Search
  • Follow NativePlanet
Share
» »ಅಬ್ಬಾಬ್ಬಾ ...111 ಫೀಟ್ ಎತ್ತರದ ಶಿವಲಿಂಗ ಇದು, ಎಲ್ಲಿದೆ ಗೊತ್ತಾ?

ಅಬ್ಬಾಬ್ಬಾ ...111 ಫೀಟ್ ಎತ್ತರದ ಶಿವಲಿಂಗ ಇದು, ಎಲ್ಲಿದೆ ಗೊತ್ತಾ?

ಮಹೇಶ್ವರಂ ದೇವಾಲಯವು ಕೇರಳದ ತಿರುವನಂತಪುರಂ ನಗರದಿಂದ 26 ಕಿ.ಮೀ ದೂರದಲ್ಲಿರುವ ಮಹೇಶ್ವರಂ ನಲ್ಲಿದೆ.

ನೀವು ಸಾಕಷ್ಟು ಶಿವಲಿಂಗವನ್ನು ನೋಡಿರಬಹುದು. ಅವುಗಳಲ್ಲೂ ಸಾಕಷ್ಟು ದೇವಾಲಯದಲ್ಲಿ ಎತ್ತರದ ಶಿವಲಿಂಗಳಿವೆ. ಅದರಲ್ಲೂ ವಿಶ್ವದ ಅತ್ಯಂತ ಎತ್ತರದ ಶಿವಲಿಂಗ ನಮ್ಮ ದೇಶದಲ್ಲೇ ಇದೆ. ಅದೂ ಕೂಡಾ 111.2ಮೀ ಎತ್ತರದ ಶಿವಲಿಂಗವಿದೆ. ಹಾಗಾದ್ರೆ ಈ ಶಿವಲಿಂಗ ಎಲ್ಲಿದೆ ಅನ್ನೋದನ್ನು ನೋಡೋಣ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC:Maheswaram Temple official Page

ಮಹೇಶ್ವರಂ ಶ್ರೀ ಶಿವಪಾರ್ವತಿ ದೇವಸ್ಥಾನ ಎಂದೂ ಕರೆಯಲ್ಪಡುವ ಮಹೇಶ್ವರಂ ದೇವಾಲಯವು ಕೇರಳದ ತಿರುವನಂತಪುರಂ ನಗರದಿಂದ 26 ಕಿ.ಮೀ ದೂರದಲ್ಲಿರುವ ಮಹೇಶ್ವರಂ (ಚೆಂಕಲ್) ನಲ್ಲಿದೆ. ಈ ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

3 ದಿನದ ರಜೆಯಲ್ಲಿ ಚಿಕ್ಕಮಗಳೂರಿನಲ್ಲಿ ಏಲ್ಲೆಲ್ಲಾ ತಿರುಗಾಡಬಹುದು3 ದಿನದ ರಜೆಯಲ್ಲಿ ಚಿಕ್ಕಮಗಳೂರಿನಲ್ಲಿ ಏಲ್ಲೆಲ್ಲಾ ತಿರುಗಾಡಬಹುದು

ಪ್ರಾಚೀನ ದೇವಾಲಯ

ಪ್ರಾಚೀನ ದೇವಾಲಯ

PC:Maheswaram Temple official Page
ಈ ದೇವಾಲಯವನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಲಾಗಿದೆ. ಮಹೇಶ್ವರಂ ಶ್ರೀ ಶಿವಪಾರ್ವತಿ ದೇವಸ್ಥಾನವುಪ್ರಾಚೀನ ಕೇರಳ ಸಂಸ್ಕೃತಿಯ ತೊಟ್ಟಿಲು ಆಗಿದೆ. ಈ ಸ್ಥಳವು ಸ್ವಾಮಿ ಮಹೇಶ್ವರಾನಂದ ಸರಸ್ವತಿ ಅವರ ಮಾನವೀಯತೆ ಮತ್ತು ಸೇವೆಗೆ ದೇವರ ಸೇವೆಯಾಗಿದೆ.

