ಲಕ್ಷದ್ವೀಪ- ರೋಮಾಂಚನಕಾರಿ ವೀಕ್ಷಣಾ ತಾಣ

ದೇಶದ ಕೊಚ್ಚಿ ಕಡಲ ತೀರದಿಂದ ಕೇವಲ 250 ಕಿ.ಮೀ. ದೂರದಲ್ಲೊಂದು ಸ್ವರ್ಗವಿದೆ. ಹೆಚ್ಚಿನ ಜನರಿಗೆ ಇದೊಂದು ಅತ್ಯಾಕರ್ಷಕ ಪ್ರವಾಸಿ ತಾಣ. ಅತ್ಯಂತ ಕಡಿಮೆ ಬೆಲೆಯಲ್ಲಿ ಇಲ್ಲಿ ಹೋಗಿ ರಜೆ ಕಳೆದು ಬರಬಹುದು ಅನ್ನುವುದು ತಿಳಿದಿರಲಿಕ್ಕಿಲ್ಲ. ಹೌದು, ಲಕ್ಷದ್ವೀಪದ ಸಮೂಹ ದ್ವೀಪಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ರಜೆಯ ಮುದವನ್ನು ಇಲ್ಲಿ ಕಳೆಯುವ ಆನಂದವೇ ಬೇರೆ.

ಲಕ್ಷದ್ವೀಪ ಹಿಂದೆ ಲಕ್ಷದೀವ್ಸ್‌ ಅನ್ನುವ ಹೆಸರಿನಲ್ಲಿ ಗುರುತಾಗಿತ್ತು. 39 ನಡುಗಡ್ಡೆ ಹಾಗೂ ದ್ವೀಪಗಳನ್ನು ಒಳಗೊಂಡಿದೆ. ಪ್ರವಾಸಿಗರ ಪಾಲಿಗಂತೂ ಇದು ಭೂಮಿಯ ಮೇಲಿನ ಸ್ವರ್ಗ. ಸೂರ್ಯ ಹಾಗೂ ಮರಳಿನೊಂದಿಗೆ ಕಾಲ ಕಳೆಯಲು, ವಿಹರಿಸಲು ಬಯಸುವವರಿಗಂತೂ ಇದು ನೆಚ್ಚಿನ ತಾಣ. ಸುಮಾರು 4200 ಚದರ್‌ ಕಿ.ಮೀ. ವಿಸ್ತಾರದಲ್ಲಿ ಇಲ್ಲಿ ಸಮುದ್ರದ ನೀರಿನಿಂದ ನಿರ್ಮಾಣವಾಗಿರುವ ಸರೋವರ ಇದೆ. 36 ಚದರ್‌ ಕಿ.ಮಿ.ನಷ್ಟು ವಿಶಾಲವಾದ ನಡುಗಡ್ಡೆ ಪ್ರದೇಶ ಇಲ್ಲಿದೆ. ಈ ಲಕ್ಷದ್ವೀಪದಲ್ಲಿ ಬಯಸುವ ಪ್ರತಿಯೊಂದೂ ಸಿಗುತ್ತದೆ. ಒಟ್ಟು ಈ ದ್ವೀಪ ಪ್ರದೇಶ 132 ಕಿ.ಮೀ. ಉದ್ದನೇ ಕರಾವಳಿ ತೀರ ಆಕರ್ಷಣೆಯ ಕೇಂದ್ರವಾಗಿ ಲಭಿಸಿದೆ. ಇಲ್ಲಿನ ಈ ವಿಶಾಲ ಸ್ಥಳದಲ್ಲಿ ಸಾಕಷ್ಟು ಕಡಲ ತೀರಗಳು, ಜಲಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳು ನಿತ್ಯ ನಿರಂತರವಾಗಿವೆ.

