Search
  • Follow NativePlanet
Share
» » ನಾಗದೋಷ ನಿವಾರಣೆಗೆ ಎಂದಾದರೂ ಕುಡುಪು ಕ್ಷೇತ್ರಕ್ಕೆ ಹೋಗಿದ್ದೀರಾ?

ನಾಗದೋಷ ನಿವಾರಣೆಗೆ ಎಂದಾದರೂ ಕುಡುಪು ಕ್ಷೇತ್ರಕ್ಕೆ ಹೋಗಿದ್ದೀರಾ?

ಕುಡುಪು ದೇವಸ್ಥಾನ ಮಹಿಮೆ ಕರಾವಳಿಗರೆಲ್ಲರಿಗೂ ಗೊತ್ತೇ ಇದೆ. ನಾಗಾರಾಧನೆಗೆ ಹೆಸರುವಾಸಿಯಾಗಿರುವ ಒಂದು ಭವ್ಯ ಕ್ಷೇತ್ರ ಇದು. ನಾಗ ದೇವರಿಗೆ ಸೇರಿದ ದೇವಸ್ಥಾನಗಳಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮೊದಲನೆಯ ಸ್ಥಾನದಲ್ಲಿದ್ದರೆ, ಕುಡುಪು ಪದ್ಮನಾಭ ಸ್ವಾಮಿ ದೇವಾಲಯ ಎರಡನೇ ಸ್ಥಾನದಲ್ಲಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯನು ಭಕ್ತನ ಭಕ್ತಿಗೆ ಮೆಚ್ಚಿ ನೆಲೆಸಿದ್ದಾನೆ ಎನ್ನಲಾಗುತ್ತದೆ.

 ಎಲ್ಲಿದೆ ಈ ಕ್ಷೇತ್ರ

ಎಲ್ಲಿದೆ ಈ ಕ್ಷೇತ್ರ

ನಾಗಾರಾಧನೆಗೆಂದೇ ಪ್ರಸಿದ್ಧವಾಗಿರುವ ಈ ದೇವಸ್ಥಾನವು ಮಂಗಳೂರು-ಮೂಡಬಿದ್ರೆ ಹೆದ್ದಾರಿ ಮಾರ್ಗದಲ್ಲಿ ಮಂಗಳೂರು ನಗರದಿಂದ 10 ಕಿ.ಮೀ ದೂರದಲ್ಲಿರುವ ಕುಡುಪು ಎಂಬಲ್ಲಿದೆ.

ದೇವಸ್ಥಾನದ ಇತಿಹಾಸ

ದೇವಸ್ಥಾನದ ಇತಿಹಾಸ

PC:kuduputemple

ಕರಾವಳಿಗರ ಸ್ಥಳೀಯ ಭಾಷೆಯಾದ ತುಳುವಿನಲ್ಲಿ ಕುಡುಪು ಎಂದರೆ ಅನ್ನ ಬಸೆಯುವ ಸಲಕರಣಿ ಎಂದರ್ಥ . ಕುಡುಪು ಸ್ಥಳವು ಹಿಂದೆ ಕದಳಿವನ ಎನ್ನುವ ಅರಣ್ಯ ಪ್ರದೇಶವಾಗಿತ್ತು. ಈ ಅರಣ್ಯದ ಮಧ್ಯೆ ಭದ್ರಾ ಸರಸ್ವತಿ ಸರೋವರವಿತ್ತು, ದೇವತೆಗಳು, ಋಷಿ ಮುನಿಗಳು ಇಲ್ಲಿ ಸ್ನಾನ ಮಾಡುತ್ತಿದ್ದರಂತೆ. ಕೇದಾರ ಎನ್ನುವ ಬ್ರಾಹ್ಮಣ ವ್ಯಕ್ತಿ ಮಕ್ಕಳಾಗದೆ ಚಿಂತೆಯಲ್ಲಿ ಭದ್ರಾ ಸರಸ್ವತಿ ಸರೋವರದ ಬಳಿ ಬರುತ್ತಾನೆ. ಆಗ ಶೃಂಗ ಋಷಿಯು ಆತನ ಸಮಸ್ಯೆಯನ್ನು ಕೇಳಿ ಭದ್ರಾ ಸರಸ್ವತಿ ಸರೋವರದಲ್ಲಿ ಪ್ರತಿ ನಿತ್ಯ ಸ್ನಾನ ಮಾಡಿ ಸುಬ್ರಹ್ಮಣ್ಯನ ಧ್ಯಾನ ಮಾಡುವಂತೆ ಹೇಳುತ್ತಾರೆ.

