Search
  • Follow NativePlanet
Share
» »ಆಂಜನೇಯ ಸ್ವಾಮಿ ಜನಿಸಿದ ಪ್ರದೇಶವಿದು...!!

ಆಂಜನೇಯ ಸ್ವಾಮಿ ಜನಿಸಿದ ಪ್ರದೇಶವಿದು...!!

By Sowmyabhai

ಕೊಪ್ಪಳ ಪ್ರದೇಶವು ತನ್ನ ಗತ ಚರಿತ್ರೆಯ ಬಗ್ಗೆ ಗಮನಿಸಿದರೆ ಈ ಪ್ರದೇಶವನ್ನು ಗಂಗರು, ಹೊಯ್ಸಳರು, ಚಾಳುಕ್ಯ ರಾಜವಂಶಸ್ಥರು ಆಳ್ವಿಕೆ ಮಾಡಿದ್ದಾರೆ. ಕೊಪ್ಪಳವನ್ನು ಹಳೆಯ ಕಾಲದಲ್ಲಿ ಕೊಪ್ಪನಗರ ಎಂದು ಕರೆಯುತ್ತಿದ್ದರು. ಈ ಪ್ರದೇಶವು ಜೈನರಿಗೆ ಪ್ರಸಿದ್ಧವಾದ ಯಾತ್ರಾಸ್ಥಳವಾಗಿ ಗುರುತಿಸಲಾಗಿದೆ. ಸುಂದರವಾದ ದೇವಾಲಯಗಳು, ಗೋಡೆಗಳ ಮೇಲೆ ಕೆತ್ತನೆ ಮಾಡಿರುವ ಶಿಲ್ಪಕಲೆಗಳಿಂದ ಕಂಗೊಳಿಸುತ್ತಿರುವ ಕೊಪ್ಪಳ ಪಟ್ಟಣದ ಪ್ರಸಿದ್ಧವಾದ ಪ್ರದೇಶಗಳನ್ನು ಒಮ್ಮೆ ನೋಡಲೇಬೇಕು ಅಲ್ಲವೇ? ಇಲ್ಲಿಯೂ ಕೂಡ ಅನೇಕ ಪ್ರವಾಸಿ ತಾಣಗಳು ಇವೆ.

ಕೊಪ್ಪಳ ಕರ್ನಾಟಕ ರಾಜ್ಯದ ಉತ್ತರ ದಿಕ್ಕಿನಲ್ಲಿರುವ ಒಂದು ಜಿಲ್ಲೆಯಾಗಿದೆ. ಈ ಜಿಲ್ಲೆ ಪ್ರಸಿದ್ಧ ವಿಶ್ವ ಪಾರಂಪರಿಕ ಪ್ರದೇಶವಾದ ಹಂಪಿ ಪಟ್ಟಣಕ್ಕೆ ಸುಮಾರು 44 ಕಿ.ಮೀ ದೂರದಲ್ಲಿ, ಬೆಂಗಳೂರು ನಗರದಿಂದ ಸುಮಾರು 300 ಕಿ.ಮೀ ದೂರದಲ್ಲಿದೆ. ಇಲ್ಲಿರುವ ದೇವಾಲಯಗಳು ಮರಳಿನ ಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಯವುದೇ ಧರ್ಮದ ಬೇಧ-ಭಾವವಿಲ್ಲದೇ ಶಿಲ್ಪಕಲಾ ನೈಪುಣ್ಯವನ್ನು ಇಲ್ಲಿ ಕಣ್ಣುತುಂಬಿಕೊಳ್ಳಬಹುದು.

