Search
  • Follow NativePlanet
Share
» »ಮದುರೈ : ಎಂದಿಗೂ ನಿದ್ರಿಸಲಾರದ ಧಾರ್ಮಿಕ ನಗರ

ಮದುರೈ : ಎಂದಿಗೂ ನಿದ್ರಿಸಲಾರದ ಧಾರ್ಮಿಕ ನಗರ

By Vijay

ದಕ್ಷಿಣದ ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಮದುರೈ ನಗರವು ಒಂದು ಪ್ರಾಚೀನ ನಗ್ರವಾಗಿದ್ದು ಹಗಲು ರಾತ್ರಿ ಎನ್ನದೆ ನಿರಂತರ ಚಟುವಟಿಕೆಯಿಂದ ಕೂಡಿರುವ ತಾಣ. ಆದ್ದರಿಂದಲೆ ಈ ಕ್ಷೇತ್ರವನ್ನು ಪ್ರೀತಿಯಿಂದ "ನಿದ್ರಿಸಲಾರದ ನಾಡು" ಎಂದು ಕರೆಯುತ್ತಾರೆ. ವೈಗೈ ನದಿ ತೀರದಲ್ಲಿ ಸ್ಥಿತವಿರುವ ಈ ಕ್ಷೇತ್ರದಲ್ಲಿ ಸಾಕಷ್ಟು ದೇವಾಲಯಗಳಿದ್ದು, ಪ್ರಮುಖವಾಗಿ ಮೀನಾಕ್ಷಿ ಅಮ್ಮನವರ ದೇಗುಲದಿಂದಾಗಿ ಇದು ಸುಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ದೇಶದ ಹಲವು ಭಾಗಗಳಿಂದ ಈ ದೇವಿಯ ದರ್ಶನ ಕೋರಿ ತಂಡೋಪ ತಂಡವಾಗಿ ಜನರು ಇಲ್ಲಿಗೆ ಆಗಮಿಸುತ್ತಲೆ ಇರುತ್ತಾರೆ.

ಸುಮಾರು 1780 ರಲ್ಲಿ ಹಾಗೂ ಮೂರನೇಯ ಶತಮಾನದಲ್ಲಿ ತಮಿಳು ಪಂಡಿತರ ಎಲ್ಲ ಮೂರು ಪ್ರಮುಖ ಸಭೆಗಳು ಇದೆ ಕ್ಷೇತ್ರದಲ್ಲಿ ಜರುಗಿರುವುದರಿಂದ ತಮಿಳು ಭಾಷೆ, ಸಂಸ್ಕೃತಿಯೊಂದಿಗೆ ಮದುರೈ ಪಟ್ಟಣವು ಬೆಸೆದುಕೊಂಡಿದೆ. ಮೂರನೇಯ ಶತಮಾನದಲ್ಲೆ ಗ್ರೀಕ್ ರಾಯಭಾರಿ ಮೆಗಾಸ್ತನೀಸನು ಹಾಗೂ ಮೌರ್ಯ ಸಾಮ್ರಾಜ್ಯದ ಚಂದ್ರಗುಪ್ತ ಮೌರ್ಯನ ಆಸ್ಥಾನದ ಮಂತ್ರಿಯಾಗಿದ್ದ ಕೌಟಿಲ್ಯನು ತಮ್ಮ ಕೃತಿಗಳಲ್ಲಿ ಈ ಪಟ್ಟಣದ ಕುರಿತು ಉಲ್ಲೇಖಿಸಿರುವುದರಿಂದ ಕ್ಷೇತ್ರದ ಇತಿಹಾಸವು ಮೂರನೇಯ ಶತಮಾನಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ.

