Search
  • Follow NativePlanet
Share
» »ಇಲ್ಲಿ ಪುರುಷರು ಮಹಿಳೆಯಾಗಿ ಬದಲಾದ್ರೆ ಮಾತ್ರ ಒಳ್ಳೆ ನೌಕರಿ ಸಿಗುತ್ತಂತೆ!

ಇಲ್ಲಿ ಪುರುಷರು ಮಹಿಳೆಯಾಗಿ ಬದಲಾದ್ರೆ ಮಾತ್ರ ಒಳ್ಳೆ ನೌಕರಿ ಸಿಗುತ್ತಂತೆ!

ದೇಶದಲ್ಲಿ ಪುರುಷರಿಗೆ ಪ್ರವೇಶವಿಲ್ಲದಂತಹ ಹಲವಾರು ದೇವಾಲಯಗಳಿವೆ. ಅಂತಹ ದೇವಾಲಯಗಳಲ್ಲಿ ಒಂದು ಕೇರಳದ ಕೊಲ್ಲಂನಲ್ಲಿದೆ. ಈ ಮಂದಿರದಲ್ಲಿ ಪುರುಷರು ಪ್ರವೇಶಿಸಬೇಕಾದರೆ ಮಹಿಳೆಯರಾಗಬೇಕಾಗುತ್ತದೆ. ಮಹಿಳೆಯರಾಗುವುದೆಂದರೆ ಲಿಂಗ ಬದಲಾಯಿಸುವುದಲ್ಲ. ಬದಲಾಗಿ ಮಹಿಳೆಯರಂತೆ ಶೃಂಗಾರ ಮಾಡಿಕೊಳ್ಳಬೇಕು.

ಪುರುಷರಿಗೆ ಪ್ರವೇಶವಿಲ್ಲ

ಪುರುಷರಿಗೆ ಪ್ರವೇಶವಿಲ್ಲ

PC:Ranji1 2000

ಈ ಮಂದಿರದಲ್ಲಿ ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಪ್ರವೇಶವಿದೆ. ಆದರೆ ಪುರುಷರಿಗೆ ಪ್ರವೇಶವಿಲ್ಲ. ಪುರುಷರು ಮಂದಿರದೊಳಗೆ ಪ್ರವೇಶಿಸಲು ಮಹಿಳೆಯರಂತೆ ವೇಷ ಭೂಷಣ ಧರಿಸಬೇಕು. ಅದಕ್ಕಾಗಿ ಇಲ್ಲಿ ಪುರುಷರಿಗೆ ಮೇಕಪ್ ಮಾಡಿಕೊಳ್ಳಲು ಅನೇಕ ರೂಮ್‌ಗಳೂ ಇವೆ.

ಪರಶುರಾಮ ಗಣೇಶನ ದಂತ ತುಂಡರಿಸಿ ಏಕದಂತನಾಗಿಸಿದ್ದು ಇಲ್ಲೇ ಪರಶುರಾಮ ಗಣೇಶನ ದಂತ ತುಂಡರಿಸಿ ಏಕದಂತನಾಗಿಸಿದ್ದು ಇಲ್ಲೇ

ಪುರುಷರು ಮಹಿಳೆಯರಾಗ್ತಾರೆ

ಪುರುಷರು ಮಹಿಳೆಯರಾಗ್ತಾರೆ

PC: Gangadharan Pillai

ಶೃಂಗಾರ ಮಾಡೋದು ಮಹಿಳೆಯರ ಕೆಲಸವಾಗಿದೆ. ಆದರೆ ಪುರುಷರು ಮಹಿಳೆಯರಂತೆ ಶೃಂಗಾರ ಮಾಡಿದ್ರೆ ಹೇಗಿರುತ್ತೆ ಅಲ್ವಾ? ಪುರುಷರ ಮಹಿಳಾ ಅವತಾರವನ್ನು ನೋಡಬೇಕಾದರೆ ನೀವು ಕೂಡಾ ಕೇರಳದ ಕೊಲ್ಲಂಗೆ ಹೋಗಬೇಕು. ಇಲ್ಲಿ ಪುರುಷರು ಮಹಿಳೆಯರಂತೆ ಸೀರೆ ಉಟ್ಟು, ಮೇಕಪ್ ಮಾಡಿಕೊಂಡು , ಹೂ ಮುಡಿದುಕೊಂಡು ಪಕ್ಕಾ ಮಹಿಳೆಯರಂತೆ ಕಾಣಿಸುತ್ತಾರೆ.