1.ಮಹಾದೇವ ದೇವಾಲಯ

1.ಮಹಾದೇವ ದೇವಾಲಯ

Photo Courtesy: Dcoetzee

ಕೊಪ್ಪಳ ಪಟ್ಟಣದಲ್ಲಿನ ಯಲ್ಬರ್ಗಾ ತಾಲ್ಲೂಕಿನಲ್ಲಿ ಇತ್ತಗಿ ಎಂಬ ಒಂದು ಚಿಕ್ಕದಾದ ಪಟ್ಟಣದಲ್ಲಿ, ಪಶ್ಚಿಮ ಚಾಳ್ಯುಕ್ಯರ ಕಾಲದಲ್ಲಿ ನಿರ್ಮಾಣ ಮಾಡಲ್ಪಟ್ಟ ಅತಿ ಪ್ರಮುಖವಾದ ದೇವಾಲಯವೇ ಮಹಾದೇವ ದೇವಾಲಯ. ಈ ದೇವಾಲಯವನ್ನು ನೋಡಲು ಅತ್ಯಂತ ಸುಂದರವಾಗಿರುತ್ತದೆ. ಈ ದೇವಾಲಯದಲ್ಲಿ ಮಹಾಶಿವನು ಲಿಂಗ ರೂಪದಲ್ಲಿ ನೆಲೆಸಿದ್ದಾನೆ. ದೇವಾಲಯದ ಕೆತ್ತನೆಯು ಅಮೋಘವಾಗಿದ್ದು, ಪ್ರವಾಸಿಗರಿಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಈ ದೇವಾಲಯವನ್ನು ನಿರ್ಮಾಣ ಮಾಡುವ ಸಲುವಾಗಿ ಚಾಳುಕ್ಯರು ಮರಳಿನ ಕಲ್ಲುಗಳನ್ನು ಹಾಗು ಸೋಪ್ ಸ್ಟೋನ್ ಅನ್ನು ಉಪಯೋಗಿಸಿದ್ದಾರೆ.

2.ಕೂಕನೂರ್

2.ಕೂಕನೂರ್

Photo Courtesy: Dineshkannambadi

ಕೊಪ್ಪಳ ಪಟ್ಟಣಕ್ಕೆ ಸುಮಾರು 14 ಕಿ.ಮೀ ದೂರದಲ್ಲಿರುವ ಕೂಕನೂರ್‍ನ ಮಧ್ಯ ಯುಗದ ಭವನಗಳು, ಎಷ್ಟೊ ಪುರಾತನವಾದ ದೇವಾಲಯಗಳು ಇವೆ. ಅವುಗಳಲ್ಲಿ ನವಲಿಂಗ, ಕಾಳೇಶ್ವರ, ಮಲ್ಲಿಖಾರ್ಜುನ, ಮಹಾಮಾಯ ದೇವಾಲಯಗಳು ಅತ್ಯಂತ ಪ್ರಸಿದ್ಧವಾದುದು. ನವಲಿಂಗ ದೇವಾಲಯದಲ್ಲಿ 9 ನೇ ಶತಮಾನದ್ದು, ಇದರಲ್ಲಿ ಅನೇಕ ಚಾರಿತ್ರಿಕ ಶಾಸನಗಳು ಇವೆ. ಇಲ್ಲಿ ಒಟ್ಟು 9 ಶಿವಲಿಂಗಗಳು ಇವೆ. ಇಲ್ಲಿನ ಮಹಾಮಾಯ ದೇವಾಲಯದ ಬಗ್ಗೆ ಮಹಾಭಾರತದಲ್ಲಿಯೂ ಕೂಡ ಉಲ್ಲೇಖವಿದೆ.

3.ಕೊಪ್ಪಳ ಕೋಟೆ

3.ಕೊಪ್ಪಳ ಕೋಟೆ

Photo Courtesy: vingoldy

ಕೊಪ್ಪಳದಲ್ಲಿ ಚಾರಿತ್ರಿಕ ಪ್ರಧಾನ್ಯತೆಯನ್ನು ಹೊಂದಿರುವ ಹಾಗು ದೊಡ್ಡ ಆಕರ್ಷಣೆಯ ಪ್ರವಾಸಿ ಕೇಂದ್ರವಾಗಿ ಕೊಪ್ಪಳ ಕೋಟೆ ಪ್ರಸಿದ್ಧಿಯನ್ನು ಪಡೆದಿದೆ. ಸುಮಾರು 400 ಅಡಿ ಎತ್ತರ ನಿರ್ಮಾಣ ಮಾಡಲಾದ ಈ ಕೋಟೆಯನ್ನು ಎಷ್ಟೊ ದೃಢವಾಗಿದೆ. ಟಿಪ್ಪುಸುಲ್ತಾನ್ ಈ ಕೋಟೆಯನ್ನು ಮರಾಠ ವೀರರನ್ನು ಯುದ್ಧದಲ್ಲಿ ಓಡಿಸಿ ವಶಪಡಿಸಿಕೊಂಡನು. ಆ ನಂತರ ಫ್ರೆಂಚ್ ಇಂಜಿನಿಯರ್ ಸಹಕಾರದಿಂದ ಪುನರ್ ನಿರ್ಮಾಣ ಮಾಡಿದನು ಎಂದು ಚರಿತ್ರೆಕಾರರ ಅಭಿಪ್ರಾಯವಾಗಿದೆ.

