Search
  • Follow NativePlanet
Share
» »ಸಿಕ್ಕಿಂನಲ್ಲಿರುವ ಲೆಗ್ಶಿಪ್‌ನಲ್ಲಿ ಏನೆಲ್ಲಾ ಇದೆ ಗೊತ್ತಾ?

ಸಿಕ್ಕಿಂನಲ್ಲಿರುವ ಲೆಗ್ಶಿಪ್‌ನಲ್ಲಿ ಏನೆಲ್ಲಾ ಇದೆ ಗೊತ್ತಾ?

ಲೆಗ್ಶಿಪ್ ಪಶ್ಚಿಮ ಸಿಕ್ಕಿಂನಲ್ಲಿರುವ ಪಟ್ಟಣವಾಗಿದ್ದು, ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚು ಜನಪ್ರಿಯವಾಗುತ್ತಿದೆ. ಇಲ್ಲಿನ ಪ್ರವಾಸಿ ಆಕರ್ಷಣೆಗಳಲ್ಲಿ ರಂಗಿತ್ ವಾಟರ್ ವರ್ಲ್ಡ್ ಮತ್ತು ಕಿರಾತೇಶ್ವರ ಮಹದೇವ ದೇವಾಲಯಗಳು ಸೇರಿವೆ. ಈ ದೇವಾಲಯದ ಉಲ್ಲೇಖವನ್ನು ಪ್ರಸಿದ್ಧ ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ಕಾಣಬಹುದಾಗಿದೆ.

ಲೆಗ್ಶಿಪ್

ಲೆಗ್ಶಿಪ್

PC:Raghbirkhanna
ದಿನನಿತ್ಯದ ನಗರ ಜೀವನದ ಜಂಜಾಟಗಳಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ವಿರಮಿಸಲು ಲೆಗ್ಶಿಪ್ ಸೂಕ್ತವಾದ ಸ್ಥಳ. ಆಕರ್ಷಣೆಗಳು ಸಿಕ್ಕಿಂನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ರಂಗಿತ್ ವಾಟರ್ ವರ್ಲ್ಡ್ ಒಂದು. ಇದು ಸಾಹಸಪ್ರಿಯರಿಗೆ ಅಚ್ಚರಿಗಳನ್ನು ಒದಗಿಸುವ ತಾಣ. ಇಲ್ಲಿ ರಿವರ್ ರಾಫ್ಟಿಂಗ್, ಮೀನು ಶಿಕಾರಿ ಮತ್ತು ಈಜುನಂತಹ ಚಟುವಟಿಕೆಗಳನ್ನು ಮಾಡಬಹುದು. ಇದು ಲೆಗ್ಶಿಪ್ನ ಸ್ಥಳೀಯರು ಆಸಕ್ತಿಯಿಂದ ನಿರ್ವಹಿಸಲಾಗುತ್ತಿದೆ.

ರಂಗಿತ್ ವಾಟರ್ ವರ್ಲ್ಡ್

ರಂಗಿತ್ ವಾಟರ್ ವರ್ಲ್ಡ್

PC:Flickr upload bot
ರಂಗಿತ್ ವಾಟರ್ ವರ್ಲ್ಡ್ ಸಾಹಸ ಉತ್ಸಾಹಿಗಳಿಗೆ ಸೂಕ್ತವಾದ ತಾಣವಾಗಿದೆ. ನದಿ ರಾಫ್ಟಿಂಗ್, ಆಂಗ್ಲಿಂಗ್ ಮತ್ತು ಈಜು ಮುಂತಾದ ಚಟುವಟಿಕೆಗಳಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ಅದರ ರೋಮಾಂಚಕ ಸೌಂದರ್ಯವು ಮೃದುವಾದ ಸುತ್ತುವರೆದಿರುವ ಪರಿಸರದ ಸೌಂದರ್ಯವು ಫ್ಯಾಮಿಲಿ ಪಿಕ್ನಿಕ್‌ಗಳಿಗೆ ಪರಿಪೂರ್ಣ ಸ್ಥಳವಾಗಿದೆ.

ಕಿರಾತೇಶ್ವರ ಮಹದೇವ ಮಂದಿರ

ಕಿರಾತೇಶ್ವರ ಮಹದೇವ ಮಂದಿರ

PC:Bhattaraibinod3

ಕಿರಾತೇಶ್ವರ ಮಹದೇವ ಮಂದಿರವು ರಂಗಿತ್ ನದಿ ದಂಡೆಯಲ್ಲಿದೆ. ಇದು ಶಿವನ ದೇವಾಲಯ. ಮಹಾಭಾರತದಲ್ಲಿ ಇದಕ್ಕೆ ಸಂಬಂಧಿಸಿದ ಕತೆಗಳಿವೆ. ಗೆಯ್ಜಿಂಗ್ ಮತ್ತು ಪೆಮ್ಯಾಂಗ್ತ್ಸೆಯಿಂದ ಸುಲಭವಾಗಿ ತಲುಪಬಹುದು. ಬೆಲ ಚತುರ್ದಶಿಯಂದು ಈ ದೇವಾಲಯದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ನವಂಬರ್ ಮತ್ತು ಡಿಸಂಬರ್ ತಿಂಗಳುಗಳು ಮಧ್ಯದಲ್ಲಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ಸಮಯದಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಮತ್ತು ಸುತ್ತಮುತ್ತಲ ರಾಜ್ಯಗಳಿಂದ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ.

