Search
 • Follow NativePlanet
Share
ಮುಖಪುಟ » ಸ್ಥಳಗಳು » ಲಕ್ಷದ್ವೀಪ » ಆಕರ್ಷಣೆಗಳು » ಅಗತ್ತಿ ನಡುಗಡ್ಡೆ

ಅಗತ್ತಿ ನಡುಗಡ್ಡೆ, ಲಕ್ಷದ್ವೀಪ

2

ಲಕ್ಷದ್ವೀಪದ ಪ್ರವೇಶದ್ವಾರ ಅಂತಲೇ ಅಗತ್ತಿ ನಡುಗಡ್ಡೆ ಜನಪ್ರಿಯವಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ನಿಜಕ್ಕೂ ಆ ಪ್ರವಾಸ ಫಲಪ್ರದ. ಲಕ್ಷದ್ವೀಪಕ್ಕೆ ತಲುಪುವ ಜಲ ಮಾರ್ಗವೆಲ್ಲ ಬಂದು ಸೇರುವುದು ಇಲ್ಲಿಗೇ. ಇದರಿಂದ ಅಗತ್ತಿ ದ್ವೀಪ ಲಕ್ಷದ್ವೀಪದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಜಲಮಾರ್ಗದ ಕೊಂಡಿ ಮಾತ್ರವಲ್ಲ, ಲಕ್ಷದ್ವೀಪಕ್ಕೆ ವಾಯು ಮಾರ್ಗದಲ್ಲಿ ಸಂಪರ್ಕ ಕಲ್ಪಿಸುವ ಏಕೈಕ ದ್ವೀಪವೂ ಇದೇ ಆಗಿದೆ. ಬೆಂಗಳೂರು, ಕೊಚ್ಚಿಯಿಂದ ಬರುವ ವಿಮಾನಗಳು ಇಲ್ಲಿನ ಡೊಮೆಸ್ಟಿಕ್‌ ವಿಮಾನ ನಿಲ್ದಾಣದಲ್ಲಿ ಇಳಿಯುತ್ತವೆ. ಇದು ಅತ್ಯಂತ ಚಿಕ್ಕ ನಡುಗಡ್ಡೆ ಕೂಡ ಹೌದು. ಕೇವಲ ನಾಲ್ಕು ಚದರ್‌ ಕಿ.ಮಿ. ವಿಸ್ತಾರವಾಗಿದೆ. ಇದು ಅತ್ಯಂತ ಚಿಕ್ಕದಾಗಿರುವುದರಿಂದ ಕೇವಲ ಎರಡು ರೆಸಾರ್ಟ್ ಗಳನ್ನು ಮಾತ್ರ ಹೊಂದಿದೆ. ನೇರ ರಸ್ತೆಗಳು ಪ್ರವಾಸಿಗರಿಗೆ ದ್ವೀಪ ಸುತ್ತಲು ಅತ್ಯಂತ ಸಹಕಾರಿಯಾಗಿ ಸಿಕ್ಕಿವೆ. ಒಂದು ಬೈಕ್‌ ಬಾಡಿಗೆ ಪಡೆದು ಸುತ್ತಾಡುವುದು ಇಲ್ಲಿ ಪ್ರಶಸ್ತ ಸೌಲಭ್ಯವಾಗಿ ಲಭಿಸುತ್ತದೆ.

