲದಲ್ಲಿ ತುಂಬಿರುತ್ತೆ

ಇದಕ್ಕೂ ಮೊದಲು ಚಿಕ್ಕ ಕೊಳವೊಂದು ನಿಮ್ಮನ್ನು ಸ್ವಾಗತಿಸುತ್ತದೆ. ಮಳೆಗಾಲದ ನಂತರ ಈ ಕೊಳವು ನೀರಿನಿಂದ ಸಾಮಾನ್ಯವಾಗಿ ತುಂಬಿದ್ದು ಸಾಕಷ್ಟು ಅದ್ಭುತವಾಗಿ ಕಂಡುಬರುತ್ತದೆ. ಹೀಗೆ ಇಲ್ಲಿಂದ ಟ್ರೆಕ್ ಅಧಿಕೃತವಾಗಿ ಆರಂಭಗೊಳ್ಳುತ್ತದೆ.

ಚಿತ್ರಕೃಪೆ: Brunda Nagaraj

ಸಾಕಷ್ಟು ರೋಮಾಂಚಕ

ಸಾಕಷ್ಟು ರೋಮಾಂಚಕ

ಇನ್ನೊಂದು ವಿಷಯವೆಂದರೆ ಮಾಕಳಿದುರ್ಗಕ್ಕೆ ರಾತ್ರಿ ಚಾರಣ ಬಲು ವಿಶೇಷವಾಗಿರುತ್ತದೆ. ಇದನ್ನು ಆಯೋಜಿಸುವ ಸಾಕಷ್ಟು ಪ್ರವಾಸಿ ಸಂಸ್ಥೆಗಳು ಬೆಂಗಳೂರಿನ್ಮಲ್ಲಿದ್ದು ಅಲ್ಲಿ ಸಮಗ್ರವಾದ ಮಾಹಿತಿ ಪಡೆದು ಇದರ ಆನಂದವನ್ನು ಪಡೆಯಬಹುದು.

ಚಿತ್ರಕೃಪೆ: Brunda Nagaraj

ನೀಲಾಕಾಶ

ನೀಲಾಕಾಶ

ಸಾಮಾನ್ಯವಾಗಿ ರಾತ್ರಿ ಚಾರಣವು ಮಧ್ಯ ರಾತ್ರಿಯ ಒಂದು ಘಂಟೆಗೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಆಕಶವು ರಾತ್ರಿಯ ವಿಶೇಷ ಬೆಳಕಿನಲ್ಲಿ ತನ್ನದೆ ಆದ ಅದ್ಭುತ ಸೌಂದರ್ಯದಿಂದ ಕೂಡಿರುವುದನ್ನು ನೋಡಿದಾಗ ಮೈಮನವೆಲ್ಲ ಪುಳಕಿತಗೊಳ್ಳುತ್ತದೆ.

ಚಿತ್ರಕೃಪೆ: Brunda Nagaraj

ಬಾಲ್ಯದ ನೆನಪು

ಬಾಲ್ಯದ ನೆನಪು

ರಾತ್ರಿಯ ನಗರದ ಥಳು-ಬೆಳುಕುಗಳಿಂದ ದೂರವಿದ್ದ ಕಾರಣ ಆಗಸದಿ ಹೊಳೆಯುವ ನಕ್ಷತ್ರಗಳು ನಿಮಗೆ ನಿಮ್ಮ ಬಾಲ್ಯದಲ್ಲಿನ ಸಮಯ ನೆನಪು ಮಾಡಿಕೊಟ್ಟರೂ ಅಚ್ಚರಿ ಪಡಬೇಕಾಗಿಲ್ಲ. ಜಸ್ಟ್ ಆನಂದಿಸಿ ಹಾಗೂ ನೆನಪುಗಳನ್ನು ಮೆಲುಕು ಹಾಕುತ್ತ ಮುನ್ನುಗ್ಗಿ.

ಚಿತ್ರಕೃಪೆ: Brunda Nagaraj

ಹುಷಾರು

ಹುಷಾರು

ಮೊದಲೆ ಹೇಳಿದಂತೆ ಇಲ್ಲಿ ಗಿಡ-ಗಂಟಿಗಳು, ಹುಳು-ಹುಪ್ಪಡಿಗಳು, ಕಲ್ಲು, ಮುಳ್ಳುಗಳು ಸಾಕಷ್ಟಿರುವುದರಿಂದ ಎಲ್ಲ ರೀತಿಯ ತಯಾರಿಕೆಯಿಂದ ತೆರಳಿ ಹಾಗೂ ಸಾಕಷ್ಟು ಜಾಗರೂಕತೆ ವಹಿಸುವುದನ್ನು ಮಾತ್ರ ಮರೆಯಬೇಡಿ.