ನಾಲ್ಕು ಪ್ರವೇಶದ್ವಾರಗಳು

ನಾಲ್ಕು ಪ್ರವೇಶದ್ವಾರಗಳು

PC:Maheswaram Temple official Page
ಈ ದೇವಾಲಯದಲ್ಲಿ ನಾಲ್ಕು ಪ್ರವೇಶದ್ವಾರಗಳಿವೆ. ಪ್ರತಿ ಪ್ರವೇಶದ್ವಾರದಲ್ಲಿ ಕೇರಳದ ವಾಸ್ತುಶಿಲ್ಪದಲ್ಲಿ ಗೋಪುರಂ ಇದೆ. ಈಸ್ಟ್ ನಲ್ಲಿ ಮುಖ್ಯ ದ್ವಾರವಿದೆ. ಮುಂಭಾಗದಲ್ಲಿ ಗೋಪುರದ ಕೊಡಿಮರವಿದೆ. ಛಾವಣಿಯ ಕೆಳಭಾಗದಲ್ಲಿ ಮರದ ಮೇಲೆ ಕೆತ್ತಿದ ನವಗ್ರಹ ಶಿಲ್ಪಗಳು ಅಸ್ತಿತ್ವದಲ್ಲಿವೆ.

ಬೆಂಗಳೂರಿನ ಯಡಿಯೂರು ಕೆರೆಯಲ್ಲಿ ಬೋಟಿಂಗ್ ಮಾಡಿದ್ದೀರಾ?ಬೆಂಗಳೂರಿನ ಯಡಿಯೂರು ಕೆರೆಯಲ್ಲಿ ಬೋಟಿಂಗ್ ಮಾಡಿದ್ದೀರಾ?

 111.2 ಫೀಟ್ ಎತ್ತರದ ಶಿವಲಿಂಗ

111.2 ಫೀಟ್ ಎತ್ತರದ ಶಿವಲಿಂಗ

ಈ ದೇವಾಲಯದಲ್ಲಿ 111.2 ಫೀಟ್ ಎತ್ತರದ ಶಿವಲಿಂಗವಿದೆ. ಇದು ವಿಶ್ವದಲ್ಲೇ ಅತ್ಯಂತ ಎತ್ತರದ ಶಿವಲಿಂಗವಾಗಿದೆ. ಭಕ್ತರು ಈ ಶಿವಲಿಂಗದ ದರ್ಶನ ಪಡೆದು ಜೀವನ ಪಾವನವಾಗಿಸುತ್ತಾರೆ.

ಮುಖ್ಯದೇವತೆ

ಮುಖ್ಯದೇವತೆ

PC:Maheswaram Temple official Page
ಈ ದೇವಸ್ಥಾನದ ಮುಖ್ಯ ವಿಗ್ರಹವೆಂದರೆ ಶಿವ ಮತ್ತು ಪಾರ್ವತಿ ಒಟ್ಟಾಗಿ ಕುಳಿತು ಆಶೀರ್ವದಿಸಿರುವ ಸಂಪೂರ್ಣ ವಿಗ್ರಹವಾಗಿದೆ. ಮುಖ್ಯ ದೇವತೆ ಶ್ರೀ ಶಿವ ಪಾರ್ವತಿಯೊಂದಿಗೆ ಉಪ ದೇವತೆಗಳಾದ ಗಣೇಶ ಮತ್ತು ಕಾರ್ತಿಕೇಯರ ವಿಗ್ರಹವೂ ಇದೆ.

ಚಿಕ್ಕಮಗಳೂರಿನಲ್ಲಿರುವ ಹಾರ್ಸ್ ಶೂ ವ್ಯೂಪಾಯಿಂಟ್ ನೋಡಿದ್ದೀರಾ?ಚಿಕ್ಕಮಗಳೂರಿನಲ್ಲಿರುವ ಹಾರ್ಸ್ ಶೂ ವ್ಯೂಪಾಯಿಂಟ್ ನೋಡಿದ್ದೀರಾ?

 ಭಕ್ತರ ಭೇಡಿಕೆ ಈಡೇರುತ್ತದೆ

ಭಕ್ತರ ಭೇಡಿಕೆ ಈಡೇರುತ್ತದೆ

ಶಿವಪಾರ್ವತಿಯ ದರ್ಶನಕ್ಕಾಗಿ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಶಿವಪಾರ್ವತಿಯರ ಆಶೀರ್ವಾದವನ್ನು ಪಡೆಯುವ ಮೂಲಕ ಭಕ್ತರು ಶಾಂತಿ, ಸಂಪತ್ತು, ಸಮೃದ್ಧಿ, ಮಂಗಳಕರ, ಪ್ರೀತಿ ಮತ್ತು ಅವರ ಕುಟುಂಬದಲ್ಲಿ ಯಶಸ್ಸನ್ನು ಪಡೆಯಲು ಪ್ರಾರ್ಥನೆ ಮಾಡುತ್ತಾರೆ. ಶ್ರೀ ಶಿವಪಾರ್ವತಿ ಭಕ್ತರು ಉತ್ತಮ ಕೆಲಸ, ಸೂಕ್ತವಾದ ಜೀವನ ಸಂಗಾತಿ ಮತ್ತು ವ್ಯವಹಾರದಲ್ಲಿ ಯಶಸ್ಸು ಪಡೆಯಲು ಪರಿಪೂರ್ಣತೆಗಾಗಿ ದೇವರ ಆಶೀರ್ವಾದವನ್ನು ಪಡೆಯಲು ಈ ದೇವಾಲಯಕ್ಕೆ ಬರುತ್ತಾರೆ.

