Search
  • Follow NativePlanet
Share
» »ಮಹಾರಾಷ್ಟ್ರದ ಕುಲಾಂಗ್ ಕೋಟೆ ಎಲ್ಲರ ಆಕರ್ಷಣೆಯ ತಾಣ ಯಾಕೆ?

ಮಹಾರಾಷ್ಟ್ರದ ಕುಲಾಂಗ್ ಕೋಟೆ ಎಲ್ಲರ ಆಕರ್ಷಣೆಯ ತಾಣ ಯಾಕೆ?

By Manjula Balaraj Tantry

ಮಹಾರಾಷ್ಟ್ರದ ಯಾವುದೇ ಜಿಲ್ಲೆ ಅಥವಾ ನಗರವಾಗಲಿ ಸ್ಮಾರಕಗಳಂತಹ ಕೋಟೆಗಳನ್ನು ಹೊಂದಿರದೇ ಇರುವ ಸ್ಥಳಗಳಿಲ್ಲ. ಹೀಗಿರುವಾಗ ನಾಶಿಕ್ ಇದರಲ್ಲಿ ಹೊರತಾಗಿರಲು ಸಾಧ್ಯವೇ? ನಾಶಿಕ್ ಜಿಲ್ಲೆಯು ಸುಮಾರು 20 ಕೋಟೆಗಳನ್ನು ತನ್ನಲ್ಲಿ ಹೊಂದಿದೆ ಎಂಬುವುದು ನಿಮಗೆ ಗೊತ್ತಿದೆಯೇ? ಆದುದರಿಂದ ನೀವು ಸಣ್ಣ ಪ್ರದೇಶದ ಗಡಿಯೊಳಗೆ ಪ್ರವಾಸ ಮಾಡುವುದು ಮತ್ತು ಆ ಗಡಿಯೊಳಗೆಯೇ ಎಲ್ಲಾ ತರಹದ ನಿಮ್ಮನ್ನು ತೃಪ್ತಿ ಪಡಿಸುವಂತಹ ವಿಷಯಗಳಿರುವ ಜಾಗಕ್ಕೆ ಹೋಗಲು ಆಯೋಜಿಸುತ್ತಿದ್ದಲ್ಲಿ, ಇಂತಹ ಸ್ಥಳಗಳ ಅನ್ವೇಷಣೆ ಮಾಡುವ ಕಡೆ ನಿಮ್ಮ ಗಮನವನ್ನು ಏಕೆ ಹರಿಸಬಾರದು?

ಐತಿಹಾಸಿಕ ಮಹತ್ವದ ಹೊರತಾಗಿಯೂ ಕೂಡಾ ಈ ಕೋಟೆಗಳು ಎತ್ತರದ ಬೆಟ್ಟಗಳ ಮೇಲೆ ನೆಲೆಸಿರುವುದರಿಂದ ಚಾರುಣಿಗರು ಮತ್ತು ಕ್ಯಾಂಪ್ ಹೂಡುವವರಲ್ಲಿ ಹೆಚ್ಚು ಜನಪ್ರಿಯತೆಗಳಿಸಿದೆ. ಇಂತಹ ಒಂದು ಸುಂದರ ಕೋಟೆಗಳ ಗುಂಪಿನಲ್ಲಿ ಸುಂದರವಾದ ಕುಲಾಂಗ್ ಕೋಟೆ ಕೂಡಾ ಒಂದು. ನಿಮ್ಮ ಪ್ರಯಾಣವನ್ನು ನಾಶಿಕ್ ನಿಂದ ಕುಲಾಂಗ್ ಕೋಟೆಯ ಅನ್ವೇಷಣೆಯ ಕಡೆಗೆ ನಡೆಸಿದರೆ ಹೇಗಿರಬಹುದು? ಮಹಾರಾಷ್ಟ್ರದ ಇತಿಹಾಸವನ್ನು ನೀವು ಟ್ರಕ್ಕಿಂಗ್ ಛಾಯಾಗ್ರಹಣ ಮತ್ತು ಅನ್ವೇಷಣೆಗಳಲ್ಲಿ ಪಾಲ್ಗೊಳ್ಳುವಂತಹ ಬಯಲು ಪ್ರದೇಶಗಳ ಮೇಲಿನ ಪ್ರದೇಶಗಳಲ್ಲಿರುವ ಒಂದು ಸ್ಥಳವನ್ನು ಹುಡುಕುತ್ತಿದ್ದಲ್ಲಿ ನಿಮಗೆ ಇದಕ್ಕಾಗಿ ಸೂಕ್ತವಾದ ಸ್ಥಳವೆಂದರೆ ಅದು ಮಹಾರಾಷ್ಟ್ರದ ಕುಲಾಂಗ್ ಕೋಟೆ.

