• Follow NativePlanet
Share
» »ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅದ್ಭುತವಾದ ಸಪ್ತ ದೇವಿ ದೇವಾಲಯಗಳು ಇವು.....

ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅದ್ಭುತವಾದ ಸಪ್ತ ದೇವಿ ದೇವಾಲಯಗಳು ಇವು.....

Written By:

ಸಕಲ ಜೀವಿಗಳನ್ನು ಆರ್ಶೀವಾದ ಮಾಡುವ ಶಕ್ತಿ ದೇವತೆಗೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ಭಕ್ತಿ-ಭಾವದಿಂದ ಪೂಜೆಗಳನ್ನು ಮಾಡುತ್ತಾರೆ. ಆ ಮಾತೆಯ ದರ್ಶನ ಮಾಡಿದರೆ ಎಲ್ಲಾ ಪಾಪಗಳು, ಭಯಗಳು ನಿವಾರಣೆಯಾಗುತ್ತದೆ. ಸಂಪತ್ತು, ಜ್ಞಾನ, ಧನ, ಧಾನ್ಯ, ಧೈರ್ಯ ಎಲ್ಲವನ್ನು ವರವಾಗಿ ನೀಡುವ ಆ ತಾಯಿಯು ಭಾರತದಲ್ಲಿನ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದಾಳೆ.

ನಿಮಗೆ ಸಾಮಾನ್ಯವಾಗಿ ತಿಳಿದಿರುವ ವಿಷಯವೇ ಎಂಬಂತೆ ಸತಿ ದೇವಿ ಎಂದರೆ ಪಾರ್ವತಿ ದೇವಿಯನ್ನು ಅವಮಾನ ಮಾಡುವ ದಕ್ಷ ಪ್ರಜಾಪತಿಯು, ತನ್ನ ತಂದೆಯ ಅವಮಾನವನ್ನು ಸಹಿಸಿಕೊಳ್ಳಲಾರದೇ ಸತಿ ದೇವಿಯು ಅಗ್ನಿಯಲ್ಲಿ ಬಿದ್ದು ಪ್ರಾಣ ಅರ್ಪಣೆ ಮಾಡುತ್ತಾಳೆ. ಈ ವಿಷಯ ತಿಳಿದ ಮಹಾಶಿವನು ತನ್ನ ಪತ್ನಿ (ಪಾರ್ವತಿ ಅಥವಾ ಸತಿ ದೇವಿ)ಯ ದೇಹವನ್ನು ತೆಗೆದುಕೊಂಡು ಹೋಗುವಾಗ ಶ್ರೀ ಮಹಾವಿಷ್ಣುವು ಸತಿ ದೇವಿಯ ದೇಹವನ್ನು 108 ಭಾಗಗಳಾಗಿ ಕತ್ತರಿಸುತ್ತಾನೆ. ಅದೇ 108 ಶಕ್ತಿ ಪೀಠಗಳಾಗಿವೆ. ಆ ಶಕ್ತಿ ಪೀಠಗಳು ಕೆಲವು ಪರ್ವತ ಶ್ರೇಣಿಗಳಲ್ಲಿ ನೆಲೆಸಿವೆ. ಅದೇ ಸಪ್ತ ದೇವಿ ದೇವಾಲಯಗಳು.

ಲೇಖನದಲ್ಲಿ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಸಪ್ತ ದೇವಿ ದೇವಾಲಯ ಯಾವುದು? ಅವುಗಳು ಎಲ್ಲಿವೆ? ಆ ದೇವಾಲಯಗಳ ಸ್ಥಳ ಪುರಾಣಗಳೇನು? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಸಂಕ್ಷೀಪ್ತವಾಗಿ ತಿಳಿಯಿರಿ.

