Search
  • Follow NativePlanet
Share
» »ಲಡಾಖ್ : ಭಾರತ, ಚೀನಾ ಗಡಿಯ ಖಡಕ್ ಸೌಂದರ್ಯ

ಲಡಾಖ್ : ಭಾರತ, ಚೀನಾ ಗಡಿಯ ಖಡಕ್ ಸೌಂದರ್ಯ

By Vijay

ಅತಿ ಎತ್ತರದ ದಾರಿಗಳು ಎಂದರೇನು ಗೊತ್ತೆ? ಜಗತ್ತಿನ ಅತಿ ಎತ್ತರದ ದಾರಿಗಳ ಕುರಿತು ಏನಾದರೂ ಕೇಳಿರುವಿರಾ? ಗೊತ್ತಿಲ್ಲಾ ಅಂದಾದರೆ ಅಥವಾ ತಿಳಿಯಲು ಹಂಬಲವಿದ್ದರೆ ಈ ಲೇಖನದಲ್ಲಿ ಪರಿಚಯಿಸಲಾದ ಲಡಾಖ್ ಕುರಿತು ತಿಳಿಯಿರಿ. "ಅತಿ ಎತ್ತರದ ರಹದಾರಿಗಳ (ಪಾಸ್) ನಾಡು" ಎಂದೆ ಇದನ್ನು ಕರೆಯಲಾಗುತ್ತದೆ. ಸಮುದ್ರ ಮಟ್ಟದದಿಂದ ಸಾವಿರಾರು ಮೀಟರ್ ಗಳಷ್ಟು ಎತ್ತರದಲ್ಲಿ ನೆಲೆಸಿರುವ ಲಡಾಖ್, ಖಡಕ್ ಸೌಂದರ್ಯವಿರುವ ಹೆಚ್ಚು ಕಡಿಮೆ ನಿರ್ಜನವಾದ ಭಾರತದ ಅತಿ ರಮಣೀಯ ಪ್ರದೇಶವಾಗಿದೆ.

ನೀವು ಗಟ್ಟಿ ಗುಂಡಿಗೆಯುಳ್ಳವರಾಗಿದ್ದು, ಸಾಹಸಪ್ರಿಯರಾಗಿದ್ದರೆ ಲಡಾಖ್ ಪ್ರದೇಶದ ನಾನಾ ಆಕರ್ಷಣೆಗಳನ್ನು ಅನ್ವೇಷಿಸಿ ನಿಮ್ಮ ಕಣ್ತುಂಬಿಕೊಳ್ಳಬಹುದು. ಸಾಮಾನ್ಯವಾಗಿ ಲಡಾಖ್ ಪ್ರದೇಶದಲ್ಲಿ ವಿಪರೀತವಾದ ವಾತಾವರಣವಿರುವುದರಿಂದ ಪ್ರಯಾಣಿಸಲು ಕಷ್ಟವಾಗಿರುತ್ತದೆ. ಆದರೆ ಕಷ್ಟವೆಂದು ಕೂಡುವ ಹಾಗಿಲ್ಲ, ಏಕೆಂದರೆ ಕಷ್ಟದ ತೀವ್ರತೆಯ ಮೇಲೆ ಸುಖದ ಪರಮಾನಂದ ಲಭಿಸುವ ಹಾಗೆ ಕಣ್ ಕೊರೆಸುವಂತಹ ಅತಿ ಸುಂದರ ನೋಟವು ಲಡಾಖ್ ನಲ್ಲಿ ಸುತ್ತಾಡಿದಾಗ ದೊರಕುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಮುಂಜಾಗೃತೆಯನ್ನು ವಹಿಸುವುದು ಅಷ್ಟೆ ಮುಖ್ಯ.

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಜಮ್ಮು ಕಾಶ್ಮೀರ ರಾಜ್ಯದಲ್ಲಿರುವ ಲಡಾಖ್ ಕುನ್ಲುನ್ ಹೈಮಾಲಯ ಪರ್ವತ ಶ್ರೇನಿಗಳ ಮಧ್ಯದಲ್ಲಿ ನೆಲೆಸಿದೆ.