ಮದುರೈ ಪಟ್ಟಣವು ಮಹತ್ವದ ಪ್ರಾಚೀನ ನಗರವಾಗಿದ್ದು, ಪೂರ್ವ ಪಾಂಡ್ಯರು, ಮಧ್ಯಯುಗದ ಚೋಳರು, ನಂತರದ ಚೋಳರು, ನಂತರದ ಪಾಂಡ್ಯರು, ಮದುರೈ ಸುಲ್ತಾನರು, ವಿಜಯನಗರದ ಅರಸರು, ಮದುರೈ ನಾಯಕರು, ಚಂದಾ ಸಾಹಿಬ್, ಕರ್ನಾಟಿಕ್ ರಾಜ್ಯ ಹಾಗೂ ಬ್ರೀಟೀಷರು ಹೀಗೆ ಹತ್ತು ಹಲವು ಸಾಮ್ರಾಜ್ಯಗಳಿಂದ ಕಾಲದ ವಿವಿಧ ಹಂತಗಳಲ್ಲಿ ಆಳಲ್ಪಟ್ಟಿದೆ. ಪ್ರಸ್ತುತ ಈ ಧಾರ್ಮಿಕ ಕ್ಷೇತ್ರವು ಪ್ರಮುಖ ವಾಣಿಜ್ಯ ನಗರವೂ ಆಗಿ ಬಡ್ತಿ ಪಡೆದು ಟಯರ್ ಟೂ ಸಿಟಿಯಲ್ಲಿ ಸೇರ್ಪಡೆಗೊಂಡಿದೆ.

ದೇವಸ್ಥಾನದ ಸಮಯವು ಬೆಳಿಗ್ಗೆ ನಾಲ್ಕು ಘಂಟೆಯಿಂದ ರಾತ್ರಿ ಎಂಟು ಘಂಟೆ ಮೂವತ್ತು ನಿಮಿಷದವರೆಗೆ.

ಮದುರೈ:

ಮದುರೈ:

ಮದುರೈ ಮೀನಾಕ್ಷಿ ದೇವಸ್ಥಾನವು ಪಟ್ಟಣದ ಪ್ರಮುಖ ಹೆಗ್ಗುರುತಾಗಿದ್ದು, ಮೀನಾಕ್ಷಿ ಎಂದರೆ ಶಿವನ ಪತ್ನಿ ಪಾರ್ವತಿ ದೇವಿಗೆ ಮುಡಿಪಾದ ಪ್ರಸಿದ್ಧ ದೇವಾಲಯವಾಗಿದೆ.

ಚಿತ್ರಕೃಪೆ: Surajram

ಮದುರೈ:

ಮದುರೈ:

15 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಈ ದೇಗುಲವು ಎಂಟು ಗೋಪುರಗಳು, ಎರಡು ವಿಮಾನಗಳನ್ನು ಹೊಂದಿದ್ದು, ಪೂರ್ವ ಪಶ್ಚಿಮವಾಗಿ 847 ಹಾಗೂ ಉತ್ತರ ದಕ್ಷಿಣವಾಗಿ 792 ಅಡಿಗಳಷ್ಟು ವಿಶಾಲವಾಗಿದೆ.

ಚಿತ್ರಕೃಪೆ: Bernard Gagnon

ಮದುರೈ:

ಮದುರೈ:

ದೇವಾಲಯವು ಎಂಟು ಗೋಪುರ ಹಾಗೂ ಎರಡು ವಿಮಾನಗಳಿಂದ ಸುತ್ತುವರೆದಿದ್ದು ಅವುಗಳಲ್ಲಿ ಅತಿ ಎತ್ತರದ ಗೋಪುರವು 170 ಅಡಿಗಳಷ್ಟು ಎತ್ತರವಿದೆ. ಗೋಪುರಗಳ ಮನಸೆಳೆವ ಬಣ್ಣ ಬಣ್ಣದ ಕಲಾಕೃತಿಗಳನ್ನು ಕಾಣಬಹುದು.

ಚಿತ್ರಕೃಪೆ: Gourav mainali

ಮದುರೈ:

ಮದುರೈ:

ದೇವಾಲಯದ ಗರ್ಭ ಗೃಹ ವಿಮಾನವು ತನ್ನ ಮೇಲಿನ ಭಾದಲ್ಲಿ ಸ್ವರ್ಣ ಬಣ್ಣದಿಂದ ಕೂಡಿದ್ದು ಆಕರ್ಷಕವಾಗಿ ಗೋಚರಿಸುತ್ತದೆ.

