Search
  • Follow NativePlanet
Share
ಮುಖಪುಟ » ಸ್ಥಳಗಳು » ಲಕ್ಷದ್ವೀಪ » ಆಕರ್ಷಣೆಗಳು » ಸುಹೇಲಿ ಪಾರ್

ಸುಹೇಲಿ ಪಾರ್, ಲಕ್ಷದ್ವೀಪ

1

ಸುಹೇಲಿ ಪಾರ್‌ ದ್ವೀಪಗಳ ಸಮೂಹವಾಗಿದೆ. ಸುಹೇಲಿ ವಲಿಯಂಕರ ಹಾಗೂ ಸುಹೇಲಿ ಚೆರಿಯಂಕರ ಎಂಬ ಎರಡು ಚಿಕ್ಕ ದ್ವೀಪಗಳ ಸಮೂಹವಾಗಿದೆ. ಇದು ಅಗತ್ತಿ ದ್ವೀಪದಿಂದ ದಕ್ಷಿಣ ಭಾಗದಲ್ಲಿ 75 ಕಿ.ಮೀ. ದೂರದಲ್ಲಿದೆ. ಈ ಎರಡೂ ದ್ವೀಪಗಳೂ ಮೊಟ್ಟೆಯಾಕಾರದಲ್ಲಿರುವ ಸಮುದ್ರ ನೀರಿನಿಂದ ನಿರ್ಮಿತವಾದ ಸರೋವರವನ್ನು ಒಳಗೊಂಡಿವೆ. ಹಸಿರು ಬಣ್ಣದ ಈ ಪ್ರದೇಶ ಸಾಕಷ್ಟು ಸಸ್ಯ ಸಂಪತ್ತನ್ನು ಹೊಂದಿದೆ. ಎರಡು ದ್ವೀಪಗಳ ನಡುವೆ ಉದ್ದನೇ ಮರಳಿನ ತೀರ ನಿರ್ಮಾಣವಾಗಿದೆ. ಇದನ್ನು ಸಹೇಲಿ ಪಿಟ್ಟಿ ಎಂದು ಕರೆಯಲಾಗುತ್ತದೆ. ಇದು ಇಳುವರಿ ಭೂಮಿಯಾಗಿದ್ದು, ಸಾಕಷ್ಟು ನೀರಾವರಿ ಬೆಳೆಯನ್ನು ಬೆಳೆಯಲಾಗುತ್ತದೆ.

ಸುಹೇಲಿ ಪಾರ್‌ ಅಕ್ಟೋಬರ್‌ನಿಂದ ಏಪ್ರಿಲ್‌ ನಡುವಿನ ಅವಧಿಯಲ್ಲಿ ಅಪಾರ ಸಂಖ್ಯೆಯ ಪ್ರವಾಸಿಗರಿಂದ ತುಂಬಿರುತ್ತದೆ. ಅಲ್ಲದೇ ಇದೇ ಸಂದರ್ಭದಲ್ಲಿ ಅಗತ್ತಿ ಹಾಗೂ ಸುತ್ತಲಿನ ನಾನಾ ಪ್ರದೇಶದಿಂದ ಮೀನುಗಾರರು ಬಂದು ತಾತ್ಕಾಲಿಕ ನೆಲೆ ರೂಪಿಸಿಕೊಳ್ಳುತ್ತಾರೆ. ಅಲ್ಲದೇ, ವ್ಯವಸ್ಥಿತ ಪ್ರವಾಸಿ ತಾಣವಾಗಿರುವ ಸುಹೇಲಿ ಪಾರ್ ಆರಾಮವಾಗಿ ಕಡಲ ತೀರದಲ್ಲಿ ಕುಳಿತು ಪ್ರಕೃತಿ ಸವಿ ಸವಿಯಲು, ಸುತ್ತಾಡಲು ಹೇಳಿ ಮಾಡಿಸಿದ ಪ್ರದೇಶವಾಗಿದೆ. ಪ್ರವಾಸ ಯೋಜನೆ ಏನಾದರೂ ರೂಪಿಸಿದ್ದರೆ ಅಗತ್ಯ ವಸ್ತುವಿನೊಂದಿಗೆ ಹೊರಡಿ. ನಗರದ ನಿತ್ಯದೊತ್ತಡ ಮರೆತು ಒಂದಿಷ್ಟು ಸಮಯ ನಿರಾಳವಾಗಿ ಕಳೆಯಲು ಇದೊಂದು ಸೂಕ್ತ ಸ್ಥಳ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue

Near by City