ಕುಲಾಂಗ್ ಕೋಟೆಗೆ ಭೇಟಿ ಕೊಡಲು ಸೂಕ್ತ ಸಮಯ

ಕುಲಾಂಗ್ ಕೋಟೆಗೆ ಭೇಟಿ ಕೊಡಲು ಸೂಕ್ತ ಸಮಯ

Sandeep Bhattacharya

ಕುಲಾಂಗ್ ಕೋಟೆಯ ಸುತ್ತಮುತ್ತಲಿನ ಪ್ರದೇಶಗಳು ಬಿಸಿಯಾದ ಬೇಸಿಗೆ ಮತ್ತು ಚಳಿಗಾಲದಲ್ಲಿ ಚಳಿಯುಕ್ತ ಹವಾಮಾನವನ್ನು ಅನುಭವಿಸುವುದರಿಂದ ಈ ಸುಂದರ ಸ್ಮಾರಕವಿರುವ ಸ್ಥಳಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಸೆಪ್ಟಂಬರ್ ನಿಂದ ಡಿಸೆಂಬರ್ ಮತ್ತು ಫೆಬ್ರವರಿ ತಿಂಗಳಿನಿಂದ ಮಾರ್ಚ್ ತಿಂಗಳಗಳವರೆಗೆ.

ಈ ಸಮಯದಲ್ಲಿ ಇಲ್ಲಿಯ ಹವಾಮಾನವು ಸಹಿಸುವಂತಹುದಾಗಿದೆ ಮತ್ತು ಸುತ್ತಮುತ್ತಲಿನ ಪ್ರದೇಶವು ಸೊಂಪಾದ ಹಸಿರಿನಿಂದ ಸುತ್ತುವರಿದಿರುವುದರಿಂದ ಆಹ್ಲಾದಕರ ಪರಿಸರವನ್ನು ಒದಗಿಸಿಕೊಡುತ್ತದೆ. ನಿವು ಕುಲಾಂಗ್ ಕೋಟೆಯನ್ನು ಮಾನ್ಸೂನ್ ಮಳೆಗಾಲದ ಸಮಯದಲ್ಲಿಯೂ ಭೇಟಿ ನೀಡಬಹುದು.

ಕುಲಾಂಗ್ ಕೋಟೆಯ ಸ್ಥಳ ಮತ್ತು ಅದರ ಇತಿಹಾಸ

ಕುಲಾಂಗ್ ಕೋಟೆಯ ಸ್ಥಳ ಮತ್ತು ಅದರ ಇತಿಹಾಸ

Ccmarathe

ಈ ಕೋಟೆಯು ನಾಶಿಕ್ ನ ಇಗತ್ಪುರಿ ಪ್ರಾಂತ್ಯದಲ್ಲಿದ್ದು ಇದು ಸುಮಾರು 4825 ಅಡಿ ಎತ್ತರದ ಪ್ರದೇಶದಲ್ಲಿದೆ ಮತ್ತು ಇದು ಅತ್ಯಂತ ಹಳೆಯದಾದ ಶಾತವಾಹನ ಆಡಳಿತದ ಕಾಲಕ್ಕೆ ಸೇರಿದ ಕೋಟೆಯಾಗಿದ್ದು ಈ ಪ್ರಾಂತ್ಯದ ಅತ್ಯಂತ ಹಳೆಯ ಕೋಟೆಗಳಲ್ಲೊಂದಾಗಿದೆ. ಈ ಕೋಟೆಯನ್ನು ಸಾಮಾನ್ಯಯುಗದಲ್ಲಿ ಶಾತವಾಹನ ರಾಜರುಗಳಿಂದ ನಿರ್ಮಿಸಲಾಯಿತೆಂದು ನಂಬಲಾಗಿದೆ.

