Search
  • Follow NativePlanet
Share
» »ಮಡಿಕೇರಿ - ದಕ್ಷಿಣಭಾರತದ ಒಂದು ರಮಣೀಯ ತಾಣ

ಮಡಿಕೇರಿ - ದಕ್ಷಿಣಭಾರತದ ಒಂದು ರಮಣೀಯ ತಾಣ

ಮಡಿಕೇರಿಯು ಕರ್ನಾಟಕದ ಒಂದು ಸಣ್ಣ ಪಟ್ಟಣವಾಗಿದ್ದು, ಇದು ವಿಶಾಲವಾದ ಕಾಫಿ ತೋಟಗಳು, ದಟ್ಟವಾದ ಕಾಡುಗಳು ಮತ್ತು ಮಂಜಿನಿಂದ ಕೂಡಿದ ಬೆಟ್ಟಗಳು ಇತ್ಯಾದಿಗಳಿಗಾಗಿ ಹೆಸರುವಾಸಿಯಾಗಿದೆ. ಮಡಿಕೇರಿಯು ಕೊಡಗು ಅಥವಾ ಕೂರ್ಗ ಜಿಲ್ಲೆಯ ಭಾಗವಾಗಿದೆ ಇದನ್ನು ಮಕೇರಾ ಎಂದೂ ಕೂಡಾ ಕರೆಯಲ್ಪಡುತ್ತದೆ.

ವಾರಾಂತ್ಯದ ರಜಾದಿನಗಳನ್ನು ಸುಂದರವಾದ ದೃಶ್ಯಗಳು ಮತ್ತು ಹಸಿರಿನ ನಡುವೆ ಆರಾಮವಾಗಿ ಕಳೆಯಲು ಇಚ್ಚಿಸುವ ಪ್ರಕೃತಿ ಪ್ರೇಮಿಗಳಿಗೆ ಮಡಿಕೇರಿಯ ಗಿರಿಧಾಮವು ಅತ್ಯಂತ ಸೂಕ್ತವಾದ ತಾಣವಾಗಿದೆ. ಈ ಸ್ಥಳವು ಅತ್ಯುತ್ತಮವಾದ ನೈಸರ್ಗಿಕ, ಐತಿಹಾಸಿಕ ಮತ್ತು ಧಾರ್ಮಿಕ ಆಕರ್ಷಣೆಗಳನ್ನು ಹೊಂದಿದ್ದು ಇದು ಸಂದರ್ಶಕರಿಗೆ ಪರಿಪೂರ್ಣವಾದ ಅನುಭವವನ್ನು ಕೊಡುತ್ತದೆ.

ಮುದ್ದುರಾಜನ ಪಟ್ಟಣ ಎಂದು ಇದು ಅರ್ಥೈಸುವ ಮಡಿಕೇರಿಯು ಮೊದಲು ಮುದ್ದುರಾಜಕೇರಿ ಎಂದು ಕರೆಯಲ್ಪಡುತ್ತಿತ್ತು.1633 ರಿಂದ 1687 ರವರೆಗೆ ಕೊಡಗು ಪ್ರದೇಶವನ್ನು ಆಳಿದ ಹಾಲೇರಿ ರಾಜ ಮುದ್ದುರಾಜನ ಹೆಸರನ್ನು ಈ ಸ್ಥಳಕ್ಕೆ ಇಡಲಾಗಿದೆ.ಸ್ಥಳವು ಮಾಲಿನ್ಯದಿಂದ ಮುಕ್ತವಾಗಿದ್ದು, ಇಲ್ಲಿಯ ಶಾಂತ ಮತ್ತು ಪ್ರಶಾಂತ ವಾತಾವರಣವು ಪ್ರತಿಯೊಬ್ಬ ವ್ಯಕ್ತಿಯನ್ನು ತಮ್ಮ ರಜಾದಿನಗಳನ್ನು ಇಲ್ಲಿಗೆ ಬಂದು ಕಳೆಯಲು ಆಹ್ವಾನಿಸುತ್ತದೆ. ಕಾಡುಗಳು, ಹಳ್ಳಿಗಳು, ಒರಟಾದ ಭೂದೃಶ್ಯ, ಅಂತ್ಯವಿಲ್ಲದ ಪರ್ವತ ಶ್ರೇಣಿಗಳಿಂದ ತುಂಬಿದ ಇಳಿಜಾರುಗಳು ಯಾವಾಗಲೂ ಪ್ರವಾಸಿಗರನ್ನು ಆಕರ್ಷಿಸುತ್ತಾ ಬಂದಿದೆ ಇದು ಮುಂದುವರೆದಿದೆ.

