• Follow NativePlanet
Share
Menu
» »ಐತಿಹಾಸಿಕ ಸೊಬಗಿನಿಂದ ಕಂಗೊಳಿಸುತ್ತಿರುವ ಮಿರ್ಜನ ಕೋಟೆ

ಐತಿಹಾಸಿಕ ಸೊಬಗಿನಿಂದ ಕಂಗೊಳಿಸುತ್ತಿರುವ ಮಿರ್ಜನ ಕೋಟೆ

Written By:

ಪುರಾತನವಾದ ಕಟ್ಟಡಗಳು, ದೊಡ್ಡ ದೊಡ್ಡ ಕೋಟೆಗಳು ದೇಶದ ಚರಿತ್ರೆಗೆ ಶ್ರೀಮಂತಗೊಳಿಸುತ್ತದೆ. ಅಂಥಹ ಸುಂದರವಾದ ಚಾರಿತ್ರಿಕ ಹಿನ್ನೆಲೆ ಇರುವ ಸ್ಥಳಕ್ಕೆ ಭೇಟಿ ನೀಡಲು ಹಲವಾರು ಪ್ರವಾಸಿಗರು ಬಯಸುತ್ತಾರೆ. ಅದರಲ್ಲೂ ಭಾರತದಲ್ಲಿನ ಸ್ಥಳಕ್ಕೆ ದೇಶ ವಿದೇಶಗಳಿಂದ ಕೂಡ ಭೇಟಿ ನೀಡುತ್ತಾರೆ.

ಪುರಾತನವಾದ ಕಟ್ಟಡಗಳನ್ನು ಕಂಡಾಗ ಆನಂದದಿಂದ ಪುಳಕಿತಗೊಳ್ಳುವ ಪ್ರವಾಸಿಗರು ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣವನ್ನು ಆನುಭವಿಸುತ್ತಾರೆ. ಕರ್ನಾಟಕದಲ್ಲಿ ಒಂದು ಸುಪ್ರಸಿದ್ಧವಾದ ಕೋಟೆ ಇದೆ ಅದೇ ಮಿರ್ಜನ ಕೋಟೆ. ಮಿರ್ಜನ ಕೋಟೆ ಕರ್ನಾಟಕದಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿಯಲ್ಲಿದೆ.

ಈ ಕೋಟೆಯು ತನ್ನ ವಾಸ್ತು ಶಿಲ್ಪದ ಸೊಬಗಿನಿಂದಾಗಿ ಪ್ರಸಿದ್ಧವಾದ ಕೋಟೆಯಾಗಿದೆ. ಮಿರ್ಜನ ಕೋಟೆ ಹಲವಾರು ಕದನಗಳಿಗೆ ಸಾಕ್ಷಿಯಾಗಿದೆ. ಈ ಕೋಟೆಯು ಪ್ರಸಿದ್ಧ ಹಿಂದೂ ತೀರ್ಥಕ್ಷೇತ್ರವಾದ ಗೋಕರ್ಣದಿಂದ ರಾಷ್ಟ್ರೀಯ ಹೆದ್ದಾರಿ 66 ಮತ್ತು 11 ಕಿ,ಮೀ ದೂರದಲ್ಲಿದೆ.

ಪ್ರಸ್ತುತ ಲೇಖನದಲ್ಲಿ ಮಿರ್ಜನ ಕೋಟೆಯ ಚಾರಿತ್ರಿಕ ಹಿನ್ನೆಲೆಯನ್ನು ತಿಳಿಯೋಣ.

ಮಿರ್ಜನ ಕೋಟೆ ಕಟ್ಟಿಸಿದವರು ಯಾರು?

ಮಿರ್ಜನ ಕೋಟೆ ಕಟ್ಟಿಸಿದವರು ಯಾರು?

