Search
  • Follow NativePlanet
Share
» »ಕೇರಳದ ಅತಿ ಪ್ರಮುಖ ಶಿವನ ದೇವಾಲಯಗಳು

ಕೇರಳದ ಅತಿ ಪ್ರಮುಖ ಶಿವನ ದೇವಾಲಯಗಳು

By Vijay

ಪ್ರವಾಸಿಗರ ಸ್ವರ್ಗವೆಂದೆ ಖ್ಯಾತಿ ಪಡೆದಿರುವ ಕೇರಳ ರಾಜ್ಯದಲ್ಲಿ ನೋಡಲು ಸಾಕಷ್ಟು ಆಯ್ಕೆಗಳಿವೆ. ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಹೊಂದಿರುವ ಈ ರಾಜ್ಯದಲ್ಲಿ ವೈವಿಧ್ಯಮಯ ದೇವಾಲಯಗಳನ್ನು ಅವುಗಳನ್ನು ವಿಶಿಷ್ಟವಾಗಿ ನಿರ್ಮಿಸಲಾಗಿರುವುದನ್ನು ಕಾಣಬಹುದು.

ಎಲ್ಲೆಡೆಯಲ್ಲಿರುವಂತೆ ಕೇರಳದಲ್ಲೂ ಸಹ ಶಿವನಿಗೆ ಮುಡಿಪಾದ ಸಾವಿರಾರು ದೇವಾಲಯಗಳಿವೆ. ಆದರೆ ರಾಜ್ಯದ ನಾಲ್ಕು ಶಿವನ ದೇವಾಲಯಗಳನ್ನು ಅತಿ ಮುಖ್ಯ, ದೊಡ್ಡದಾದ, ಪ್ರಭಾವಶಾಲಿ ಹಾಗೂ ಶಕ್ತಿಶಾಲಿ ದೇವಾಲಯಗಳೆಂದು ನಂಬಲಾಗುತ್ತದೆ. ಕಾರಣ ಇವುಗಳ ಹಿಂದಿರುವ ಕಥೆ, ಹಿನ್ನಿಲೆ, ಭೇಟಿ ನೀಡುವ ಭಕ್ತರ ಪ್ರಮಾಣ, ಸ್ಥಳ ಮಹಿಮೆ ಮುಂತಾದವುಗಳಾಗಿವೆ.

ಪ್ರಸ್ತುತ ಲೇಖನದಲ್ಲಿ ಯಾವೆಲ್ಲ ಶಿವನ ದೇವಾಲಯಗಳನ್ನು ಸಾಮಾನ್ಯವಾಗಿ ಕೇರಳದಲ್ಲಿರುವ ಶಿವನ ಅತಿ ಪ್ರಮುಖ ದೇವಾಲಯಗಳು ಎಂದು ಗುರುತಿಸಲಾಗುತ್ತದೆಂಬುದರ ಕುರಿತು ತಿಳಿಸುತ್ತದೆ. ಕೇರಳ ಪ್ರವಾಸದಲ್ಲಿದ್ದಾಗ ಅವಕಾಶ ದೊರೆತರೆ ಈ ದೇವಾಲಯಗಳಿಗೆ ಭೇಟಿ ನೀಡಲು ಪ್ರಯತ್ನಿಸಿ.

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ವಡಕ್ಕುನಾಥನ ದೇವಾಲಯ : ಕೇರಳದ ತ್ರಿಶ್ಶೂರ್ ನಗರದಲ್ಲಿದೆ ಶಿವನ ಈ ದೇವಸ್ಥಾನ. ಈ ದೇವಾಲಯ ಕೇರಳದ ವಿಶೇಷ ವಾಸ್ತುಶೈಲಿಗೆ ಉತ್ತಮ ಉದಾಹರಣೆಯಾಗಿದ್ದು ಛಾವಣಿಯ ನಾಲ್ಕೂ ಭಾಗಗಳಲ್ಲಿ ಗೋಪುರಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: Adarsh Padmanabhan

