Search
  • Follow NativePlanet
Share
» » ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಶನಿ ಮಹಾತ್ಮ ನವಗ್ರಹಗಳಲ್ಲಿ ಒಂದು ಪ್ರಮುಖವಾದ ಗ್ರಹ. ಇತನನ್ನು ಭಕ್ತಿ, ಶ್ರದ್ಧೆಯಿಂದ ಭಕ್ತರು ಆರಾಧಿಸುತ್ತಾರೆ. ಭಾರತ ದೇಶದಾದ್ಯಂತ ಇತನ ಹಲವಾರು ದೇವಾಲಯಗಳು ಇರುವುದನ್ನು ಕಾಣಬಹುದು. ಶನಿ ಎಂದ ಕೂಡಲೇ ಭಯ ಅವರಿಸುವುದು ಸಹಜ. ಆದರೆ ಆತನ ದಯೆ, ಕ

ಶನಿ ಮಹಾತ್ಮ ನವಗ್ರಹಗಳಲ್ಲಿ ಒಂದು ಪ್ರಮುಖವಾದ ಗ್ರಹ. ಇತನನ್ನು ಭಕ್ತಿ, ಶ್ರದ್ಧೆಯಿಂದ ಭಕ್ತರು ಆರಾಧಿಸುತ್ತಾರೆ. ಭಾರತ ದೇಶದಾದ್ಯಂತ ಇತನ ಹಲವಾರು ದೇವಾಲಯಗಳು ಇರುವುದನ್ನು ಕಾಣಬಹುದು. ಶನಿ ಎಂದ ಕೂಡಲೇ ಭಯ ಅವರಿಸುವುದು ಸಹಜ. ಆದರೆ ಆತನ ದಯೆ, ಕರುಣೆ ಇದ್ದರೆ ಜೀವನದಲ್ಲಿ ಆಗುವ ಹಲವಾರು ಕಷ್ಟಗಳನ್ನು ನಿವಾರಣೆ ಮಾಡುವ ದೇವತಾ ಮೂರ್ತಿ ಅವನು. ಪ್ರತಿ ಶನಿವಾರದಂದು ಅನೇಕ ಭಕ್ತರು ಶನಿ ಮಹಾತ್ಮನ ದೇವಾಲಯಕ್ಕೆ ತೆರಳಿ ಎಳ್ಳು ಬತ್ತಿ ದೀಪವನ್ನು ಹಚ್ಚಿ ತಮ್ಮ ಪಾಪಗಳನ್ನು ಕಳೆದುಕೊಳ್ಳುತ್ತಾರೆ.

ನಿಮಗೆಲ್ಲಾ ತಿಳಿದಿರುವಂತೆ ಮಹಾರಾಷ್ಟ್ರದಲ್ಲಿನ ಶನಿಸಿಂಗಾಪುರದಲ್ಲಿ ಒಂದು ಮಹಿಮಾನ್ವಿತವಾದ ಶನಿ ಭಗವಾನನ ದೇವಾಲಯವಿದೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯವಿರುವ ಗ್ರಾಮದಲ್ಲಿ ಯಾವುದೇ ಮನೆಗಳಿಗೆ, ಬ್ಯಾಂಕ್‍ಗಳಿಗೆ ಬಾಗಿಲುಗಳು ಇರುವುದಿಲ್ಲ. ಇದೆಲ್ಲಾ ಆ ಶನಿ ದೇವನ ಮಹಿಮೆಯೇ ಆಗಿದೆ. ಈ ವಿಷಯ ಸಾಧಾರಣವಾಗಿ ನಿಮಗೆಲ್ಲಾ ತಿಳಿದಿರುವ ವಿಚಾರವೇ. ಈ ದೇವಾಲಯದಂತೆಯೇ ಕುಚನೂರಿನಲ್ಲಿಯೂ ಶನಿಶ್ವೇರ ದೇವಾಲಯವಿದೆ. ಈ ದೇವಾಲಯದ ವಿಶೇಷವೆನೆಂದರೆ ಶನಿದೇವ ಇಲ್ಲಿ ಸ್ವಯಂ ಭೂವಾಗಿ ನೆಲೆಸಿರುವುದೇ ವಿಶೇಷವಾಗಿದೆ.