ಚಿತ್ರಕೃಪೆ: Brunda Nagaraj

ಬಂಡೆಗಳ ಮೇಲೆ ಬರೆಯಲಾಗಿದೆ

ಬಂಡೆಗಳ ಮೇಲೆ ಬರೆಯಲಾಗಿದೆ

ಈ ಚಾರಣ ಮಾಡುವಾಗ ಅನುಕೂಲವಾಗುವಂತೆ ಹಿಂದೆ ಚಾರಣ ಮಾಡಿರುವ ಪ್ರವಾಸಿಗರು ಅಲ್ಲಲ್ಲಿರುವ ಗುರುತರವಾದ ಕಲ್ಲು ಬಂಡೆಗಳ ಮೇಲೆ ಸಾಗುವ ಮಾರ್ಗವನ್ನು ಬರೆದಿರುವುದನ್ನು ಕಾಣಬಹುದು. ಇದನ್ನು ಅನುಸರಿಸುತ್ತ ಸಾಗಬಹುದು.

ಚಿತ್ರಕೃಪೆ: Brunda Nagaraj

ಮೊನಚಾದ ಏರಿಕೆ

ಮೊನಚಾದ ಏರಿಕೆ

ಏರುವಾಗ ಮೊದ ಮೊದಲು ಸುಲಭ ಎನ್ನಿಸಬಹುದಾದರೂ ಕೆಲ ದೂರದ ನಂತರ ಮೊನಚಾದ ಏರಿಕೆಯಿರುವುದನ್ನು ಅನುಭವಿಸಬಹುದು. ಇಲ್ಲಿಯೂ ಅಷ್ಟೆ ಸಾಕಷ್ಟು ಜಾಗರೂಕತೆಯಿಂದ ತೆರಳಬೆಕು.

ಚಿತ್ರಕೃಪೆ: Brunda Nagaraj

ಕರೆಯುತ್ತದೆ

ಕರೆಯುತ್ತದೆ

ಏರಿದಂತೆ ನಿಮ್ಮ ಕಣ್ಣು ಮುಂದೆ ಸೆಟೆದು ನಿಂತಿರುವ ಮಾಕಳಿ ದುರ್ಗವನ್ನು ನೀವು ಅತಿ ಧೈರ್ಯದಿಂದ ಬೇಧಿಸುತ್ತ ಮುನ್ನುಗ್ಗುತ್ತಿರುವಂತಹ ಅನಿಸಿಕೆಯು ನಿಮ್ಮನ್ನು ಮತ್ತಷ್ಟು ಉತ್ಸಾಹಗೊಳ್ಳುವಂತೆ ಮಾಡುತ್ತದೆ.

ಚಿತ್ರಕೃಪೆ: Brunda Nagaraj

ಹುರುಪು ನೀಡುತ್ತವೆ

ಹುರುಪು ನೀಡುತ್ತವೆ

ಬೆಟ್ಟದ ಮಧ್ಯದಲ್ಲಿ ಕೆಲ ಕಡೆ ಒಣ ಭೂಮಿಗಳು ಕೇವಲ ಕಲ್ಲು-ಮುಳ್ಳುಗಳಿಂದ ತುಂಬಿರುವುದು ಕಂಡು ಬಂದರೆ ಇನ್ನೂ ಕೆಲ ಸ್ಥಳಗಳು ಸೊಂಪಾಗಿ ಬೆಳೆದ ವಿವಿಧ ಚಿಕ್ಕ ಪುಟ್ಟ ಜಾತಿಯ ಆಕರ್ಷಕ ಗಿಡ ಮರಗಳಿಂದ ಕೂಡಿದ್ದು ಕಂಡುಬರುತ್ತದೆ.

ಚಿತ್ರಕೃಪೆ: Brunda Nagaraj

ಮರೆಯಲೇಬಾರದು

ಮರೆಯಲೇಬಾರದು

ಒಂದೊಮ್ಮೆ ಬೆಟ್ಟ ಹತ್ತಿದಿರೆಂದರೆ ಸಾಕು, ನೀವು ಅಲ್ಲಿಯವರೆಗೂ ಪಟ್ಟ ಕಷ್ಟವೆಲ್ಲ ಒಂದೆ ಕ್ಷಣದಲ್ಲಿ ಗಾಳಿಯಲ್ಲಿ ಹರಿದು ಹೋಗಿಬಿಡುತ್ತದೆ. ನಂತರ ಅಲ್ಲಿಂದ ಕಂಡುಬರುವ ದೃಶ್ಯ ನೀವು ಮಂತ್ರಮುಗ್ಧರಾಗುವಂತೆ ಮಾಡಿ ಬಿಡುತ್ತದೆ. ಬೆಟ್ಟದ ಪಶ್ಚಿಮಕ್ಕೆ ಒಂದು ಸುಂದರವಾದ ದೃಶ್ಯವಿದ್ದು ಅದನ್ನು ನೋಡಲು ಖಂಡಿತ ಮರೆಯಲೆ ಬಾರದು.