ಮಾನಸ ದೇವಿ ದೇವಾಲಯ

ಮಾನಸ ದೇವಿ ದೇವಾಲಯ

ಈ ದೇವಾಲಯದಲ್ಲಿ ಶಕ್ತಿ ಸ್ವರೂಪಿಣಿಯಾದ ಮಾನಸ ದೇವಿಯು ನೆಲೆಸಿದ್ದಾಳೆ. ಈ ತಾಯಿ ಅತ್ಯಂತ ಮಹಿಮಾನ್ವಿತವಾದ ದೇವಾಲಯವಾಗಿದ್ದು, ಹಲವಾರು ಭಕ್ತರು ಈ ತಾಯಿಯ ದರ್ಶನ ಕೋರಿ ದೇಶದ ಮೂಲೆ ಮೂಲೆಗಳಿಂದ ಭೇಟಿ ನೀಡುತ್ತಾರೆ. ಈ ಕ್ಷೇತ್ರವು ಉತ್ತರಾಖಂಡದಲ್ಲಿದೆ.

ಮಾನಸ ದೇವಿ ದೇವಾಲಯ

ಮಾನಸ ದೇವಿ ದೇವಾಲಯ

ಒಂದು ಕಾಲದಲ್ಲಿ ಆದಿವಾಸಿಗಳಿಂದ ಪೂಜೆಯನ್ನು ಮಾಡಿಕೊಳ್ಳುತ್ತಿದ್ದ ಈ ತಾಯಿಯು ಇಂದು ಎಲ್ಲಾ ಹಿಂದೂ ಧರ್ಮರೊಂದಿಗೂ ಕೂಡ ಪೂಜೆಗಳನ್ನು ಮಾಡಿಕೊಳ್ಳುತ್ತಿದ್ದಾಳೆ. ಹಾಲಹಲವನ್ನು ಸೇವಿಸಿದ ಶಿವನನ್ನು ವಿಷದ ಪ್ರಭಾವದಿಂದ ಕಾಪಾಡಿದ್ದಕ್ಕೆ ಈಕೆಯನ್ನು ಆ ಪರಮೇಶ್ವರನು ತನ್ನ ಮಗಳಾಗಿ ಸ್ವೀಕಾರ ಮಾಡುತ್ತಾನೆ. ಈ ತಾಯಿಯು ಕೂಡ ಒಂದು ಪರ್ವತದಲ್ಲಿ ನೆಲೆಸಿದ್ದು, ಬಿಲ್ವ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಸಪ್ತ ದೇವಿ ದೇವಿಯಾಗಿದ್ದಾಳೆ.

ಮಾ ಶಾರದ ದೇವಿ ದೇವಾಲಯ

ಮಾ ಶಾರದ ದೇವಿ ದೇವಾಲಯ

ಈ ಸುಂದರವಾದ ದೇವಾಲಯವು ಮಧ್ಯ ಪ್ರದೇಶದಲ್ಲಿನ ಸತ್ರಾ ಜಿಲ್ಲೆಯಲ್ಲಿರುವ ಈ ದೇವಾಲಯಕ್ಕೆ ಹಲವಾರು ಕಡೆಗಳಿಂದ ಈ ತಾಯಿಯ ದರ್ಶನ ಪಡೆಯಲು ಬರುತ್ತಾರೆ. "ವರ್ಡ್ ಆರ್ಕಿಯಾಲಜಿ ಆಂಡ್ ಆಂತೂಪಾಜಿಕಲ್" ಅವರು ಪ್ರಮುಖವಾದ ಸ್ಥಾನವನ್ನು ಕಲ್ಪಿಸಿದರು. ಈ ಪ್ರದೇಶದಲ್ಲಿ ಆದಿ ಮಾನವ ಅವಶೇಷಗಳು ದೊರೆತಿದೆ ಎಂತೆ. ಅವುಗಳನ್ನು ಸಂರಕ್ಷಣೆ ಮಾಡಲು ಪರಿಶೋಧನೆ ಮಾಡುವ ಸಂದರ್ಭದಲ್ಲಿ ಒಂದು ಕಥೆ ಬೆಳಕಿಗೆ ಬಂದಿದೆ.

