Search
  • Follow NativePlanet
Share
» »ಸಕಲ ದೇವತೆಗಳು ನೆಲೆಸಿರುವ ಏಕೈಕ ಸ್ಥಳವಿದು!

ಸಕಲ ದೇವತೆಗಳು ನೆಲೆಸಿರುವ ಏಕೈಕ ಸ್ಥಳವಿದು!

By Vijay

ಸಂಸ್ಕೃತದಲ್ಲಿ ಹೇಳಿರುವಂತೆ "ವಸುದೈವ ಕುಟುಂಬಕಂ" ಎನ್ನುವ ವಾಕ್ಯವು ನಮ್ಮ ಸನಾತನ ಧರ್ಮ ಬೋಧಿಸುವ ಮಹತ್ತರ ತತ್ವವಾಗಿದೆ. ಇದರ ಅರ್ಥ ಇಷ್ಟೆ ಸಂಪೂರ್ಣ ವಿಶ್ವವೆ ಒಂದು ಕುಟುಂಬವಾಗಿದೆ ಎಂದು. ಈ ರೀತಿಯ ಉನ್ನತ ವಿಚಾರಧಾರೆಯನ್ನು ಹಿಂದುಗಳು ಹೊಂದಿದ್ದಾರೆಂದರೆ ತಪ್ಪಾಗಲಾರದು.

ಆದರೂ ನಮ್ಮಲ್ಲಿ ಬಹುತೇಕರು ವಿವಿಧ ದೇವರುಗಳ ಪರಮ ಆರಾಧಕರಾಗಿದ್ದೇವೆ. ಕೆಲವರು ಶಿವನನ್ನು ಪ್ರಧಾನವಾಗಿ ಪೂಜಿಸಿದರೆ, ಇನ್ನೂ ಕೆಲವರಿಗೆ ವಿಷ್ಣು ಪ್ರಥಮ ದೈವನಾಗಿದ್ದಾನೆ. ಇನ್ನೂ ಹಲವರಿಗೆ ನರಸಿಂಹ, ಗಣೇಶ, ದೇವಿ ಹೀಗೆ ಹಲವಾರು ದೇವ ದೇವತೆಯರು ಪ್ರಮುಖವಾಗಿ ಆರಾಧಿಸಲಾಗುವ ದೇವರಾಗಿರುತ್ತಾರೆ.

ಬೆಂಗಳೂರು ಬಳಿಯಿರುವ ಜಾನಪದ ಲೋಕಕ್ಕೆ ಭೇಟಿ ನೀಡಿದ್ದೀರಾ?

ಆದರೆ ಒಮ್ಮೆ ಯೋಚಿಸಿ ನೋಡಿ ಸಕಲ ದೇವರುಗಳು ಒಂದೆ ಒಂದು ಸ್ಥಳದಲ್ಲಿ ನಿಮಗೆ ದರ್ಶನ ಕೊಟ್ಟರೆ ಹೇಗೆ? ಎಲ್ಲಿಲ್ಲದ ಆನಂದ ಉಂಟಾಗುತ್ತದೆಯಲ್ಲವೆ! ಹೌದು ಆ ರೀತಿಯ ಆನಂದ ನೀವು ಪಡೆಯಬಹುದು. ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿರುವ ಸ್ಥಳವು ಅಂತಹ ಒಂದು ಸುಂದರ ಅವಕಾಶವನ್ನು ಪ್ರವಾಸಿಗರಿಗೆ ಕರುಣಿಸುತ್ತದೆ.

