Search
 • Follow NativePlanet
Share
ಮುಖಪುಟ » ಸ್ಥಳಗಳು » ಲಕ್ಷದ್ವೀಪ » ಆಕರ್ಷಣೆಗಳು » ಕವರಟ್ಟಿ

ಕವರಟ್ಟಿ, ಲಕ್ಷದ್ವೀಪ

4

ಲಕ್ಷದ್ವೀಪದ ದ್ವೀಪ ಸಮೂಹಗಳಲ್ಲಿಯೇ ಎಲ್ಲಾ ವಿಧದ ಫನ್‌ ಹಾಗೂ ಸಾಹಸಕ್ಕೆ ಕವರಟ್ಟಿ ಕೇಂದ್ರಸ್ಥಳವಾಗಿದೆ. ಕೊಚ್ಚಿ ಕಡಲ ತೀರದಿಂದ ಸುಮಾರು 360 ಕಿ.ಮೀ. ದೂರದಲ್ಲಿದೆ. ಅಗತ್ತಿಯಿಂದ ಕೇವಲ 50 ಕಿ.ಮೀ. ಅಂತರದಲ್ಲಿದೆ. ಲಕ್ಷದ್ವೀಪದ ಡೊಮೆಸ್ಟಿಕ್‌ ವಿಮಾನ ನಿಲ್ದಾಣ ಅಗತ್ತಿಯಲ್ಲಿದ್ದು, ಅದಕ್ಕೆ ಸಮೀಪದಲ್ಲಿಯೇ ಇದಿರುವುದು ಇನ್ನೊಂದು ಧನಾತ್ಮಕ ಅಂಶ.

ಅಗತ್ತಿಯಿಂದ ಇಲ್ಲಿಗೆ ಬೋಟ್‌ ಅಥವಾ ಹೆಲಿಕ್ಯಾಪ್ಟರ್‌ ಮೂಲಕ ಆಗಮಿಸಬಹುದು. ಕರವಟ್ಟಿಯು ಲಕ್ಷದ್ವೀಪದ ದ್ವೀಪ ಸಮೂಹದ ಕೇಂದ್ರ ಸ್ಥಳ ಹಾಗೂ ರಾಜಧಾನಿ ಕೂಡ ಆಗಿದೆ. ಜನ ಚಟುವಟಿಕೆಗೆ ಅತ್ಯಂತ ಜನಪ್ರಿಯವಾಗಿರುವ ಈ ದ್ವೀಪ ಪುಟ್ಟ ಪಟ್ಟಣವಾಗಿದೆ. ಸುಮಾರು 10 ಸಾವಿರ ಮಂದಿ ವಾಸವಾಗಿದ್ದಾರೆ. ಶಾಪಿಂಗ್‌ಗೆ ಇದು ಉತ್ತಮ ಸ್ಥಳ. ಅಲ್ಲದೇ ಕೆಲ ಪಾರಂಪರಿಕ ತಾಣಗಳು ಇಲ್ಲಿವೆ. ಮ್ಯೂಸಿಯಂ ಹಾಗೂ ಮಸೀದಿ ಇವುಗಳಲ್ಲಿ ಪ್ರಮುಖವಾದವು. ಇಲ್ಲಿನ ಕಡಲ ತೀರ ಕೂಡ ರಮಣೀಯವಾಗಿದ್ದು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಮುದ್ರ ಜೀವಿಗಳ ಆಹಾರಕ್ಕೆ ಇದು ಅತ್ಯಂತ ಖ್ಯಾತಿ ಹೊಂದಿದೆ. ಇಲ್ಲಿನ ರೆಸ್ಟೊರೆಂಟ್‌ ಹಾಗೂ ಶಾಕ್ಸ್‌ಗಳಲ್ಲಿ ಉತ್ಕೃಷ್ಟ ಸಮುದ್ರಜೀವಿಗಳ ಭಕ್ಷ್ಯ ಸಿಗುತ್ತದೆ. ಈ ದ್ವೀಪವು ಕೇವಲ 4.22 ಕಿ.ಮೀ. ನಷ್ಟು ವ್ಯಾಪ್ತಿಯನ್ನು ಮಾತ್ರ ಹೊಂದಿದೆ. ನೋಡಲು ಹೆಚ್ಚು ದೂರ ಅತ್ತಿತ್ತ ತೆರಳುವ ಅಗತ್ಯ ಬೀಳದು. ರಸ್ತೆ ಸೌಲಭ್ಯ ಉತ್ತಮವಾಗಿದ್ದು, ದ್ವಿಚಕ್ರ ವಾಹನಗಳು ಬಾಡಿಗೆಗೆ ಸಿಗುತ್ತವೆ. ಇವನ್ನು ಪಡೆದು ಸುತ್ತಾಡಬಹುದು.