ಹಾಗಾದರೆ ಆ ದೇವಾಲಯ ಯಾವುದು? ಆ ದೇವಾಲಯದ ಮಹಿಮೆಯಾದರೂ ಏನು? ಎಂಬುದರ ಕುರಿತು ಮಾಹಿತಿಯನ್ನು ಲೇಖನದ ಮೂಲಕ ಸಂಪೂರ್ಣವಾಗಿ ಪಡೆಯೋಣ.

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಸ್ವಯಂ ಭೂವಾಗಿ ಶನಿದೇವ ನೆಲೆಸಿರುವ ದೇವಾಲಯ ಎಲ್ಲಿದೆ ಎಂದರೆ, ತಮಿಳುನಾಡಿನ ಥೇಣಿ ಜಿಲ್ಲೆಯ ಚಿನ್ನಮಾನೂರ್ ಬಳಿ ಕುಚನೂರ್‍ನ ಬಳಿ ಈ ಕುಚನೂರ್ ಶನಿಶ್ವೇರ ದೇವಾಲಯವಿದೆ. ಈ ದೇವಾಲಯವು ಸುರಾಭಿ ಎಂಬ ನದಿಯ ಬಳಿ ಇದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಸ್ವಯಂ ಭೂವಾಗಿ ಶನೇಶ್ವರ ಸ್ವಾಮಿಯು ನೆಲೆಸಿದ್ದಾನೆ. ನವಗ್ರಹಗಳಲ್ಲಿ ಶನಿ ದೇವನಿಗೆ ಪ್ರತ್ಯೇಕವಾದ ಸ್ಥಾನವಿರುವುದು ಸಾಮಾನ್ಯವಾಗಿ ನಮಗೆ ತಿಳಿಸಿರುವುದೇ ಆಗಿದೆ.

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಶನಿ ದೇವನು ಸ್ವಯಂ ಭೂವಾಗಿ ನೆಲೆಸಿರುವ ದೇವಾಲಯಗಳಲ್ಲಿ ಇದು ಭಾರತದ ಏಕೈಕ ದೇವಾಲಯ ಎಂದು ಗುರುತಿಸಲಾಗಿದೆ. ಇದು ಥೇಣಿಯಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಇಲ್ಲಿ ಶನಿ ಭಗವನನಿಗೆ ಎಂದು ಪ್ರತ್ಯೇಕವಾದ ದೇವಾಲಯ ಕೂಡ ಇದೆ. ಕೃತಕವಾಗಿ ಸ್ವಾಮಿಯನ್ನು ಪ್ರತಿಷ್ಟಾಪನೆ ಮಾಡಿಲ್ಲ ಬದಲಾಗಿ ಸ್ವಯಂ ಭೂವಾಗಿ ಶನಿ ದೇವನೆ ನೆಲೆಸಿರುವುದು ಎಂದು ನಂಬಲಾಗಿದೆ.

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಒಂದು ದಂತಕಥೆಯ ಪ್ರಕಾರ, ಒಂದು ಕಾಲದಲ್ಲಿ ದಿನಕರನ್ ಎಂಬ ರಾಜ ಕಳಿಂಗ ದೇಶವನ್ನು ಆಳುತ್ತಿದ್ದನು. ರಾಜಧಾನಿಯನ್ನು ಮಣಿಕರ್ಣನಿಂದ ಆಳ್ವಿಕೆ ಮಾಡಲ್ಪಡುತ್ತಿತ್ತು ಎಂದು ಪುರಾಣಗಳು ಹೇಳುತ್ತವೆ. ಅವನ ಮಗನಾದ ಚಂದ್ರವಂತನು ಖ್ಯಾತ ಜ್ಯೋತಿಷಿಯಾಗಿದ್ದನು.