ಮಾ ಶಾರದ ದೇವಿ ದೇವಾಲಯ

ಮಾ ಶಾರದ ದೇವಿ ದೇವಾಲಯ

ಅದೆನೆಂದರೆ ಸತಿ ದೇವಿಯ ದೇಹವನ್ನು ಪರಮೇಶ್ವರನು ಶೋಕದಿಂದ ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಸತಿ ದೇವಿಯ ಕೊರಳಿನಲ್ಲಿರುವ ಹಾರವು ಭೂಮಿಯ ಒಂದು ಭಾಗದಲ್ಲಿ ಬಿದ್ದಿತ್ತು. ಆ ಹಾರ ಬಿದ್ದ ಭಾಗವೇ ಮಾ ಶಾರದ ದೇವಿ ದೇವಾಲಯದ ದೇವಿಯಾಗಿದ್ದಾಳೆ ಎಂದು ನಂಬಲಾಗಿದೆ.

ಚಾಮುಂಡೇಶ್ವರಿ ದೇವಾಲಯ

ಚಾಮುಂಡೇಶ್ವರಿ ದೇವಾಲಯ

ಚಾಮುಂಡೇಶ್ವರಿ ದೇವಾಲಯವು ಅತ್ಯಂತ ಮಹಿಮಾನ್ವಿತವಾದ ದೇವಾಲಯವಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ. ಈ ತಾಯಿಯು ರಾಕ್ಷಸರಾದ ಚಂಡ ಹಾಗು ಮುಂಡ ಎಂಬ ಇಬ್ಬರು ರಾಕ್ಷಸರನ್ನು ಸಂಹಾರ ಮಾಡಿ, ಅವರ ಹೆಸರುಗಳಾದ ಚಂಡ ಹಾಗು ಮುಂಡ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದಾಳೆ. ಅಂದರೆ ಚಾಂಮುಂಡೇಶ್ವರಿಯಾಗಿ ಭಕ್ತರನ್ನು ಕಾಪಾಡುತ್ತಿದ್ದಾಳೆ. ಚಾಮುಂಡೇಶ್ವರಿ ದೇವಿಯ ದೇವಾಲಯವು ಒಂದು ಪ್ರಸಿದ್ಧವಾದ ಶಕ್ತಿಪೀಠವಾಗಿದೆ.

ಚಾಮುಂಡೇಶ್ವರಿ ದೇವಾಲಯ

ಚಾಮುಂಡೇಶ್ವರಿ ದೇವಾಲಯ

64 ನೇ ಯೋಗಿನಿಗಳಲ್ಲಿ ಚಾಂಮುಂಡೇಶ್ವರಿ ಕೂಡ ಒಬ್ಬಳಾಗಿದ್ದಳು. ಈಕೆಗೆ ಕಾಳಿಕಾ ದೇವಿಗೆ ಸಮೀಪದ ಹೋಲಿಕೆ ಇದೆ ಎಂದು ಹೇಳಲಾಗುತ್ತದೆ. 12 ನೇ ಶತಮಾನದಲ್ಲಿ ಹೊಯ್ಸಳ ರಾಜ ವಂಶಸ್ಥರು ನಿರ್ಮಾಣ ಮಾಡಿರುವ ಪುಣ್ಯಕ್ಷೇತ್ರ ಇದಾಗಿದೆ. ಇಲ್ಲಿನ ನಂದಿ ಸ್ವಾಮಿಯ ವಿಗ್ರಹವು ಪ್ರಧಾನವಾದ ಆಕರ್ಷಣೆಯಾಗಿದೆ.