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಈ ದೇವಾಲಯ ಮೂಲದ ಕುರಿತು ಬ್ರಹ್ಮಾಂಡ ಪುರಾಣದಲ್ಲಿ ವಿವರಿಸಲಾಗಿದೆ ಎಂದು ಹೇಳಲಾಗಿದೆ. ಈ ವಿಚಾರವಾಗಿ ತಜ್ಞರಲ್ಲಿ ಹಲವು ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರೂ ಒಂದು ಮಾತನ್ನು ಒಪ್ಪಿಕೊಳ್ಳುತ್ತಾರೆ. ಅದೆನೆಂದರೆ ಈ ದೇವಾಲಯವು ಪರಶುರಾಮರಿಂದ ಸ್ಥಾಪಿಸಲ್ಪಟ್ಟಿದೆ ಎಂಬುದು.

ಚಿತ್ರಕೃಪೆ: Aruna

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಪರಶುರಾಮರು ತಮ್ಮ ಕ್ಷತ್ರೀಯ ಸಂಹಾರ ಪಾಪ ಪರಿಹಾರಕ್ಕಾಗಿ ಯಜ್ಞ, ಹೋಮಗಳನ್ನು ನೆರವೇರಿಸಿ ತನ್ನ ಗುರುವಾದ ಶಿವನನ್ನು ಕುರಿತು ಪ್ರಾರ್ಥಿಸಿ ಕರೆತರಲು ಕೈಲಾಸಕ್ಕೆ ಹೊರಡುತ್ತಾರೆ. ಅಲ್ಲಿ ಶಿವನು ಇವರ ಭಕ್ತಿಗೆ ಪ್ರಸನ್ನನಾಗಿ ಇಲ್ಲಿನ ವಟ ವೃಕ್ಷವೊಂದಕ್ಕೆ ಅಂಟಿಕೊಂಡಂತೆ ಶಿವಲಿಂಗ ರುಪದಲ್ಲಿ ಪ್ರತ್ಯಕ್ಷನಾಗುತ್ತಾನೆ.

ಚಿತ್ರಕೃಪೆ: Rkrish67

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಆ ಶಿವಲಿಂಗವಿರುವ ಸ್ಥಳವೆ ಮೂಲಸ್ಥಾನವಾಗಿದ್ದು ನಂತರ ಅದನ್ನು ಈಗಿರುವ ದೇವಾಲಯದ ಗರ್ಭಗುಡಿಯ ಸ್ಥಳದಲ್ಲಿ ಶಾಸ್ತ್ರಗಳಲ್ಲಿ ಹೇಳಲಾದ ವಿಧಿ ವಿಧಾನಗಳನ್ನು ಅನುಸರಿಸಿ ಪ್ರತಿಷ್ಠಾಪಿಸಲಾಗಿದೆ. ಪ್ರಸ್ತುತ ದೇವಾಲಯವು 1300 ವರ್ಷಗಳಷ್ಟು ಪುರಾತನವಾದುದೆಂದು ಹೇಳಲಾಗುತ್ತದೆ ಹಾಗೂ ಇಲ್ಲಿನ ಶಿವನು ಜಾಗೃತನಾಗಿದ್ದಾನೆನ್ನಲಾಗಿದೆ. ಮೂಲಸ್ಥಾನ.

ಚಿತ್ರಕೃಪೆ: wikipedia

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಇನ್ನೊಂದು ಮೂಲದ ಪ್ರಕಾರ, ಆದಿ ಗುರು ಶಂಕರಾಚಾರ್ಯರ ತಂದೆ ತಾಯಿಯಾದ ಶಿವಗುರು ಹಾಗೂ ಆರ್ಯಾಂಬಾ ದಂಪತಿಗಳು ಶಿವನ ಈ ದೇವಸ್ಥಾನದಲ್ಲೆ ಶಿವನನ್ನು ಕುರಿತು ಸಂತಾನಕ್ಕೆ ಪ್ರಾರ್ಥಿಸಿದ್ದರು. ಅದಕ್ಕಾಗಿ ನಿರಂತರವಾಗಿ 41 ದಿನಗಳ ಕಾಲ ಶಿವನನ್ನು ಪೂಜಿಸಿ ಆರಾಧಿಸಿದ್ದರು.