ಮನುಷ್ಯ ಗಾತ್ರ ಅಥವಾ ಅದಕ್ಕಿಂತಲೂ ದೊಡ್ಡದಾಗಿರುವ ಹಲವು ಪ್ರಮುಖ ದೇವರುಗಳ, ಪುರಾಣ ಪುಣ್ಯಕಥೆಗಳಲ್ಲಿ ಬರುವ ಪವಾಡಗಳ, ಪ್ರಸಂಗಗಳ ವಿವರಣೆಗಳನ್ನು ಇಲ್ಲಿ ಅದ್ಭುತವಾದ ಕಲಾತ್ಮಕತೆಯಿಂದ ಕೂಡಿದ ಶಿಲ್ಪಗಳ ಮೂಲಕ ವಿವರಿಸಲಾಗಿದೆ.

ನಿಮಗೂ ಕೂಡ ಆ ಸ್ಥಳ ಯಾವುದು ಹಾಗೂ ಅಲ್ಲಿನ ವಿಶೆಷತೆಗಳಿರುವುದಾದರೂ ಏನು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಲ್ಲಿ ಈ ಲೇಖನವನ್ನೊಮ್ಮೆ ಓದಿ ಬಿಡಿ.

ಲೇಖನದಲ್ಲಿ ಬಳಸಲಾದ ಚಿತ್ರಗಳು ಹಾಗೂ ಮಾಹಿತಿಗೆ ಕೃಪೆ: surendrapuri.in

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಇದನ್ನು ಕುಂಡ ಸತ್ಯನಾರಾಯಣ ಕಲಾಧಾಮಂ ಎಂದು ಕರೆಯಲಾಗುತ್ತದೆ. ಇದು ಭಾರತೀಯ ಶಿಲ್ಪಕಲೆ ಹಾಗೂ ಕಲಾನೈಪುಣ್ಯತೆಯನ್ನು ಅನಾವರಣಗೊಳಿಸುವ, ಹಿಂದು ಸಂಸ್ಕೃತಿಯ ಶ್ರೀಮಂತಿಕೆಯನ್ನು ಉತ್ತೇಜಿಸುವ ಹಾಗೂ ಎತ್ತಿ ತೋರಿಸುವ ದೃಷ್ಟಿಯಿಂದ ನಿರ್ಮಿಸಲಾದ ಅದ್ಭುತವಾದ ಕಲಾ ಧಾಮವೆ ಆಗಿದೆ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಪುರಾಣಿಕತೆಯ ಅರಿವು ಮೂಡಿಸುವ ಕೇಂದ್ರವಾಗಿಯೂ ಸಹ ಕಾರ್ಯ ನಿರ್ವಹಿಸುವ ಈ ಕಲಾಧಾಮವು ಅದ್ಭುತವಾದ ಪೌರಾಣಿಕ ಸಂಗ್ರಹಾಲಯವೆಂದರೂ ತಪ್ಪಾಗಲಾರದು. ಇದನ್ನು ಸುರೇಂದ್ರಪುರಿ ಕಲಾ ಧಾಮ ಎಂತಲೂ ಸಹ ಕರೆಯಲಾಗುತ್ತದೆ. ಈ ಭವ್ಯ ಕಲಾ ಧಾಮವು ಜನಾನುರಾಗಿ, ಲೋಕೋಪಕಾರಿಯಾದ ಶ್ರೀ ಕುಂದ ಸತ್ಯನಾರಾಯಣ ಅವರಿಂದ ಅವರ ಮಗನಾದ ಸುರೇಂದ್ರ ಅವರ ನೆನಪಿನಾರ್ಥವಾಗಿ ನಿರ್ಮಿಸಲಾಗಿದೆ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಯಾದಗಿರಿಗುಟ್ಟಾದ ಬಳಿ ಸ್ಥಿತವಿರುವ ಸುರೇಂದ್ರಪುರಿಯು ರಾಜಧಾನಿ ಹೈದರಾಬಾದ್ ನಗರ ಕೇಂದ್ರದಿಂದ 60 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭಾರತದ ಎಲ್ಲ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿರುವ ಪ್ರಮುಖ ದೇವರುಗಳ ಪ್ರತಿಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ. ಭೇಟಿ ನೀಡಿದವರಿಗೆ ಇದೊಂದು ರೀತಿಯ ರೋಮಾಂಚಕತೆ ಉಂಟುಮಾಡುವುದರಲ್ಲಿ ಸಂಶಯವಿಲ್ಲ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಕಿರಿಯರಿಂದ ಹಿರಿಯರವರೆಗೂ ಎಲ್ಲ ವರ್ಗದ ಜನರು ಪವಿತ್ರ ಕ್ಷಣಗಳನ್ನು ಅನುಭವಿಸುವಂತೆ, ತಮ್ಮ ತಮ್ಮ ಇಷ್ಟ ದೇವ, ದೇವತೆಯರ ದೊಡ್ಡ ದೊಡ್ಡ ಕಲಾಕೃತಿಗಳನ್ನು ನೋಡಿ ಆನಂದ ಪಡುವಂತೆ ಮಾಡುತ್ತದೆ ಸುರೇಂದ್ರಪುರಿ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಕೇವಲ ಮೂರ್ತಿ, ವಿಇಗ್ರಹ, ಪ್ರತಿಮೆಗಳು ಮಾತ್ರವಲ್ಲದೆ ಎಲ್ಲ ರೀತಿಯ ಲೋಕಗಳ ಕಾಲ್ಪನಿಕ ಜಗತ್ತನ್ನೂ ಸಹ ನೀವಿಲ್ಲಿ ನೋಡಿ ಅನುಭವಿಸಬಹುದು. ಬ್ರಹ್ಮಲೋಕ, ವಿಷ್ಣುಲೋಕ, ಶಿವಲೋಕ, ನಾಗಲೋಕ, ಇಂದ್ರಲೋಕ, ಯಮಲೋಕ, ನರಕಲೋಕ ಹಾಗೂ ಪಾತಾಳಲೋಕಗಳನ್ನೂ ಸಹ ನೀವಿಲ್ಲಿ ನೋಡಬಹುದು.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಪದ್ಮವ್ಯೂಹಂನಿಂದ ಹಿಡಿದು ಪದ್ಮದ್ವೀಪಂವರೆಗೆ ಎಲ್ಲ ರೀತಿಯ ಪೌರಾಣಿಕ ರಚನೆಗಳನ್ನು ಸುರೇಂದ್ರಪುರಿಯಲ್ಲಿ ಕಾಣಬಹುದಾಗಿದೆ. ಇಲ್ಲಿ ನಿರ್ಮಿಸಲಾಗಿರುವ ಹಲವು ಕಲಾಕೃತಿಗಳು ಪುರಾಣ ಪುಣ್ಯಕಥೆಗಳಲ್ಲಿ ಬರುವ ಪ್ರಮುಖ ಪಾತ್ರಧಾರಿಗಳಾಗಿರುವುದು ವಿಶೇಷ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಅಲ್ಲದೆ ಎರಡು ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತದಲ್ಲಿ ಬರುವ ಪ್ರಮುಖ ಸನ್ನಿವೇಶಗಳ, ಪಾತ್ರಧಾರಿಗಳ ಯಥಾವತ್ತಾದ ಕಲಾಕೃತಿಗಳನ್ನು ಇಲ್ಲಿ ಮನೋಜ್ಞವಾಗಿ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿಯುವಂತೆ ನಿರ್ಮಿಸಲಾಗಿದೆ ಎಂದು ಹೇಳಬಹುದು.