ಈ ಸಾಮ್ಯಾಜ್ಯದ ಅಧಃಪತನದ ನಂತರ ಈ ಕೋಟೆಯನ್ನು ಅನೇಕ ಆಡಳಿತಗಾರರ ವಶಕ್ಕೆ ಒಳಪಟ್ಟಿತು. ಇತಿಹಾಸದ ದಾಖಲೆಗಳ ಪ್ರಕಾರ ಈ ಕೋಟೆಯು ಮೊಘಲರ, ಮರಾಠರು ಮತ್ತು ನಂತರ ಬ್ರಿಟಿಷರ ಆಳ್ವಿಕೆಗೂ ಒಳಪಟ್ಟಿತ್ತು ಎಂದು ಹೇಳಲಾಗುತ್ತದೆ.

ಇಂದು ಈ ಕೋಟೆಯು ತನ್ನಲ್ಲಿ ಅವಶೇಷಗಳನ್ನು ಹೊಂದಿದೆ ಮತ್ತು ಚಾರುಣಿಗರು ಮತ್ತು ಕ್ಯಾಂಪ್ ಮಾಡುವವರಿಗೆ ವಾರಾಂತ್ಯ ಕಳೆಯುವ ತಾಣವಾಗಿ ಮಾರ್ಪಟ್ಟಿದೆ. ಈ ಪ್ರಾಚೀನ ಕಾಲದ ಸೌಂದರ್ಯಕ್ಕೆ ನೀವು ಭೇಟಿ ಕೊಟ್ಟು ಇಲ್ಲಿಯ ಇತಿಹಾಸದ ಅನ್ವೇಷಣೆ ನಡೆಸಿದರೆ ಹೇಗಿರಬಹುದು? ಈ ಕೋಟೆಯ ತಪ್ಪಲನ್ನು ತಲುಪಬೇಕಾದಲ್ಲಿ ನೀವು 3-4 ತಾಸುಗಳ ಕಾಲ ಬೆಟ್ಟದ ಮೇಲೆ ಚಾರಣ ಮಾಡಬೇಕಾಗುವುದು.

ಕುಲಾಂಗ್ ಕೋಟೆಗೆ ನೀವು ಏಕೆ ಭೇಟಿ ಕೊಡಬೇಕು?

ಕುಲಾಂಗ್ ಕೋಟೆಗೆ ನೀವು ಏಕೆ ಭೇಟಿ ಕೊಡಬೇಕು?

Ccmarathe

ನೀವು ಚಾರಣ ಪ್ರಿಯರೆ? ನೀವು ಇತಿಹಾಸವನ್ನು ಅನ್ವೇಷಣೆ ಮಾಡಲು ಇಷ್ಟಪಡುವವರೆ? ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ನೀವು ಕುಲಾಂಗ್ ಕೋಟೆಯನ್ನು ಭೇಟಿ ಕೊಡಲು ತಪ್ಪಿಸಲಾರಿರಿ. ಇಲ್ಲಿಯ ಚಾರಣವು ತುಂಬಾ ಸುಲಭವಾಗಿದ್ದರೂ ಕೂಡಾ ಬೆಟ್ಟದ ಮೇಲೆ ಇರುವ ಕೋಟೆಯನ್ನು ತಲುಪಲು ನೀವು ಇಲ್ಲಿ ದಟ್ಟವಾದ ಕಾಡಿನಲ್ಲಿ,ಕಡಿದಾದ ಭೂಪ್ರದೇಶ ಮತ್ತು ರೋಮಾಂಚಕವಾಗಿರುವ ಮಾರ್ಗಗಳಲ್ಲಿ ಹಾದುಹೋಗಬೇಕಾಗುತ್ತದೆ.