ಚಿತ್ರಕೃಪೆ: Rameshng

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಅದರ ಫಲವಾಗಿ ಶಿವನು ಇಬ್ಬರ ಕನಸಿನಲ್ಲೂ ಬಂದು ಸಾಧಾರಣ ಗುಣದ ದೀರ್ಘಾಯುಷಿಯ ಮಗ ಹಾಗೂ ಅಸಾಧಾರಣ ಜ್ಞಾನದ ಅಲ್ಪಾಯುಷಿಯ ಮಗ, ಈ ಇಬ್ಬರಲ್ಲಿ ಯಾರು ಬೇಕೆಂದು ಕೇಳಿದಾಗ ದಮ್ಪತಿಗಳಿಬ್ಬರು ಎರಡನೇಯ ಆಯ್ಕೆ ಬಯಸಿದರು. ಅದರಂತೆ ವಡಕ್ಕುನಾಥನ ಕೃಪೆಯಿಂದ ಶಂಕರಾಚಾರ್ಯರ ಜನನವಾಯಿತೆಂದು ನಂಬಲಾಗುತ್ತದೆ. ವಡಕ್ಕುನಾಥನ್ ದೇವಾಲಯ ಪುಷ್ಕರಿಣಿ.

ಚಿತ್ರಕೃಪೆ: Challiyan

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ವೈಕಮ್ ಶಿವ ದೇವಾಲಯ : ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ವೈಕಮ್ ತಾಲೂಕಿನ ಈ ಶಿವ ದೇವಾಲಯವು ಪ್ರಮುಖ ಶಿವನ ದೇವಾಲಯಗಳಲ್ಲಿ ಪರಿಗಣಿಸಲ್ಪಡುತ್ತದೆ. ಕೊಟ್ಟಾಯಂನಲ್ಲಿರುವ ಮೂರು ಶಿವನ ಪ್ರಮುಖ ದೇವಾಲಯಗಳ ಪೈಕಿ ಇದೂ ಒಂದು. ಮಿಕ್ಕೆರಡು ದೇವಾಲಯಗಳೆಂದರೆ ಎಟ್ಟುಮಾನೂರು ಶಿವ ದೇವಾಲಯ ಹಾಗೂ ಕಡುತುರ್ತಿ ಮಹಾದೇವ ದೇವಾಲಯ.

ಚಿತ್ರಕೃಪೆ: wikipedia

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ನಂಬಿಕೆಯಂತೆ ಭಕ್ತ ಉಚ್ಛ ಪೂಜೆಯ ಮುಂಚೆ ಈ ಎಲ್ಲ ಮೂರು ದೇವಾಲಯಗಳಲ್ಲಿ ಶಿವನನ್ನು ಪೂಜಿಸಿದರೆ ಅವನ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆಯಂತೆ. ಶೈವ ಹಾಗೂ ವೈಷ್ಣವರಿಬ್ಬರೂ ನಡೆದುಕೊಳ್ಳುವ ಪ್ರಮುಖ ಶಿವ ದೇವಾಲಯವಾಗಿದೆ ವೈಕಮ್ ದೇವಾಲಯ.

