Search
  • Follow NativePlanet
Share
» »ಹಿಂಗುಲಾ ದೇವಿಯನ್ನು ಕಾಯುವ ಕೋಟೇಶ್ವರ ಭೈರವ!

ಹಿಂಗುಲಾ ದೇವಿಯನ್ನು ಕಾಯುವ ಕೋಟೇಶ್ವರ ಭೈರವ!

By Vijay

ಇದು ಭೈರವ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿದೆ. ಶಿವನನ್ನು ಇಲ್ಲಿ ಭೈರವನಾಗಿ ಪೂಜಿಸಲಾಗುತ್ತದೆ. ಪೌರಾಣಿಕ ಗ್ರಂಥಗಳಲ್ಲಿ ವಿವರಿಸಿರಲಾಗಿರುವಂತೆ ಭೈರವನು ಶಿವನ ಉಗ್ರ ಹಾಗೂ ಭಯಂಕರ ರೂಪದ ಅವತಾರವಾಗಿದ್ದಾನೆ. ಭೈರವನನ್ನು ಸಾಮಾನ್ಯವಾಗಿ ಶಕ್ತಿ ದೇವಿಯ ಸನ್ನಿಧಿಗಳನ್ನು ಕಾಯುವ ರಕ್ಷಕ ಭಟನೆಂದು ವರ್ಣಿಸಲಾಗುತ್ತದೆ. ಹಾಗಾಗಿ ಸಾಮಾನ್ಯವಾಗಿ ಎಲ್ಲ ಶಕ್ತಿಪೀಠ ಸನ್ನಿಧಿಗಳಲ್ಲಿ ಭೈರವನ ವಿಗ್ರವಿರುವುದು ಕಂಡುಬರುತ್ತದೆ.

ಈ ವಿಶಿಷ್ಟ ಶಿವಲಿಂಗಗಳನ್ನು ನೋಡಿದ್ದೀರಾ?

ಒಟ್ಟು 64 ಬಗೆಯ ಭೈರವರಿದ್ದಾರೆಂದು ಹೇಳಲಾಗಿದೆ. ಭಾರತ ಹಾಗೂ ನೇಪಾಳ ದೇಶಗಳಲ್ಲಿ ಭೈರವನನ್ನು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲಿಸುತ್ತಾರೆ. ಅಂತಹ ಒಬ್ಬ ಭೈರವ ರೂಪದ ಶಿವನ ದೇವಾಲಯವಾಗಿದೆ ಕೋಟೇಶ್ವರ ಮಹಾದೇವ ಮಂದಿರ. ಈ ಶಿವನು ಹಿಂಗ್ಲಜ್ ಮಾತಾ ಅಥವಾ ಹಿಂಗುಲಾ ದೇವಿಯನ್ನು ಕಾಯುತ್ತಾನೆ ಎನ್ನಲಾಗಿದೆ.

ಹಿಂಗುಲಾ ದೇವಿಯನ್ನು ಕಾಯುವ ಕೋಟೇಶ್ವರ ಭೈರವ!

ಕೋಟೇಶ್ವರ ಮಹಾದೇವ ದೇವಾಲಯ, ಚಿತ್ರಕೃಪೆ: યોગેશ કવીશ્વર

ಹಿಂಗ್ಲಜ್ ಮಾತಾ ದೇವಾಲಯವು ಪಾಕಿಸ್ತಾನದ ಬಲೂಚಿಸ್ತಾನ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದಾದರೂ ಕೋಟೇಶ್ವರ ಮಹಾದೇವ ಮಂದಿರವು ಅದಕ್ಕೆ ಹತ್ತಿರದಲ್ಲಿದೆ. ಅದಾಗ್ಯೂ ಈ ದೇವಾಲಯ ನಿರ್ಮಿತವಾದ ಸಂದರ್ಭದಲ್ಲಿ ಈಗಿನ ಪಾಕಿಸ್ತಾನ ಹಿಡಿದು ಎಲ್ಲ ಪ್ರಾಂತ್ಯಗಳು ಭಾರತದಲ್ಲೆ ಇದ್ದವು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೆ ಆಗಿದೆ.

ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿರುವ ಈ ಕೋಟೇಶ್ವರ ಮಹಾದೇವ ದೇವಾಲಯವು ಗುಜರಾತ್ ರಾಜ್ಯದ ಕಚ್ ಜಿಲ್ಲೆಯ ಕೋರಿ ಕ್ರೀಕ್ ಬಳಿ ಸ್ಥಿತವಿದೆ. ಕ್ರೀಕ್ ಎಂದರೆ ಖಾರಿ ಅಥವಾ ಕೊಲ್ಲಿ ಪ್ರದೇಶ ಎಂದಾಗುತ್ತದೆ. ಹಿಂದೆ ಈ ಮಹಾದೇವನ ದೇವಾಲಯವು ಸುತ್ತಲೂ ಸಮುದ್ರದ ಖಾರಿ ಪ್ರದೇಶಗಳಿಂದ ಆವೃತವಾಗಿತ್ತು ಹಾಗೂ ಮುಖ್ಯ ಭೂಮಿಯಿಂದ ಯಾವುದೆ ಸಂಪರ್ಕ ಹೊಂದಿರಲಿಲ್ಲ.

ಹಿಂಗುಲಾ ದೇವಿಯನ್ನು ಕಾಯುವ ಕೋಟೇಶ್ವರ ಭೈರವ!