ಚಿತ್ರಕೃಪೆ: babasteve

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಈ ಪ್ರದೇಶದ ಸಂಸ್ಕೃತಿ ಆಚಾರಗಳು ವಿಭಿನ್ನವಾಗಿದ್ದು, ಹೆಚ್ಚಾಗಿ ಇಲ್ಲಿ ಇಂಡೊ ಆರ್ಯನ್ ಹಾಗು ಟಿಬೆಟ್ ಮೂಲದ ಜನರು ವಾಸವಾಗಿರುವುದನ್ನು ಕಾಣಬಹುದು.

ಚಿತ್ರಕೃಪೆ: Incomposition

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಐತಿಹಾಸಿಕವಾಗಿ ಲಡಾಖ್ ಪ್ರದೇಶವು ದಕ್ಷಿಣಕ್ಕೆ ಬಾಲ್ಟಿಸ್ತಾನ್ ಕಣಿವೆ, ಸಿಂಧು ಕಣಿವೆ, ಝಂನ್ಸ್ಕಾರ್, ಲಾಹೌಲ್ ಹಾಗು ಸ್ಪಿಟಿಗಳನ್ನು, ಪೂರ್ವಕ್ಕೆ ಅಸ್ಕೈ ಚಿನ್, ರುಡೊಕ್ ಗಳನ್ನು ಹಾಗು ಉತ್ತರಕ್ಕೆ ನುಬ್ರಾ ಕಣಿವೆಗಳನ್ನು ಒಳಗೊಂಡಿತ್ತು.

ಚಿತ್ರಕೃಪೆ: Kunal Mukherjee

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಪ್ರಸ್ತುತ ಲಡಾಖ್ ಪ್ರದೇಶವು ಪೂರ್ವಕ್ಕೆ ಟಿಬೆಟ್, ದಕ್ಷಿಣಕ್ಕೆ ಲಾಹೌಲ್ ಮತ್ತು ಸ್ಪಿಟಿ, ಪಶ್ಚಿಮಕ್ಕೆ ಜಮ್ಮು ಮತ್ತು ಬಾಲ್ಟಿಯೂಲ್ ಗಳನ್ನು ಒಳಗೊಂಡಿದೆ. ಉತ್ತರಕ್ಕೆ ಅತಿ ದೂರದಲ್ಲಿ ಕುನ್ಲೂನ್ ಹಾಗು ಕ್ಸಿನಿಜಿಯಾಂಗ್ ಗಳನ್ನು ಒಳಗೊಂಡಿದೆ.

ಚಿತ್ರಕೃಪೆ: GerthMichael

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಹಿಂದೆ ವ್ಯಾಪಾರ ವಹಿವಾಟು ಉದ್ದೇಶದಿಂದ ವಿವಿಧ ಪ್ರದೇಶಗಳಿಗೆ ಹೋಗಿ ಬರಲು ಲಡಾಖ್ ಆಧಾರ ತಾಣವಾಗಿ ಸೇವೆ ಸಲ್ಲಿಸುತ್ತಿದ್ದುದರಿಂದ ಮಹತ್ವದ ಸ್ಥಾನ ಪಡೆದಿತ್ತು.

ಚಿತ್ರಕೃಪೆ: Karunakar Raykar

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಆದರೆ 1960 ರ ದಶಕದಲ್ಲಿ ಚೀನಾ ದೇಶವು ಟಿಬೆಟ್ ಹಾಗು ಮಧ್ಯ ಏಷಿಯಾಗಳಿಗೆ ಹೋಗಲು ಸುಗಮವಾಗಿದ್ದ ತನ್ನ ಗಡಿಯನ್ನು ಮುಚ್ಚಿತೊ ಅಂದಿನಿಂದ ವ್ಯಾಪಾರವು ಹೆಚ್ಚು ಕಡಿಮೆ ಸ್ಥಗಿತವಾಯಿತು. ಆದರೆ ಪ್ರವಾಸೋದ್ಯಮದ ದೃಷ್ಟಿಯಿಂದ ಇದು ಇನ್ನೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ.