ನೀವು ಅಗತ್ತಿಗೆ ಕಾಲಿರಿಸುತ್ತಿದ್ದಂತೆ ಇಲ್ಲಿನ ವಾಸ್ತವದ ಅರಿವಾಗುತ್ತದೆ. ನೈಜ ನಿಸರ್ಗ ನಿಮ್ಮನ್ನು ಆಹ್ಲಾದಮಯಗೊಳಿಸುತ್ತದೆ. ಅಂತಾರಾಷ್ಟ್ರೀಯ ತಾಣವಾಗಿದ್ದು, ಯಾವುದೇ ವ್ಯಾಪಾರಿಕರಣಕ್ಕೆ ಒಳಗಾದ ನಗರದಂತೆ ಭಾಸವಾಗುವುದಿಲ್ಲ. ಇಲ್ಲಿ ಇನ್ನೂ ಪಾರಂಪರಿಕ ರೀತಿ, ರಿವಾಜಿಗೆ ಹೆಚ್ಚಿನ ಪ್ರಾಶಸ್ತ್ಯ ಇದೆ. ಹೊಸಬರು ಇಲ್ಲಿಗೆ ಬಂದರೂ ಸರಳವಾಗಿ ತಾಣಗಳನ್ನು ಅರ್ಥೈಸಿಕೊಂಡು ನೋಡಿ ಹಿಂತಿರುಗಬಹುದು. ಈ ಮೂಲಕ ಲಕ್ಷದ್ವೀಪದ ಪ್ರವೇಶವೇ ಅತ್ಯಂತ ಸರಳವಾಗಿ ಗೋಚರಿಸುತ್ತದೆ.

ಬೆಳ್ಳಗೆ ಹೊಳೆಯುವ ಮರಳಿನಿಂದ ಆವೃತ್ತವಾಗಿರುವ ಕಡಲ ತೀರ, ನೀಲಿ ಬಣ್ಣದ ಸಮುದ್ರ ನೀರಿನ ಸರೋವರ ಕಣ್ಮನ ಸೆಳೆಯುತ್ತವೆ. ಚಿತ್ರದಲ್ಲಿ ನೋಡಿದಂತೆ ಇಲ್ಲಿನ ದೃಶ್ಯಗಳು ಗೋಚರಿಸುತ್ತವೆ. ನೀವೆಲ್ಲೊ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ವೀಕ್ಷಿಸುತ್ತಿರುವಂತೆ ಭಾಸವಾಗುತ್ತದೆ. ಇಲ್ಲಿನ ಬಹುತೇಕ ಪ್ರವಾಸಿ ತಾಣಗಳು ಕಡಲ ತೀರವೇ ಆಗಿದೆ. ಇಂತದ್ದೊಂದು ಅದ್ಭುತ ತಾಣ ಭಾರತದಿಂದ ಕೇವಲ 200 ಕಿ.ಮೀ. ದೂರದಲ್ಲಿದೆ. ಅತ್ಯಾಕರ್ಷಕ ಸೀನರಿಗಳನ್ನು ಒಳಗೊಂಡಿರುವ ಆಕರ್ಷಕ ತಾಣ, ನಿಜಕ್ಕೂ ಅದ್ಭುತ ಅಂತ ಅಗತ್ತಿಗೆ ಬಂದಾಗ ಅನ್ನಿಸದೇ ಇರಲಾರದು.

ಅಗತ್ತಿಯಲ್ಲಿ ಸಾಕಷ್ಟು ನೀರೊಳಗಿನ ಕಸರತ್ತು ಅಥವಾ ಆಟಕ್ಕೆ ಅವಕಾಶವಿದೆ. ಅದರಲ್ಲಿ ಸ್ಕೂಬಾ ಡೈವಿಂಗ್‌ ಹಾಗೂ ಸ್ನೋರ್‌ಕೆಲಿಂಗ್‌ ಪ್ರಮುಖವಾದವು. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ಕಡಲ ತೀರಗಳು ಅತ್ಯಂತ ಆರಾಮದಾಯಕ ತಾಣಗಳಾಗಿವೆ. ಮೀನು ಹಿಡಿಯುವುದು ಇಲ್ಲಿನ ಇನ್ನೊಂದು ಕ್ರೀಡೆ. ಇನ್ನೊಂದು ಮರೆಯಲಾಗದ ವಿಶೇಷ ಅಂದರೆ ಇಲ್ಲಿ ತಳದಲ್ಲಿ ಗಾಜಿನ ಹಲಗೆ ಅಳವಡಿಸಿದ ದೋಣಿ ಮಧ್ಯಾಹ್ನದ ನಂತರದ ಅವಧಿಯಲ್ಲಿ ಸಿಗುತ್ತದೆ. ಇದನ್ನೇರಿ ಹೊರಟರೆ, ನೀರಿನೊಳಗಿನ ಚಟುವಟಿಕೆಯನ್ನು ಕೂಡ ಸ್ಪಷ್ಟವಾಗಿ ನೋಡಬಹುದು. ಅಗತ್ತಿಯಲ್ಲಿ ಎಲ್ಲವೂ ಇದ್ದು ವಾಸ್ತವ್ಯಕ್ಕೆ ಅಷ್ಟು ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿಯೇ ಇದೊಂದು ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿ ಇದುವರೆಗೂ ಬಿಂಬಿತವಾಗಿಲ್ಲ. ಇಲ್ಲಿ ಇದೊಂದು ಬಿಟ್ಟರೆ ಉಳಿದದ್ದೇಲ್ಲಾ ಅತ್ಯುತ್ತಮವಾಗಿದೆ. ಸರೋವರದಲ್ಲಿ ನೀವೇ ಖುದ್ದು ಮೀನು ಹಿಡಿಯಬಹುದು, ಬೋಟ್‌ ಪಡೆದು ಸುತ್ತಾಡಬಹುದು. ಉತ್ತಮ ಅನ್ನಿಸುವ ಹಲವು ಅಂಶ ಇಲ್ಲಿದೆ.