ಹಿಂಗುಲಾ ದೇವಿ, ಚಿತ್ರಕೃಪೆ: Bilal Mirza

ಆದರೆ ತದನಂತರ ಗುಜರಾತ್ ಸರ್ಕಾರದಿಂದ ಇಲ್ಲಿ ರಸ್ತೆಗಳನ್ನು ನಿರ್ಮಿಸಿ ದೇವಾಲಯವನ್ನು ಸುಲಭವಾಗಿ ತಲುಪುವಂತೆ ಮಾಡಲಾಗಿದೆ. ಇನ್ನೂ ಈ ಕೋಟೇಶ್ವರ ದೇವಾಲಯವು ಬಹು ಪುರಾತನವಾಗಿದ್ದು ಹ್ಯುಯೆನ್ ತ್ಸಾಂಗ್ ಎಂಬ ಚೀನಾ ಪ್ರವಾಸಿಗ ಈ ದೇವಾಲಯದ ಕುರಿತು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು. ಈ ದೇವಾಲಯಕ್ಕೆ ಸಂಬಂಧಿಸಿದಂತೆ ದಂತಕಥೆಯೊಂದು ಪ್ರಚಲಿತದಲ್ಲಿದೆ.

ಆ ದಂತಕಥೆಯ ಪ್ರಕಾರವಾಗಿ, ರಾವಣನು ಒಮ್ಮೆ ಅತಿ ಕಠಿಣವಾದ ತಪಸ್ಸನ್ನಾಚರಿಸಿ ಶಿವನನ್ನು ಮೆಚ್ಚಿಸಿ ಅವನಿಂದ ಶಿವಲಿಂಗವೊಂದನ್ನು ಪಡೆದಿದ್ದನು. ಹೀಗೆ ಪಡೆದ ಶಿವಲಿಂಗವನ್ನು ಕೊಂಡೊಯ್ಯುವಾಗ ಅವನ ನಿರ್ಲಕ್ಷದಿಂದಾಗಿ ಶಿವಲಿಂಗವು ಭೂಮಿಯ ಮೇಲೆ ಬಿದ್ದಿತು. ಶಿವನು ರಾವಣ ತೋರಿದ ನಿರ್ಲಕ್ಷಕ್ಕೆ ಶಿಕ್ಷಿಸುವ ಸಲುವಾಗಿ ಶಿವಲಿಂಗ ಬಿದ್ದ ಸ್ಥಳದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಅದೆ ರೀತಿಯ ಶಿವಲಿಂಗಗಳು ಉದ್ಭವಿಸುವಂತೆ ಮಾಡಿದನು.

ಹಿಂಗುಲಾ ದೇವಿಯನ್ನು ಕಾಯುವ ಕೋಟೇಶ್ವರ ಭೈರವ!

ಕೋಟೇಶ್ವರದ ಬಳಿಯಿರುವ ಬಂದರು, ಚಿತ್ರಕೃಪೆ: Amit.tannk

ರಾವಣನು ನೈಜವಾದ ಶಿವಲಿಂಗ ಯಾವುದೆಂಬ ಗೊಂದಲದಲ್ಲಿ ಬಿದ್ದನು. ಹಾಗೆ ಶಿವಲಿಂಗವನ್ನು ಹುಡುಕುತ್ತಿರುವಾಗ ಮತ್ತೆ ಶಿವನು ಕೋಟಿ ಸಂಖ್ಯೆಯಲ್ಲಿ ಶಿವಲಿಂಗಗಳು ಉದ್ಭವಿಸುವಂತೆ ಮಾಡಿದನು. ಈಗ ರಾವಣನಿಗೆ ಇನ್ನಷ್ಟು ಗೊಂದಲ ಉಂಟಾಗಿ ಯಾವುದೊ ಒಂದು ಶಿವಲಿಂಗವನ್ನು ಎತ್ತಿಕೊಂಡು ಹೊರಟು ಹೋದನು. ಆದರೆ ನೈಜ ಶಿವಲಿಂಗವನ್ನು ಅವನಿಂದ ಗುರುತಿಸಲಾಗದೆ ಅದು ಇಲ್ಲಿಯೆ ಉಳಿಯಿತು.

ಭಾರತದಲ್ಲಿರುವ ಅತಿ ಪ್ರಮುಖ ಶಿವನ ದೇವಸ್ಥಾನಗಳು

ಆ ನೈಜವಾದ ಶಿವಲಿಂಗವಿರುವ ಸ್ಥಳವೆ ಇಂದು ಕೋಟೇಶ್ವರ ಮಹಾದೇವನ ದೇವಾಲಯವಾಗಿದೆ. ಈ ಭೈರವನ ದರ್ಶನ ಕೋರಿ ಬರುವ ಭಕ್ತರು ಕೋಟೇಶ್ವರನ ದರ್ಶನ ಪಡೆದು ನಂತರ ಹಿಂಗ್ಲಜ್ ಮಾತೆಯ ದರ್ಶನ ಪಡೆಯುವ ಪದ್ಧತಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಆದರೆ ಇಂದು ಹಿಂಗ್ಲಜ್ ಪಾಕಿಸ್ತಾನಕ್ಕೆ ಸೇರಿರುವುದರಿಂದ ಆ ರೀತಿಯ ದರ್ಶನ ಪಡೆಯಲು ಪ್ರಸ್ತುತ ಕಠಿಣ ಸಾಧ್ಯವಾಗಿರುವುದು ದುರದೃಷ್ಟಕರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X