Search
  • Follow NativePlanet
Share
» »ಮೈಸೂರು ಅರಮನೆಯ ವಿಶೇಷತೆಗಳು

ಮೈಸೂರು ಅರಮನೆಯ ವಿಶೇಷತೆಗಳು

By Vijay

ಪ್ರಪಂಚದಲ್ಲೆ ಭಾರತವು ಪ್ರವಾಸಿ ಆಕರ್ಷಣೆ ಇರುವ ದೇಶಗಳ ಪೈಕಿ ಮಹತ್ವವಾದ ದೇಶವಾಗಿದೆ. ಪ್ರತಿ ವರ್ಷವೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಬೇಟಿ ನೀಡುತ್ತಾರೆ. ವಿದೇಶಿಗರು ಹೆಚ್ಚಾಗಿ ಭೆಟಿ ನೀಡುವ ಭಾರತ ಕೆಲವು ಪ್ರಮುಖ ಆಕರ್ಷಣೆಗಳು ಬಹುತೇಕ ಎಲ್ಲರಿಗೂ ಗೊತ್ತು.

ಅದರಲ್ಲೂ ವಿಶೇಷವಾಗಿ ತಾಜ್ ಮಹಲ್ ಎಲ್ಲರಿಗೂ ಗೊತ್ತಿರುವ ಪ್ರವಾಸಿ ಆಕರ್ಷಣೆಯಾಗಿದೆ. ಆದರೆ ನಿಮಗಿದು ಗೊತ್ತೆ, ತಾಜ್ ಮಹಲ್ ನಂತರ ಹೆಚ್ಚಾಗಿ ಭೆಟಿ ನೀಡಲ್ಪಡುವ ರಚನೆ ಯಾವುದೆಂದು? ಹೌದು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ರಮನೆಗಳ ನಗರ ಎಂದೇ ಬಿಂಬಿತವಾದ ಮೈಸೂರಿನಲ್ಲಿರುವ ಮೈಸೂರು ಅರಮನೆ ತಾಜ್ ಮಹಲ್ ನಂತರ ಅತಿ ಹೆಚ್ಚು ಅತಿಥಿಗಳು ಭೇಟಿ ನೀಡುವ ಸ್ಥಳವಾಗಿದೆ.

ನಿಮಗಿಷ್ಟವಾಗಬಹುದಾದ : ರಜೆಯ ಮಜೆ ಅನುಭವಿಸಬೇಕೆ...ಮೈಸೂರಿಗೆ ಹೋಗಿ

ಏನಿಲ್ಲವೆಂದರೂ ವಾರ್ಷಿಕವಾಗಿ ಸುಮಾರು ಆರು ಮಿಲಿಯನ್ ಪ್ರವಾಸಿಗರು ಈ ಅದ್ಭುತ ಅರಮನೆಗೆ ಭೇಟಿ ನೀಡುತ್ತಾರೆ. ಹೌದು, ಇದರ ಕಣ್ಣು ಕುಕ್ಕಿಸುವಂತಹ ಸೌಂದರ್ಯ ಎಂಥವರನ್ನೂ ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ. ಕರ್ನಾಟಕದ ರಾಜ ಸಂಸ್ಕೃತಿಯ ವೈಭವವನ್ನು ಎಲ್ಲೆಡೆ ಪಸರಿಸುವಲ್ಲಿ ಅತ್ಯಂತ ಮಹತ್ತರ ಪಾತ್ರವಹಿಸಿದೆ ಈ ಅರಮನೆ.

ಮೈಸೂರು ಅರಮನೆಯ ವಿಶೇಷತೆಗಳು

ಚಿತ್ರಕೃಪೆ: Alin Dev

ಮೈಸೂರು ಸಂಸ್ಥಾನದ ಯದುರಾಯ ಅರಸರು ಮೈಸೂರಿನ ಕೋಟೆಯೊಳಗೆ ಪ್ರಥಮ ಬಾರಿಗೆ 14 ನೇಯ ಶತಮಾನದಲ್ಲಿ ಅರಮನೆಯ ನಿರ್ಮಾಣ ಮಾಡಿದರು. ನಂತರ ಅದನ್ನು ಹಲವು ಬಾರಿ ನಾಶ ಮಾಡಿ ಮತ್ತೆ ಮತ್ತೆ ಪುನಃ ನಿರ್ಮಿಸಲಾಯಿತು. ನಂತರ ಮಹಾರಾಣಿ ವಾಣಿ ವಿಲಾಸ ಸನ್ನಿಧನಾ ಹಾಗೂ ಆಕೆಯ ಮಗ ಮತ್ತು ಮಹಾರಾಜರಾದ ನಾಲ್ಕನೇಯ ಕೃಷ್ಣರಾಜ ವಡೇಯರ್ ಇಂದು ಕಾಣುವ ಅರಮನೆಯ ನಿರ್ಮಾಣ ಕೈಗೊಂಡರು.