ಮಹಾ ಶಿವರಾತ್ರಿ ಉತ್ಸವ

ಮಹಾ ಶಿವರಾತ್ರಿ ಉತ್ಸವ

ಮಹೇಶ್ವರಂ ಶ್ರೀ ಶಿವಪಾರ್ವತಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಮುಖ ಉತ್ಸವವಾಗಿದೆ. ದೇವಾಲಯದ ಸುತ್ತಲಿನ ಗ್ರಾಮದ ಮೂಲಕ ಮಹಾ ಶಿವರಾತ್ರಿ ಹಬ್ಬವು ಕರ್ಪುರಾ ಜ್ಯೋತಿ ಪ್ರಯಣಂನಿಂದ ಪ್ರಾರಂಭವಾಗುತ್ತದೆ. ಮುಂದಿನ 11 ದಿನಗಳವರೆಗೆ ಅವಭ್ರಿತಾ ಸ್ನಾನ ಘೋಶಯಾತ್ರೆ ಮುಗಿಯುವವರೆಗೆ ಈ ಜ್ಯೋತಿ ದೇವಾಲಯದಲ್ಲಿ ಇರಿಸಲಾಗುವುದು.

ಕುದಿಯುವ ಪಾಯಸಕ್ಕೆ ಕೈ ಹಾಕಿ ಹುಲಿಗೆಮ್ಮನಿಗೆ ನೈವೇದ್ಯ ಕೋಡ್ತಾರೆಕುದಿಯುವ ಪಾಯಸಕ್ಕೆ ಕೈ ಹಾಕಿ ಹುಲಿಗೆಮ್ಮನಿಗೆ ನೈವೇದ್ಯ ಕೋಡ್ತಾರೆ

ಅಘೋರ ರುದ್ರ ಮಹಾಯಾಗ

ಅಘೋರ ರುದ್ರ ಮಹಾಯಾಗ

PC:Maheswaram Temple official Page
ಮಹಾಶಿವರಾತ್ರಿಯ ಉತ್ಸವವು ಕೊಡಿಯೆಟ್ಟುನಿಂದ ಪ್ರಾರಂಭವಾಗುತ್ತದೆ. ಕೊಡಿಯೆಟ್ಟು ಅನುಸರಿಸುತ್ತಾ ಅಘೋರ ರುದ್ರ ಮಹಾಯಾಗ ಇದೆ. ಅಘೋರಾ ರುದ್ರ ಮಹಾ ಯಜ್ಞಂ ಎನ್ನುವುದು ಸಾರ್ವತ್ರಿಕ ಶಾಂತಿ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು 11 ದಿನಗಳ ವರೆಗೆ ನಡೆಸಲಾಗುವುದು.

 ಓಂ ನಮಃ ಶಿವಾಯ ಜಪ

ಓಂ ನಮಃ ಶಿವಾಯ ಜಪ

ಭಕ್ತರು ತಮ್ಮ ಏಳಿಗೆಗೆ ಈ ಯಜ್ಞದಲ್ಲಿ ಭಾಗವಹಿಸುತ್ತಾರೆ. ಮಹಾ ಶಿವರಾತ್ರಿ ದಿನದಂದು ಮಹೇಶ್ವರಂ ಶ್ರೀ ಶಿವಪಾರ್ವತಿಯ ಅಭಿಷೇಕ ಇದೆ. ಶಿವರಾತ್ರಿ ಉತ್ಸವದ ಸಮಯದಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಶಿವರಾತ್ರಿ ದಿನ ಭಕ್ತರು ಈ ದೇವಾಲಯದಲ್ಲಿ ನಿದ್ದೆ ಮಾಡದೆ ರಾತ್ರಿ ಇಡೀ ಓಂ ನಮಃ ಶಿವಾಯ ಜಪ ಮಾಡುತ್ತಾ ಇರುತ್ತಾರೆ.

2019ನೇ ಜನವರಿಯಲ್ಲಿ ಯಾವೆಲ್ಲಾ ಹಬ್ಬಗಳಿವೆ , ಎಲ್ಲಿ ಆಚರಿಸುತ್ತೀರಾ?2019ನೇ ಜನವರಿಯಲ್ಲಿ ಯಾವೆಲ್ಲಾ ಹಬ್ಬಗಳಿವೆ , ಎಲ್ಲಿ ಆಚರಿಸುತ್ತೀರಾ?