ಚಿತ್ರಕೃಪೆ: Vinayaraj

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಸ್ಥಳ ಪುರಾಣದಂತೆ ಖರಾಸುರನೆಂಬುವನು ಅಪ್ರತಿಮ ಶಿವಭಕ್ತನಾಗಿದ್ದ ಹಾಗೂ ಮೋಕ್ಷ ಪಡೆಯಲೆಂದು ಹಿಮಾಲಯದಲ್ಲಿ ಶಿವನ ಕುರಿತು ತಪಸ್ಸು ಮಾಡಿದ್ದ. ಆತನ ತಪಸ್ಸಿಗೆ ಮೆಚ್ಚಿದ ಶಿವ ಮೂರು ಶಿವಲಿಂಗಗಳನ್ನು ಆತನಿಗೆ ನೀಡಿ ಇದನ್ನು ಪೂಜಿಸಿ ಮೋಕ್ಷ ಹೊಂದಲು ಹೇಳಿದ್ದ.

ಚಿತ್ರಕೃಪೆ: Sivavkm

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ನಂತರ ಆತ ಎರಡೂ ಕೈಗಳಲ್ಲೊಂದೊಂದು ಶಿವಲಿಂಗ ಹಾಗೂ ಕುತ್ತಿಗೆಯ ಮೇಲೊಂದು ಶಿವಲಿಂಗ ಹಿಡಿದು ದಕ್ಷಿಣಕ್ಕೆ ಬಂದಾಗ ಮಾರ್ಗ ಮಧ್ಯವೊಂದರಲ್ಲಿ ದಣಿವಾರಿಸಿಕೊಳ್ಳಲು ಕುಳಿತುಕೊಂಡ. ಆ ಸಮಯದಲ್ಲಿ ಆ ಮೂರು ಶಿವಲಿಂಗಗಳನ್ನು ಭೂಮಿಗೆ ಇಳಿಸಿದ. ತಕ್ಷಣ ಅವು ಅಲ್ಲೆ ಪ್ರತಿಷ್ಠಾಪಿಸಲ್ಪಟ್ಟವು ಹಾಗೂ ಆತನಿಗೆ ಮೋಕ್ಷ ನೀಡಿದವು.

ಚಿತ್ರಕೃಪೆ: Georgekutty

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಆತನು ಎಡಗೈನಿಂದ ಇಟ್ಟ ಶಿವಲಿಂಗ ಎಟ್ಟುಮಾನೂರು, ಬಲಗೈನಿಂದ ಇಟ್ಟ ಲಿಂಗ ವೈಕಮ್ ಹಾಗೂ ಕುತ್ತಿಗೆಯಿಂದ ಇಳಿಸಿದ ಶಿವಲಿಂಗ ಕಡುತುರ್ತಿ ಶಿವಲಿಂಗವೆಂದು ಪ್ರಸಿದ್ಧವಾಗಿವೆ. ಕಥೆಗೆ ಪುಷ್ಟಿ ನೀಡುವಂತೆ ಇವುಗಳ ಮಧ್ಯ ಅಂತರವೂ ಹೆಚ್ಚು ಕಮ್ಮಿ ಒಂದೆ ಆಗಿದೆ. ಹೀಗಾಗಿ ಒಂದೆ ದಿನದಲ್ಲಿ ಯಾರು ಈ ಮೂರು ಶಿವಲಿಂಗಗಳ ದರ್ಶನ ಪಡೆಯುತ್ತಾರೊ ಅವರು ಕೈಲಾಸ ದರ್ಶನದ ಪುಣ್ಯ ಪಡೆಯುತ್ತಾರಂತೆ.

ಚಿತ್ರಕೃಪೆ: Sivavkm

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಇನ್ನೂ ಇಲ್ಲಿ ಉತ್ಸವಗಳನ್ನೂ ಸಹ ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ. ನವಂಬರ್-ಡಿಸೆಂಬರ್ ನಲ್ಲಿ ಆಚರಿಸಲಾಗುವ ವೈಕಮ್ ಅಷ್ಟಮಿ ಉತ್ಸವಕ್ಕೆ ಈ ದೇವಾಲಯ ಬಹು ಪ್ರಸಿದ್ಧವಾಗಿದೆ.