ಈ ಸುಂದರ ಐತಿಹಾಸಿಕವಾದ ಕೋಟೆಯನ್ನು ವಿಜಯನಗರದ ಸಾಮ್ರಾಜ್ಯದ ಅಡಿಯಲ್ಲಿ ರಾಣಿ ಚೆನ್ನಭೈರಾದೇವಿಯು 16 ನೇ ಶತಮಾನದಲ್ಲಿ ನಿರ್ಮಿಸಿದಳು. ಚೆನ್ನಭೈರವಿ ಸತತ 54 ವರ್ಷಗಳು ಆಳ್ವಿಕೆ ಹಾಗೂ ಜೀವನ ಕೋಟೆಯಲ್ಲಿಯೇ ಕಳೆದಳು. ಈ ಸುಂದರ ಕೋಟೆಯು ಸುಮಾರು 11.5 ಎಕರೆಗಳಷ್ಟು ವಿಸ್ತೀರ್ಣ ಹೊಂದಿದೆ.


PC: en.wikipedia.org

ಚೆನ್ನಭೈರಾದೇವಿ

ಚೆನ್ನಭೈರಾದೇವಿ

ಈ ರಾಣಿಯ ಆಳ್ವಿಕೆಯ ಕಾಲದಲ್ಲಿ ಕಾರವಾರದಿಂದ 32 ಕಿ,ಮೀ ದೂರದಲ್ಲಿ ಪೆಪ್ಪರ್(ಕರಿ ಮೆಣಸು), ಉಪ್ಪೆಟ್ರೆರೆ ಮತ್ತು ಅಡಿಕೆ ರಪ್ತು ಮಾಡಲಾಗುತ್ತಿತ್ತು. ಹೀಗಾಗಿ ಕರಿ ಮೆಣಸು ರಪ್ತು ಪ್ರದೇಶವಾಗಿ ಪ್ರಸಿದ್ಧಿಯನ್ನು ಪಟಡೆದಿತ್ತು. ಹಾಗಾಗಿ ಪೋರ್ಚುಗೀಸರು ಚೆನ್ನಭೈರಾದೇವಿಯನ್ನು "ರಾಣಿ ಪೆಪ್ಪರ್" ಎಂದು ಕರೆದರು.

PC: en.wikipedia.org

ಕೋಟೆಯ ಇತಿಹಾಸ

ಕೋಟೆಯ ಇತಿಹಾಸ

ಈ ಕೋಟೆಯನ್ನು ಮೊಟ್ಟ ಮೊದಲ ಬಾರಿಗೆ ಕಟ್ಟಿಸಿದವರು ನವತತ್ ಸುಲ್ತಾನ 1200ರ ಆರಂಭದಲ್ಲಿ ನಿರ್ಮಿಸಿದ. ನಂತರ ಈ ಕೋಟೆ ವಿಜಯ ನಗರದ ಸಾಮ್ರಾಜ್ಯದ ಅಡಿಯಲ್ಲಿ ಬಂದಿತು. ತದ ನಂತರ 1608ರಲ್ಲಿ ಕೋಟೆಯನ್ನು ನವೀಕರಣಗೊಳಿಸಲಾಯಿತು. ವಿಜಯ ನಗರ ಸಾಮ್ರಾಜ್ಯ ಕ್ಷೀಣಿಸಿದಾಗ ಬಿಜಾಪುರದ ಅದಿಲ್ ಶಾಹಿಗಳ ಕೈ ಸೇರಿತು. ಆ ನಂತರ ಮರಾಠರು, ಹೈದರಾಲಿ, ಟಿಪ್ಪು ಸುಲ್ತಾನ್ ಕೊನೆಗೆ ಬ್ರಿಟೀಷರು ವಶಪಡಿಸಿಕೊಂಡರು.

PC: en.wikipedia.org

ಚೆನ್ನಭೈರಾದೇವಿ

ಚೆನ್ನಭೈರಾದೇವಿ

1552 ರಿಂದ 1606ರ ಅವಧಿಯಲ್ಲಿ ಮೀರಾಜನ ಕೋಟೆಯನ್ನು ರಾಣಿ ಚೆನ್ನ ಚೆನ್ನಭೈರಾದೇವಿ ನಿರ್ಮಿಸಿದರು. ಈ ರಾಣಿಯು ತುಳುವಾ-ಸಲುವಾ ವಂಶದವಳಾಗಿದ್ದಳು. ರಾಣಿ ಚೆನ್ನ ಭೈರಾದೇವಿ ಧಾರ್ಮಿಕವಾಗಿ ಜೈನಧರ್ಮವನ್ನು ಆಚರಿಸುತ್ತಿದ್ದರು ಮತ್ತು ಅವರ ಆಡಳಿತದ ಅವಧಿಯಲ್ಲಿ ಆನೇಕ ಜೈನ ಬಸದಿಗಳನ್ನು ನಿರ್ಮಿಸಿದರು.

PC: en.wikipedia.org

ಕೋಟೆಯ ಕಣ್ಣೀರು

ಕೋಟೆಯ ಕಣ್ಣೀರು

ಈ ಮಿರ್ಜನ ಕೋಟೆಯು ಹಲವಾರು ಯುದ್ಧಗಳು, ಕಣ್ಣೀರು, ರಾಜರ ಒಡಕುಗಳು, ಭೀಕರವಾದ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಈ ಕೋಟೆಯು ತನ್ನ ಅದ್ಭುತ ವಾಸ್ತುಶಿಲ್ಪದಿಂದಾಗಿ ಪ್ರವಾಸಿಗರನ್ನು ನಿಬ್ಬೆರಗಾಗಿಸುವ ಆಕರ್ಷಣೆಯನ್ನು ಹೊಂದಿದೆ. ಈ ಕೋಟೆಯು ಶರಾವತಿ ನದಿಯ ಉಪ ನದಿ ಅಗನಾಶಿನಿ ನದಿಯ ಮೇಲೆ ಕೋಟೆಯನ್ನು ಕಟ್ಟಲಾಗಿದೆ.


PC: en.wikipedia.org

ವಾಸ್ತು ಶಿಲ್ಪ

ವಾಸ್ತು ಶಿಲ್ಪ

ಈ ಕೋಟೆಯನ್ನು ಯುದ್ಧದಿಂದಾಗಿ ರಕ್ಷಣೆ ಪಡೆಯಲು ಕಟ್ಟಲಾದ ರಕ್ಷಣಾ ಕೋಟೆಯಾಗಿದೆ. ಮಿರ್ಜನ ಕೋಟೆಯು ಕೆಂಪು ಕಲ್ಲಿಗಳಿಂದ ನಿರ್ಮಾಣ ಮಾಡಲಾದ ಕೋಟೆ. ಮಿರ್ಜನ ಕೋಟೆಗೆ ಮುಖ್ಯವಾಗಿ ಒಂದು ಮುಖ್ಯವಾದ ಹಾಗೂ ಮೂರು ಹೆಚ್ಚಿನ ದ್ವಾರಗಳಿವೆ. ಕೋಟೆಯ ಒಳಗೆ ಅಂತರಸಂಪರ್ಕವನ್ನು ಹೊಂದಿರುವ ಬಾವಿಗಳಿವೆ. ಕೋಟೆಯ ಒಳಭಾಗದಲ್ಲಿ ಒಂದು ಸುಂದರ ಮರವಿದ್ದು ಅಲ್ಲಿ ದೇವಾಲಯವು ಕೂಡ ಇದೆ. ಗುಪ್ತವಾಗಿ ಹೋರ ಹೋಗಲು ರಾಜರ ಸುರಂಗ ಮಾರ್ಗಗಳನ್ನು ಇಲ್ಲಿ ಕಾಣಬಹುದಾಗಿದೆ. ಭಾರತೀಯ ವಾಸ್ತು ಶಿಲ್ಪದ ಪ್ರಕಾರ ಈ ಕೋಟೆಯನ್ನು ಮುಸ್ಲಿಂ ಶಿಲ್ಪಿಗಳಿಂದ ನಿರ್ಮಾಣ ಮಾಡಲಾಗಿದೆ.