4.ಕನಕಗಿರಿ

4.ಕನಕಗಿರಿ

Photo Courtesy: Dineshkannambadi

ಕನಕಗಿರಿ ಕೊಪ್ಪಳದಿಂದ ಸುಮಾರು 37 ಕಿ.ಮೀ ದೂರದಲ್ಲಿದೆ. ಗಂಗಾವತಿ ತಾಲ್ಲೂಕಿನಿಂದ ಸುಮಾರು 17 ಕಿ.ಮೀ ದೂರದಲ್ಲಿದೆ. ಇದನ್ನು ಸುವರ್ಣಗಿರಿ ಎಂದು ಕೂಡ ಕರೆಯುತ್ತಾರೆ. ಕನಕಗಿರಿ ಎಂದರೆ ಬಂಗಾರ ಪರ್ವತ ಎಂದು ಅರ್ಥವಾಗಿದೆ. ಇಲ್ಲಿರುವ ಪುರಾತನ ದೇವಾಲಯದಲ್ಲಿ ಕನಕ ಛಲಪತಿ ದೇವಾಲಯವು ಪ್ರಸಿದ್ಧವಾದುದು. ಈ ದೇವಾಲಯದಲ್ಲಿ ಶಿಲ್ಪ ಕಲಾ ಚಾತುರ್ಯ ಯಾತ್ರಿಕರನ್ನು ಆಕರ್ಷಿಸುತ್ತದೆ. ಕನಕಗಿರಿಯ ಸಮೀಪದಲ್ಲಿರುವ ಚಾರಿತ್ರಿಕ ಪ್ರದೇಶಗಳು ಅತಿ ಹೆಚ್ಚು ಪ್ರಾಧಾನ್ಯತೆಯನ್ನು ಹೊಂದಿದೆ.

5.ಕಿನ್ನಾಲ್

5.ಕಿನ್ನಾಲ್

Photo Courtesy: Shobhana Swami

ಕೊಪ್ಪಳ ಜಿಲ್ಲೆಯಲ್ಲಿ, ಪ್ರತಿ ವರ್ಷ ಅನೇಕಮಂದಿ ಸ್ಥಳೀಯರು ಕೈನಿಂದ ಮಾಡಿದ ವಸ್ತುಗಳನ್ನು ಕೊಳ್ಳುವ ಸಲುವಾಗಿ ಕಿನ್ನಾಲ್‍ಗೆ ಭೇಟಿ ನೀಡುತ್ತಾರೆ. ಕೈನಿಂದ ತಯಾರಿಸಿದ ವಸ್ತುಗಳೇ ಅಲ್ಲದೇ ಅನೇಕ ಅಲಂಕಾರಿಕ ವಸ್ತುಗಳು ಕೂಡ ಇಲ್ಲಿ ದೊರೆಯುತ್ತವೆ. ಇಲ್ಲಿ ಹಸ್ತಕಲಾ ನಿಪುಣರು ಪ್ರವಾಸಿಗರಿಗೆ ಚಿಕ್ಕ ಚಿಕ್ಕ ವಸ್ತುಗಳ ತಯಾರಿಕೆಗಾಗಿ ಕೆಲವು ತಂತ್ರಗಳನ್ನು ಕೂಡ ಕಲಿಸುತ್ತಾರೆ.