ಹಾವಿನ ಮೊಟ್ಟೆ

ಹಾವಿನ ಮೊಟ್ಟೆ

PC:kuduputemple

ಕಠಿಣ ತಪಸ್ಸನ್ನು ಮಾಡಿದ ಕೇದಾರ ಕೊನೆಗೂ ದೇವರನ್ನು ಒಲಿಸಿಕೊಳ್ಳುತ್ತಾನೆ. ಅದರಂತೆಯೇ ದೇವರು ದರ್ಶನ ನೀಡಿದಾಗ ಸಂತಾನ ಭಾಗ್ಯದ ವರ ಕೇಳುತ್ತಾನೆ. ಅದರಂತೆಯೇ ವರ್ಷದೊಳಗೆ ಕೇದಾರನ ಪತ್ನಿ ಗರ್ಭವತಿಯಾಗಿ ಮೂರು ಹಾವಿನ ಮೊಟ್ಟೆಗೆ ಜನ್ಮ ನೀಡುತ್ತಾಳೆ. ಇದರಿಂದ ಕುಪಿತನಾದ ಕೇದಾರ ಭದ್ರಾ ಸರಸ್ವತಿ ಸರೋವರದ ದಂಡೆಯಲ್ಲಿ ಕುಳಿತು ದುಃಖಿಸುತ್ತಾನೆ.

ಕುಡುಪುವಿನಲ್ಲಿ ನೆಲೆಸಿರುವ ಮಹಾಶೇಷ, ಮಹಾವಿಷ್ಣು, ಸುಬ್ರಹ್ಮಣ್ಯ

ಕುಡುಪುವಿನಲ್ಲಿ ನೆಲೆಸಿರುವ ಮಹಾಶೇಷ, ಮಹಾವಿಷ್ಣು, ಸುಬ್ರಹ್ಮಣ್ಯ

PC:kuduputemple

ಆಗ ಅಶರೀರವಾಣಿಯೊಂದು ಕೇಳಿಸುತ್ತದೆ, ಮಹಾಶೇಷ, ಮಹಾವಿಷ್ಣು ಹಾಗೂ ಸುಬ್ರಹ್ಮಣ್ಯ ಎಂದು ಲೋಕಲ್ಯಾಣಕ್ಕಾಗಿ ಕೇದಾರನ ಪತ್ನಿಯ ಹೊಟ್ಟೆಯಲ್ಲಿ ಜನ್ಮತೆತ್ತಿರುವುದಾಗಿ ಅಶರೀರವಾಣಿಯಾಗುತ್ತದೆ. ಹಾಗೂ ಆ ಮೊಟ್ಟೆಗಳನ್ನು ಸರೋವರದಲ್ಲಿ ಗುಪ್ತ ಪ್ರತಿಷ್ಠಾಪಿಸುವಂತೆ ತಿಳಿಸಲಾಗುತ್ತದೆ. ಅದರಂತೆಯೇ ಕೇದಾರ ಕುಡುಪುವಿನಲ್ಲಿ ಆ ಮೊಟ್ಟೆಯನ್ನು ತೆಗೆದುಕೊಂಡು ಹೋಗಿ ಸರೋವರದಲ್ಲಿ ಗುಪ್ತವಾಗಿ ಪ್ರತಿಷ್ಠಾಪಿಸುತ್ತಾನೆ. ನಂತರ ಆ ಸ್ಥಳದಲ್ಲಿ ಹುತ್ತ ಬೆಳೆಯುತ್ತದೆ. ಕೇದಾರ ಸುಬ್ರಹ್ಮಣ್ಯನ ಧ್ಯಾನದಲ್ಲೇ ಮುಕ್ತಿ ಹೊಂದುತ್ತಾನೆ.