ಚಿತ್ರಕೃಪೆ: BishkekRocks

ಮದುರೈ:

ಮದುರೈ:

ದೇವಾಲಯದ ಪವಿತ್ರ "ಪೊಟ್ರಾಮರೈ ಕುಳಂ" (ಬಂಗಾರದ ಕಮಲವುಳ್ಳ ಕೊಳ) 165*120 ಅಡಿಗಳಷ್ಟು ಅಳತೆಯನ್ನು ಹೊಂದಿದೆ. ದಂತ ಕಥೆಯ ಪ್ರಕಾರ, ಶಿವನು ಈ ಕೊಳದಲ್ಲಿ ಯಾವುದೇ ರೀತಿಯ ಜಲ ಜೀವಿಗಳು ಉತ್ಪತ್ತಿಯಾಗುವುದಿಲ್ಲವೆಂದು ಹೇಳಿದ್ದನಂತೆ.

ಚಿತ್ರಕೃಪೆ: Mohan Krishnan

ಮದುರೈ:

ಮದುರೈ:

ದೇವಾಲಯದ ಸಂಕೀರ್ಣವು ಹಲವಾರು ಕಲಾತ್ಮಕವಾದ ಖಂಬಗಳಿಂದ ಕೂಡಿದ್ದು ಅಂದಿನ ಕಾಲದ ಶಿಲ್ಪ ಕಲೆಯ ನೈಪುಣ್ಯತೆಯನ್ನು ಸೂಕ್ಷ್ಮವಾಗಿ ಹೇಳುತ್ತವೆ.

ಚಿತ್ರಕೃಪೆ: Bernard Gagnon

ಮದುರೈ:

ಮದುರೈ:

ಸಾವಿರ ಖಂಬಗಳ ಮಂಟಪ ಇಲ್ಲಿರುವ ಅತಿ ಪ್ರಮುಖ ಆಕರ್ಷಣೆ. ಇದನ್ನು ಕೆತ್ತಲಾದ ರೀತಿಯನ್ನು ನೋಡಿದರೆ ಎಂಥವರಾದರೂ ಒಂದು ಕ್ಷಣ ಮೂಕವಿಸ್ಮಿತರಾಗುವುದೂ ಖಂಡಿತ. ನೋಡಲು ಅತಿ ಆಕರ್ಷಕವಾಗಿ ಕಂಗೊಳಿಸುತ್ತದೆ ಈ ಮಂಟಪ.

ಮದುರೈ:

ಮದುರೈ:

ಸಾಮಾನ್ಯವಾಗಿ ಶಿವನ ನಟರಾಜನ ದೇವಾಲಯಗಳಲ್ಲಿ ಶಿವನು ಬಲಗಾಲನ್ನು ಮೇಲಕ್ಕೆತ್ತಿರುವುದು ಕಾಣಬಹುದು. ಈ ಪಟ್ಟಣದಲ್ಲಿರುವ ಸಂಗ್ರಹಾಲಯದಲ್ಲಿ ಇರಿಸಲಾದ ಶಿವನ ವಿಗ್ರಹವೊಂದು ಅದಕ್ಕೆ ವಿರುದ್ಧವಾಗಿ ಎಡಗಾಲನ್ನು ಮೇಲಕ್ಕೆತ್ತಿರುವುದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Rengeshb

ಮದುರೈ:

ಮದುರೈ:

ಮೀನಾಕ್ಷಿ ದೇವಸ್ಥಾನದ ಪ್ರಮುಖ ಮೂಲ ವಿಗ್ರಹವಾದ ಮೀನಾಕ್ಷಿ ಅಮ್ಮನವರ ವಿಗ್ರಹ.

ಚಿತ್ರಕೃಪೆ: Thiagarajan Kannan

ಮದುರೈ:

ಮದುರೈ:

ವಿಷ್ಣು ಭಗವಂತನು ಮೀನಾಕ್ಷಿ ಹಾಗೂ ಶಿವನ ವಿವಾಹ ಸಂದರ್ಭದಲ್ಲಿ ಮುಂದಾಳತ್ವತೆಯನ್ನು ವಹಿಸಿರುವುದನ್ನು ಸೂಚಿಸುವ ಶಿಲ್ಪಕಲೆಗಳು.

ಮದುರೈ:

ಮದುರೈ:

17 ನೇಯ ಶತಮಾನದ ವರ್ಣ ಚಿತ್ರ.

ಚಿತ್ರಕೃಪೆ: runtaipei

ಮದುರೈ:

ಮದುರೈ:

ಹಲವು ಪೌರಾಣಿಕ ಕಥಾ ಪಾತ್ರಗಳನ್ನು ಬಿಂಬಿಸುವಂತಹ ಸೂಕ್ಷ್ಮವಾಗಿ ಕೆತ್ತಲಾದ ಕಲಾಕೃತಿಗಳು.