6.ಹುಲಿಗೆಮ್ಮ ದೇವಾಲಯ

6.ಹುಲಿಗೆಮ್ಮ ದೇವಾಲಯ

Photo Courtesy: Shankar Adisesh

ಕೊಪ್ಪಳ ಜಿಲ್ಲೆಯಲ್ಲಿರುವ ಮುನಿರಾಬಾದ್‍ಗೆ ಪುರಾಣದ ಪ್ರಾಧಾನ್ಯತೆ ಇದೆ. ಅನೇಕ ಬೆಟ್ಟಗಳು, ಪಂಪಾನದಿ ಇಲ್ಲಿಯೇ ಇದೆ. ಈ ಪ್ರದೇಶದಲ್ಲಿ ಹುಲಿಗೆಮ್ಮ ದೇವಾಲಯಕ್ಕೆ ಪ್ರವಾಸಿಗರು ಅಥವಾ ಭಕ್ತರು ತಪ್ಪದೇ ಭೇಟಿ ನೀಡಲೇಬೇಕು. ಇಲ್ಲಿ ಹುಲಿಗೆಮ್ಮ ದೇವತೆಯನ್ನು ಆರಾಧಿಸುತ್ತಾರೆ. ದೇವಾಲಯವನ್ನು ನೋಡುವ ಮೊದಲು ಒಂದು ದೊಡ್ಡದಾದ ಧ್ವಜಸ್ತಂಭವನ್ನು ನೋಡಬೇಕು. ಇಲ್ಲಿನ ಧ್ವಜಸ್ತಂಭವು ಸುಮಾರು 25 ಅಡಿ ಎತ್ತರದಲ್ಲಿದ್ದು, ಪ್ರವಾಸಿಗರಿಗೆ ನೋಡಲಾಗದೇ ಇರುವ ರೀತಿಯಲ್ಲಿ ಆಕರ್ಷಣೆ ಮೂಡಿಸುತ್ತದೆ.

7.ಸೋಮೆಶ್ವರ ದೇವಾಲಯ

7.ಸೋಮೆಶ್ವರ ದೇವಾಲಯ

Photo Courtesy: karnataka tourism

ಕೊಪ್ಪಳ ಜಿಲ್ಲೆಯಲ್ಲಿ ಕುಷ್ಟಗಿ ತಾಲ್ಲೂಕಿನಲ್ಲಿರುವ ಪುರ ಎಂಬ ಪ್ರದೇಶವು ಪ್ರಸಿದ್ಧಿಯನ್ನು ಹೊಂದಿರುವ ಶಿವಾಲಯವಿದೆ. ಆ ಶಿವಾಲಯವೇ ಸೋಮೇಶ್ವರ ದೇವಾಲಯ. ಈ ಪ್ರಾಚೀನವಾದ ದೇವಾಲಯದಲ್ಲಿ ಹೊಯ್ಸಳ ಕಾಲದ ಶಿಲ್ಪ ಸಂಪತ್ತನ್ನು ಕಾಣಬಹುದು. ಈ ದೇವಾಲಯದಲ್ಲಿ ಪ್ರಧಾನವಾದ ದೈವ ಶಿವನು ನೆಲೆಸಿದ್ದಾನೆ. ಮಹಾಶಿವನ ಎದುರಿಗೆ ನಂದಿ ಕೂಡ ನೆಲೆಸಿದ್ದಾನೆ.