ಇತಿಹಾಸ

ದೇಶಕ್ಕೆ 1947ರ ಆಗಸ್ಟ್‌ 15 ರಂದು ಸ್ವಾತಂತ್ರ್ಯ ಬಂತು. ಅದರ ನಂತರ ಬ್ರಿಟೀಷರು ಈ ಲಕ್ಷ್ಮದ್ವೀಪ ಪ್ರದೇಶವನ್ನು ಭಾರತ ದೇಶದೊಂದಿಗೆ ಸಂಯೋಜಿಸಿದರು. ಆದಾಗ್ಯೂ ಇದರ ಪ್ರಾಥಮಿಕ ಮಾಲೀಕತ್ವ ಮುಸ್ಲಿಂ ಜನಾಂಗದವರ ಹಿಡಿತದಲ್ಲಿತ್ತು. ಪಾಕಿಸ್ತಾನ ಇಲ್ಲಿ ತನ್ನ ಪ್ರಾಬಲ್ಯ ಸಾಧಿಸಿ ಏಕಸ್ವಾಮ್ಯ ಸಾಧಿಸಿಕೊಂಡಿತ್ತು. ಇದನ್ನು ಬೆಳೆಸುವ ಹೊಣೆಯನ್ನೂ ಹೊತ್ತಿತ್ತು. ಪಾಕಿಸ್ತಾನ ಸೈನ್ಯ ಇಲ್ಲಿ ತನ್ನ ಪ್ರಾಬಲ್ಯ ಸಾಧಿಸಿದ್ದ ಸಮಯದಲ್ಲಿ ಭಾರತೀಯ ಸರ್ಕಾರ ನೌಕಾಪಡೆಯನ್ನು ಇಲ್ಲಿಗೆ ರವಾನಿಸಿ ದ್ವೀಪ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು ಅಲ್ಲಿ ಭಾರತೀಯ ದ್ವಜ ಹಾರುವಂತೆ ಮಾಡಲಾಯಿತು. ಹೀಗಾಗಿ ಇಂದು ಲಕ್ಷದ್ವೀಪ ಭಾರತೀಯ ನೌಕಾಪಡೆಯ ಕೇಂದ್ರಸ್ಥಳ ಅಥವಾ ಮನೆಯಾಗಿ ಪರಿಣಮಿಸಿದೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಿಂದ ಈಗಲೂ ಇದಕ್ಕೆ ಸಾಕಷ್ಟು ಆತಂಕಗಳು, ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದ್ದು, ಇವರಿಂದ ಅಪಾಯ ಎದುರಾಗುವುದನ್ನು ಅಲ್ಲಗಳೆಯಲಾಗದು. ಭಾರತೀಯ ನೌಕಾಪಡೆಗೆ ಬೆದರಿಕೆ ಸದಾ ಇದ್ದೇ ಇದೆ.  

ನಡುಗಡ್ಡೆಯಲ್ಲಿ ಫನ್‌

ಪ್ರವಾಸಿ ತಾಣವಾಗಿ ಪ್ರಸಿದ್ಧಿ ಹೊಂದಿರುವ ಲಕ್ಷ್ಮದ್ವೀಪವು ಈ ಆಧಾರದ ಮೇಲೆಯೇ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ಪ್ರದೇಶವಾಗಿ ರೂಪುಗೊಂಡಿದೆ. ನಿಸರ್ಗದತ್ತ ಸೌಂದರ್ಯ ಹಾಗೂ ಆಕರ್ಷಣೆ ಇದರ ಮೂಲ ಬಂಡವಾಳವಾಗಿದೆ. ಕೆಲವರ ಪ್ರಕಾರ ಇಲ್ಲಿನ ನಿಸರ್ಗವನ್ನು ಸುಸ್ಥಿತಿಯಲ್ಲಿ ಕಾಪಾಡಿರುವುದು ಅತ್ಯಂತ ವಿಶೇಷ. ಇದು ಅನೇಕ ವಿಧದಲ್ಲಿ ಸಹಕಾರಿಯಾಗಿದೆ. ಅಪಾರ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವ ಮಾಧ್ಯಮವಾಗಿದೆ. ಅನ್ಯ ಪ್ರದಶಗಳಿಗಿಂತ ಭಿನ್ನವಾಗಿ ಗೋಚರಿಸಲು ಸಹಕಾರಿಯಾಗಿದೆ. ಇಲ್ಲಿನ ಎರಡು ಪ್ರಮುಖ ನಡುಗಡ್ಡೆಗಳಾದ ಅಗತ್ತಿ ಹಾಗೂ ಬಂಗಾರಂ ಅತ್ಯಂತ ಪ್ರಮುಖ ಪಾತ್ರ ವಹಿಸಿವೆ. ಅಗತ್ತಿಯು ಇಲ್ಲಿನ ಡೊಮೆಸ್ಟಿಕ್‌ ವಿಮಾನ ನಿಲ್ದಾಣ ಒಳಗೊಂಡಿದೆ. ಬಂಗಾರಂ ಅತ್ಯಂತ ಪ್ರಸಿದ್ಧ ನಡುಗಡ್ಡೆ ಎನಿಸಿದ್ದು, ಈ ದ್ವೀಪ ಸಮೂಹದಲ್ಲಿಯೇ ಮದ್ಯಪಾನಕ್ಕೆ ಅವಕಾಶ ಇರುವ ಏಕೈಕ ದ್ವೀಪವಾಗಿದೆ.