ಚಿತ್ರಕೃಪೆ: Mohan Krishnan

ಮದುರೈ:

ಮದುರೈ:

ರಾಮಾಯಣ, ಮಹಾಭಾರತ ಗಳಂತಹ ಮಹಾಕಾವ್ಯಗಳ ಕಥಾ ಪ್ರಸಂಗಗಳನ್ನು ಸೂಚಿಸುತ್ತವೆ ಗೋಪುರದ ಕಲಾಕೃತಿಗಳು.

ಚಿತ್ರಕೃಪೆ: Bernard Gagnon

ಮದುರೈ:

ಮದುರೈ:

ವಿದೇಶಿ ಮಹಿಳೆಯೊಬ್ಬಳು ದೇವಾಲಯದಲ್ಲಿರುವ ಆನೆಯಿಂದ ಆಶಿರ್ವಾದ ಪಡೆಯುತ್ತಿರುವುದು.

ಚಿತ್ರಕೃಪೆ: Vinoth Chandar

ಮದುರೈ:

ಮದುರೈ:

7-8 ನೇಯ ಶತಮಾನದ ಸಂದರ್ಭದಲ್ಲಿದ್ದ ಅಪ್ಪರ್, ಸುಂದರರ್ ಹಾಗೂ ತಿರುಜ್ಞಾನಸಂಬಂದರ್ ಎಂಬ ಮೂವರು ಅಪ್ರತಿಮ ಶೈವರ ಪ್ರತಿಮೆಗಳು.

ಚಿತ್ರಕೃಪೆ: Adam Jones

ಮದುರೈ:

ಮದುರೈ:

ಮೀನಾಕ್ಷಿ ದೇವಾಲಯದ ಸಂಕೀರ್ಣದಲ್ಲಿರುವ ವಿನಾಯಕನ ಸನ್ನಿಧಾನ.

ಚಿತ್ರಕೃಪೆ: BishkekRocks

ಮದುರೈ:

ಮದುರೈ:

ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕಣ್ಣು ಕೊರೆಸುವ ಬೆಳಕಿನ ಅಲಂಕಾರದಿಂದ ಝಗಮಗಿಸುವ ಮೀನಾಕ್ಷಿ ದೇವಾಲಯ.

ಚಿತ್ರಕೃಪೆ: Rengeshb

ಮದುರೈ:

ಮದುರೈ:

ಹುಂಡಿಯಲ್ಲಿ ದೇಣಿಗೆ ನೀಡುತ್ತಿರುವ ಭಕ್ತಾದಿಗಳು.

ಚಿತ್ರಕೃಪೆ: Jorge Royan

ಮದುರೈ:

ಮದುರೈ:

ಮೀನಾಕ್ಷಿ ದೇವಾಲಯದ ಸಂಪೂರ್ಣ ವಿವರಗಳನ್ನು ತಿಳಿಸುವ ದೇವಾಲಯದ ಚಿಕ್ಕ ಮಾದರಿ.

ಚಿತ್ರಕೃಪೆ: Iramuthusamy

ಮದುರೈ:

ಮದುರೈ:

ಪವಿತ್ರ ಕೊಳದ ಬಳಿ ಭಾರತೀಯ ಮಕ್ಕಳೊಂದಿಗೆ ಬೆರೆತು ಸಮಯ ಕಳೆಯುತ್ತಿರುವ ವಿದೇಶಿ ಮಗು.

ಚಿತ್ರಕೃಪೆ: எஸ்ஸார்

ಮದುರೈ:

ಮದುರೈ:

ಶಿವ-ಪಾರ್ವತಿಯರ ಕೈಲಾಸವನ್ನು ಹತ್ತು ಮುಖಗಳ ರಾವಣನು ತನ್ನ ಹೆಗಲ ಮೇಲೆ ಎತ್ತಿದ ಸಂದರ್ಭದಲ್ಲಿ....

ಚಿತ್ರಕೃಪೆ: Leninltk wiki

ಮದುರೈ:

ಮದುರೈ:

ದೂರದ ರಾಜಸ್ಥಾನ ರಾಜ್ಯದಿಂದ ಬಂದ ಮೀನಾಕ್ಷಿ ಅಮ್ಮನವರ ಭಕ್ತರು.