8.ಮುನಿರಾಬಾದ್

8.ಮುನಿರಾಬಾದ್

Photo Courtesy: suresh_sathyanarayana

ಕೊಪ್ಪಳ ಪಟ್ಟಣದಲ್ಲಿನ ಮುನಿರಾಬಾದ್ ಪ್ರಶಾಂತವಾಗಿದ್ದು, ಹಚ್ಚ ಹಸಿರಿನಿಂದ ಕೂಡಿದೆ. ಇಲ್ಲಿ ತುಂಗಭದ್ರ ನದಿ ಸಮೀಪದಲ್ಲಿಯೇ ಈ ಪಟ್ಟಣವಿದೆ, ಮುನಿರಾಬಾದ್ ಸ್ಥಳೀಯ ಆಕರ್ಷಣೆಗಳೆಂದರೆ ಅದು ತುಂಗಭದ್ರ ಡ್ಯಾಮ್, ಪಂಪಾ ಸರೋವರ, ವಾಲಿ ಬೆಟ್ಟ, ಹುಲಿಗಮ್ಮ ಮಠ ಮತ್ತು ಬೆಟ್ಟಗಳು. ರಿಷ್ಯಮೂಲ ಬೆಟ್ಟಗಳು ರಾಮಾಯಣ ಕಾಲದಲ್ಲಿ ಈ ಪ್ರದೇಶಕ್ಕೆ ಎಷ್ಟೋ ಪ್ರಮೂಖ್ಯತೆ ಇತ್ತು. ವಾಲಿ ಬೆಟ್ಟ ಎಂಬುದನ್ನು ವಾಲಿ ಕೋಟೆ ಎಂದು ಕರೆಯುತ್ತಾರೆ. ರಾಮಾಯಣದ ಸಮಯದಲ್ಲಿ ಶ್ರೀರಾಮನು ಹನುಮಂತನನ್ನು ಮೊಟ್ಟ ಮೊದಲ ಬಾರಿಗೆ ರಿಷ್ಯಮೂಕ ಬೆಟ್ಟದ ಮೇಲೆ ಭೇಟಿಯಾದನು.

9.ಅನೆಗುಂಡಿ

9.ಅನೆಗುಂಡಿ

Photo Courtesy: Bala Subramanian

ಕೊಪ್ಪಳದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಅನೆಗುಂಡಿ ತುಂಗಭದ್ರ ನದಿ ತೀರದಲ್ಲಿದೆ. ಈ ಪ್ರದೇಶದಲ್ಲಿ ಅಂಜನಾದ್ರಿ ಬೆಟ್ಟ ಇದೆ. ಅಂದರೆ ಹನುಮಂತನ ಜನ್ಮಸ್ಥಾನ. ಇದು ಪ್ರವಾಸಿಗರಿಗೆ ಮುಖ್ಯವಾಗಿ ಆಕರ್ಷಿಸುತ್ತದೆ. ಅನೆಗುಂಡಿ ಪ್ರದೇಶವನ್ನು ನೋಡಬೇಕಾದರೆ ತೆಪ್ಪದಲ್ಲಿ ಪ್ರಯಾಣಿಸಬೇಕಾಗುತ್ತದೆ. ಇಲ್ಲಿ ಪುರಾತನವಾದ ದೇವಾಲಯಗಳು, ಕೋಟೆಗಳು, ನದಿಗಳು ಪ್ರಧಾನವಾಗಿ ಆಕರ್ಷಿಸುತ್ತದೆ.

10.ಕೊಪ್ಪಳಗೆ ಹೇಗೆ ಸೇರಿಕೊಳ್ಳಬೇಕು?

10.ಕೊಪ್ಪಳಗೆ ಹೇಗೆ ಸೇರಿಕೊಳ್ಳಬೇಕು?

Photo Courtesy: ishmael1973

ರಸ್ತೆ ಮಾರ್ಗದ ಮೂಲಕ
ಕೊಪ್ಪಳ ಪಟ್ಟಣಕ್ಕೆ ರಾಜ್ಯದ ಪ್ರಧಾನವಾದ ನಗರಗಳಾದ ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಮೊದಲಾದ ಪ್ರದೇಶಗಳಿಂದ ಸುಲಭವಾಗಿ ಭೇಟಿ ನೀಡಬಹುದಾಗಿದೆ.

ರೈಲ್ವೆ ಮಾರ್ಗದ ಮೂಲಕ
ಕೊಪ್ಪಳಕ್ಕೆ ದೇಶದಲ್ಲಿನ ವಿವಿಧ ಪಟ್ಟಣಗಳಿಂದ ರೈಲ್ವೆ ಪ್ರಯಾಣ ಸೌಕರ್ಯವಿದೆ.

ವಿಮಾನ ಮಾರ್ಗದ ಮೂಲಕ
ಕೊಪ್ಪಳಗೆ ಸಮೀಪದಲ್ಲಿನ ವಿಮಾನ ನಿಲ್ದಾಣವು ಹುಬ್ಬಳ್ಳಿಯಲ್ಲಿನ ದೇಶಿಯ ವಿಮಾನ ನಿಲ್ದಾಣ. ಕೊಪ್ಪಳದಿಂದ ಈ ವಿಮಾನ ನಿಲ್ದಾಣವು ಸುಮಾರು 154 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X