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ದೊಡ್ಡದಾದ ಶಿಲ್ಪಕಲಾಕೃತಿಗಲೂ ಸಹ ಇಲ್ಲಿದ್ದು ಪ್ರವಾಸಿಗರನ್ನು ಪ್ರಮುಖವಾಗಿ ಆಕರ್ಷಿಸುತ್ತವೆ. ವಿಷ್ಣು ತನ್ನ ಆಯುಧಗಳು ಹಾಗೂ ಲಕ್ಷ್ಮಿಯೊಡನಿರುವುದು, 36 ಅಡಿಗಳಷ್ಟು ಎತ್ತರದ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶನೆ ಮಾಡುತ್ತಿರುವುದು, ಶಿವ ಹಾಗೂ ಆಂಜನೇಯನ ಪ್ರತಿಮೆಗಳು ಕಣ್ಮನ ಸೆಳೆಯುತ್ತವೆ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಮಂದಾರ ಪರ್ವತ ಹಾಗೂ ವಾಸುಕಿ ಸರ್ಪವನ್ನು ಬಳಸಿಕೊಂಡು ಮಾಡಲಾದ ಕ್ಷೀರ ಮಂಥನದ ಪ್ರತಿಕೃತಿ, ಕೃಷ್ಣನು ಗೋವರ್ಧನ ಗಿರಿ ಎತ್ತಿರುವ ಪ್ರಸಂಗಗಳು ಕಲಾತ್ಮಕವಾಗಿ ನಿರ್ಮಾಣಗೊಂಡಿದ್ದು ನೋಡುಗರ ಕಣ್ಣು ತುಂಬಿ ಬರುವಂತೆ ಮಾಡುತ್ತದೆ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಇನ್ನೂ ಸುರೇಂದ್ರಪುರಿಯು ಹೈದರಾಬಾದ್ ನಗರಕ್ಕೆ ಹತ್ತಿರದಲ್ಲಿರುವುದರಿಂದ ಸಾಕಷ್ಟು ಬಸ್ಸುಗಳು ಇಲ್ಲಿಗೆ ತೆರಳಲು ದೊರೆಯುತ್ತವೆ. ಔರೇಂದ್ರಪುರಿಗೆ ಪ್ರವೇಶ ಉಚಿತವಾಗಿದ್ದರೂ ಅಲ್ಲಿರುವ ಕುಂದ ಸತ್ಯನಾರಾಯಣ ಕಲಾಧಾಮಕ್ಕೆ ನಿಗದಿತ ಶುಲ್ಕ ಪಾವತಿಸಿ ಪ್ರವೇಶಿಸಬೇಕು.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಸುರೇಂದ್ರಪುರಿಯಲ್ಲಿರುವ ದೇವಾಲಯಗಳು ವಾರದ ದಿನಗಳಲ್ಲಿ 6.30 ರಿಂದ ಮಧ್ಯಾಹ್ನ 1 ರವರೆಗೂ ಮತ್ತು 3 ಘಂಟೆಯಿಂದ ರಾತ್ರಿ 8 ಘಂಟೆಯವರೆಗೂ, ಹಾಗೂ ವಾರಾಂತ್ಯ ಮತ್ತು ಸಾರ್ವಜನಿಕ ರಜಾ ದಿನಗಳಲ್ಲಿ 6.30 ರಿಂದ ಸಂಜೆ 8 ಘಂಟೆಯವರೆಗೂ ತೆರೆದಿರುತ್ತದೆ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಇನ್ನು ಇಇಲಿರುವ ಕುಂದ ಸತ್ಯನಾರಾಯಣ ಧಾಮವು ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಾಯಂಕಾಲ 7 ಘಂಟೆಯವರೆಗೂ ತೆರೆದಿರುತ್ತದೆ. ಬೆಳಿಗ್ಗೆ 9 ರಿಂದ ಸಂಜೆ 5 ಘಂಟೆಯವರೆಗೆ ಟಿಕೆಟ್ ಬುಕ್ ಮಾಡಲು ಕೌಂಟರ್ ಗಳು