ಚಿತ್ರಕೃಪೆ: Brunda Nagaraj

ಸೌತ್ ಅಮೆರಿಕಮ್ ಕಾಂಟಿನೆಂಟ್

ಸೌತ್ ಅಮೆರಿಕಮ್ ಕಾಂಟಿನೆಂಟ್

ಇಲ್ಲಿಂದ ಕಂಡುಬರುವ ವಿಶಿಷ್ಟ ಆಕಾರದ ಕೆರೆಯೊಂದು ನಿಮ್ಮ ಗಮನವನ್ನು ಮೊದಲು ಸೆಳೆಯುತ್ತದೆ. ಸೌತ್ ಅಮೆರಿಕಮ್ ಕಾಂಟಿನೆಂಟ್ ವ್ಯೂವ್ ಎಂದು ಅದನ್ನು ಕರೆಯುತ್ತಾರೆ. ಏಕೆಂದರೆ ನಿಜವಾದ ಸೌತ್ ಅಮೆರಿಕನ್ ಕಾಂಟಿನೆಂಟ್ ವ್ಯುವ್ ನಂತೆಯೆ ಈ ದೃಶ್ಯ ಇದಯೆಂತೆ. ಇದು ಮೂಲತಃ ಗುಂಜಿ ಕೆರೆ.

ಚಿತ್ರಕೃಪೆ: Brunda Nagaraj

ಶಿವನ ಆಲಯ

ಶಿವನ ಆಲಯ

ಅಲ್ಲದೆ ಮಾಕಳಿದುರ್ಗದ ಬೆಟ್ಟದ ಮೇಲೆ ದೇವಾಲಯವೊಂದಿರುವುದನ್ನೂ ಸಹ ಕಾಣಬಹುದು. ಇಲ್ಲಿ ಶಿವಲಿಂಗವಿದ್ದು ಆವಾಗಾವಾಗ ಇಲ್ಲಿ ಪೂಜೆ ನಡೆಯುತ್ತಿರುತ್ತದೆ ಎಂಬುದರ ಸಂಕೇತ ಆ ಶಿವಲಿಂಗಕ್ಕೆ ಏರಿಸಿದ ಹೂವುಗಳಿಂದ ತಿಳಿಯಬಹುದು.

ಚಿತ್ರಕೃಪೆ: Brunda Nagaraj

ತಯಾರಿ ಇರಲಿ

ತಯಾರಿ ಇರಲಿ

ಸರಳ ಟ್ರೆಕ್ ಎಂದು ಹಗುರವಾಗಿ ತೆಗೆದುಕೊಳ್ಳದೆ ಟ್ರೆಕ್ ಮಾಡಲು ಬೇಕಾದಂತಹ ಎಲ್ಲ ಮುಲಭೂತ ಸೌಕರ್ಯಗಳನ್ನು ತೆಗೆದುಕೊಂಡು ಹರಡಲು ಸಜ್ಜಾಗಿ. ಟ್ರ್ಯಾಕ್ ಪ್ಯಾಂಟ್, ಟಿ ಶರ್ಟ್ ನೀರು, ತಿಂಡಿ, ಮೊದಲೋಪಚಾರದ ಔಷಧಿಗಳು, ಗಾಗಲ್ ಹಾಗೂ ಒಳ್ಳೆಯ ಬೂಟುಗಳಿರಲಿ.

ಚಿತ್ರಕೃಪೆ: Brunda Nagaraj

ಹೇಗೆ ತಲುಪಬಹುದು

ಹೇಗೆ ತಲುಪಬಹುದು

ಮಾಕಳಿದುರ್ಗವು ಬೆಂಗಳೂರಿನಿಂದ ದೊಡ್ಡಬಳ್ಳಾಪುರದ ಮಾರ್ಗವಾಗಿ ಸಾಗುತ್ತ ದೊಡ್ಡಬಳ್ಳಾಪುರದಿಂದ ಸುಮಾರು ಹತ್ತು ಕಿ.ಮೀ ಗಳಷ್ಟು ದೂರದಲ್ಲಿದೆ. ಮಾಕಳಿ ದುರ್ಗಕ್ಕೆ ತೆರಳಲು ಬಾಡಿಗೆ ಕಾರುಗಳನ್ನು ಬೆಂಗಳೂರಿನಿಂದ ಪಡೆಯಬಹುದು. ಅಲ್ಲದೆ, ಬೆಂಗಳೂರಿನಿಂದ ಮಾಕಳಿದುರ್ಗಕ್ಕೆ ತೆರಳಲು ರೈಲು ನಿಗದಿತ ಸಮಯಕ್ಕೆ ಲಭ್ಯವಿದ್ದು ಬೆಳಿಗ್ಗೆ ಹಾಗೂ ಸಾಯಂಕಾಲ ಎರಡೂ ಸಮಯಕ್ಕೆ ದೊರೆಯುತ್ತವೆ. ರೈಲು ಹಾಗೂ ಸಮಯಗಳನ್ನು ಮೊದಲೆ ನೋಡಿಕೊಳ್ಳಿ.

ಚಿತ್ರಕೃಪೆ: Brunda Nagaraj

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more