ಸಪ್ತಶೃಂಗಿ ದೇವಿ ದೇವಾಲಯ

ಸಪ್ತಶೃಂಗಿ ದೇವಿ ದೇವಾಲಯ

ಈ ತಾಯಿಯ ದೇವಾಲಯವು ಮಹಾರಾಷ್ಟ್ರದಲ್ಲಿನ ನಾಸಿಕ್‍ನ ಪ್ರದೇಶದಲ್ಲಿದೆ. ಈ ತಾಯಿಯು ಅತ್ಯಂತ ಶಕ್ತಿವಂತಳಾಗಿದ್ದು, ಸತಿ ದೇವಿಯ ಬಲ ಗೈ ಹಾಗು ಕಾಲು ಈ ಸ್ಥಳದಲ್ಲಿ ಬಿದ್ದಿದೆ ಎಂದು ಹೇಳಲಾಗುತ್ತದೆ. ಈ ದೇವಿಯು ಸಪ್ತ ಶಿಖರಗಳ ಮಧ್ಯೆ ನೆಲೆಸಿ ಭಕ್ತರನ್ನು ಸಲುಹುತ್ತಿದ್ದಾಳೆ. ಸ್ಥಳ ಪುರಾಣದ ಪ್ರಕಾರ ಇಲ್ಲಿನ ತಾಯಿಯು ಸ್ವಯಂ ಭೂ ಆಗಿ 18 ಕೈಗಳನ್ನು ಹೊಂದಿರುವ ಉಗ್ರ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ.

ಸಪ್ತಶೃಂಗಿ ದೇವಿ ದೇವಾಲಯ

ಸಪ್ತಶೃಂಗಿ ದೇವಿ ದೇವಾಲಯ

ಇಲ್ಲಿಗೆ ಬರುವ ಭಕ್ತರಿಗೆ ಸಕಲ ಸಂಪತ್ತುಗಳನ್ನು ಹಾಗು ಧೈರ್ಯವನ್ನು ಹಾಗು ಶೌರ್ಯವನ್ನು ನೀಡುತ್ತಾಳೆ ಎಂಬ ಹಲವಾರು ಕಥೆಗಳನ್ನು ಪಂಡಿತರು ಭಕ್ತರಿಗೆ ಹೇಳುತ್ತಾರೆ. ಮಹೋನಿದ್ರಿ ಪರ್ವತದ ಮೇಲೆ ನೆಲೆಸಿರುವ ಈ ತಾಯಿಯು ತನ್ನ ಜನನಕ್ಕೆ ಕಾರಣವಾಗಿರುವ ರಾಕ್ಷಸರನ್ನು ಸಂಹಾರ ಮಾಡಿ ಈ ಸ್ಥಳದಲ್ಲಿಯೇ ನೆಲೆಸಿದಳು ಎಂದು ಹೇಳಲಾಗುತ್ತದೆ.

ಇಂದ್ರಕೀಲಾದ್ರಿ ದೇವಾಲಯ

ಇಂದ್ರಕೀಲಾದ್ರಿ ದೇವಾಲಯ

ಈ ದೇವಾಲಯವು ಭಾರತದಲ್ಲಿನ ಹಲವಾರು ಮಂದಿಗೆ ತಿಳಿದಿರುವ ಈ ಪುಣ್ಯ ಕ್ಷೇತ್ರವು ಅತ್ಯಂತ ಮಹಿಮಾನ್ವಿತವಾದ ದೇವಾಲಯವೇ ಆಗಿದೆ. ಹೆಸರು ಸೂಚಿಸುವಂತೆ, ಇಂದ್ರಕೀಲುಡು ಎಂಬ ಮುನಿ, ಒಂದು ಬೆಟ್ಟದ ಮೇಲೆ ತಾಯಿಯ ಸ್ಮರಣೆ ಮಾಡಿಕೊಂಡು ಘೋರವಾದ ತಪಸ್ಸನ್ನು ಆಚರಿಸಿದನಂತೆ. ಅದಕ್ಕೆ ಕಾರಣ ಇಂದಿನ ವಿಜಯವಾಡ ಪ್ರದೇಶದಲ್ಲಿ ಮಹೀಷಾಸೂರ ಎಂಬ ಅಸುರನು ಸಾಮಾನ್ಯರಿಗೆ ಅತ್ಯಂತ ಹಿಂಸೆಯನ್ನು ನೀಡುತ್ತಿದ್ದನು.