ವೀರಬಾಹು ಕಥೆ

ವೀರಬಾಹು ಕಥೆ

PC:kuduputemple

ಶೂರಸೇನ ಎನ್ನುವ ರಾಜ ಕುಡುಪು ಪ್ರದೇಶವನ್ನು ಆಳುತ್ತಿದ್ದ, ಈತನಿಗೆ ವೀರಬಾಹು ಎನ್ನುವ ಮಗನಿದ್ದ. ತನ್ನ ಮಡದಿಯೆಂದು ಭಾವಿಸಿ ಮಗಳನ್ನು ಕಾಮಿಸಿದ ತಪ್ಪಿಗಾಗಿ ವೀರಬಾಹು ತನ್ನ ಬಾಹುಗಳನ್ನು ಕಳೆದುಕೊಳ್ಳುತ್ತಾನೆ. ನಂತರ ಬಂಗಾರದ ಬಾಹುಗಳನ್ನು ಧರಿಸಿ ಸ್ವರ್ಣಬಾಹುವಾದನು. ಆದರೂ ಆತನಿಗೆ ಬಾಹುಗಳಿಲ್ಲವೆಂಬ ಕೊರಗು ಕಾಡುತ್ತಿರುತ್ತದೆ. ಹೀಗೆ ಒಂದು ದಿನ ಭದ್ರಾ ಸರಸ್ವತಿ ಸರೋವರದಲ್ಲಿ ಸ್ನಾನ ಮಾಡಿ ವಿಷ್ಣುವಿನ ಧ್ಯಾನ ಮಾಡುತ್ತಾನೆ. ಒಲಿದ ವಿಷ್ಣುವು, ಮಹಾಶೇಷ, ಮಹಾವಿಷ್ಣು ಹಾಗೂ ಸುಬ್ರಹ್ಮಣ್ಯ ಲೋಕಲ್ಯಾಣಕ್ಕಾಗಿ ಇಲ್ಲಿ ನೆಲೆಸಿದ್ದು ದೇವಸ್ಥಾನ ನಿರ್ಮಾಣ ಮಾಡಿ ಬೆಳಗ್ಗಿನ ಒಳಗೆ ಗರ್ಭಗುಡಿಯನ್ನು ನಿರ್ಮಾಣ ಮಾಡಿದರೆ ಪಾಪ ವಿಮೋಚನೆಯಾಗಿ ಬಾಹುಗಳು ಮತ್ತೆ ಬರುವುದಾಗಿ ತಿಳಿಸುತ್ತಾನೆ. ಅದರಂತೆ ರಾಜ ಗರ್ಭಗುಡಿ ನಿರ್ಮಾಣ ಕಾರ್ಯದಲ್ಲಿ ತೊಡಗುತ್ತಾನೆ.