ವಿದ್ಯಾರಂಭಂ

ವಿದ್ಯಾರಂಭಂ

PC:Maheswaram Temple official Page

ವಿದ್ಯಾರಂಭಂ ಎನ್ನುವುದು ಹಿಂದೂ ಸಂಪ್ರದಾಯವಾಗಿದೆ. ಮುಖ್ಯವಾಗಿ ಕೇರಳದಲ್ಲಿ ವಿಜಯದಶಮಿ ದಿನದಂದು ನಡೆಯುತ್ತದೆ. ಇಲ್ಲಿ ಮಕ್ಕಳು "ಓಂ ಹರಿ ಶ್ರೀ ಗಣಪತಾಯೇ ನಮಃ" ಬರೆಯುವುದರ ಮೂಲಕ ಔಪಚಾರಿಕವಾಗಿ ತಮ್ಮ ಶಿಕ್ಷಣವನ್ನು ಪ್ರಾರಂಭಿಸುತ್ತಾರೆ. ಪ್ರತಿವರ್ಷವೂ ವಿಜಯದಶಮಿಯ ದಿನದಲ್ಲಿ ಸಾಕಷ್ಟು ಮಂದಿ ವಿದ್ಯಾರಂಭಕ್ಕಾಗಿ ತಮ್ಮ ಮಕ್ಕಳನ್ನು ಮಹೇಶ್ವರಂ ಶ್ರೀ ಶಿವಪಾರ್ವತಿ ದೇವಸ್ಥಾನಕ್ಕೆ ಕರೆತರುತ್ತಾರೆ.

ವಿಶುಕಣಿ

ವಿಶುಕಣಿ

PC:Aadhi Dev
ವಿಶುಕಣಿ ಕೇರಳದ ಪ್ರಮುಖ ಸಂಪ್ರದಾಯವಾಗಿದೆ. ಕೇರಳದಲ್ಲಿ ವಿಶು ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬ ಕೇರಳಿಗರು ವಿಶುವಿನ ದಿನದಂದು ಬೆಳಗ್ಗೆ ಎದ್ದು ಮೊದಲು ವಿಶುಕಣಿಯನ್ನು ನೋಡುತ್ತಾರೆ. ವಿಶುಕಣಿ, ಅಕ್ಕಿ, ಹಣ್ಣುಗಳು, ತರಕಾರಿಗಳು, ವೀಳ್ಯದ ಎಲೆಗಳು, ಅಡಿಕೆ, ಕನ್ನಡಿ, ಪವಿತ್ರ ಗ್ರಂಥಗಳು ಮತ್ತು ನಾಣ್ಯಗಳು ಮತ್ತು ಹಳದಿ ಹೂವುಗಳು ಸೇರಿದಂತೆ ಸಮೃದ್ಧಿಯನ್ನು ಸೂಚಿಸುವ ವಸ್ತುಗಳನ್ನು ಒಳಗೊಂಡಿದೆ.

ಮಂಡ್ಯದಲ್ಲಿರುವ ಭೀಮೇಶ್ವರಿಯಲ್ಲಿ ಮೀನಿಗೆ ಗಾಳ ಹಾಕಿದ್ದೀರಾ?ಮಂಡ್ಯದಲ್ಲಿರುವ ಭೀಮೇಶ್ವರಿಯಲ್ಲಿ ಮೀನಿಗೆ ಗಾಳ ಹಾಕಿದ್ದೀರಾ?

 ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

ತಿರುವನಂತಪುರಂ ಸಮೀಪದಲ್ಲಿ ಸಾಕಷ್ಟು ಪ್ರೇಕ್ಷಣೀಯ ತಾಣಗಳು ಇವೆ. ಬೀಚ್‌ಗಳು, ಗಿರಿಧಾಮಗಳು, ದೇವಾಲಯಗಳಿವೆ. ಇವುಗಳು ಇಲ್ಲಿನ ಪ್ರವಾಸಿ ತಾಣವನ್ನು ಇನ್ನಷ್ಟು ಆಕರ್ಷಣೀಯವಾಗಿಸಿದೆ.