ಚಿತ್ರಕೃಪೆ: RajeshUnuppally

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕಡುತುರ್ತಿ ಮಹಾದೇವ ದೇವಾಲಯ : ಕೊಟ್ಟಾಯಂ ಜಿಲ್ಲೆಯ ಕಡುತುರ್ತಿಯಲ್ಲಿರುವ ಈ ಶಿವನ ದೇವಾಲಯ ಒಂದು ಪ್ರಮುಖ ದೇವಾಲಯವಾಗಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಶಿವನ ದರ್ಶನ ಕೋರಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: JAGANNADHAM RAJANA

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಚೆಂಗಣ್ಣೂರು ಮಹಾದೇವ ದೇವಾಲಯ : ಭಗವತಿ ದೇವಾಲಯ ಎಂತಲೂ ಕರೆಯಲ್ಪಡುವ ಇದು ಕೇರಳದಲ್ಲಿ ಪರಿಗಣಿಸಲಾಗುವ ಪ್ರಮುಖ ಶಿವ ದೇವಾಲಯಗಳಲ್ಲೊಂದಾಗಿದೆ. ಕೇರಳದ ಅಲಪುಳ (ಅಲ್ಲೆಪ್ಪಿ) ಜಿಲ್ಲೆಯ ಚೆಂಗಣ್ಣೂರು ಎಂಬ ಪಟ್ಟಣದಲ್ಲಿ ಶಿವನ ಈ ಭವ್ಯ ದೇವಾಲಯವಿದೆ.

ಚಿತ್ರಕೃಪೆ: Ssriram mt

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಅತಿ ಆಸಕ್ತಿಕರ ವಿಷಯವೆಂದರೆ ಈ ದೇವಾಲಯದಲ್ಲಿ ಭಗವತಿ ದೇವಿಯ ಮುಟ್ಟನ್ನು ಮೂರು ದಿನಗಳ ಕಾಲ ಉತ್ಸವವಾಗಿ ಆಚರಿಸಲಾಗುತ್ತದೆ. ಇದನ್ನು ತ್ರಿಪ್ಪುತು ಎಂದು ಕರೆಯಲಾಗುತ್ತದೆ. ಈ ಸಂರ್ಭದಲ್ಲಿ ಮೂರು ದಿನಗಳ ಕಾಲ ದೇವಾಲಯ ಮುಚ್ಚಿರುತ್ತದೆ.

ಚಿತ್ರಕೃಪೆ: Ssriram mt

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ನಂಬಿಕೆಯಂತೆ ಭಗವತಿ ಪಾರ್ವತಿಯ ರುಪವಾಗಿದ್ದು ಶಿವನೊಂದಿಗೆ ಮದುವೆಯಾದ ನಂತರ ಇಲ್ಲಿಗೆ ಬಂದು ಶಿವನ ಜೊತೆ ನೆಲೆಸಿದಳು. ಹೀಗಾಗಿ ಭಗವತಿ ಹಾಗೂ ಶಿವನಿಂದಾಗಿ ಇದು ಕೇರಳದ ಪ್ರಮುಖ ಶಿವ ಹಾಗೂ ಭಗವತಿ ದೇವಾಲಯಗಳ ಪೈಕಿ ಒಂದಾಗಿ ಪರಿಗಣಿಸಲ್ಪಡುತ್ತದೆ.

ಚಿತ್ರಕೃಪೆ: Balaji Kasirajan

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಎರ್ನಾಕುಲಂ ಶಿವ ದೇವಾಲಯ : ಕೊಚ್ಚಿಯ ಎರ್ನಾಕುಲಂನ ಹೃದಯ ಭಾಗದಲ್ಲಿರುವ ಎರ್ನಾಕುಲಂ ಶಿವ ದೇವಾಲಯ ಕೇರಳದ ಅತಿ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದು. ಶಿವನನ್ನು ಎರ್ನಾಕುಲನಾಥಪ್ಪನ್ ರೂಪದಲ್ಲಿ ಪೂಜಿಸಲಾಗುತ್ತದೆ ಹಾಗೂ ಎರ್ನಾಕುಲಂ ನಗರದ ಅಧಿದೇವತೆ ಈ ಶಿವ.