ಇಲ್ಲಿನ ಸಮುದ್ರ ಜೀವಿಗಳ ಅಂದರೆ ಮೀನು ಮತ್ತಿತರ ಜೀವಿಗಳ ಆಹಾರ ನಿರೀಕ್ಷೆಗೂ ಮೀರಿನ ರುಚಿಯಲ್ಲಿ ಸಿಗುತ್ತವೆ. ಅಲ್ಲದೇ ಈ ದ್ವೀಪ ಸಮೂಹದ ಪ್ರಮುಖ ರಫ್ತು ಉದ್ಯಮವೂ ಇದನ್ನೇ ಅವಲಂಬಿಸಿದೆ. ತುಲನೆಯಲ್ಲಿ ಈ ಪ್ರದೇಶವು ಅತ್ಯಂತ ಶ್ರೀಮಂತ ಹಾಗೂ ಸಂಪದ್ಭರಿತವಾಗಿದೆ. ಇಲ್ಲಿನ ಸಿದ್ಧತೆಗಳು ಹಾಗೂ ಸಹಕಾರ ಇನ್ನೊಬ್ಬರಿಗೆ ತುಲನೆ ಮಾಡದಷ್ಟು ಗುಣಮಟ್ಟದಲ್ಲಿದೆ. ಲಕ್ಷದ್ವೀಪದ ಸಂಪೂರ್ಣ ಸಂಯೋಜನೆ ನಿಮ್ಮ ಅರಿವಿಗೆ ಬರಲು ಸಾಧ್ಯವೇ ಇಲ್ಲ. ಆದರೆ ಸ್ಥಳದ ಸೌಂದರ್ಯ ಸವಿಯಲು ಇದು ಹೇಳಿ ಮಾಡಿಸಿದ ತಾಣ. ನಗರ ಜೀವನಕ್ಕೆ ಒಗ್ಗಿ ಹೋಗಿ, ಉದ್ಯೋದಲ್ಲಿ ಸದಾ ನಿರತರಾಗಿರುವ ನಾಗರಿಕರು ಯಾಂತ್ರಿಕ ಜೀವನಕ್ಕೆ ಸಿಕ್ಕು ಬೆಂಡಾಗಿ ಹೋಗುತ್ತಾರೆ. ಇಂತಹ ಸಮಯದಲ್ಲಿ ಈ ರೀತಿಯ ತಾಣಕ್ಕೆ ಬಂದು ಕೆಲ ಕಾಲ ಕಳೆದು ಹೋದರೆ ಅದರಿಂದ ಸಿಗುವ ನವೋಲ್ಲಾಸವೇ ಬೇರೆ ಮತ್ತು ಅದರಿಂದ ಉಂಟಾಗುವ ಉತ್ಸಾಹವು ನಂತರದ ಉದ್ಯೋಗ ಜೀವನದಲ್ಲಿ ಬಹು ಸಮಯದವರೆಗೆ ಕ್ರಿಯಾಶೀಲರಾಗಿ ಇರಲು  ಸಹಕಾರಿಯಾಗುತ್ತದೆ. ನಗರ ಜೀವನದಿಂದ ಒಂದು ಚಿಕ್ಕ ವಿರಾಮ ನೀಡಿ ನವೋಲ್ಲಾಸವನ್ನು ಮನಸ್ಸಿನಲ್ಲಿ ತುಂಬುತ್ತದೆ. ಮೀನುಗಾರಿಕೆಯ ಸ್ವಾನುಭವವನ್ನು ಕೂಡ ಇಲ್ಲಿ ಪಡೆಯಬಹುದು. ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ, ನಿರಾಳವಾಗಿಸುವ ಕಾರ್ಯ ಇಲ್ಲಾಗುತ್ತದೆ. ಈ ಎಲ್ಲಾ ಅವಕಾಶಗಳು ಲಕ್ಷದ್ವೀಪದಲ್ಲಿ ವ್ಯವಸ್ಥಿತವಾಗಿ ಸಿಗುತ್ತವೆ. ಸ್ಕೂಬಾ (ಎಸ್‌ಸಿಯುಬಿಎ) ಡೈವಿಂಗ್‌ ತಾಣ ಕೂಡ ಇಲ್ಲಿನ ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ಆಕರ್ಷಣೆ. ಸದಾ ಚಟುವಟಿಕೆಯಿಂದ ಕೂಡಿರುತ್ತದೆ.