ನೀವು ಈಜುಪಟುವಾಗಿರಿ ಅಥವಾ ಈಜು ಬಾರದವರಾಗಿರಿ ನೀರಿನಲ್ಲಿ ಆಟವಾಡಲು ಅಪಾಯವಾಗದ ರೀತಿಯ ಅಗತ್ಯ ಸೌಲಭ್ಯವನ್ನು ಇಲ್ಲಿ ನೀಡಲಾಗುತ್ತದೆ. ಮರೀನೆ ಮ್ಯೂಸಿಯಂ ಹಾಗೂ ಅಕ್ವೇರಿಯಂ ಸೌಲಭ್ಯ ಇಲ್ಲಿದೆ. ಇಲ್ಲಿ ಸಾಕಷ್ಟು ವಿಧದ ಸಮುದ್ರ ಜೀವಿಗಳನ್ನು ನೋಡಲು ಅವಕಾಶ ಸಿಗುತ್ತದೆ. ವಿಸ್ತ್ರತ ಸಮುದ್ರ ಜೀವಿಗಳ ತಳಿ ಇಲ್ಲಿ ದರ್ಶನಕ್ಕೆ ಸಿಗುತ್ತದೆ. ಸ್ಕೂಬಾ ಡೈವಿಂಗ್‌ ಸೌಲಭ್ಯ ಇಲ್ಲಿ ಲಭ್ಯವಿದೆ. ಸಕಲ ರೀತಿಯ ರಕ್ಷಣಾತ್ಮಕ ಸೌಲಭ್ಯವನ್ನು ಇದು ಒಳಗೊಂಡಿದೆ. ಜನ ರಮಣೀಯ ಪ್ರಕೃತಿ ವೀಕ್ಷಿಸಲು ಇಲ್ಲಿ ಹೆಚ್ಚು ದೂರ ತೆರಳುವ ಅಗತ್ಯವೂ ಎದುರಾಗುವುದಿಲ್ಲ. ಗಾಜಿನ ತಳ ಕಟ್ಟಿದ ಬೋಟ್‌ಗಳು ಇಲ್ಲಿ ಬಾಡಿಗೆಗೆ ಸಿಗುತ್ತವೆ. ಇದನ್ನೇರಿ ಹೊರಟರೆ ಸಮುದ್ರದ ನಡುವೆ ಜಲಚರಗಳ ಓಡಾಟ ಸ್ಪಷ್ಟವಾಗಿ ಗೋಚರಿಸುತ್ತದೆ. ಮಕ್ಕಳಿಗೆ ಇದು ಉತ್ತಮ ಅನುಭವ ನೀಡುತ್ತದೆ. ಕರವಟ್ಟಿಯಲ್ಲಿ ಡಾಲ್ಫಿನ್‌ ಡೈವ್‌ ಕೇಂದ್ರ ಇದ್ದು ಇಲ್ಲಿ ಸಾಕಷ್ಟು ವಿಧದ ಜಲ ಚಟುವಟಿಕೆಗಳಿಗೆ ಅವಕಾಶವಿದೆ. ಲಕ್ಷದ್ವೀಪದ ಜನಸಂಖ್ಯೆಯಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯದವರು. ಈದ್‌ ಉಲ್‌ ಫಿತರ್‌ ಇಲ್ಲಿನ ಅತ್ಯಂತ ಪ್ರಮುಖ ಆಚರಣೆಗಳಲ್ಲಿ ಒಂದು. ಸಾಕಷ್ಟು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಅಕ್ಟೋಬರ್‌ ತಿಂಗಳಲ್ಲಿ ಇಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಹಬ್ಬಗಳು ಸಾಲು ಸಾಲಾಗಿ ನಡೆಯುತ್ತವೆ ಈ ಸಂದರ್ಭದಲ್ಲಿ. ಇಲ್ಲಿನ ಜನಪ್ರಿಯ ಉಜ್ರಾ ಮಸೀದಿಯಲ್ಲಿ ಸಾಕಷ್ಟು ಕಾರ್ಯಕ್ರಮ ನಡೆಯುತ್ತದೆ. ಇದನ್ನು ಶೇಖ್‌ ಮೊಹಮ್ಮದ್‌ ಖಾಸಿಮ್‌ ಎಂಬುವರು 17ನೇ ಶತಮಾನದಲ್ಲಿ ನಿರ್ಮಿಸಿದ್ದರೆ. ಇಲ್ಲಿನ ಇನ್ನೊಂದು ಪ್ರಮುಖ ಆಚರಣೆ ಓಣಂ. ಇದೊಂದು ದಕ್ಷಿಣ ಭಾರತದ ಪ್ರಮುಖ ಆಚರಣೆ ಆಗಿದ್ದು, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಈ ದ್ವೀಪದಲ್ಲಿ ಆಚರಣೆಯಾಗುತ್ತದೆ.

ಇಲ್ಲಿನ ಬೆಳ್ಳನೇಯ ಮರಳ ತೀರಗಳು ವರ್ಷಕ್ಕೆ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತವೆ. ಹಸಿರು ವಾತಾವರಣ, ಆಕರ್ಷಕ ಜಲ ಸಂಪತ್ತು, ಇದನ್ನೊಂದು ಸೂಕ್ತ ಪ್ರವಾಸಿ ತಾಣವನ್ನಾಗಿ ರೂಪಿಸಿದೆ. ಸಂಪೂರ್ಣ ವಾಣಿಜ್ಯೀಕರಣಕ್ಕೆ ಒಳಗಾಗದೇ, ಒಂದು ಉತ್ತಮ ರಜಾ ಕಳೆಯುವ ಪ್ರದೇಶವಾಗಿ ಜನಪ್ರಿಯವಾಗಿದೆ.

One Way
Return
From (Departure City)
To (Destination City)
Depart On
15 Sep,Sun
Return On
16 Sep,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Sep,Sun
Check Out
16 Sep,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Sep,Sun
Return On
16 Sep,Mon
 • Today
  Lakshadweep
  29 OC
  84 OF
  UV Index: 7
  Partly cloudy
 • Tomorrow
  Lakshadweep
  29 OC
  84 OF
  UV Index: 7
  Partly cloudy
 • Day After
  Lakshadweep
  29 OC
  84 OF
  UV Index: 7
  Partly cloudy

Near by City