Search
  • Follow NativePlanet
Share
» »ಲಕ್ಷದ್ವೀಪದ ಬಗ್ಗೆ ನಿಮಗೆಷ್ಟು ಗೊತ್ತು?

ಲಕ್ಷದ್ವೀಪದ ಬಗ್ಗೆ ನಿಮಗೆಷ್ಟು ಗೊತ್ತು?

ಲಕ್ಷದ್ವೀಪವು ಭಾರತದ ಅವಿಭಾಜ್ಯ ಅಂಗವಾಗಿದೆ. ಈಗ ಪ್ರಚಲಿತದಲ್ಲಿರುವ 'ಲಕ್ಷದ್ವೀಪ,' ಒಂದು ಕಾಲದಲ್ಲಿ 'ಲಖದೀವ್','ಮಿನಿಕೋಯ್' ಮತ್ತು 'ಅಮಿನ್ ದಿವಿ' ದ್ವೀಪಗಳು ಎಂದು ಕರೆಯಲಾಗುತ್ತಿದ್ದ, ಅರಬ್ಬೀ ಸಮುದ್ರದ ನಡುವೆ ಇರುವ ಒಂದು ದ್ವೀಪ ಸಮೂಹವಾಗಿತ್ತು. ಭಾರತ ದೇಶದ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪದ ಒಟ್ಟು ಭೂ ವಿಸ್ತೀರ್ಣ 32ಚದರ ಕಿ.ಮೀ.ಗಳು. ಇವು 4,200ಚ. ಕಿ; ಮೀ. ವಿಸ್ತೀರ್ಣದ ಜಲಭಾಗದ ಮಧ್ಯೆ ಇವೆ.

ಲಕ್ಕಾಡೀವ್ ಐಲ್ಯಾಂಡ್ಸ್

ಲಕ್ಕಾಡೀವ್ ಐಲ್ಯಾಂಡ್ಸ್

PC: Lenish Namath

ಪ್ರಸ್ತುತ ಕರವಟ್ಟಿ ಪ್ರದೇಶವು ಲಕ್ಷದ್ವೀಪದ ರಾಜಧಾನಿ ಪಟ್ಟಣವಾಗಿ ದೆ. ಈ ಪ್ರದೇಶವು ಕೇರಳ ಹೈಕೋರ್ಟ್ ವ್ಯಾಪ್ತಿಗೆ ಬರುತ್ತದೆ. ನವಂಬರ್ 1, 1956 ರಲ್ಲಿ ನಡೆದ ರಾಜ್ಯ ಪುನರ್ವಿಂಗಡನಾ ಕಾರ್ಯದ ಬಳಿಕ ಅಂದಿನ ಮದ್ರಾಸ್ ವ್ಯಾಪ್ತಿಗೆ ಒಳಪಟ್ಟಿದ್ದ ಲಕ್ಷದ್ವೀಪ ನಡುಗಡ್ಡೆಗಳನ್ನು ವಿಭಜಿಸಿ ಪ್ರತ್ಯೇಕವಾದ ಆಡಳಿತವನ್ನು ಇಲ್ಲಿ ಕೈಗೊಳ್ಳಲಾಯಿತು. ನಂತರ ನವಂಬರ್ 1, 1973 ರಲ್ಲಿ ಇದಕ್ಕೆ ಅಧಿಕೃತವಾಗಿ ಲಕ್ಷದ್ವೀಪ ಎಂಬ ಹೆಸರನ್ನಿಡಲಾಯಿತು.

ಭಾರತೀಯ ಸೇನಾ ಕಚೇರಿಗಳಿವೆ

ಭಾರತೀಯ ಸೇನಾ ಕಚೇರಿಗಳಿವೆ

PC:Thejas

ಲಕ್ಷದ್ವೀಪವು ಒಂದು ಕೇಂದ್ರಾಡಳಿತ ಪ್ರದೇಶವಾಗಿದ್ದು ಸಾಕಷ್ಟು ಭಾರತೀಯ ಸೇನಾ ಕಚೇರಿಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ನಡುಗಡ್ಡೆಗಳ ಸಮೂಹವು ಸಾಕಷ್ಟು ಸಂಖ್ಯೆಯಲ್ಲಿ ಚಿಕ್ಕ ಪುಟ್ಟ ಭೂಪ್ರದೇಶಗಳನ್ನು ಹೊಂದಿದ್ದು ಮಾರ್ಮಿಕವಾಗಿ ಲಕ್ಷದ್ವೀಪಗಳಿಂದ ಕೂಡಿರುವಂತೆ ಕಾಣುವುದರಿಂದ ಇದಕ್ಕೆ ಲಕ್ಷದ್ವೀಪ ಎಂಬ ಹೆಸರು ಬಂದಿದೆ.