ಚಿತ್ರಕೃಪೆ: Dileep Kumar

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ದೇವಾಲಯದ ಇತಿಹಾಸವು ಎರ್ನಾಕುಲಂನಗರ ಇತಿಹಾಸದೊಂದಿಗೆ ನಂಟನ್ನು ಹೊಂದಿದ್ದು, ಹಿಂದೆ ಕೊಚ್ಚಿ ಮಹಾರಾಜರ ಏಳು ಪ್ರಮುಖ ರಾಜ ದೇವಾಲಯಗಳ ಪೈಕಿ ದರ್ಬಾರ್ ಹಾಲ್ ಎಂಬಲ್ಲಿರುವ ಈ ಶಿವ ದೇವಾಲಯವೂ ಸಹ ಒಂದಾಗಿತ್ತು.

ಚಿತ್ರಕೃಪೆ: Dileep Kumar

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೊಚ್ಚಿ ದೇವಸ್ಥಾನ ಬೋರ್ಡ್ ಅಧೀನದಲ್ಲಿ ಬರುವ ಈ ದೇವಾಲಯದ ಪ್ರಸ್ತುತ ರೂಪವು 1846 ರಲ್ಲಿ ಕೊಚ್ಚಿ ಸಂಸ್ಥಾನದ ದಿವಾನರಾಗಿದ್ದ ಶ್ರೀ ಎಡಕ್ಕುನ್ನಿ ಶಂಕರ ವಾರಿಯರ್ ಎಂಬುವವರಿಂದ ನಿರ್ಮಾಣವಾಗಿದೆ.

ಚಿತ್ರಕೃಪೆ: Ssriram mt

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಹಿಂದೆ ಅರ್ಜುನ ಕಿರಾತಕನ ರೂಪದಲ್ಲಿದ್ದ ಶಿವನೊಡನೆ ಹೋರಾಡಿ ಪಾಶುಪತಾಸ್ತ್ರ ಪಡೆದ ಭೂಮಿಯಲ್ಲಿ ಮಣ್ಣಿನಿಂದ ಶಿವಲಿಂಗ ಮಾಡಿ ಪೂಜಿಸಿದ್ದ. ನಂತರ ಅಲ್ಲಿ ದಟ್ಟ ಕಾಡು ಬೆಳೆದು ಶಿವಲಿಂಗವಿರುವುದರ ಕುರಿತು ಯಾರಿಗೂ ತಿಳಿಯಲಿಲ್ಲ.

ಚಿತ್ರಕೃಪೆ: Ssriram mt

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಹೀಗಿರುವಾಗ ಶಾಪದಿಂದ ದೇಹ ಸರ್ಪ ಹಾಗೂ ಮುಖ ಮಾತ್ರ ಮನುಷ್ಯನದ್ದಾಗಿದ್ದ ದೇವಳ ಎಂಬುವವನು ತೆವಳಿಕೊಂಡು ಇಲ್ಲಿಗೆ ಬಂದಾಗ ಭೂಮಿಯಲ್ಲಿ ಹುದುಗಿ ಹೋಗಿದ್ದ ಶಿವಲಿಂಗ ಪತ್ತೆಯಾಗಿ ಸಮ್ತಸದಿಂದ ಪೂಜಿಸಲಾರಂಭಿಸಿದ. ಸ್ಥಳೀಯರು ಆತನನ್ನು ರಿಷಿನಾಗನೆಂದು ಕರೆಯುತ್ತಿದ್ದರು ಹಾಗೂ ಆತನ ಹತ್ತಿರ ಬರಲು ಹೆದರುತ್ತಿದ್ದರು.