ಅದಕ್ಕಾಗಿ ಬ್ರಿಟೀಷ್ ವಾಸ್ತುಶಿಲ್ಪಿಯಾದ ಲಾರ್ಡ್ ಹೆನ್ರಿ ಐರ್ವಿನ್ ಅವರಿಗೆ ನಿರ್ಮಾಣದ ಜವಾಬ್ದಾರಿ ವಹಿಸಿದರು. ಈ ಸಮಯದಲ್ಲಿ ರಾಜ ಕುಟುಂಬವು ಮತ್ತೊಂದು ಅರಮನೆಯಾದ ಜಗನ್ಮೋಹನ ಅರಮನೆಯಲ್ಲಿ ವಾಸಿಸತೊಡಗಿತು. ಹೆನ್ರಿ ಈಗಿನ ಅರಮನೆಯ ನಿರ್ಮಾಣ ಕಾಮಗಾರಿಯನ್ನು 1897 ರಲ್ಲಿ ಪ್ರಾರಂಭಿಸಿ 1912 ರಲ್ಲಿ ಪೂರ್ಣಗೊಳಿಸಿದ ಹಾಗೂ 1940 ರವರೆಗೂ ನಿರಂತರವಾಗಿ ಹೊಸ ರಚನೆಗಳನ್ನು ಇದಕ್ಕೆ ಸೇರಿಸಲಾಯಿತು.

ಮೈಸೂರು ಅರಮನೆಯ ವಿಶೇಷತೆಗಳು

ಚಿತ್ರಕೃಪೆ: Jim Ankan Deka

ಮೈಸೂರು ಅರಮನೆಯು ಇಂಡೋ-ಸಾರ್ಸೆನಿಕ್ ಶೈಲಿಯ ವಾಸ್ತು ಶಿಲ್ಪವನ್ನು ಹೊಂದಿದೆ. ಇದರಲ್ಲಿ ಹಿಂದು, ಮುಸ್ಲಿಮ್, ರಜಪೂತ ಹಾಗೂ ಗೋಥಿಕ್ ಶೈಲಿಯ ಪ್ರಭಾವವಿರುವುದನ್ನು ಗಮನಿಸಬಹುದು. ಇದು ಕಲ್ಲಿನಿಂದ ನಿರ್ಮಿತ ಮೂರು ಅಂತಸ್ತುಗಳ ರಚನೆಯಾಗಿದ್ದು ಅಮ್ರುತ ಶಿಲೆಯಲ್ಲಿ ನಿರ್ಮಿತವಾದ ಐದು ಅಂತಸ್ತಿನ, 145 ಅಡಿಗಳಷ್ಟು ಎತ್ತರದ ಅದ್ಭುತವಾದ ಮಧ್ಯ ಗೋಪುರವನ್ನು ಹೊಂದಿದೆ.

ನಿಮಗಿಷ್ಟವಾಗಬಹುದಾದ : ಮನಸೆಳೆವ ಮೈಸೂರಿನ ಕಾರಂಜಿ ಕೆರೆ

ಒಟ್ಟಾರೆಯಾಗಿ ಅರಮನೆಯು ಸುತ್ತಲೂ ಮನಸೆಳೆವ ಹಸಿರುಮಯ ಉದ್ಯಾನಗಳಿಂದ ಆವೃತವಾಗಿದ್ದು ಸ್ವಾಗತ ಕಮಾನು ಹಾಗೂ ಗೋಡೆಗಳಿಂದ ಶ್ರೀಮಂತವಾಗಿದೆ. ಅರಮನೆಗೆ ಮೂರು ಪ್ರವೇಶ ದ್ವಾರಗಳಿದ್ದು ಪೂರ್ವ, ಪಶ್ಚಿಮ ಹಾಗೂ ದಕ್ಷಿಣದಲ್ಲಿವೆ. ಪೂರ್ವ ಹಾಗೂ ಪಶ್ಚಿಮ ದ್ವಾರಗಳನ್ನು ಕೇವಲ ದಸರಾ ಸಂದರ್ಭದಲ್ಲಿ ಮಾತ್ರ ತೆರೆಯಲಾಗುತ್ತದೆ. ಮಿಕ್ಕಂತೆ ದಕ್ಷಿಣ ದ್ವಾರವು ಸಾರ್ವಜನಿಕರಿಗೆ ಸದಾ ಮುಕ್ತವಾಗಿರುತ್ತದೆ.