ಚಿತ್ರಕೃಪೆ: Malikbek

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

1974 ರಲ್ಲಿ ಭಾರತ ಸರ್ಕಾರವು ಲಡಾಖ್ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿತು. ಅಲ್ಲದೆ ಜಮ್ಮು ಕಾಶ್ಮೀರ ರಾಜ್ಯದ ಮಹತ್ವದ ಪ್ರದೇಶ ಇದಾಗಿರುವುದರಿಂದ ಭಾರತೀಯ ಸೈನ್ಯದ ಗಟ್ಟಿಯಾದ ನೆಲೆಯನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: DanHobley

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಲಡಾಖ್ ಪ್ರದೇಶದ ಅತಿ ದೊಡ್ಡ ಪಟ್ಟಣವೆಂದರೆ ಲೇಹ್. ನಂತರದ ಸ್ಥಾನದಲ್ಲಿ ಕಾರ್ಗಿಲ್ ಬರುತ್ತದೆ. ಇಲ್ಲಿ ವಾಸಿಸುವರನ್ನು ಲಡಾಖಿಗಳು ಎಂದು ಕರೆಯುವುದುಂಟು. ಹೆಚ್ಚು ಕಡಿಮೆ ಅರ್ಧದಷ್ಟು ಲಡಾಖಿಗಳು ಟಿಬೆಟ್ ಮೂಲದ ಬೌದ್ಧರಾಗಿದ್ದು ಉಳಿದವರು ಶಿಯಾ ಮುಸ್ಲಿಮ್ ಪಂಗಡದವರಾಗಿದ್ದಾರೆ.

ಚಿತ್ರಕೃಪೆ: Incomposition

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಲಡಾಖ್ ಅಕ್ಷರಶಃ ಸೌಂದರ್ಯದ ಖಣಿಯಾಗಿದ್ದು, ಚಾರಣ ಹೋಗಲು ಇಲ್ಲವೆ ಸುತ್ತಾಡಲು ಸಾಕಷ್ಟು ಗಮ್ಯವಾದ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ. ಮುಂದಿನ ಸ್ಲೈಡುಗಳಲ್ಲಿ ಒಂದೊಂದಾಗಿ ಇಲ್ಲಿ ಆಕರ್ಷಣೆಗಳ ಕುರಿತು ತಿಳಿಯಿರಿ.

ಚಿತ್ರಕೃಪೆ: Margarita

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಲೇಹ್ ಲಡಾಖ್ ಪ್ರದೇಶದ ಅತಿ ದೊಡ್ಡ ಹಾಗು ಮನಮೋಹಕವಾದ ಪಟ್ಟಣವಾಗಿದೆ. ಲೇಹ್ ಪ್ಯಾಲೇಸ್ ಅಥವಾ ಅರಮನೆ ಇಲ್ಲಿ ನೋಡಬಹುದಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಅಸಾಮಾನ್ಯವಾಗಿ ಲೇಹ್ ನಲ್ಲಿ ಕಂಡುಬರುವ ಸೂರ್ಯಾಸ್ತ ಹಾಗೂ ಚಂದ್ರೋದಯದ ದೃಶ್ಯ.

ಚಿತ್ರಕೃಪೆ: 100rabpec

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಸುಂದರವಾಗಿ ಕಂಗೊಳಿಸುವ ಲೇಹ್ ಪಟ್ಟಣದ ಒಂದು ನೋಟ.

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ದ್ರಾಸ್ ಕಣಿವೆ, ಕಾರ್ಗಿಲ್ ಜಿಲ್ಲೆಯ ದ್ರಾಸ್ ಪಟ್ಟಣದಲ್ಲಿ ಇದನ್ನು ಕಾಣಬಹುದು. ಇದನ್ನು ಲಡಾಖ್ ನ ದ್ವಾರ ಎಂದೂ ಕೂಡ ಕರೆಯಲಾಗುತ್ತದೆ. ಚಾರಣಕ್ಕೆ ಉತ್ತಮವಾದ ಈ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು 3280 ಮೀ. ಗಳಷ್ಟು ಎತ್ತರದಲ್ಲಿದೆ.

ಚಿತ್ರಕೃಪೆ: Rohan

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಸುರು ಕಣಿವೆಯು ಸುರು ಕೆರೆಯನ್ನು ಹೊಂದಿರುವ ಆಕರ್ಷಣೀಯ ಪ್ರವಾಸಿ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 4400 ಮೀ. ಗಳಷ್ಟು ಎತ್ತರದಲ್ಲಿರುವ ಈ ಪ್ರದೇಶವು ಝನ್ಸ್ಕಾರ್ ಕಣಿವೆಯನ್ನು ಸಂಪರ್ಕಿಸುತ್ತದೆ.