ಚಿತ್ರಕೃಪೆ: McKay Savage

ಮದುರೈ:

ಮದುರೈ:

ದೇವಿಯ ಆರಾಧನೆಯಲ್ಲಿ ನಿರತಳಾದ ಮಹಿಳೆ.

ಚಿತ್ರಕೃಪೆ: Claude Renault

ಮದುರೈ:

ಮದುರೈ:

ಮೀನಾಕ್ಷಿ ದೇವಾಲಯದ ಪ್ರವೇಶ ದ್ವಾರ.

ಚಿತ್ರಕೃಪೆ: BishkekRocks

ಮದುರೈ:

ಮದುರೈ:

ದೇವಾಲಯವು ಸಂಪೂರ್ಣವಾಗಿ ಕಂಡುಬರು ಪಾಕ್ಷಿಕ ನೋಟ.

ಚಿತ್ರಕೃಪೆ: எஸ்ஸார்

ಮದುರೈ:

ಮದುರೈ:

ನಗರದ ಆಧುನಿಕ ಕಟ್ಟಡಗಳ ಮಧ್ಯೆ ಗಮನ ಸೆಳೆವ ಪುರಾತನ ಭವ್ಯ ರಚನೆಗಳು.

ಚಿತ್ರಕೃಪೆ: Bernard Gagnon

ಮದುರೈ:

ಮದುರೈ:

ದೇವಾಲಯ ಸಂಕೀರ್ಣದಲ್ಲಿರುವ ನಂದಿ ವಿಗ್ರಹ.

ಚಿತ್ರಕೃಪೆ: brad.coy

ಮದುರೈ:

ಮದುರೈ:

ದೇವಾಲಯದಲ್ಲಿ ಕಂಡುಬರುವ ಆಂಜನೇಯನ ವಿಶಿಷ್ಟ ಕೆತ್ತನೆ.

ಚಿತ್ರಕೃಪೆ: Vi1618

ಮದುರೈ:

ಮದುರೈ:

ಆನೆಯ ದಂತದಲ್ಲಿ ಕೆತ್ತಲಾದ ಪುರುಷ ಹಾಗೂ ಮಹಿಳೆಯ ಸುಂದರವಾದ ಕೆತ್ತನೆ.

ಚಿತ್ರಕೃಪೆ: Adam63

ಮದುರೈ:

ಮದುರೈ:

ಗೋಪುರದ ಮೇಲೆ ರಚಿಸಲಾದ ಸುಂದರವಾಗಿ ಕಾಣುವ ಬ್ರಹ್ಮ ದೇವ.

ಚಿತ್ರಕೃಪೆ: Ramasamykone

ಮದುರೈ:

ಮದುರೈ:

ದೇವಾಲಯದಲ್ಲಿರುವ ಕಾಳಿ ಮಾತೆಯ ವಿಗ್ರಹ.

ಚಿತ್ರಕೃಪೆ: Arunankapilan

ಮದುರೈ:

ಮದುರೈ:

ಇಷ್ಟವಿದ್ದಲ್ಲಿ ಈ ಬ್ಯಾಟರಿ ಚಾಲಿತ ಕಾರನ್ನು ಬಳಸಿಕೊಂಡಿ ಈ ಅಗಾಧವಾದ ದೇವಾಲಯದ ಸಂಪೂರ್ಣ ಸುತ್ತು ಹೊಡೆಯಬಹುದು.

ಚಿತ್ರಕೃಪೆ: Theni.M.Subramani

ಮದುರೈ:

ಮದುರೈ:

ಮದುರೈ ಮೀನಾಕ್ಷಿಯ ರಥೋತ್ಸವದ ಒಂದು ನೋಟ.

ಚಿತ್ರಕೃಪೆ: Military karthick

ಮದುರೈ:

ಮದುರೈ:

ಊರ್ತುವ ತಾಂಡವರ್ ದೇವರ ಪ್ರತಿಮೆ.

ಚಿತ್ರಕೃಪೆ: Arunankapilan

ಮದುರೈ:

ಮದುರೈ:

ಶರಭೇಶ್ವರ ದೇವರ ವಿಗ್ರಹವನ್ನೂ ಈ ದೇವಾಲಯದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Iramuthusamy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X