ಇಲ್ಲಿನ ಅನೇಕ ಆಕರ್ಷಕ ತಾಣಗಳು ನೋಡುಗರಿಗೆ ಅತ್ಯಂತ ಉತ್ತೇಜನಕಾರಿ, ಮೋಜಿನ ತಾಣಗಳು ಸಾಕಷ್ಟಿವೆ. ಪ್ರವಾಸಿಗರಿಗೆ ನೈಜ ಹಾಗೂ ಮನೋಲ್ಲಾಸದ ಅನುಭವ ನೀಡುತ್ತವೆ. ನೀರಿನಾಳಕ್ಕೆ ಇಳಿದು ಈಜಲು, ನೀರಿಗೆ ಜಿಗಿಯಲು ಇಲ್ಲಿ ಸಾಕಷ್ಟು ತಾಣಗಳು ಸಿಗುತ್ತವೆ. ನೀರಿನೊಂದಿಗೆ ಮಜವಾಗಿ ಕಾಲ ಕಳೆಯುವ ಹೇರಳ ಅವಕಾಶ ಇಲ್ಲಿ ಬಂದರೆ ಸಿಗುತ್ತದೆ. ಇಲ್ಲಿ ಡೈವಿಂಗ್‌ ಸೌಲಭ್ಯ ಹಲವೆಡೆ ಇದೆ. ಆದರೆ 30 ಮೀಟರ್‌ ಅಳದವರೆಗೆ ಮಾತ್ರ ತೆರಳಲು ಪರವಾನಗಿ ಇದೆ. ಇದಲ್ಲದೇ ಪ್ರವಾಸಿಗರಿಗೆ ಡಿಕಂಪ್ರೇಷನ್‌ ಚೇಂಬರ್‌ ವ್ಯವಸ್ಥೆ ಸಿಗುತ್ತದೆ. ಇದು ಮೇ 15 ರಿಂದ ಸೆಪ್ಟೆಂಬರ್‌ 15 ರ ನಡುವಿನ ಅವಧಿಯಲ್ಲಿ ಮಾತ್ರ. ಇಲ್ಲಿನ ಪರಿಪೂರ್ಣ ಅನುಭವವನ್ನು ಸ್ಕೂಬಾ ಮೂಲಕ ಪಡೆಯಲು ಇಚ್ಛಿಸಿದರೆ ಅನುಕೂಲ. ನಿರೀಕ್ಷೆಗೂ ಮೀರಿದ ತಾಣವನ್ನು ವೀಕ್ಷಿಸುವ, ಅಪರಿಮಿತ ಅನುಭವ ಹೊಂದುವ ಅವಕಾಶ ಇಲ್ಲಿ ದೊರೆಯುತ್ತದೆ. ಸಮುದ್ರದ ನೀರಿನಿಂದ ನಿರ್ಮಾಣವಾಗಿರುವ ಸರೋವರಗಳು ನೀಲಿ ಬಣ್ಣದ್ದಾಗಿವೆ. ಪಳಫಳನೆ ಹೊಳೆಯುತ್ತಿರುತ್ತದೆ. ಲಕ್ಷದ್ವೀಪದಲ್ಲಿನ ರೇಸಾರ್ಟ್ ಗಳು ಅತ್ಯಾಕರ್ಷಕ ರಜಾಕಾಲೀನ ಅವಧಿ ಕಳೆಯಲು ಅನುಕೂಲವಾಗುವ ವಿಶೇಷ ಪ್ಯಾಕೇಜ್‌ಗಳನ್ನು ಪ್ರವಾಸಿಗರಿಗೆ ನೀಡುತ್ತವೆ. ಅಲ್ಲದೇ ಇಲ್ಲಿನ ಕಡಲ ತೀರ ಕೂಡ ಅತ್ಯಂತ ಶುಭ್ರವಾಗಿದ್ದು, ಬಿಳಿ ಬಣ್ಣದಲ್ಲಿ ಸದಾ ಕಂಗೊಳಿಸುತ್ತಿರುತ್ತದೆ. ತೆಂಗು ಹಾಗೂ ಪಾಮ್‌ ಮರಗಳು ಸಾಲಾಗಿ ಬೆಳೆದು ನಿಂತಿದ್ದು, ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿವೆ. ನಿಮ್ಮ ಎಲ್ಲಾ ಒತ್ತಡ ಮರೆಸಿ ಒಂದು ವಿಶಿಷ್ಟ ಅನುಭವ ನೀಡುವ ಗ್ಯಾರೆಂಟಿ ತಾಣ ಲಕ್ಷದ್ವೀಪ. ದೇಶದಲ್ಲೇ ಇದೊಂದು ಅತ್ಯುತ್ತಮ ಪ್ರವಾಸಿ ತಾಣ, ವಿಶಿಷ್ಟ ಅನುಭವ ನೀಡಲಿದೆ ಎನ್ನುವುದು ನಿಸ್ಸಂಶಯ.

Please Wait while comments are loading...