ಮಡಿಕೇರಿ ಕೋಟೆ

ಮಡಿಕೇರಿ ಕೋಟೆ

ಈ ಕೋಟೆಯು 17ನೇ ಶತಮಾನದಲ್ಲಿ ಮುದ್ದುರಾಜ ನೆಂಬ ರಾಜನಿಂದ ನಿರ್ಮಿಸಲ್ಪಟ್ಟಿದ್ದು, ಈ ಕೋಟೆಯೊಳಗೆ ತನ್ನ ಅರಮನೆಯನ್ನು ನಿರ್ಮಿಸಿದ್ದನು. ಸ್ವಲ್ಪ ಸಮಯದ ನಂತರ ಈ ಕೋಟೆಯು ಟಿಪ್ಪು ಸುಲ್ತಾನನ ಕೈ ಸೇರಿತು ತದನಂತರ ಅವರು ಅಲಂಕಾರವನ್ನು ಬಳಸಿಕೊಂಡು ರಚನೆಯನ್ನು ನವೀಕರಿಸಿದರು ಮತ್ತು ಅದನ್ನು ಜಾಫರಾಬಾದ್ ಎಂದು ಮರುನಾಮಕರಣ ಮಾಡಿದರು. ಟಿಪ್ಪುವಿನ ನಂತರ, ಬ್ರಿಟಿಷರು 1834 ರಲ್ಲಿ ಈ ಕೋಟೆಯನ್ನು ವಶಪಡಿಸಿಕೊಂಡರು. 19 ನೇ ಶತಮಾನದಲ್ಲಿ ಲಿಂಗ ರಾಜೇಂದ್ರ II ಎಂಬ ರಾಜನಿಂದ ಅರಮನೆಯನ್ನು ಪುನ: ನವೀಕರಿಸಲಾಯಿತು.

ಈ ಕೋಟೆಯ ಪ್ರವೇಶದ್ವಾರದ ಈಶಾನ್ಯ ಮೂಲೆಯಲ್ಲಿ ಎರಡು ಗಾತ್ರದ ಕಲ್ಲಿನ ಆನೆಗಳು ಸಂದರ್ಶಕರ ಗಮನವನ್ನು ಸೆಳೆಯುತ್ತವೆ. ಸೇಂಟ್ ಮಾರ್ಕ್‌ಗೆ ಮೀಸಲಾದ ಚರ್ಚ್ ಅನ್ನು 1859 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ನಿರ್ಮಿಸಿತು.

ಅಬ್ಬೆ ಜಲಪಾತ

ಅಬ್ಬೆ ಜಲಪಾತ

ಈ ಜಲಪಾತವನ್ನು ಅಬ್ಬೀ ಜಲಪಾತವೆಂದೂ ಕರೆಯಲಾಗುತ್ತದೆ. ಈ ಸ್ಥಳವು ವಿಸಾರವಾದ ಕಾಫೀ ತೋಟಗಳ ಹೊದ್ದಿಕೆಯ ಮಧ್ಯದಲ್ಲಿದೆ ಮತ್ತು ಮಡಿಕೇರಿ ನಗರದಿಂಡ ಸುಮಾರು 10 ಕಿ.ಮೀ ದೂರದಲ್ಲಿದೆ. ನೀರಿನ ಮಂಜಿನ ಹನಿಯನ್ನು ಸಿಂಪಡಿಸುತ್ತಾ ಸಣ್ಣ ನದಿಯಾಗಿ ರೂಪುಗೊಂಡು ನಂತರ ಅದು ಅಂತಿಮವಾಗಿ ಕಾವೇರಿ ನದಿಯನ್ನು ಸೇರುತ್ತಾ ಮನಮೋಹಕ ನೋಟವನ್ನು ನೀಡುತ್ತದೆ.

ರಾಜಾ'ಸ್ ಸೀಟ್

ರಾಜಾ'ಸ್ ಸೀಟ್

ರಾಜನ ಸೀಟ್ ಈ ಸ್ಥಳವು ಇಟ್ಟಿಗೆ ಮತ್ತು ಗಾರೆಗಳಿಂದ ಮಾಡಿದ ನಾಲ್ಕು ಕಂಬಗಳ ಸಣ್ಣ ರಚನೆಯಾಗಿದೆ. ಈ ರಚನೆಯು ಈ ಭೂಮಿಯನ್ನು ಆಳಿದ ರಾಜರಿಗೆ ನೆಚ್ಚಿನ ಸ್ಥಳವಾಗಿತ್ತು ಮತ್ತು ಆದ್ದರಿಂದ ಇದನ್ನು ರಾಜನ ಆಸನ ಎಂದು ಕರೆಯಲಾಯಿತು.