ನಾಗದೋಷ ನಿವಾರಣೆ

ನಾಗದೋಷ ನಿವಾರಣೆ

PC:kuduputemple

ಈ ಸರೋವರದಲ್ಲಿ ಸ್ನಾನ ಮಾಡಿದ್ರೆ ರೋಗ ರುಜಿನಗಳು ದೂರವಾಗುತ್ತವಂತೆ. ವಿಷ್ಣುವಿನ ಇನ್ನೊಂದು ರೂಪವಾದ ಅನಂತ ಪದ್ಮನಾಭನಿಗೆ ಸಮರ್ಪಿತವಾದ ಈ ದೇವಾಲಯವು ಸರ್ಪ ಪೂಜೆಗಾಗಿ ಪ್ರಸಿದ್ಧವಾಗಿದೆ. ಯಾವುದೇ ರೀತಿಯ ನಾಗದೋಷಗಳಿದ್ದರೂ ಪರಿಹಾರಕ್ಕಾಗಿ ಭಕ್ತರುಇಲ್ಲಿಗೆ ಬರುತ್ತಾರೆ. ಹರಕೆಯನ್ನು ನೀಡುತ್ತಾರೆ. ರಾಜ್ಯದ್ಯಾಂತ ಭಕ್ತರು ಸರ್ಪ ದೋಷ, ಸರ್ಪಾರಾಧನೆಗಾಗಿ ಈ ಕ್ಷೇತ್ರಕ್ಕೆ ಬರುತ್ತಾರೆ.

ಸೃಷ್ಠಿ, ನಾಗರಪಂಚಮಿ

ಸೃಷ್ಠಿ, ನಾಗರಪಂಚಮಿ

PC:kuduputemple

ಸೃಷ್ಠಿ, ನಾಗರಪಂಚಮಿ ಹಬ್ಬವನ್ನು ಇಲ್ಲಿ ಬಹಳ ಅದ್ದೂರಿಯಿಂದ ಆಚರಿಸಲಾಗುತ್ತದೆ. ನಾಗರಪಂಚಮಿಯಂದು ಇಲ್ಲಿನ ನಾಗಬನಕ್ಕೆ ಹಾಲೆರೆಯಲು ಭಕ್ತರ ದಂಡೇ ಬರುತ್ತದೆ. ಪಂಚಮಿ ಹಾಗೂ ಸೃಷ್ಠಿಯಂದೂ ಇಲ್ಲಿಗೆ ಭಕ್ತ ಸಾಗರವೇ ಹರಿದು ಬರುತ್ತದೆ. ಸೃಷ್ಠಿಯಂದು ದೇವರ ರಥೋತ್ಸವವೂ ನಡೆಯುತ್ತದೆ.

ಮುನ್ನೂರು ಸರ್ಪ ವಿಗ್ರಹಗಳು

ಮುನ್ನೂರು ಸರ್ಪ ವಿಗ್ರಹಗಳು

PC:kuduputemple

ಮುಖ್ಯ ದೇವಸ್ಥಾನದ ಮುಖ್ಯ ದೇವತೆ ಅನಂತ ಪದ್ಮನಾಭನು ಪಶ್ಚಿಮದ ಕಡೆಗೆ ಮುಖಮಾಡಿದ್ದಾನೆ. ನಾಗ ಬನ ದೇವಸ್ಥಾನದ ಪೂರ್ವ ಭಾಗದಲ್ಲಿ ನೆಲೆಗೊಂಡಿದ್ದರೂ ಸಹ ಇದು ಪಶ್ಚಿಮಕ್ಕೆ ಮುಖ ಮಾಡಿದೆ. ಈ ನಾಗ ಬನದಲ್ಲಿ ಸುಮಾರು ಮುನ್ನೂರು ಸರ್ಪ ವಿಗ್ರಹಗಳು ಇವೆ. ಪವಿತ್ರ ಕೊಳದ ಭದ್ರಾ ಸರಸ್ವತಿ ತೀರ್ಥವು ದೇವಾಲಯದ ಎಡಭಾಗದಲ್ಲಿದೆ. ದೇವಸ್ಥಾನದ ಮುಂಭಾಗದಲ್ಲಿ ಉಪ ದೇವತೆ ಜಾರಂದಾಯಕ್ಕೆ ಅರ್ಪಿಸಲಾದ ಒಂದು ಸಣ್ಣ ದೇವಾಲಯವಿದೆ. ಮುಖ್ಯ ಗರ್ಭಗುಡಿನ ಒಳಗಡೆ ದಕ್ಷಿಣ ಭಾಗದಲ್ಲಿ ಉಪ ದೇವತೆ ಶ್ರೀ ದೇವಿ ಮತ್ತು ಮಹಾಗ್ರಹಪತಿಯ ಗುಡಿ ಇದೆ. ದೇವಸ್ಥಾನದ ಮುಂಭಾಗದಲ್ಲಿ ಹೊರಭಾಗದಲ್ಲಿ ಒಂದು ವಾಲ್ಮಿಕಿ ಮಂಟಪವಿದೆ, ಅದರಲ್ಲಿ ಅಯ್ಯಪ್ಪ ಮತ್ತು ನವಗ್ರಹಗಳ ಗುಡಿಗಳಿವೆ.

