Search
  • Follow NativePlanet
Share
» » ಕ್ರಾಂತಿವನ :ಇಲ್ಲಿ ನೀವು ಭಗತ್‌ಸಿಂಗ್, ಮಂಗಲ್‌ ಪಾಂಡೆಯರನ್ನು ನೋಡಬಹುದು

ಕ್ರಾಂತಿವನ :ಇಲ್ಲಿ ನೀವು ಭಗತ್‌ಸಿಂಗ್, ಮಂಗಲ್‌ ಪಾಂಡೆಯರನ್ನು ನೋಡಬಹುದು

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯಲ್ಲಿ ಒಂದು ಕ್ರಾಂತಿವನದ ಇದೆ ಅನ್ನೋದು ನಿಮಗೆ ಗೊತ್ತಾ? ಇಲ್ಲಿ ಮಂಗಲ್ ಪಾಂಡೆ, ಚಂದ್ರಶೇಖರ್ ಆಜಾದ್ ಸೇರಿದಂತೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದಂತಹ ನೂರಾರು ಹುತಾತ್ಮರ ಹೆಸರಿನ ಮರಗಳನ್ನು ಕಾಣಬಹುದು.

ಕ್ರಾಂತಿವನ

ಕ್ರಾಂತಿವನ

ಹುತಾತ್ಮರ ಹೆಸರಿನ 700 ಮರಗಳಿರುವ ಈ ಸ್ಥಳವನ್ನು ಕ್ರಾಂತಿವನ ಎಂದು ಕರೆಯುತ್ತಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸ್ಮರಣಾರ್ಥವಾಗಿ ಇದನ್ನು ನಿರ್ಮಿಸಲಾಗಿದೆ. ಇದನ್ನು ಮುಂದುವರೆಸುವುದರ ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ಇಂತಹ ಮಹಾನುಭಾವರನ್ನು ಪರಿಚಯಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ..

ಯಾರು ಸ್ಥಾಪಿಸಿದ್ದು ?

ಯಾರು ಸ್ಥಾಪಿಸಿದ್ದು ?

ಸಂಪತ್‌ರಾವ್ ಎನ್ನುವ ವ್ಯಕ್ತಿ ಈ ವನವನ್ನು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಬಾಲ್‌ವಾಡಿ ಎನ್ನುವ ಪುಟ್ಟ ಹಳ್ಳಿಯಲ್ಲಿ ನಿರ್ಮಿಸಿದರು. ಬಹಳಷ್ಟು ಅಡೆತಡೆಗಳನ್ನು ಎದುರಿಸಿದರೂ ಈಗ ಇಲ್ಲಿ 1475 ಮರಗಳಿವೆ.

ಕೇರಳದಲ್ಲಿನ ಈ ಭಯಾನಕ ತಾಣದ ಬಗ್ಗೆ ಕೇಳಿದ್ದೀರಾ?

ಹುತಾತ್ಮರ ಸ್ಮರಣಾರ್ಥ

ಹುತಾತ್ಮರ ಸ್ಮರಣಾರ್ಥ

ಸಂಪತ್‌ರಾವ್ ಪ್ರಕಾರ ಇದು ಹುತಾತ್ಮರ ಜೀವಿತ ಸ್ಮರಣಾರ್ಥವಾಗಿದೆ. ಇದು ಯಾವತ್ತೂ ಸಾಯೋದಿಲ್ಲ. ಹಲವು ವರ್ಷಗಳ ಹಿಂದೆ ಸಂಪತ್‌ರಾವ್ಈ ಕೆಲಸಕ್ಕೆ ಕೈ ಹಾಕಿದ್ದರು. ಆದರೆ ಕೆಲವು ಗ್ರಾಮೀಣರು ಇದು ವ್ಯರ್ಥದ ಕೆಲಸ, ಇದಕ್ಕೆ ಯಾಕೆ ಸಮಯ ವ್ಯರ್ಥ ಮಾಡುವುದು ಎಂದಿದ್ದರು. ಆದರೂ ಕಷ್ಟಪಟ್ಟು ಇದನ್ನು ಸಾಧಿಸಿದ್ದೇನೆ ಎನ್ನುತ್ತಾರೆ.

 ಕ್ವಿಟ್ ಇಂಡಿಯಾ ಚಳುವಳಿ

ಕ್ವಿಟ್ ಇಂಡಿಯಾ ಚಳುವಳಿ

1942ರಲ್ಲಿ ಸಂಪತ್‌ ರಾಯ್ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿದ್ದರು. ಆ ನಂತರ1992ರಲ್ಲಿ ಸಂಪತ್‌ ರಾಯ್ ಅವರಿಗೆ ಈ ಕ್ರಾಂತಿವನ ನಿರ್ಮಿಸುವ ಆಲೋಚನೆ ಬಂದಿತು. ಆದರೆ ಸ್ಥಳೀಯರು ಯಾರೂ ಸಹಕಾರ ನೀಡಲಿಲ್ಲ. 1998ರಲ್ಲಿ ವಿದ್ಯಾರ್ಥಿಗಳಲ್ಲಿ ಈ ವನವನ್ನು ವಿಕಸನಗೊಳಿಸಲು ಕೋರಿದರು. ಅವರು ಸಹಕರಿಸಿದರು .

ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ

ಕ್ರಾಂತಿವನದ ಕನಸು

ಕ್ರಾಂತಿವನದ ಕನಸು

ಕ್ರಾಂತಿವನದ ಕನಸು ನನಸಾಗಿಸುವಲ್ಲಿ ಸಂಪತ್‌ಗೆ ಬಹಳ ಕಷ್ಟಗಳು ಎದುರಾದವು ಸರ್ಕಾರಿ ಜಮೀನಾಗಿರುವುದರಿಂದ ಅದರಲ್ಲಿ ಯಾವುದೇ ಅಭಿವೃದ್ಧಿ ಮಾಡುವಂತಿಲ್ಲ ಎಂದರು. ೧೯೯೮ರಲ್ಲಿ ವನ ವಿಭಾಗವು ಆ ಭೂಮಿಯನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ಎಲ್ಲಾ ಮರಗಳನ್ನು ಕಡಿಯಲಾಯಿತು.

ನಿಜವಾದ ಶ್ರದ್ಧಾಂಜಲಿ

ನಿಜವಾದ ಶ್ರದ್ಧಾಂಜಲಿ

ಹುತಾತ್ಮರ ಹೆಸರಲ್ಲಿ ಬಿಲ್ಡಿಂಗ್, ಸ್ಮಾರಕ ನಿರ್ಮಿಸುವ ಮೂಲಕ ಜನರ ಹಣವನ್ನು ಖರ್ಚು ಮಾಡುವುದು ಸರಿಯಲ್ಲ. ಬದಲಾಗಿ ಅವರ ಹೆಸರಿನಲ್ಲಿ ಗಿಡ ನೆಡಿ. ಅದುವೆ ಅವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿಯಾಗುತ್ತದೆ. ಕೊನೆಗೆ ಸಂಪತ್ ತನ್ನ ತನ್ನಲ್ಲಿದ್ದ 4ಎಕರೆ ಕಬ್ಬಿನ ತೋಟವನ್ನು ತೆಗೆದು ಅಲ್ಲಿ ಮರಗಳನ್ನು ನೆಡಲು ಮುಂದಾದರು ಸಂಪತ್‌ಗೆ ಅದೊಂದೇ ಮನೆಗೆ ಆಧಾರವಾಗಿದ್ದಿದ್ದು,. ಅಲ್ಲೇ ಕ್ರಾಂತಿವನ ನಿರ್ಮಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more