ನೀವು ಅಲ್ಲಿದ್ದ ಸಂದರ್ಭ ಕಡಲ ತೀರದಲ್ಲಿ ನಿಮಗೆ ಉತ್ತಮ ಸ್ಥಳೀಯ ಖಾದ್ಯಗಳು ಸಿಗುತ್ತವೆ. ಅಲ್ಲದೇ ಲಕ್ಷದ್ವೀಪದ ನಾಗರಿಕರು ಸಮುದ್ರ ಜೀವಿಗಳ ಸ್ವಾದಿಷ್ಟ ತಿನಿಸು ಸಿದ್ಧಪಡಿಸುವ ಕಲೆ ಹೊಂದಿದ್ದಾರೆ. ಅಲ್ಲದೇ ಈ ದ್ವೀಪವು ವಿಶ್ವದಲ್ಲಿ ಸಾಕಷ್ಟು ಪ್ರಸಿದ್ಧ ಟೂನಾ ಮೀನು ಹಿಡಿಯುವ ತಾಣವೂ ಆಗಿದೆ. ಅಗತ್ತ ದ್ವೀಪದ ಯಾವ ಭಾಗದಲ್ಲಿಯೂ ಮದ್ಯಪಾನ ಮಾಡಲು ಅವಕಾಶವಿಲ್ಲ. ಇಲ್ಲಿ ಬಂದವರು ನಂತರ ಬಂಗಾರಂ ದ್ವೀಪವನ್ನು ಸಂದರ್ಶಿಸಬಹುದು. ಇದು ಇಲ್ಲಿನ ಇನ್ನೊಂದು ಜನಪ್ರಿಯ ದ್ವೀಪವಾಗಿದೆ. ಲಕ್ಷದ್ವೀಪದ ಸರಣಿ ದ್ವೀಪಗಳಲ್ಲಿ ಇದು ಅತ್ಯಂತ ಜನಪ್ರಿಯವಾದುದರಲ್ಲಿ ಒಂದೆನಿಸಿದೆ. ಇಲ್ಲಿ ಮದ್ಯಪಾನಕ್ಕೆ ಅವಕಾಶವಿದೆ.

One Way
Return
From (Departure City)
To (Destination City)
Depart On
15 Sep,Sun
Return On
16 Sep,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Sep,Sun
Check Out
16 Sep,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Sep,Sun
Return On
16 Sep,Mon
 • Today
  Lakshadweep
  29 OC
  84 OF
  UV Index: 7
  Partly cloudy
 • Tomorrow
  Lakshadweep
  29 OC
  84 OF
  UV Index: 7
  Partly cloudy
 • Day After
  Lakshadweep
  29 OC
  84 OF
  UV Index: 7
  Partly cloudy

Near by City