ನೀವು ಎಂದಾದರೂ ಇಂತಹ ಅವಿಸ್ಮರಣೀಯ ಪ್ರಯಾಣವನ್ನು ಕೈಗೊಂಡಿರುವಿರಾ? ಒಮ್ಮೆ ಕೋಟೆಯ ಮೇಲ್ಬಾಗಕ್ಕೆ ತಲುಪಿದ ನಂತರ ನೀವು ಇಲ್ಲಿ ಸುಂದರವಾದ ಹಸಿರು ಹುಲ್ಲಿನ ಹಾಸಿನಲ್ಲಿ ವಿಶ್ರಾಂತಿ ಪಡೆಯಬಹುದು ಅಥವಾ ಇಲ್ಲಿಯ ಸಣ್ಣ ಕೊಳದ ಹತ್ತಿರವೂ ವಿಶ್ರಾಂತಿ ಪಡೆಯಬಹುದು ನಂತರ ಇಲ್ಲಿಯ ಕೋಟೆಯ ರಚನೆಯ ಅವಶೇಷಗಳನ್ನು ಎಣಿಸುವ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದಾಗಿದೆ.

ಇಷ್ಟೇ ಅಲ್ಲದೆ ಇಲ್ಲಿಯ ಹತ್ತಿರದ ಕೋಟೆಗಳಾದ ಪಟ್ಟಾ ಕೋಟೆ ಮತ್ತು ಮಂದಾಂಗದ್ ಕೋಟೆ ಮತ್ತು ಸುತ್ತಮುತ್ತಲಿನ ನಯನ ಮನೋಹರ ದೃಶ್ಯಗಳು ನಿಮ್ಮನ್ನು ಮಂತ್ರಮುಗ್ದಗೊಳಿಸುವಲ್ಲಿ ಸಂಶಯವೇ ಇಲ್ಲ.

ಕುಲಾಂಗ್ ಕೋಟೆಗೆ ತಲುಪುವುದು ಹೇಗೆ

ಕುಲಾಂಗ್ ಕೋಟೆಗೆ ತಲುಪುವುದು ಹೇಗೆ

Ccmarathe

ವಾಯುಮಾರ್ಗ: ಕುಲಾಂಗ್ ಕೋಟೆಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಅದು ಸುಮಾರು 140 ಕಿ.ಮೀ ಅಂತರದಲ್ಲಿರುವ ಮುಂಬೈ ವಿಮಾನ ನಿಲ್ದಾಣ. ಒಮ್ಮೆ ನೀವು ವಿಮಾನ ನಿಲ್ದಾಣ ತಲುಪಿದ ನಂತರ ನಾಶಿಕ್ ಜಿಲ್ಲೆಯಲ್ಲಿರುವ ಕುಲಾಂಗ್ ಕೋಟೆಗೆ ನೀವು ಬಾಡಿಗೆ ವಾಹನದ ಮೂಲಕ ಪ್ರಯಾಣಿಸಬಹುದಾಗಿದೆ. ಹೀಗೆ ಪ್ರಯಾಣಿಸಿದಲ್ಲಿ ನಿಮ್ಮ ಗಮ್ಯಸ್ಥಾನ ತಲುಪಲು ನಿಮಗೆ ಸರಾಸರಿ 4 ಗಂಟೆಗಳು ಬೇಕಾಗುವುದು.

ರೈಲು ಮೂಲಕ : ನಾಶಿಕ್ ತನ್ನದೇ ಆದ ರೈಲ್ವೇ ನಿಲ್ದಾಣವನ್ನು ಹೊಂದಿದೆ ಮತ್ತು ಎಲ್ಲಾ ಇತರ ಪ್ರಮುಖ ನಗರಗಳು ಮತ್ತು ಪಟ್ಟಣಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಆದುದರಿಂದ ನೀವು ನಾಸಿಕ್ ಜಂಕ್ಷನ್ ಗೆ ನೇರ ರೈಲು ಮತ್ತು ನಂತರ ಅಲ್ಲಿಂದ ಕುಲಾಂಗ್ ಕೋಟೆಗೆ ಕ್ಯಾಬ್ ಮೂಲಕ ಪ್ರಯಾಣ ಮಾಡಬಹುದು. ಕೋಟೆ ಮತ್ತು ರೈಲು ನಿಲ್ದಾಣದ ನಡುವಿನ ಅಂತರವು 55 ಕಿ.ಮೀ.

ರಸ್ತೆಯ ಮೂಲಕ: ಕುಲಾಂಗ್ ಕೋಟೆಗೆ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಬೆಟ್ಟದ ಶಿಖರವನ್ನು ತಲುಪಲು ಚಾರಣ ಮಾಡಬೇಕಾಗುತ್ತದೆ.

Read more about: travel maharashtra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more