ಚಿತ್ರಕೃಪೆ: T. R. Shankar Raman

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಕಾರ್ಗಿಲ್ ಲಡಾಖ್ ಪ್ರದೇಶದ ಎರಡನೇಯ ದೊಡ್ಡ ಪಟ್ಟಣ. ಕೆಚ್ಚೆದೆಯ ಭಾರತೀಯ ಯೋಧರು ಶತ್ರುಗಳನ್ನು ಮೆಟ್ಟಿ ನಿಂತ ತಾಣವಿದು. ಇದು ಕೂಡ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Saurabh Lall

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಕಾರ್ಗಿಲ್ ಜಿಲ್ಲೆಯ ತೆಹ್ಸಿಲ್ ಅಥವಾ ತಾಲೂಕು ಪ್ರದೇಶವಾಗಿದೆ ಝಂನ್ಸ್ಕಾರ್. ಇಲ್ಲಿ ಕಂಡುಬರುವ ಝಂಸ್ಕಾರ್ ಪರ್ವತ ಶ್ರೇಣಿಯು ಸಮುದ್ರ ಮಟ್ಟದಿಂದ 6000 ಮೀ. ಗಳಷ್ಟು ಎತ್ತರವಿದ್ದು ಝಂಸ್ಕಾರ್ ಹಾಗು ಲಡಾಖ್ ಗಳನ್ನು ಪ್ರತ್ಯೇಕಿಸುತ್ತದೆ.

ಚಿತ್ರಕೃಪೆ: Shakti

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಝಂಸ್ಕಾರ್ ಶ್ರೇಣಿಯಲ್ಲಿ ಕಂಡುಬರುವ ಜೋ ಜಿ ಲಾ ರಹದಾರಿಯು ಅತಿ ಎತ್ತರದಲ್ಲಿರುವ ರಹದಾರಿಗಳ ಪೈಕಿ ಒಂದಾಗಿದೆ. ಇಲ್ಲಿ ವಾಹನವನ್ನು ಓಡಿಸುವುದೆಂದರೆ ಚಳಿಯಲ್ಲೂ ಮೈ ಬೆವರಿದಂತಾಗುತ್ತದೆ.

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ನಿಸರ್ಗದ ವಿವಿಧ ಚಿತ್ತಾರಗಳನ್ನು ಹೊದ್ದು ನಿಂತು ಕಂಗೊಳಿಸುತ್ತಿರುವ ಲಡಾಖ್ ನ ಲಾಮಾಯೂರ್ ಪ್ರದೇಶ.

ಚಿತ್ರಕೃಪೆ: Hamon jp

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಬಾರಾ ಲಾಚಾ ಲಾ ಝಂನ್ಸ್ಕಾರ್ ಶ್ರೇಣಿಯಲ್ಲಿರುವ ಹಿಮಾಚಲ ಪ್ರದೇಶದ ಲಾಹೌಲ್ ಅನ್ನು ಲಡಾಖ್ ನೊಂದಿಗೆ ಸಂಪರ್ಕಿಸುವ ಎತ್ತರದ ರಹದಾರಿಯಾಗಿದೆ. ಇಲ್ಲಿನ ಸೌಂದರ್ಯವು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ಚಿತ್ರಕೃಪೆ: GerthMichael

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ದೇಶದ ಮತ್ತೊಂದು ಅತಿ ಎತ್ತರದ ತಾಣ ಚಾಂಗ್ ಲಾ. ಲೇಹ ಪಟ್ಟಣದಿಂದ ಸುಂದರವಾದ ಪ್ಯಾಂಗಾಂಗ್ ಕೆರೆಗೆ ಹೋಗುವಾಗ ದೊರಕುವ ಸುಂದರ ರಹದಾರಿ ಇದಾಗಿದೆ.

ಚಿತ್ರಕೃಪೆ: SlartibErtfass der bertige

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಲಡಾಖ್ ಪ್ರದೇಶದಲ್ಲಿ ಹರಿದಿರುವ ಇಂಡಸ್ ಹಾಗೂ ಝಂನ್ಸ್ಕಾರ್ ನದಿಗಳ ಸಂಗಮ ಹೊಂದುವ ತಾಣ. ನೋಡಲು ನಯನ ಮನೋಹರವಾದ ನೋಟವನ್ನು ಇದು ಕರುಣಿಸುತ್ತದೆ.