ಇಂದ್ರಕೀಲಾದ್ರಿ ದೇವಾಲಯ

ಇಂದ್ರಕೀಲಾದ್ರಿ ದೇವಾಲಯ

ತಾಯಿಯು ಮಹೀಷಾಸುರನ ಮರ್ದನ ಮಾಡಿದ ನಂತರ, ಆ ಪ್ರದೇಶವನ್ನು ಬಿಟ್ಟು ತೆರಳಬಾರದು ಎಂದು ಇಂದ್ರಕೀಲ ಮುನಿಯು ಪ್ರಾರ್ಥನೆ ಮಾಡಿದ ನಂತರ ಆ ಸ್ಥಳದಲ್ಲಿಯೇ ದೇವಿಯು ನೆಲೆಸಿದಳು. ಅರ್ಜುನನು ತನ್ನ ಶಕ್ತಿಶಾಲಿಯಾದ ಶಸ್ತ್ರಗಳನ್ನು ಪಡೆದದ್ದು ಇಲ್ಲಿಯೇ ಎಂಬುದು ಮತ್ತೊಂದು ಸ್ಥಳ ಪುರಾಣವಾಗಿದೆ. ವಿಜಯವಾಡವನ್ನು ಕಾಪಾಡುವ ತಾಯಿಯಾಗಿ ಈ ತಾಯಿಯನ್ನು ಪೂಜಿಸುತ್ತಾರೆ.

ಮಾ ತಾರಿಣಿ ದೇವಾಲಯ

ಮಾ ತಾರಿಣಿ ದೇವಾಲಯ

ಒಡಿಸ್ಸಾದಲ್ಲಿನ ಕುಮಾರಿ ಪರ್ವತ ಶ್ರೇಣಿಯಲ್ಲಿರುವ ಈ ದೇವಾಲಯಕ್ಕೆ ರಾಮಾಯಣದಿಂದಲೂ ಕೂಡ ಪ್ರಾಚಾರ್ಯವನ್ನು ಪಡೆದುಕೊಂಡಿದೆ. ಅಂದರೆ ಇದೊಂದು ಪ್ರಾಚೀನವಾದ ದೇವಾಲಯವೆಂದೇ ಹೇಳಬಹುದು. ರಾಮ ಸೀತೆಗಾಗಿ ಹುಡುಕಾಟ ಮಾಡುವ ಸಂದರ್ಭದಲ್ಲಿ ದೇವಿಯನ್ನು ಪೂಜಿಸಿದರು. ಆದರೆ ಆ ಪೂಜೆಯ ಪ್ರಕಾರ ಯಾವುದೇ ಕಾರಣಕ್ಕೂ ಕಣ್ಣು ತೆರೆದು ತಾಯಿಯನ್ನು ನೋಡಬಾರದು ಎಂಬ ನಿಯಮವಿತ್ತು. ಆದರೆ ಕೊನೆಗೆ ಲಕ್ಷ್ಮಣನು ತಾಯಿಯನ್ನು ಕಣ್ಣು ತೆರೆದು ನೋಡಿಯೇ ಬಿಟ್ಟ.