ಬಿಸಿನೀರಿನ ಬುಗ್ಗೆಗಳು

ಲೆಗ್ಶಿಪ್‌ನಿಂದ 4ಕಿಮೀ ದೂರದಲ್ಲಿ ಬಿಸಿನೀರಿನ ಬುಗ್ಗೆಗಳಿವೆ. ಇದರಲ್ಲಿ ಸಲ್ಫರ್ ಅಂಶವಿದ್ದು ಇದರಲ್ಲಿ ಔಷದೀಯ ಗುಣಗಳಿವೆ ಎಂದು ನಂಬಲಾಗಿದೆ. ಈ ಬುಗ್ಗೆಯನ್ನು ಸ್ಥಳೀಯರು ‘ಫು ಚಾ ಚು ಸಲ್ಫರ್ ಬಾತ್' ಎಂದು ಕರೆಯುತ್ತಾರೆ. ಸಿಕ್ಕಿಂನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಇದೂ ಒಂದು. ಇದು ಸಾಹಸಪ್ರಿಯರಿಗೆ ಅಚ್ಚರಿಗಳನ್ನು ಒದಗಿಸುವ ತಾಣ. ಇಲ್ಲಿ ರಿವರ್ ರಾಫ್ಟಿಂಗ್, ಮೀನು ಶಿಕಾರಿ ಮತ್ತು ಈಜುನಂತಹ ಚಟುವಟಿಕೆಗಳನ್ನು ಮಾಡಬಹುದು. ಇದು ಲೆಗ್ಶಿಪ್‌ನ ಸ್ಥಳೀಯರು ಆಸಕ್ತಿಯಿಂದ ನಿರ್ವಹಿಸಲಾಗುತ್ತಿದೆ.

ಲ್ಹೋ ಖಾಂಡೊ ಸಂಗ್ ಫೊ ಗುಹೆಗಳು

ಲ್ಹೋ ಖಾಂಡೊ ಸಂಗ್ ಫೊ ಗುಹೆಗಳು

ಲ್ಹೋ ಖಾಂಡೊ ಸಂಗ್ ಫೊ ಗುಹೆಗಳು ಸಲ್ಫರ್ಯುಕ್ತ ಬಿಸಿನೀರಿನ ಬುಗ್ಗೆಗಳ ಸಮೀಪದಲ್ಲಿವೆ. 8 ನೇ ಶತಮಾನದಲ್ಲಿ ಗುರು ರೆನ್ಪೋಚ್ ಧ್ಯಾನ ಮಾಡುತ್ತಿದ್ದ ನಾಲ್ಕು ಗುಹೆಗಳಲ್ಲಿ ಇದು ಕೂಡ ಒಂದು ಎನ್ನಲಾಗುತ್ತದೆ. ಚಂಗ್ ಲ್ಹರಿ ನಗ್ನಿಫು, ಶಾರ್ಚೋ ಫೆಫೂ ಮತ್ತು ನಬ್ ದೆಚೆನ್ಫೂ ಇವುಗಳು ಉಳಿದ ಮೂರು ಗುಹೆಗಳು. ಈ ಗುಹೆಗಳನ್ನು ಪ್ರಮುಖವಾದ ಬೌದ್ಧ ಯಾತ್ರಾ ಸ್ಥಳಗಳೆಂದು ಪರಿಗಣಿಸಲಾಗುತ್ತದೆ. ಪಶ್ಚಿಮ ಬಂಗಾಳ, ನೇಪಾಳ ಮತ್ತು ಭೂತಾನ್ ಗಳಿಂದ ಭಕ್ತಾದಿಗಳು ಈ ಗುಹೆಗಳಿಗೆ ಭೇಟಿ ನೀಡುತ್ತಾರೆ ಮತ್ತು ಇಲ್ಲಿನ ಪವಿತ್ರ ಫೂ ಚಾ ಚು ಬಿಸಿ ನೀರಿನ ಬುಗ್ಗೆಯಲ್ಲಿ ಸ್ನಾನ ಮಾಡುತ್ತಾರೆ.

ತಲುಪುವುದು ಹೇಗೆ ?


ಈ ದೇವಾಲಯವನ್ನು ಗೆಯ್ಜಿಂಗ್ ಮತ್ತು ಪೆಮ್ಯಾಂಗ್ತ್ಸೆಯಿಂದ ಸುಲಭವಾಗಿ ತಲುಪಬಹುದು. ಲೆಗ್ಶಿಪ್ ಗ್ಯಾಂಗ್ಟಾಕ್ನಿಂದ 16ಕಿಮೀ ದೂರದಲ್ಲಿದೆ. ಇಲ್ಲಿಗೆ ಟ್ಯಾಕ್ಸಿ, ಜೀಪ್ ಮತ್ತು ಖಾಸಗಿ ವಾಹನಗಳ ಮೂಲಕ ಬರಬಹುದು. ಸಿಲಿಗುರಿಯಲ್ಲಿರುವ ರೈಲ್ವೇ ನಿಲ್ದಾಣವು ಇಲ್ಲಿಗೆ ಸಮೀಪವಿರುವ ಏಕಮಾತ್ರ ರೈಲ್ವೇ ನಿಲ್ದಾಣ. ಈ ನಿಲ್ದಾಣವು ರಾಜ್ಯದ ಎಲ್ಲ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

Read more about: ಸಿಕ್ಕಿಂ sikkim
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X