ನಡುಗಡ್ಡೆಗಳು

ನಡುಗಡ್ಡೆಗಳು

PC:Mike Prince

ಬೌದ್ಧ ಧರ್ಮದ ಆರನೇಯ ಶತಮಾನದಲ್ಲಿ ರಚಿತವಾದ ಜಾತಕ ಕಥೆಗಳಲ್ಲೂ ಸಹ ಈ ನಡುಗಡ್ಡೆಗಳ ಕುರಿತು ಉಲ್ಲೇಖವಿದೆ. ಅಲ್ಲದೆ ಹಿಂದೆ ಸಾಕಷ್ಟು ಹಡುಗು ನಾವಿಕರೂ ಸಹ ಈ ನಡುಗಡ್ಡೆಗಳು ಕುರಿತು ಅನೇಕ ಕಡೆಗಳಲ್ಲಿ ಉಲ್ಲೇಖಿಸಿದ್ದಾರೆ. ಏಳನೇಯ ಶತಮಾನದಲ್ಲಿ ಇಸ್ಲಾಂ ಧರ್ಮಪ್ರಚಾರಕರು ಇಲ್ಲಿಗೆ ಬಂದು ತಮ್ಮ ಧರ್ಮದ ಪ್ರಭಾವ ಬೀರಿದರು.

ಬ್ರಿಟಿಷರ ಆಡಳಿತದಲ್ಲಿತ್ತು

ಬ್ರಿಟಿಷರ ಆಡಳಿತದಲ್ಲಿತ್ತು

PC:Thejas

ಪೋರ್ಚುಗೀಸರು ಹಾಗೂ ಮಧ್ಯಕಾಲೀನದಲ್ಲಿ ಚೋಳ ಸಾಮ್ರಾಜ್ಯವೂ ಇಲ್ಲಿ ಆಡಳಿತ ನಡೆಸಿತ್ತೆಂದು ತಿಳಿದುಬರುತ್ತದೆ. ತದನಂತರ ಟಿಪ್ಪು ಸುಲ್ತಾನನ ಕೈವಶವಾಗಿ ಕೊನೆಯದಾಗಿ ಬ್ರಿಟಿಷರ ಆಡಳಿತಕ್ಕಿದು ಒಳಪಟ್ಟಿತು. ಬ್ರಿಟಿಷರು ಭಾರತವನ್ನು ತೊರೆದ ನಂತರ ಈ ನಡುಗಡ್ಡೆಗಳ ಸಮೂಹವು ಸ್ವತಂತ್ರ ಭಾರತದ ಅಧೀನಕ್ಕೊಳಪಟ್ಟು ನಂತರ ಇದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಲಾಯಿತು.

ಲಕ್ಷದ್ವೀಪದ ರಾಜಧಾನಿ

ಲಕ್ಷದ್ವೀಪದ ರಾಜಧಾನಿ

PC: Manvendra Bhangui

ಪ್ರಸ್ತುತ ಕರವಟ್ಟಿ ಪ್ರದೇಶವು ಲಕ್ಷದ್ವೀಪದ ರಾಜಧಾನಿ ಪಟ್ಟಣವಾಗಿ ದೆ. ಈ ಪ್ರದೇಶವು ಕೇರಳ ಹೈಕೋರ್ಟ್ ವ್ಯಾಪ್ತಿಗೆ ಬರುತ್ತದೆ.ನವಂಬರ್ 1, 1956 ರಲ್ಲಿ ನಡೆದ ರಾಜ್ಯ ಪುನರ್ವಿಂಗಡನಾ ಕಾರ್ಯದ ಬಳಿಕ ಅಂದಿನ ಮದ್ರಾಸ್ ವ್ಯಾಪ್ತಿಗೆ ಒಳಪಟ್ಟಿದ್ದ ಲಕ್ಷದ್ವೀಪ ನಡುಗಡ್ಡೆಗಳನ್ನು ವಿಭಜಿಸಿ ಪ್ರತ್ಯೇಕವಾದ ಆಡಳಿತವನ್ನು ಇಲ್ಲಿ ಕೈಗೊಳ್ಳಲಾಯಿತು. ನಂತರ ನವಂಬರ್ 1, 1973 ರಲ್ಲಿ ಇದಕ್ಕೆ ಅಧಿಕೃತವಾಗಿ ಲಕ್ಷದ್ವೀಪ ಎಂಬ ಹೆಸರನ್ನಿಡಲಾಯಿತು.

ಪ್ರಮುಖ ದ್ವೀಪಗಳು

ಪ್ರಮುಖ ದ್ವೀಪಗಳು

PC:icultist

ಅಗಟ್ಟಿ, ಅಮಿನಿ, ಅನ್ಡ್ರೊಟ್, ಬಂಗಾರಂ, ಬಿತ್ರ, ಚೆತ್ಲಾತ್, ಕದ್ಮತ್, ಕಲ್ಪೇನಿ, ಕವರತ್ತಿ, ಕಿಲ್ತಾನ್, ಮಿನಿಕಾಯ್ ಇಲ್ಲಿರುವ 11 ದ್ವೀಪಗಳು. ಇವು ಪ್ರವಾಸೊದ್ಯಮಕ್ಕೆ ಹೆಸರುವಾಸಿಯಾದ ಸ್ಥಳಗಳಾಗಿವೆ. ಇಲ್ಲಿ ಕೆಲವು ರಿಸಾರ್ಟುಗಳಿದ್ದು ಪ್ರವಾಸಿಗರಿಗೆ ತಂಗಲು ಒಳ್ಳೆಯ ತಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more