ಈ ರಚನೆಯನ್ನು ಬಹಳ ಎತ್ತರದ ಸ್ಥಳದಲ್ಲಿ ನಿರ್ಮಿಸಲಾಗಿದ್ದು, ಇಡೀ ಕೊಡಗಿನ ಪ್ರದೇಶಗಳ ಬಂಡೆಗಳು ಮತ್ತು ಕಣಿವೆಗಳ ಪಕ್ಷಿನೋಟವನ್ನು ನೀಡುತ್ತದೆ.

ಓಂಕಾರೇಶ್ವರ ದೇವಾಲಯ

ಓಂಕಾರೇಶ್ವರ ದೇವಾಲಯ

1820 ರಲ್ಲಿ ಎರಡನೇ ಲಿಂಗರಾಜೇಂದ್ರ ಅವರಿಂದ ಈ ದೇವಾಲಯವು ನಿರ್ಮಿಸಲ್ಪಟ್ಟಿತು. ಈ ದೇವಾಲಯವು ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಮಧ್ಯದಲ್ಲಿ ಗುಮ್ಮಟ ಮತ್ತು ನಾಲ್ಕು ಮೂಲೆಗಳಲ್ಲಿ ನಾಲ್ಕು ಗೋಪುರಗಳನ್ನು ಕಾಣಬಹುದಾಗಿದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ ಮತ್ತು ಗೋಥಿಕ್ ಮತ್ತು ಇಸ್ಲಾಮಿಕ್ ಶೈಲಿಗಳ ಮಿಶ್ರಣವಾಗಿದೆ.

ದಂತಕಥೆಯ ಪ್ರಕಾರ ರಾಜನು ತನ್ನ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಒಬ್ಬ ಬ್ರಾಹ್ಮಣನನ್ನು ಕೊಂದನು.ತದನಂತರ ಆ ಬ್ರಾಹ್ಮಣನ ಆತ್ಮವನ್ನು ಸಮಾಧಾನ ಪಡಿಸುವುದಕ್ಕಾಗಿ ಕಾಶಿಯಿಂದ ಶಿವಲಿಂಗವನ್ನು ತಂದು ಅದಕ್ಕಾಗಿ ಈ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ.

ಗದ್ದಿಗೆ ಅಥವಾ ರಾಜಾ'ಸ್ ಟೊಂಬ್ (ರಾಜನ ಸಮಾಧಿ)

ಗದ್ದಿಗೆ ಅಥವಾ ರಾಜಾ'ಸ್ ಟೊಂಬ್ (ರಾಜನ ಸಮಾಧಿ)

ಈ ಸ್ಮಾರಕವು ಇಂಡೋ- ಇಸ್ಲಾಮಿಕ್ ವಾಸ್ತು ಶಿಲ್ಪ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಈ ರಚನೆಯು ಕೊಡವ ರಾಜಮನೆತನದ ಅವಶೇಷಗಳನ್ನು ಹೊಂದಿದೆ ಹಾಗೂ ಇಲ್ಲಿ ಮೂರು ಸಮಾಧಿಗಳನ್ನು ನಿರ್ಮಿಸಲಾಗಿದ್ದು, ಮಧ್ಯದಲ್ಲಿರುವ ಸಮಾಧಿಯು ಈ ಮೂರರಲ್ಲಿ ದೊಡ್ಡದಾಗಿದೆ. ಇದು ಕೊಡವ ರಾಜ ದೊಡ್ಡವೀರರಾಜೇಂದ್ರ ಮತ್ತು ಅವರ ಪತ್ನಿ ಮಹಾದೇವಿಯಮ್ಮ ಅವರ ಸಮಾಧಿಯನ್ನುಇದು ಒಳಗೊಂಡಿದೆ.

FAQ's
  • ಮಡಿಕೇರಿಯನ್ನು ಭೇಟಿ ನೀಡಲು ಉತ್ತಮ ಸಮಯ

    ಮಡಿಕೇರಿಯು ವರ್ಷಪೂರ್ತಿ ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಫೆಬ್ರವರಿಯಿಂದ ಸೆಪ್ಟಂಬರ್ ವರೆಗೆ ಈ ಸಮಯದಲ್ಲಿ ಪ್ರಕೃತಿ ತಾಯಿಯ ಅದ್ಬುತ ವೈಭವವನ್ನು ಕಾಣಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X