ಆಶ್ಲೇಷ ಬಲಿ

ಆಶ್ಲೇಷ ಬಲಿ

ದೇವಾಲಯದ ಪ್ರಮುಖ ಸೇವೆಗಳಲ್ಲಿ ಆಶ್ಲೇಷ ಬಲಿಯೂ ಒಂದು. ಏಕಾದಶಿ ಮತ್ತು ವಾರ್ಷಿಕ ಉತ್ಸವದ ಸಂದರ್ಭಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಈ ಸೇವೆಯನ್ನು ನಡೆಸಬಹುದಾಗಿದೆ. ಸಂಜೆ 5 ಗಂಟೆಗೆ ಈ ಸೇವೆ ಪ್ರಾರಂಭವಾಗುತ್ತದೆ ಮತ್ತು ಸುಮಾರು 6.30 ಗಂಟೆಗೆ ಕೊನೆಗೊಳ್ಳುತ್ತದೆ. ಆಶ್ಲೇಷ ನಕ್ಷತ್ರದ ದಿನದಂದು ಇಲ್ಲಿ ಆಶ್ಲೇಷ ಸೇವೆ ಮಾಡಿಸಲು ಸಾಕಷ್ಟು ಭಕ್ತರು ಆಗಮಿಸುತ್ತಾರೆ. ಇದು ರಾತ್ರಿ 11 ಗಂಟೆಯವರೆಗೆ ನಡೆಯುತ್ತಿರುತ್ತದೆ. ಆ ದಿನ ಮಾತ್ರ ಆಶ್ಲೇಷ ಬಲಿಯಲ್ಲಿ ಭಾಗವಹಿಸಿರುವ ಭಕ್ತರಿಗೆ ರಾತ್ರಿ ಭೋಜನವನ್ನು ನೀಡಲಾಗುತ್ತದೆ. ಇದಕ್ಕೆ ಸುಮಾರು 900 ರೂ. ಖರ್ಚಾಗುತ್ತದೆ. ಆಶ್ಲೇಷ ಬಲಿ ಪೂಜೆ ಮಾಡಿಸುವವರು ಸುಮಾರು 20 ದಿನ ಮುಂಚಿತವಾಗಿ ಬುಕ್ಕಿಂಗ್ ಮಾಡಬೇಕು.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಕುಡುಪು ಶ್ರೀ ಕ್ಷೇತ್ರವನ್ನು ತಲುಪಬೇಕಾದರೆ ನೀವು ಮೊದಲು ಮಂಗಳೂರನ್ನು ತಲುಪಬೇಕು. ಮಂಗಳೂರು ಸಿಟಿ ಬಸ್‌ಸ್ಟ್ಯಾಂಡ್‌ ಅಥವಾ ಸರ್ವಿಸ್‌ ಬಸ್‌ ಸ್ಟ್ಯಾಂಡ್‌ನಲ್ಲಿ ನಿಮಗೆ ಕುಡುಪು ಕ್ಷೇತ್ರಕ್ಕೆ ಹೋಗುವ ಸಾಕಷ್ಟು ಬಸ್‌ಗಳು ಲಭ್ಯವಿದೆ. ಇನ್ನೂ ನೀವು ಮಂಗಳೂರಿನ ಯಾವುದೇ ಭಾಗದಿಂದಲೂ ಈ ಕ್ಷೇತ್ರಕ್ಕೆ ಟ್ಯಾಕ್ಸಿ ಮೂಲಕ ಹೋಗಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X