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆತನ ಜ್ಯೋತಿಷ್ಯ ಶಾಸ್ತ್ರದ ಜ್ಞಾನದ ಮೂಖಾಂತರ ಅವನ ತಂದೆ ಸತತ 7 ವರೆ ವರ್ಷಗಳಿಂದ ಕಷ್ಟವನ್ನು ಅನುಭವಿಸುತ್ತಿದ್ದಾನೆ ಎಂದು ತಿಳಿದುಕೊಂಡನು. ತನ್ನ ತಂದೆಗೆ ಒದಗಿರುವ ಕಷ್ಟಗಳೆಲ್ಲಾ ಆ ಶನಿ ದೇವನನ್ನು ಪ್ರಾರ್ಥಿಸಿದಾಗ ಮಾತ್ರ ನಿವಾರಣೆಯಾಗುತ್ತದೆ ಎಂದು ಲೆಕ್ಕಾಚಾರ ಹಾಕಿದನು.

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಮತ್ತೊಂದು ದಂತಕತೆಯ ಪ್ರಕಾರ, ಶ್ರೀ ಶನಿ ಭಗವಾನನು ತಪಸ್ಸು ಮಾಡಿದ ಸ್ಥಳ ಇದಾಗಿದ್ದು, ಇದರಿಂದ ಬ್ರಹ್ಮ ಹತ್ಯಾ ದೋಷದಿಂದ ಬಿಡುಗಡೆ ಹೊಂದಿದನು ಎಂದು ಹೇಳಲಾಗುತ್ತದೆ. ಒಂದು ಶಿವಲಿಂಗವು ನೆಲದಿಂದ ಹೊರಬಂದು, ಬೆಳೆಯಲು ಪ್ರಾರಂಭ ಮಾಡಿತು. ಆ ಲಿಂಗದ ಬೆಳವಣಿಗೆಯನ್ನು ಹರಿಶಿಣವನ್ನು ಹಚ್ಚುವುದರ ಮೂಲಕ ನಿಯಂತ್ರಿಸಲಾಯಿತು ಎಂದು ಹೇಳಲಾಗುತ್ತಿದೆ.

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆ ಲಿಂಗವು ಸ್ವಯಂ ಭೂವಾಗಿದ್ದು, ಕಪ್ಪು ಬಣ್ಣವನ್ನು ಹೊಂದಿದೆ. ಈ ಲಿಂಗವನ್ನು ಶನಿ ದೇವ ಎಂದು ಪೂಜಿಸಲಾಗುತ್ತಿದೆ. ಈ ದೇವಾಲಯಕ್ಕೆ ಅಪಾರ ಜನಸಾಗರವೇ ಶನಿ ದೇವನ ಆರಾಧನೆಗೆ ಭೇಟಿ ನೀಡುತ್ತಾರೆ. ಇಲ್ಲಿ ಕೇವಲ ಶನಿ ದೇವನ ವಿಗ್ರಹವೇ ಅಲ್ಲದೇ, ಸುಬ್ರಮಣ್ಯಸ್ವಾಮಿ ಕೋವಿಲ್, ವಿಘ್ನೇಶ್ವರ ದೇವಾಲಯ, ಸೋಣಿ ಕರುಪಣ್ಣಸ್ವಾಮಿ ದೇವಾಲಯಗಳು ಕೂಡ ಇಲ್ಲಿವೆ.