ಕೊವಲಂ

ತಿರುವನಂತಪುರದಿಂದ 13 ಕಿ.ಮೀ ದೂರದಲ್ಲಿ, ಕೊಚ್ಚಿಯಿಂದ 63 ಕಿ.ಮೀ ದೂರದಲ್ಲಿ, ನಾಗರ್‌ಕೋಯಿಲ್ನಿಂದ 67 ಕಿ.ಮೀ, ಕೊಚ್ಚಿಯಿಂದ 212 ಕಿ.ಮೀ, ಅಲೆಪ್ಪಿನಿಂದ 159 ಕಿ.ಮೀ ಮತ್ತು ಕನ್ಯಾಕುಮಾರಿಯಿಂದ 83 ಕಿ.ಮೀ ದೂರದಲ್ಲಿ ಅರೇಬಿಯನ್ ಸಮುದ್ರದ ತೀರದಲ್ಲಿದೆ. ಇದು ಅತ್ಯಂತ ಪ್ರಸಿದ್ಧ ಕಡಲ ತೀರಗಳಲ್ಲಿ ಒಂದಾಗಿದೆ. ಇದು ಕೇರಳ ರಾಜ್ಯದಲ್ಲಿ ಭೇಟಿ ನೀಡುವ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ.

ಪೊನ್ಮುಡಿ

ತಿರುವನಂತಪುರಂನಿಂದ 56 ಕಿ.ಮೀ ದೂರದಲ್ಲಿರುವ ಪೊನ್ಮುಡಿ ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿರುವ ಆಕರ್ಷಕವಾದ ಗಿರಿಧಾಮವಾಗಿದೆ. ಇದು ಸುಮಾರು 1000 ಮೀಟರ್ ಎತ್ತರದಲ್ಲಿದೆ ಮತ್ತು ಕೇರಳದ ಟ್ರೆಕ್ಕಿಂಗ್ ಮತ್ತು ಟ್ರಿವಂಡ್ರಮ್ ನಗರದ ಅತ್ಯುತ್ತಮ ವಾರಾಂತ್ಯದ ರಜಾ ತಾಣಗಳಲ್ಲಿ ಒಂದು ಜನಪ್ರಿಯ ತಾಣವಾಗಿದೆ.

ಶಾಂಘುಮುಖಮ್ ಬೀಚ್

ತ್ರಿವೇಂಡ್ರಮ್ ಸೆಂಟ್ರಲ್ ರೈಲು ನಿಲ್ದಾಣದಿಂದ ಸುಮಾರು 10 ಕಿ.ಮೀ ದೂರದಲ್ಲಿ, ತ್ರಿವೆಂಡ್ರಮ್‌ನ ಪ್ರಸಿದ್ಧ ಬೀಚ್ ಎಂದರೆ ಶಾಂಘುಮುಖಮ್ ಬೀಚ್ ಇದೆ. ಪ್ರಸಿದ್ಧ ಶಿಲ್ಪಿ ಶ್ರೀ ಕಣೈ ಕುಂಜುರಾಮನ್ ನಿರ್ಮಿಸಿದ ಜಲಕನ್ಯೆಯ ದೊಡ್ಡ ಶಿಲ್ಲ ಹಾಗೂ ಸ್ಟಾರ್ ಮೀನಿನಂತೆ ರೂಪುಗೊಂಡ ರೆಸ್ಟಾರೆಂಟ್ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

ತೆನ್ಮಲಾ ಅಣೆಕಟ್ಟು

ಕೊಲ್ಲಂನಿಂದ 68 ಕಿ.ಮೀ ದೂರದಲ್ಲಿ, ತೆಂಕಸಿನಿಂದ 39 ಕಿ.ಮೀ ಮತ್ತು ತ್ರಿವೇಂದ್ರಮ್‌ನಿಂದ 73 ಕಿ.ಮೀ. ದೂರದಲ್ಲಿ ತೆನ್ಮಲಾ ಅಣೆಕಟ್ಟು ಇದೆ. ಇದು ತಲ್ಲಮಲ ಹಳ್ಳಿಯಲ್ಲಿರುವ ಕಲ್ಲಡ ಅಣೆಕಟ್ಟು ಅಥವಾ ಪರಾಪರ ಅಣೆಕಟ್ಟು ಎಂದೂ ಕರೆಯಲ್ಪಡುತ್ತದೆ. ಇದು ಕೊಲ್ಲಂ - ತೆನ್ಕಾಶಿ ರಸ್ತೆಗೆ ತುಂಬಾ ಸಮೀಪದಲ್ಲಿದೆ. ತೆನ್ಮಲ ಅಂದರೆ ಜೇನು ಬೆಟ್ಟ. ಕಾಡಿನ ವಿಲಕ್ಷಣ ಹೂವಿನ ಸಂಯೋಜನೆಯಿಂದಾಗಿ, ತೆನ್ಮಲಾ ಅರಣ್ಯದಿಂದ ಸಂಗ್ರಹಿಸಲಾದ ಜೇನು ಅದರ ಔಷಧೀಯ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X