Search
  • Follow NativePlanet
Share
ಮುಖಪುಟ » ಸ್ಥಳಗಳು » ಲಕ್ಷದ್ವೀಪ » ಆಕರ್ಷಣೆಗಳು » ಬಂಗಾರಂ

ಬಂಗಾರಂ, ಲಕ್ಷದ್ವೀಪ

2

ನವವಿವಾಹಿತರು ಮಧುಚಂದ್ರಕ್ಕೆ ಆಗಮಿಸುವ ಅತ್ಯಂತ ಪ್ರಶಸ್ತ ತಾಣ ಬಂಗಾರಂ ದ್ವೀಪ. ಇದು ಆ ಉದ್ದೇಶಕ್ಕಾಗಿಯೇ ಇದೆಯೇನೋ ಎಂಬಷ್ಟು ಪ್ರಸಿದ್ಧಿ ಹೊಂದಿದೆ. ಲಕ್ಷದ್ವೀಪ ಹೊಂದಿರುವ ದ್ವೀಪ ಸಮೂಹಗಳಲ್ಲಿ ಇದೊಂದು ಜನಪ್ರಿಯ ದ್ವೀಪವಾಗಿದೆ. ಅತಿಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಅಗತ್ತಿ ನಂತರ ಇದೊಂದೇ ದ್ವೀಪದಲ್ಲಿ ಡೊಮೆಸ್ಟಿಕ್‌ ವಿಮಾನ ನಿಲ್ದಾಣ ಸೌಲಭ್ಯ ಇರುವುದು.

ಇತರೆ ದ್ವೀಪಗಳಿಗೆ ಹೋಲಿಸಿದರೆ ಬಂಗಾರಂನಲ್ಲಿ ಸಾಕಷ್ಟು ಕಾಟೇಜ್‌ಗಳಿವೆ. 60 ಲಕ್ಸುರಿ ಕಾಟೇಜ್‌ ಹೊಂದಿದ ಶ್ರೇಯ ಇದರದ್ದು. ಇಲ್ಲಿನ ಕಡಲ ತೀರ ಅತ್ಯಂತ ಸುಮಧುರ ನೋಟವನ್ನು ಹೊಂದಿದ್ದು, ಕೆಲ ಕಾಲ ಕಳೆಯಲು ಹೇಳಿ ಮಾಡಿಸಿದಂತಿವೆ. ಇಲ್ಲಿ ಯಾವುದೇ ಆಹಾರವನ್ನು ಬೇಕಾದರೂ ಸವಿಯುವ ವಿಶಿಷ್ಟ ಅವಕಾಶವಿದೆ. ಪ್ರತಿ ರೆಸ್ಟೊರೆಂಟ್‌ಗಳೂ ಪರಸ್ಪರ ಸಂಪರ್ಕ ಹೊಂದಿದ್ದು, ಏನೇ ಬಯಸಿದರೂ ತಕ್ಷಣ ಪೂರೈಸುವ ವಿನೂತನ ವಿಧಾನ ಇಲ್ಲಿನ ಯಶಸ್ಸಿಗೆ ಕಾರಣವಾಗಿದೆ. ಇಲ್ಲಿನ ತೀರ ಪ್ರದೇಶಗಳು ಅತ್ಯಂತ ವಿಶಿಷ್ಟವಾಗಿ ಗೋಚರಿಸುತ್ತವೆ. ಸಾಕಷ್ಟು ತೀರಗಳು ಹಾಗೂ ವೈವಿಧ್ಯಮಯ ಪಕ್ಷಿ ಸಂಕುಲಗಳ ಆಗರವೇ ಇಲ್ಲಿದೆ. ಇದರಿಂದಲೇ ಈ ಪ್ರದೇಶವು ಸಾಕಷ್ಟು ವರ್ಷದಿಂದ ಅಪಾರ ಸಂಖ್ಯೆಯಲ್ಲಿ ಪರಿಸರ ಪ್ರೇಮಿಗಳು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ತರಹೇವಾರಿ ವಿಧದ ಪಕ್ಷಿಗಳು, ಮೀನುಗಳು, ಮುಳ್ಳುಹಂದಿ, ಗಿಳಿ ಸಂಕುಲಗಳು ಇಲ್ಲಿ ಗಮನಸೆಳೆಯುತ್ತವೆ.