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಶನಿ ಗ್ರಹದಿಂದ ಆಗುವ ಪರಿಣಾಮಗಳನ್ನು ತಗ್ಗಿಸುವ ಸಲುವಾಗಿ, ಅನೇಕ ರಾಜ್ಯಗಳಿಂದ ಈ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ದೋಷಗಳನ್ನು ಪರಿಹಾರ ಮಾಡಿಕೊಳ್ಳುತ್ತಾರೆ. ಪ್ರತಿವರ್ಷವೂ ಪ್ರತಿ ತಿಂಗಳ ಶನಿವಾರ ತಮಿಳು ಆಚರಣೆಯ "ಆದಿ" ಯಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಶನಿ ದೇವನ ದರ್ಶನ ಮಾಡುವ ಮೊದಲು ಸುರಭಿ ನದಿಯಲ್ಲಿ ಸ್ನಾನ ಮಾಡಿ ನಂತರ ದೇವಾಲಯಕ್ಕೆ ತೆರಳಬೇಕಾಗಿದೆ.

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಆಶ್ಚರ್ಯ: ಸ್ವಯಂಭೂವಾಗಿ ನೆಲೆಸಿದ್ದಾನೆ ಶನೀಶ್ವರ ಸ್ವಾಮಿ..

ಶನಿ ದೇವನಿಗೆ ಇಟ್ಟ ನೈವೇದ್ಯವನ್ನು ಮೊದಲು ಕಾಗೆಗಳು ತಿಂದ ನಂತರವೇ ಭಕ್ತರಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವಂತೆ ಕಾಗೆ ಶನಿ ದೇವನ ವಾಹನವೇ ಆಗಿದೆ. ಒಂದು ಪಕ್ಷ ಕಾಗೆಗಳು ಪ್ರಸಾದವನ್ನು ತಿನ್ನದೇ ಹೋದರೆ ತಮ್ಮಿಂದ ಏನೋ ತಪ್ಪಾಗಿದೆ ಎಂದು ಭಾವಿಸಿ, ಪುರೋಹಿತರು ಸೇರಿದಂತೆ ಇಡೀ ಸಭೆಯೇ ಶನಿ ಭಗವಾನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಾರೆ.

ವಿಷೇಶವಾದ ಪೂಜೆಗಳು

ವಿಷೇಶವಾದ ಪೂಜೆಗಳು

ಶನಿ ದೇವನಿಗೆ ಆದಿ ಉತ್ಸವ ಎಂದು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸತತ 5 ವಾರಗಳ ಕಾಲ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗಾಗಿಯೇ ಕೇವಲ ತಮಿಳುನಾಡಿನ ಭಕ್ತರೇ ಅಲ್ಲದೇ ರಾಜ್ಯದ ಮೂಲೆ-ಮೂಲೆಗಳಿಂದ ಸ್ವಯಂ ಭೂವಾಗಿ ನೆಲೆಸಿರುವ ಸ್ವಾಮಿಯನ್ನು ಆರಾಧನೆ ಮಾಡಲು ಭೇಟಿ ನೀಡುತ್ತಾರೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರಸ್ತೆಯ ಮೂಲಕ: ಕುಚನೂರು ರಸ್ತೆಯ ಮೂಲಕ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ಇದು ಸೇಲಂ, ಮೆಟ್ಟೂರು, ಧರ್ಮಪುರಿ ಬಸ್ಸುಗಳಿಂದ ಪ್ರತಿ 5 ನಿಮಿಷಕ್ಕೆ ಒಮ್ಮೆ ಬಸ್ಸುಗಳು ಬರುತ್ತಿರುತ್ತವೆ.

ರೈಲ್ವೆ ಮಾರ್ಗದ ಮೂಲಕ: ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಥೇಣಿ, ದಿಂಡುಕ್ಕಲ್ ಸೇಲಂ ಮತ್ತು ಮಧುರೈ.

ವಿಮಾನ ಮಾರ್ಗದ ಮೂಲಕ: ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮಧುರೈ ಆಗಿದೆ. ಇದು ಚೆನ್ನೈನ ಮೂಲಕ ದೇಶದ ಇತರ ಭಾಗಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X