ಮಾ ತಾರಿಣಿ ದೇವಾಲಯ

ಮಾ ತಾರಿಣಿ ದೇವಾಲಯ

ಇದರಿಂದಾಗಿ ದೇವಿಯ ಕೋಪಕ್ಕೆ ಒಳಗಾದ ಲಕ್ಷ್ಮಣನಾದರೂ ಶ್ರೀ ರಾಮನು, ತಾಯಿಯ ಕೋಪಕ್ಕೆ ಒಳಗಾಗುತ್ತೇನೆ ಎಂದು ಸಿದ್ಧನಾದನು. ಆದರೆ ತಪ್ಪು ಮಾಡಿದವರು ಆ ಶ್ರೀ ರಾಮನು ಅಲ್ಲ ಎಂದು ತಿಳಿದ್ದಿದ್ದ ಆ ದೇವಿಯು ಶ್ರೀ ವಿಷ್ಣುವಿನ ಅವತಾರ ಎಂದು ಶಾಪವನ್ನು ನೀಡಲಿಲ್ಲ. ಈ ತಾಯಿಗೆ ಬ್ರಿಟಿಷರು "ಟೈಬಲ್ ಗಾಡಿಸ್" ಎಂದು ಈ ದೇವಾಲಯಕ್ಕೆ ಹೆಸರನ್ನು ಇಟ್ಟು ಗೌರವಿಸಿದರಂತೆ.

ವೈಷ್ಣವ ದೇವಿ ದೇವಾಲಯ

ವೈಷ್ಣವ ದೇವಿ ದೇವಾಲಯ

ಪ್ರಪಂಚ ಪ್ರಖ್ಯಾತಿಗಳಿಸಿರುವ ಈ ವೈಷ್ಣವ ದೇವಿ ದೇವಾಲಯವು ಜಮ್ಮು-ಕಾಶ್ಮೀರದಲ್ಲಿದೆ. ಕಟ್ರಾದ ಪಟ್ಟಣದ ತ್ರಿಕೋಟ ಪರ್ವತ ಶ್ರೇಣಿಯಲ್ಲಿರುವ ಈ ದೇವಿಯು ತನ್ನ ಅಪಾರವಾದ ಶಕ್ತಿಯಿಂದ ಭಕ್ತರನ್ನು ಕಾಪಾಡುತ್ತಾಳೆ ಎಂದು ಭಕ್ತರು ನಂಬಲಾಗುತ್ತದೆ. ಸಮುದ್ರ ಮಟ್ಟದಿಂದ 5200 ಅಡಿ ಎತ್ತರದಲ್ಲಿರುವ ಈ ದೇವಾಲಯಕ್ಕೆ ಹಲವಾರು ಮಂದಿ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಪುಣ್ಯಕ್ಷೇತ್ರಕ್ಕೆ ತೆರಳಿ ಮಾ ವೈಷ್ಣವ ದೇವಿ ದರ್ಶನ ಮಾಡಬೇಕು ಎಂದು ಬಯಸುತ್ತಾರೆ.

ವೈಷ್ಣವ ದೇವಿ ದೇವಾಲಯ

ವೈಷ್ಣವ ದೇವಿ ದೇವಾಲಯ

ಉಗ್ರದಾಳಿಗಳು ಎಂಬ ಹಲವಾರು ಕಾರಣಗಳಿಂದ ಈ ದೇವಾಲಯಕ್ಕೆ ತೆರಳಲು ಕೊಂಚ ಹಿಂದೆ-ಮುಂದೆ ನೋಡಿದರೂ ಕೂಡ ಭಾರತ ಸರ್ಕಾರ ಭಕ್ತರಿಗೆ ಹಾಗು ಪ್ರವಾಸಿಗರಿಗೆ ಭದ್ರತೆಗಳನ್ನು ಕಲ್ಪಿಸುತ್ತಿದ್ದಾರೆ. ಇದು ಸಪ್ತ ಪರ್ವತದ ಮೇಲೆ ಇರುವ ಪವಿತ್ರವಾದ ತೀರ್ಥಕ್ಷೇತ್ರವಾಗಿದೆ. ಒಮ್ಮೆ ಈ ದೇವಿಗಳ ದರ್ಶನವನ್ನು ಲೇಖನದ ಮೂಲಕ ಮಾಡೋಣ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