Search
  • Follow NativePlanet
Share
ಮುಖಪುಟ » ಸ್ಥಳಗಳು » ಲಕ್ಷದ್ವೀಪ » ಹವಾಮಾನ

ಲಕ್ಷದ್ವೀಪ ಹವಾಮಾನ

ಲಕ್ಷದ್ವೀಪ ಪ್ರದೇಶವು ಸಾಕಷ್ಟು ತೇವಾಂಶದಿಂದ ಕೂಡಿದ ವಾತಾವರಣವನ್ನು ಹೊಂದಿದೆ. ಮಳೆಗಾಲ ಮುಗಿದ ತಕ್ಷಣದಿಂದ ಬೇಸಿಗೆ ಆರಂಭಕ್ಕೆ ಮುಂಚಿನ ನಡುವಿನ ಅವಧಿಯಲ್ಲಿ ಭೇಟಿ ನೀಡಲು ಪ್ರಶಸ್ತ ವಾತಾವರಣ ಹೊಂದಿರುತ್ತದೆ. ಆಗಸ್ಟ್‌ನಿಂದ ಮಾರ್ಚ್ ನಡುವಿನ ಅವಧಿ ಪ್ರವಾಸಕ್ಕೆ ತೆರಳುವವರಿಗೆ ಉತ್ತಮ ಕಾಲ. ವಾತಾವರಣ ಕೂಡ 22 ಡಿಗ್ರಿ ಸೆಲ್ಶಿಯಸ್‌ನಿಂದ 30 ಡಿಗ್ರಿ ಸೆಲ್ಶಿಯಸ್‌ ನಡುವೆ ಇರುತ್ತದೆ.

ಬೇಸಿಗೆಗಾಲ

ಅತಿಯಾದ ಬೇಸಿಗೆಯಲ್ಲಿ ಇಲ್ಲಿನ ವಾತಾವರಣದಲ್ಲಿ ಉಷ್ಣತೆ ಪ್ರಮಾಣ 32 ಡಿಗ್ರಿ ಸೆಲ್ಶಿಯಸ್‌ಗೆ ತಲುಪುತ್ತದೆ. ತೇವಾಂಶ ಕಡಿಮೆ ಇರುವುದರಿಂದ ಇದು ಸಹನೀಯವಲ್ಲ. ಬೇಸಿಗೆಯ ಬಿಸಿ ಜತೆ ಮರಳಿನ ಕಾವು ಕೂಡ ಸೇರಿ ವಾತಾವರಣವನ್ನು ತುಂಬಾ ಬಿಸಿಯಾಗಿಸಿ ಬಿಡುತ್ತವೆ. ಈ ಸಮಯದಲ್ಲಿ ಲಕ್ಷದ್ವೀಪಕ್ಕೆ ಬರದಿರುವುದೇ ಒಳಿತು. ದ್ವೀಪವು ಬೇಸಿಗೆ ನಂತರ ಹಾಗೂ ಮುನ್ನ ಅವಧಿಗೆ ಹೋಲಿಸಿದರೆ ಮೇ ತಿಂಗಳು ಅತ್ಯಂತ ಸೆಖೆ ಕಾಲ.

ಮಳೆಗಾಲ

ವಾಯುವ್ಯ ಮಾರುತ ಸೃಷ್ಟಿಸುವ ಮಳೆ ಇಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯುತ್ತದೆ. ಭಾರತ ಉಪ ಖಂಡದಲ್ಲಿಯೂ ಈ ಸಂದರ್ಭದಲ್ಲಿ ಮಳೆ ಸಾಮಾನ್ಯ.  ಭಾರಿ ಪ್ರಮಾಣದಲ್ಲಿ ಮಳೆ ಈ ಸಂದರ್ಭದಲ್ಲಿ ಆಗುತ್ತದೆ. ನಂತರದ ದಿನದಲ್ಲೂ ಕೊಂಚ ಮಳೆ ಇಲ್ಲಿ ಆಗುತ್ತಿರುತ್ತದೆ. ಅಲ್ಲದೇ ಮಳೆಗಾಲದ ಅವಧಿಯಲ್ಲಿ ಇಲ್ಲಿ ಗಾಳಿ ಬೀಸುವ ವೇಗವೂ ಹೆಚ್ಚಿರುತ್ತದೆ.

ಚಳಿಗಾಲ

ಇಲ್ಲಿ ಯಾವತ್ತೂ ವಿಪರೀತ ಚಳಿ ಬೀಳುವ ಕಾಲ ಇರುವುದೇ ಇಲ್ಲ. ಚಳಿಗಾಲವೂ ಸಹನೀಯವಾಗಿರುತ್ತದೆ. ಸಮುದ್ರಗಾಳಿಯು ವಾತಾವರಣದ ಉಷ್ಣತೆ ಪ್ರಮಾಣವನ್ನು ಕೊಂಚ ಕಡಿಮೆ ಮಾಡುತ್ತವೆ. ಸಮ ಪ್ರಮಾಣದ ತಾಪಮಾನ ಇರುತ್ತದೆ. ಕಡಲ ತೀರದಲ್ಲಿ ವಿಹರಿಸಲು, ಹೊರ ಆವರಣ ಚಟುವಟಿಕೆಗೆ, ಸುತ್ತಾಡಲು ಇದು ಸಕಾಲ. ಸಂಜೆಯ ಹೊತ್ತು ತಾಪಮಾನ ಕೊಂಚ ಕುಸಿಯುತ್ತದೆ. ಈ ಸಂದರ್ಭದಲ್ಲಿ ವಾತಾವರಣದಲ್ಲಿ ಉಷ್ಣತೆ ಪ್ರಮಾಣ 20 ಡಿಗ್ರಿ ಸೆಲ್ಶಿಯಸ್‌ ತಲುಪುತ್ತದೆ. ಒಟ್ಟಾರೆ ಪ್ರವಾಸಕ್ಕೆ ಈ ಕಾಲ ಅತ್ಯಂತ ಯೋಗ್ಯ.