Search
  • Follow NativePlanet
Share
» »ಶಿಲೆಯಲ್ಲ ಇದು ಕಲೆಯಿಂದ ಕೂಡಿದ ಗುಡಿ

ಶಿಲೆಯಲ್ಲ ಇದು ಕಲೆಯಿಂದ ಕೂಡಿದ ಗುಡಿ

By Divya

ಕಲ್ಯಾಣ ಚಾಲುಕ್ಯರು, ಕಳಚೂರಿಗಳು, ಯಾದವರು ಹಾಗೂ ಹೊಯ್ಸಳರು ಆಳಿದ ಊರು ಲಕ್ಕುಂಡಿ. ಇದು ಗದಗ ಜಿಲ್ಲೆಯ ಚಿಕ್ಕ ಹಳ್ಳಿ ಆದರೂ ಸುಮಾರು 20 ಪ್ರಾಚೀನ ದೇಗುಲಗಳಿವೆ. ಇದನ್ನು ದೇವಾಲಯಗಳ ತವರು ಎನ್ನಬಹುದು. ಗದಗ್ ಚಿತ್ರಗಳು

ಇಲ್ಲಿಯ ಎಲ್ಲಾ ದೇವಾಲಯಗಳು ವೇಸರ ಶೈಲಿಯಲ್ಲಿದೆ. ಅದರಲ್ಲಿ ಕಾಶಿವಿಶ್ವೇಶ್ವರ ದೇಗುಲ ಹಾಗೂ ಜೈನ ದೇಗುಲ ಅತ್ಯಂತ ಹಳೆಯಕಾಲದ್ದು ಎಂದು ಹೇಳಲಾಗುತ್ತದೆ.

Temples of Karnataka - Lakkundi

PC: kashivishweshwara temple

ಕಾಶಿವಿಶ್ವೇಶ್ವರ ದೇಗುಲ
ಸುಭದ್ರವಾದ ಕಲ್ಲಿನ ಕೆತ್ತನೆಯಿಂದ ನಿರ್ಮಿಸಲಾದ ಈ ದೇಗುಲ 10ನೇ ಶತಮಾನದಲ್ಲಿಯೇ ನಿರ್ಮಾಣಗೊಂಡಿದೆ. ಈ ದೇವಾಲಯದಲ್ಲಿ ಶಿವಲಿಂಗವನ್ನು ಪೂಜಿಸಲಾಗುತ್ತದೆ. ದಪ್ಪನೆಯ ಕಂಬಗಳ ರಚನೆಯ್ನನು ಹೊಂದಿರುವ ಈ ದೇಗುಲದಲ್ಲಿ ವಿಭಿನ್ನ ಬಗೆಯ ಪ್ರಾಣಿ, ಪಕ್ಷಿ, ಹೂ ಕೆತ್ತನೆಗಳು ಸೊಗಸಾಗಿ ಮೂಡಿಬಂದಿವೆ. ಆಡಳಿತದಲ್ಲಿ ಇದ್ದ ರಾಜ್ಯದ ಲಾಂಛನವನ್ನು ಇಲ್ಲಿ ಕೆತ್ತಲಾಗಿದೆ. ಅಲ್ಲಲ್ಲಿ ಜನಸಾಮಾನ್ಯರು ಕುಳಿತುಕೊಂಡಿರುವಂತಹ ಕೆತ್ತನೆಗಳನ್ನೂ ಕಾಣಬಹುದು. ದೇಗುಲದ ಇನ್ನೊಂದು ವಿಶೇಷವೆಂದರೆ ಉತ್ತರದಿಕ್ಕಿಗೆ ಎರಡು ಬಾಗಿಲನ್ನು ಹೊಂದಿರುವುದು.

Temples of Karnataka - Lakkundi

PC: Kirtimukha relief decoration

ದೇಗುಲದ ಹೊರಗೆ ಆನೆಯ ಸೊಂಡಿಲು, ಮೊಸಳೆಯ ದೇಹ, ನವಿಲಿನ ಗರಿಯನ್ನು ಹೊಂದಿರುವ ಅಪರೂಪದ ಕೆತ್ತನೆಯ ಮೇಲೆ ಗಂಗಾ ಹಾಗೂ ವರುಣ ದೇವರು ಕುಳಿತುಕೊಂಡಿರುವು ತೋರುತ್ತದೆ. ಐದು ಅಡಿ ಎತ್ತರದ ದರ್ಪಣ ಸುದರಿಯ ಕೆತ್ತನೆಗಳಿರುವುದು ಸುಂದರ. ಅಲ್ಲೇ ಹೊರಗಡೆ ಅಪರೂಪದ ಸೂರ್ಯನಾರಾಯಣ ಹಾಗೂ ನನ್ನೇಶ್ವರ ದೇಗುಲವಿರುವುದು ವಿಶೇಷ.