ಯಾಕಾಗಿ ಮಾಡ್ತಾರೆ ಈ ರೀತಿ ಶೃಂಗಾರ

ಯಾಕಾಗಿ ಮಾಡ್ತಾರೆ ಈ ರೀತಿ ಶೃಂಗಾರ

PC:Debjitpaul10

ಈ ರೀತಿ ಶೃಂಗಾರ ಮಾಡಿಕೊಂಡು ಹೋಗುವುದರ ಹಿಂದೆಯೂ ಒಂದು ಕಾರಣವಿದೆ . ಅದೇನೆಂದರರೆ ಪುರುಷರು ಮಹಿಳೆಯರಂತೆ ಸೀರೆ ಉಟ್ಟುಕೊಂಡು , ಮೇಕಪ್ ಮಾಡಿಕೊಂಡು ಹೋಗಿ ಪೂಜೆ ಮಾಡಿದ್ರೆ ಪುರುಷರಿಗೆ ಒಳ್ಳೆಯ ಕೆಲಸ, ಆರೋಗ್ಯ, ಯಶಸ್ಸು ಸಿಗುತ್ತದೆ ಎನ್ನುವುದು ಇಲ್ಲಿನವರ ನಂಬಿಕೆ.

ವಾಜಪೇಯಿಯವರ ನೆಚ್ಚಿನ ಸ್ವೀಟ್‌ ಶಾಪ್ ವಾಜಪೇಯಿಯವರ ನೆಚ್ಚಿನ ಸ್ವೀಟ್‌ ಶಾಪ್ "ಥಗ್ಗು ಕೀ ಲಡ್ಡು" ಬಗ್ಗೆ ನಿಮಗೆ ಗೊತ್ತಾ?

ಎಲ್ಲಿದೆ ಈ ದೇವಾಲಯ?

ಎಲ್ಲಿದೆ ಈ ದೇವಾಲಯ?

PC: Gangadharan Pillai

ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಈ ಮಂದಿರವು ಕೊಟ್ಟಕುಲಂಗರ ಶ್ರೀದೇವಿ ಮಂದಿರ. ಇಲ್ಲಿ ದೇವಿಯ ಪೂಜೆಯ ಪರಂಪರೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. 13, 14 ಮಾರ್ಚ್‌ಗೆ ಚಮಾಯಿವಿಲಕ್ಕು ಎನ್ನುವ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಸಾಕಷ್ಟು ಪುರುಷರು ಇಲ್ಲಿಗೆ ಆಗಮಿಸುತ್ತಾರೆ.

ಸ್ವಯಂಭೂ ವಿಗ್ರಹ

ಸ್ವಯಂಭೂ ವಿಗ್ರಹ

PC: Gangadharan Pillai

ಈ ಮಂದಿರದಲ್ಲಿ ದೇವಿಯ ಮೂರ್ತಿ ಸ್ವಯಂಭೂ ಆಗಿದ್ದು ಎನ್ನಲಾಗುತ್ತದೆ. ಇಲ್ಲಿ ಗರ್ಭ ಗುಡಿಯ ಮೇಲೆ ಕಲಶವಿಲ್ಲ. ಗರ್ಭಗುಡಿಯ ಮೇಲೆ ಕಲಶವಿಲ್ಲದ ಕೇರಳ ಏಕೈಕ ದೇವಸ್ಥಾನ ಇದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X