ತೆರೆದಿರುತ್ತವೆ. ಕ್ಯಾಮೆರಾಗಳಿಗೆ ನಿಷೇಧವಿದ್ದು ಚಿತ್ರೀಕರಣ ಮಾಡುವ ಹಾಗಿಲ್ಲ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಕುಂದ ಸತ್ಯನಾರಾಯಣ ಧಾಮದಲ್ಲು ಧೂಮ್ರಪಾನ, ಮದ್ಯಪಾನ ಹಾಗೂ ತಂಬಾಕು ಸೇವನೆಯನ್ನು ನಿಷೇಧಿಸಲಾಗಿದೆ. ಹೊರಗಿನ ಊಟ-ತಿಂಡಿಗಳು ಒಳಗೆ ಒಯ್ಯುವ ಹಾಗಿಲ್ಲ. ಆದರೆ ಧಾಮದೊಳಗೆ ಶಾಖಾಹಾರಿ ಭೋಜನದ ವ್ಯವಸ್ಥೆಯಿದೆ. ವಯಸ್ಸಾದವರು ವ್ಹೀಲ್ ಚೇರ್ ಮೂಲಕ ಧಾಮವನ್ನು ವಿಹರಿಸುವ ವ್ಯವಸ್ಥೆಯಿದ್ದು ಹೆಚ್ಚಿನ ಶುಲ್ಕ ಪಾವತಿಸಬೇಕು.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಇನ್ನೂ ಈ ಧಾಮದಲ್ಲಿ ಸುತ್ತಾಡಲು ಯಾವುದೆ ಮಾರ್ಗದರ್ಶಿಗಳ ಅವಶ್ಯಕತೆಯಿಲ್ಲ. ಕ್ಲೋಕ್ ಕೋಠಡಿಯಿದ್ದು ಅಲ್ಲಿ ಧಾಮದ ಕುರಿತ ಎಲ್ಲ ವಿವರಗಳನ್ನು ತೆಲುಗು ಹಾಗೂ ಆಂಗ್ಲ ಭಾಷೆಯಲ್ಲಿ ಬರೆದಿರುವ ಫಲಕಗಳಿವೆ. ಪ್ರತಿ ರಚನೆಗಳ ಕುರಿತು ಮಾಹಿತಿ ಫಲಕಗಳಿವೆ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಕಡೆಯದಾಗಿ, ಪೌರಾಣಿಕತೆಯ ವಿಷ್ಯವನ್ನು, ಪ್ರಸಂಗಗಳನ್ನು ಹಾಗೂ ಸನಾತನ ಧರ್ಮದಲ್ಲಿ ವಿವರಿಸಲಾಗಿರುವ ವಿವಿಧ ಲೋಕಗಳ ಕಾಲ್ಪನಿಕ ವಿವರಣೆಗಳನ್ನು, ನಿಮ್ಮ ಇಷ್ಟ ದೇವರುಗಳನ್ನು ಒಂದೆ ಸ್ಥಳದಲ್ಲಿ ನೋಡುವ ಬಯಕೆ ನಿಮಗಿದ್ದಲ್ಲಿ ಸುರೇಂದ್ರಪುರಿಗೊಮ್ಮೆ ಖಂಡಿತವಾಗಿಯೂ ಭೇಟಿ ನೀಡಿ.

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ದೇವತೆಗಳ ಕಲ್ಯಾಣೋತ್ಸವದ ಒಂದು ಸಂದರ್ಭದಲ್ಲಿ....

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಭೇಟಿ ನೀಡಿ ಒಮ್ಮೆ ಸುರೇಂದ್ರಪುರಿಗೆ:

ಲಂಕೆಗೆ ಲಗ್ಗೆ ಇಟ್ಟಿದ್ದ ಆಂಜನೇಯ ರಾವಣನ ಮುಂದೆ ಅವನಷ್ಟೆ ಎತ್ತರದಲ್ಲಿ ತನ್ನ ಬಾಲವನ್ನೆ ಸುತ್ತಿಕೊಂಡು ಅದರ ಮೇಲೆ ಕುಳಿತಿರುವ ಪ್ರಸಂಗ ನೆನಪಿಸುವ ಕಲಾಕೃತಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more