ಚಿತ್ರಕೃಪೆ: Bodhisattwa

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ದ್ರಂಗ್ ದ್ರುಂಗ್ ಹಿಮ ನದಿಯು ಲಡಾಖ್ ಪ್ರದೇಶದಲ್ಲಿ ಕಾಣಬಹುದಾದ ಮತ್ತೊಂದು ಆಕರ್ಷಣೆ. ಪೆನ್ಸಿ ಲಾ ಪರ್ವತ ರಹದಾರಿಯ ಬಳಿ ನೆಲೆಸಿರುವ ಈ ಹಿಮನದಿಯು ಕಾರ್ಗಿಲ್ - ಝಂನ್ಸ್ಕಾರ್ ರಸ್ತೆಯ ಬಳಿ ಸ್ಥಿತವಿದೆ.

ಚಿತ್ರಕೃಪೆ: Baumgartnerphotography

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಲಡಾಖ್ ಪ್ರದೇಶದ ಮರ್ಖಾ ಕಣಿವೆಯ ಕೊನೆಯಲ್ಲಿರುವ ಕಂಗ್ ಯಾಜೆ (Kang Yatze), ಸಮುದ್ರ ಮಟ್ಟದಿಂದ 6000 ಮೀ. ಗಳಷ್ಟು ಎತ್ತರದಲ್ಲಿರುವ ಒಂದು ನಯನ ಮನೋಹರ ಪರ್ವತವಾಗಿದೆ.

ಚಿತ್ರಕೃಪೆ: SlartibErtfass der bertige

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಲಡಾಖ್ ಪ್ರದೇಶದಲ್ಲಿರುವ ಖರ್ದಂಗ್ ಲಾ ಪರ್ವತ ರಹದಾರಿಯು ಜಗತ್ತಿನ ಅತಿ ಎತ್ತರದ ವಾಹನ ಚಲಾಯಿಸಬಹುದಾದ ಪರ್ವತ ರಹದಾರಿಯಾಗಿದೆ.

ಚಿತ್ರಕೃಪೆ: Michael Day

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಲಡಾಖ್ ಪ್ರದೇಶದ ರಾಜಧಾನಿ ಪಟ್ಟಣವಾದ ಲೇಹ್ ನಿಂದ ಸುಮಾರು 150 ಕಿ.ಮೀ ದೂರದಲ್ಲಿದೆ ನುಬ್ರಾ ಕಣಿವೆ. ಈ ಮೂಲಾರ್ಥ ಹೂ ಗಳ ಕಣಿವೆ ಎಂದಾಗುತ್ತದೆ. ಸಮುದ್ರ ಮಟ್ಟದಿಂದ 10000 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಕಣಿವೆಯು ನೋಡಲು ನಯನ ಮನೋಹರವಾದ ಪ್ರದೇಶವಾಗಿದೆ.

ಚಿತ್ರಕೃಪೆ: John Hill

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ನಯನ ಮನೋಹರವಾಗಿ ಗೋಚರಿಸುವ ನುಬ್ರಾ ಕಣಿವೆಯ ಮತ್ತೊಂದು ನೋಟ.

ಚಿತ್ರಕೃಪೆ: Ranzen

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಲೇಹ್ ಪಟ್ಟಣದಿಂದ ಐದು ಘಂಟೆಯಷ್ಟು ಪ್ರಯಾಣಾವಧಿಯ ದೂರದಲ್ಲಿ ಕಂಡುಬರುವ ಪ್ಯಾಂಗಾಂಗ್ ಕೆರೆಯು ನಿಸರ್ಗ ಅತಿ ಸುಂದರ ಕೊಡುಗೆಯಾಗಿದೆ. ಈ ಲವಣಯುಕ್ತ ನೀರಿನಲ್ಲಿ ಮೀನುಗಳಂತಹ ಯಾವುದೇ ಜಲಚರಗಳಿಲ್ಲದಿದ್ದರೂ ಕೆಲವು ಚಿಪ್ಪುಹುಳುಗಳು ಹಾಗೂ ಕೆಲವು ಬಗೆಯ ಸಸ್ಯಗಳು ಇರುವುದನ್ನು ಕಾಣಬಹುದು. ಒಟ್ಟಾರೆಯಾಗಿ 604 ಚ.ಕಿ.ಮೀ ಗಳಷ್ಟು ವಿಸ್ತೀರ್ಣ ಹೊಂದಿರುವ ಈ ಕೆರೆಯ ಸುಮ್ಮರು 60 ರಷ್ಟು ಭಾಗ ಟಿಬೆಟ್ ದೇಶದಲ್ಲಿದೆ. ಇನ್ನೊಂದು ವಿಷಯವೆಂದರೆ ಹಿಂದಿ ಚಲನಚಿತ್ರ ಥ್ರಿ ಇಡಿಯಟ್ಸ್ ನ ಕೊನೆಯ ಭಾಗವನ್ನು ಇಲ್ಲೆ ಚಿತ್ರೀಕರಿಸಲಾಗಿದೆ.