ಸ್ಕೂಬಾ ಹಾಗೂ ಸ್ನೋರ್‌ಕಿಲ್ಲಿಂಗ್‌ ಅನುಭವ ಇಲ್ಲಿನ ಅತ್ಯಾಕರ್ಷಕ ಸ್ಥಳ ಪೀಠಿಕೆಯನ್ನು ನೀಡುತ್ತದೆ. ನೀರಿನಿಂದ ಆವರಿಸಿಕೊಂಡಿರುವ ಪ್ರದೇಶ ನಿಜಕ್ಕೂ ರಮಣೀಯ. ಬಂಗಾರಂ ದ್ವೀಪ ನೀರಿನೊಳಗಿನ ಹಲವು ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತದೆ. ಇದರ ತಜ್ಞತೆಯನ್ನೂ ಇಲ್ಲಿ ಸಂಪಾದಿಸಲಾಗಿದೆ. ಸಾಲು ಸಾಲಾಗಿ ಕಡಲ ತೀರ ಗೋಚರಿಸುವ ಈ ಪ್ರದೇಶದಲ್ಲಿ ವಾಯು ವಿಹಾರ ಮಾಡಬಹುದು. ತೆಂಗಿನ ಮರಗಳಿಂದ ಆವೃತ್ತವಾಗಿರುವ ತೀರ ಸುಮಾರು 120 ಎಕರೆ ಪ್ರದೇಶವನ್ನು ಆವರಿಸಿದೆ. ಇಲ್ಲಿನ ಪ್ರಸಿದ್ಧ ಬಂಗಾರಂ ಐಲ್ಯಾಂಡ್‌ ರೆಸಾರ್ಟ್ (ಬಿಐಎಸ್‌ ಅಂತಲೇ ಜನಪ್ರಿಯ) ಕಡಲ ತೀರದ ಚಟುವಟಿಕೆಗೆ ಇಂಬು ಕೊಡುತ್ತದೆ. ಪ್ರಮುಖವಾಗಿ ಹಾಮೋಕ್ಸ್‌, ಶೇಕ್ಸ್‌, ಅಂಬ್ರೇಲಾಗಳನ್ನು ಒಳಗೊಂಡಿದ್ದು ಪರಿಪೂರ್ಣ ಮಧ್ಯಾಹ್ನದ ನಂತರದ ಅವಧಿಯನ್ನು ಪುಸ್ತಕದ ಓದು ಹಾಗೂ ಇತರೆ ಸಣ್ಣಪುಟ್ಟ ಕೆಲಸದೊಂದಿಗೆ ಕಳೆಯಲು ಅನುಕೂಲಕರವಾಗಿದೆ. ಕಡಲ ತೀರದಲ್ಲಿ ಬಿಳಿ ಬಣ್ಣದ ಅಲೆಗಳು ಮನಸೆಳೆಯುತ್ತವೆ. ನಾಲ್ಕು ಹೆಜ್ಜೆ ಇವುಗಳೊಂದಿಗೆ ನಡೆಯುವುದು ಅತ್ಯಂತ ಸುಮಧುರ. ಅಲ್ಲದೇ ಲಕ್ಷದ್ವೀಪದ ಎಲ್ಲಾ ದ್ವೀಪ ಸಮೂಹಗಳಲ್ಲಿ ಇಲ್ಲಿ ಮಾತ್ರ ಮದ್ಯಪಾನಕ್ಕೆ ಅವಕಾಶವಿದೆ.

ಅಲ್ಲದೇ ಬಂಗಾರಂ ತಲುಪುವುದು ಕೂಡ ಅತ್ಯಂತ ಸುಲಭ. ವಿಮಾನದ ಮೂಲಕ ಅಗತ್ತಿಗೆ ಬಂದು ಅಲ್ಲಿಂದ ಬೋಟ್‌ ಪಡೆದು ಇಲ್ಲಿಗೆ ಬರಬಹುದು. ಇಲ್ಲವಾದರೆ ಕೊಚ್ಚಿಯಿಂದ ನೇರವಾಗಿ ಸಾಕಷ್ಟು ಹಡಗು ಸಂಪರ್ಕ ಇಲ್ಲಿಗಿದೆ. ನೇರವಾಗಿಯೂ ಆಗಮಿಸಬಹುದು. ಅಲ್ಲದೇ ಅಗತ್ತಿ ಮಾರ್ಗವಾಗಿ ಹೆಲಿಕ್ಯಾಪ್ಟರ್‌ ಸೇವೆ ಪಡೆದು ಬಂಗಾರಂ ತಲುಪಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat

Near by City