ಮೈಸೂರು ಅರಮನೆಯ ವಿಶೇಷತೆಗಳು

ಚಿತ್ರಕೃಪೆ: Har$h

ಇನ್ನೂ ಕೆಲವರು ಹೇಳುವಂತೆ ಅರಮನೆಯ ಕೆಳ ಮಹಡಿಯಿಂದ ಶ್ರೀರಂಗಪಟ್ಟಣ ಹಾಗೂ ಇತರೆ ಕೆಲವು ರಹಸ್ಯಮಯ ಸ್ಥಳಗಳಿಗೆ ಗುಪ್ತ ಸುರಂಗ ಮಾರ್ಗಗಳಿವೆ ಎನ್ನಲಾಗುತ್ತದೆ. ಇದಲ್ಲದೆ ಅರಮನೆಯ ಆವರಣದಲ್ಲಿ ಹಲವು ದೇವ ದೇವತೆಯರ ದೇಗುಲಗಳಿವೆ. ಪ್ರತಿ ನಿರ್ಮಾಣಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಅಮೃತಶಿಲೆ ಮುಂತಾದ ವಸ್ತುಗಳನ್ನು ಬಳಸಲಾಗಿದ್ದು ನೋಡಿದಾಕ್ಷಣ ಮನಸೆಳೆಯುವಂತೆ ಮಾಡುತ್ತವೆ.

ನಿರ್ಮಾಣದ ಪ್ರತಿ ಕಾಮಗಾರಿಯೂ ಅದ್ಭುತವಾಗಿದ್ದು ಆಕರ್ಷಕವಾಗಿ ದುಬಾರಿ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ. ಪ್ರತಿ ಚಿಕ್ಕ ಪುಟ್ಟ ಸೂಕ್ಷ್ಮ ವಿನ್ಯಾಸಗಳನ್ನೂ ಸಹ ವಿವರವಾಗಿ ರಚಿಸಲಾಗಿದೆ. ಮೈಸೂರು ನಗರದಲ್ಲೆ ಇರುವ ಈ ಅರಮನೆಯು ಪ್ರಖ್ಯಾತ ಚಾಮುಂಡೇಶ್ವರಿ ದೇವಾಲಯದೆಡೆ ಮುಖ ಮಾಡಿ ನಿಂತಿದೆ. ದಸರಾ ಅಥವಾ ವಿಜಯ ದಶಮಿಯಂದು ಅತ್ಯಂತ ಸುಂದರವಾಗಿ ಸಿಂಗರಿಸಲ್ಪಡುತ್ತದೆ ಈ ಅರಮನೆ.

ಮೈಸೂರು ಅರಮನೆಯ ವಿಶೇಷತೆಗಳು

ಚಿತ್ರಕೃಪೆ: Arian Zwegers

ದಸರಾ ಸಂದರ್ಭದಲ್ಲೆ ಈ ಅರಮನೆಯನ್ನು ನೋಡುವ ಉದ್ದೇಶದಿಂದ ದೇಶ ವಿದೇಶಗಳಿಂದ ಜನಸಾಗರವೆ ಹರಿದು ಮೈಸೂರಿಗೆ ಬರುತ್ತದೆ. ಸಂಜೆಯ ಸಮಯದಲ್ಲಿ ಸಾವಿರ ಸಾವಿರ ಸಂಖ್ಯೆಗಳಲ್ಲಿ ಬತ್ತಿಗಳ ಬಳಸಿ ಅರಮ್ನೆಯನ್ನು ಅದ್ಭುತವಾಗಿ ಬೆಳಗಿಸಲಾಗುತ್ತದೆ. ಪ್ರಕಾಶಮಯಗೊಂಡ ಈ ಅರಮನೆಯನ್ನು ಆಗ ಕಣ್ತುಂಬ ನೋಡುವುದೆ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X