PC: en.wikipedia.org

ಸುಂದರವಾದ ವಾತಾವರಣ

ಸುಂದರವಾದ ವಾತಾವರಣ

ಸುತ್ತಲಿನ ಪ್ರದೇಶದಲ್ಲಿ ದಟ್ಟವಾದ ಅರಣ್ಯವಿದ್ದು, ಹಿಂದೂ ದೇವರುಗಳು ಮತ್ತು ದೇವತೆಗಳನ್ನು ಇಲ್ಲಿನ ಕಲ್ಲುಗಳ ಮೇಲೆ ಕಾಣಬಹುದಾಗಿದೆ. ಈ ಕೋಟೆಯಲ್ಲಿ ಕೆಲವು ಪುರಾತನ ವಸ್ತುಗಳು ಕೂಡಾ ಇದ್ದು, 1652ರ ಚಿನ್ನ ನಾಣ್ಯ, ಸುಮಾರು 50 ಕಬ್ಬಿಣದ ಗುಂಡುಗಳು, ರಾಜ ವಂಶದ ಸರ್ಪಮಾಲಿಕೆಯ ನಾಣ್ಯಗಳು ಮತ್ತು ಭೂ ಕುಡಿಕೆಗಳು ಇನ್ನೂ ಹಲವಾರು ವಸ್ತುಗಳನ್ನು ಈ ಕೋಟೆಯಲ್ಲಿ ಕಾಣಬಹುದಾಗಿದೆ.

PC: en.wikipedia.org

ಸಂಪತ್ತು

ಸಂಪತ್ತು

ಈ ಕೋಟೆಯಲ್ಲಿ ಹಲವಾರು ಮೌಲ್ಯಯುತವಾದ ಸಂಪತ್ತುನ್ನು ಬ್ರಿಟೀಷರು ಕೊಳ್ಳೆ ಹೊಡೆದರು. ಇಲ್ಲಿ ರಾಜರು ಬಳಸುತ್ತಿದ್ದ ಶಸ್ತ್ರಗಳು, ಮಸಾಲೆ ಪದಾರ್ಥಗಳು, ಗಂಧದ ಮರಗಳನ್ನು ರಫ್ತು ಹಾಗೂ ಅಮದು ಮಾಡಿಕೊಳಲು ಈ ಕೋಟೆಯನ್ನು ಬಳಸುತ್ತಿದ್ದರು.


PC: en.wikipedia.org

ಪ್ರವೇಶ ಸಮಯ

ಪ್ರವೇಶ ಸಮಯ

ಈ ಸುಂದರ ಕೋಟೆಗೆ ಭೇಟಿ ನೀಡಲು ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಪ್ರವಾಸಿಗರಿಗೆ ಪ್ರವೇಶ ಅನುಮತಿ ಇದೆ.

PC: en.wikipedia.org

ಸಮೀಪದ ಪ್ರಸಿದ್ಧವಾದ ಸ್ಥಳಗಳು

ಸಮೀಪದ ಪ್ರಸಿದ್ಧವಾದ ಸ್ಥಳಗಳು

ಇಲ್ಲಿನ ಸಮೀಪದ ಸ್ಥಳಗಳೆಂದರೆ ಕುಡಲೆ ಬೀಚ್, ಓಂ ಬೀಚ್, ಹಾಫ್ ಮೂನ್ ಬೀಚ್, ಮಹಾ ಗಣಪತಿ ದೇವಾಲಯ, ಗೋಕರ್ಣ ಬೀಚ್. ನಿರ್ವಾಣ ಬೀಚ್, ಶ್ರೀ ಪರಮೇಶ್ವರಿ ದೇವಾಲಯ ಇನ್ನೂ ಹಲವಾರು.

PC: en.wikipedia.org

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