ಚಿತ್ರಕೃಪೆ: Ashishinfogr8

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಲಡಾಖ್ ಪ್ರದೇಶದಲ್ಲಿರುವ ಪೆನ್ಸಿ ಲಾ ಮತ್ತೊಂದು ಪರ್ವತ ರಹದಾರಿ. ಸಮುದ್ರ ಮಟ್ಟದಿಂದ 4400 ಮೀ. ಗಳಷ್ಟು ಎತ್ತರದಲ್ಲಿರುವ ಈ ಪಾಸ್ ಸುರು ಕಣಿವೆಯನ್ನು ಝಂನ್ಸ್ಕಾರ್ ಕಣಿವೆಯೊಂದಿಗೆ ಬೆಸೆಯುತ್ತದೆ.

ಚಿತ್ರಕೃಪೆ: Malikbek

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಲಡಾಖ್ ಪ್ರದೇಶದ ಲೇಹ್ - ಮನಾಲಿ ಹೈವೇ ಯಲ್ಲಿ ವಿರಮಿಸಬಹುದಾದ ತಾಣವೆ ಸರ್ಚು. ವಸತಿ ಹೂಡಲು ಇಲ್ಲಿ ಟೆಂಟ್ ಗಳು ಲಭ್ಯ. ಹಿಮಾಚಲ ಪ್ರದೇಶ ರಾಜ್ಯ ಹಾಗೂ ಲಡಾಖ್ ಗಡಿ ಪ್ರದೇಶದಲ್ಲಿ ಈ ತಾಣವನ್ನು ಕಾಣಬಹುದು.

ಚಿತ್ರಕೃಪೆ: Jen

ನಿಬ್ಬೆರಗಾಗಿಸುವ ಲಡಾಖ್:

ನಿಬ್ಬೆರಗಾಗಿಸುವ ಲಡಾಖ್:

ಲಡಾಖ್ ಪ್ರದೇಶವನ್ನು ತಲುಪಲು ಎರಡು ಮಾರ್ಗಗಳು ಮಾತ್ರ ಲಭ್ಯವಿದ್ದು ಒಂದು ಮಾರ್ಗ ಶ್ರೀನಗರದ ಕಾರ್ಗಿಲ್ ರಸ್ತೆಯ ಮುಖಾಂತರ ಜೊ ಜಿ ಲಾ ಮೂಲಕ ತಲುಪಬಹುದು. ಇನ್ನೊಂದು ಮಾರ್ಗವು ಹಿಮಾಚಲ ಪ್ರದೇಶದ ಮನಾಲಿಯಿಂದ ಲೇಹ್ - ಮನಾಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಲಡಾಖ್ ತಲುಪಬಹುದಾಗಿದೆ. ಆದರೆ ಈ ರಸ್ತೆಯು ಮೇ ಅಥವಾ ಜೂನ್ ನಿಂದ ಅಕ್ಟೋಬರ್ ಅಥವಾ ನವಂಬರ್ ವರೆಗೂ ಮಾತ್ರವೆ ಮುಕ್ತವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಹಿಮ ಕರಗಿರುವುದರಿಂದ ದಾರಿಗಳು ಮುಕ್ತವಾಗಿರುತ್ತದೆ. ಇನ್ನೂ ಶ್ರೀನಗರ - ಲೇಹ್ ರಸ್ತೆಯು ಏಪ್ರಿಲ್ ಅಥವಾ ಮೇ ಯಿಂದ ನವಂಬರ್ ಅಥವಾ ಡಿಸೆಂಬರ್ ವರೆಗೂ ಮಾತ್ರವೆ ತೆರೆದಿರುತ್ತದೆ.

ಚಿತ್ರಕೃಪೆ: McKay Savage

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more