ಚಿತ್ರಕೃಪೆ: Ssriram mt

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೊನೆಗೆ ಶಿವನು ಆ ರಿಶಿನಾಗನ ಭಕ್ತಿಯಿಂದ ಪ್ರತ್ಯಕ್ಷನಾಗಿ ಆತನಿಗೆ ಅಲ್ಲಿದ್ದ ಕೊಳದಲ್ಲಿ ಸ್ನಾನ ಮಾಡಿ ಬರಲು ಸೂಚಿಸಿದ. ಅದರಂತೆ ಆತ ಕೊಳದಲ್ಲಿ ಸ್ನಾನ ಮಾಡಿದ ತಕ್ಷಣ ತನ್ನ ಸರ್ಪದೇಹ ತೊರೆದು ಮೊದಲಿನಂತೆ ಯುವಕನಾದ ಹಾಗೂ ಶಿವನಿದ್ದ ಸ್ಥಳದಲ್ಲಿ ಶಿವಲಿಂಗ ಉದ್ಭವವಾಯಿತು. ಹೀಗೆ ರಿಶಿನಾಗ ಕೊಳಂ ಕ್ರಮೇಣ ರಿಶ್ನಾಗಕುಲಂ ನಂತರ ಎರ್ನಾಕುಲಂ ಆಯಿತೆನ್ನಲಾಗಿದೆ ಮತ್ತು ಅಲ್ಲಿ ದೇವಾಲಯ ನಿರ್ಮಾಣವಾಗಿ ಅದೆ ಇಂದಿನ ಎರ್ನಾಕುಲಂ ದೇವಾಲಯ.

ಚಿತ್ರಕೃಪೆ: Ssriram mt

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಎಟ್ಟಮಾನೂರು ಮಹಾದೇವ ದೇವಾಲಯ : ಎಟ್ಟಮಾನೂರು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಒಂದು ಪಟ್ಟಣ ಪ್ರದೇಶವಾಗಿದೆ. ಎಟ್ಟುಮಾನೂರು ಪ್ರಮುಖವಾಗಿ ತನ್ನಲ್ಲಿರುವ ಶಿವನಿಗೆ ಮುಡಿಪಾದ ಮಹಾದೇವ ದೇವಾಲಯಕ್ಕೆ ಹೆಚ್ಚು ಪ್ರಖ್ಯಾತವಾಗಿದೆ.

ಚಿತ್ರಕೃಪೆ: Ranjithsiji

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಮಹಾದೇವನ ಈ ದೇವಾಲಯವು ಪರಶುರಾಮರು ಸ್ಥಾಪಿಸಿದ 108 ಶಿವನ ದೇವಸ್ಥಾನಗಳ ಪೈಕಿ ಒಂದಾಗಿದೆ. ಸ್ಥಳ ಪುರಾಣದಂತೆ ಹಿಂದೆ ವ್ಯಾಸ ಮಹರ್ಷಿಗಳು ಸೇರಿದಮ್ತೆ ವನವಾಸದಲ್ಲಿದ್ದ ಪಾಂಡವರೂ ಸಹ ಈ ದೇವಾಲಯಕ್ಕೆ ಭೇಟಿ ನೀಡಿ ಶಿವನನ್ನು ಪೂಜಿಸಿದ್ದರಂತೆ.

ಚಿತ್ರಕೃಪೆ: Rklystron

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಕೇರಳದಲ್ಲಿರುವ ಶಿವನ ಪ್ರಮುಖ ದೇವಾಲಯಗಳು:

ಪ್ರಸ್ತುತ ಕಾಣುವ ದೇವಾಲಯದ ಕಟ್ಟಡ ಹಾಗೂ ಇತರೆ ರಚನೆಯನ್ನು ಕ್ರಿ.ಶ 1542 ರಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಈ ದೇವಾಲಯದ ಪ್ರವೇಶ ದ್ವಾರದ ಎಡ ಭಾಗದಲ್ಲಿ ಶ್ರೀಕೃಷ್ಣನ ದೇವಸ್ಥಾನವನ್ನೂ ಸಹ ಕಾಣಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more