Temples of Karnataka - Lakkundi

PC: Jain temple Lakkundi

ಬ್ರಹ್ಮ ಜೀನಾಲಯ ದೇಗುಲ
11ನೇ ಶತಮಾನದಲ್ಲಿಯೇ ನಿರ್ಮಾಣಗೊಂಡ ದೇಗುಲವಿದು. ಅತ್ತಿಮಬ್ಬೆ ರಾಣಿಯು ಕನ್ನಡ ಸಾಹಿತ್ಯ ಹಾಗೂ ಜೈನಧರ್ಮವನ್ನು ಬಹಳ ಪ್ರೀತಿಸುತ್ತಿದ್ದುದರಿಂದ ರನ್ನ, ಪೊನ್ನರ ಸಾಹಿತ್ಯವನ್ನು ಪ್ರೋತ್ಸಾಹಿಸುತ್ತಿದ್ದಳು ಎನ್ನಲಾಗುತ್ತದೆ. ಇದಕ್ಕೆ ಪ್ರತಿಬಿಂಬವಾಗಿ ಅಲ್ಲಿರುವ ಕನ್ನಡ ಲಿಪಿಯ ಕೆತ್ತನೆಯನ್ನು ಕಾಣಬಹುದು.

Temples of Karnataka - Lakkundi

PC: kannada script

ಈ ದೇಗುಲ ಗರ್ಭಗೃಹ, ಮುಖ ಮಂಟಪ, ನುಣುಪಾದ ಕಂಬಗಳಿರುವುದನ್ನು ಕಾಣಬಹುದು. ನಾಲ್ಕು ಅಡಿ ಎತ್ತರದ ಮಹಾವೀರ ತೀರ್ಥಂಕರರ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇಡಲಾಗಿದೆ. ಈ ದೇಗುಲದ ಇನ್ನೊಂದು ವಿಚಾರವೆಂದರೆ ಚತುರ್ಮುಖ ಮಹಾವೀರ ಮೂರ್ತಿ ಇರುವುದು. ಇದು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುವಂತಿದೆ.

Temples of Karnataka - Lakkundi

PC: temple entrence

ಲಕ್ಕುಂಡಿ ದೇಗುಲಗಳು
ಇಲ್ಲಿರುವ ಕೆಲವು ದೇವಾಲಯಗಳೆಂದರೆ ಹಲಗುಂದ ಬಸವಣ್ಣ ದೇಗುಲ, ಲಕ್ಷ್ಮೀನಾರಾಯಣ ದೇಗುಲ, ಮಲ್ಲಿಕಾರ್ಜುನ ದೇಗುಲ, ಮಣಿಕೇಶವ ದೇಗುಲ, ನೀಲಕಂಠೇಶ್ವರ ದೇಗುಲ, ವೀರಭದ್ರ ದೇಗುಲ, ವಿಶ್ವನಾಥ ದೇಗುಲ, ವಿರೂಪಾಕ್ಷ ದೇಗುಲ. ಇಲ್ಲಿರುವ ಹೆಚ್ಚಿನ ದೇವಸ್ಥಾನವು ಶಿವನ ದೇಗುಲವೇ ಆಗಿದೆ.
ಸುಂದರ ಶಿಲ್ಪಕಲೆಯ ವಿಸ್ಮಯಕರ ಲಕ್ಕುಂಡಿ

ಹತ್ತಿರದ ಆಕರ್ಷಣೆ
ಬಸವೇಶ್ವರ ಮೂರ್ತಿ, ಬಿಂಕದಕಟ್ಟೆ ಪ್ರಾಣಿ ಸಂಗ್ರಹಾಲಯ, ತ್ರಿಕುಟೇಶ್ವರ ದೇಗುಲ, ಸರಸ್ವತಿ ದೇಗುಲ, ವೀರನಾರಾಯಣ ದೇಗುಲ.

Temples of Karnataka - Lakkundi

PC: chatur mukha statue

ಸಾಗುವ ದೂರ
439.9 ಕಿ.ಮೀ ದೂರ ಇರುವ ಈ ದೇಗುಲಕ್ಕೆ 7 ತಾಸುಗಳ ಪಯಣ ಮಾಡಬೇಕು. ವಾರಕ್ಕೊಮ್ಮೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಲು ವಿಮಾನಿನ ವ್ಯವಸ್ಥೆ ಇದೆ. ಹುಬ್ಬಳ್ಳಿಗೆ ಬಂದರೆ ನಂತರ ಲಕ್ಕುಂಡಿಗೆ ಹೋಗಬಹುದು.

Read more about: travel temples gadag

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more