Search
  • Follow NativePlanet
Share
» »ಸ್ಟೀಲ್ ಸಿಟಿ ಜೇಮ್‌ಶೆಡ್ ಪುರಕ್ಕೆ ಒಂದು ಪ್ರವಾಸ

ಸ್ಟೀಲ್ ಸಿಟಿ ಜೇಮ್‌ಶೆಡ್ ಪುರಕ್ಕೆ ಒಂದು ಪ್ರವಾಸ

By Manjula Balaraj Tantry

ಚೋಟಾ ನಾಗ್ಪುರ್ ಪ್ರಸ್ಥಭೂಮಿಯ ಅಭಿವೃದ್ದಿ ಹೊಂದುತ್ತಿರುವ ಬಯಲು ಪ್ರದೇಶದಲ್ಲಿರುವ ಜೆಮ್‌್ಶೆಡ್ ಪುರ ಭಾರತದಲ್ಲಿಯ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲೊಂದಾಗಿದೆ. ಜಾರ್ಖಾಂಡ್ ನ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದರೂ ಕೂಡಾ ಇಲ್ಲಿಯ ನೈಸರ್ಗಿಕ ಸೌಂದರ್ಯವು ನಗರವನ್ನು ಇನ್ನೂ ವಿಭಿನ್ನವಾಗಿಸುತ್ತದೆ. ಸುತ್ತಲೂ ದಾಲ್ಮಾ ಬೆಟ್ಟಗಳು ಮತ್ತು ಗಮನಾರ್ಹವಾಗಿರುವ ಭವ್ಯವಾದ ಸ್ಥಳಗಳಿಂದ ಸುತ್ತುವರಿಯಲ್ಪಟ್ಟ ಜೆಮ್‌್ಶೆಡ್ ಪುರ ಕೊಲ್ಕತ್ತಾದಿಂದ ಹೋಗಬಹುದಾದ ಒಂದು ಉತ್ತಮವಾದ ವಾರಾಂತ್ಯದ ರಜಾ ತಾಣವಾಗಿದೆ. ಆದುದರಿಂದ ಕೊಲ್ಕತ್ತಾದಿಂದ ಜೆಮ್‌್ಶೆಡ್ ಪುರಕ್ಕೆ ಹೋಗಲು ಏಕೆ ಯೋಚನೆ ಮಾಡಬಾರದು?

1. ಜೆಮ್‌್ಶೆಡ್ ಪುರಕ್ಕೆ ಭೇಟಿ ಕೊಡಲು ಸೂಕ್ತ ಸಮಯ

1. ಜೆಮ್‌್ಶೆಡ್ ಪುರಕ್ಕೆ ಭೇಟಿ ಕೊಡಲು ಸೂಕ್ತ ಸಮಯ

ಜೆಮ್‌್ಶೆಡ್ ಪುರ ಪ್ರದೇಶದ ಸುತ್ತಮುತ್ತಲಿನ ಸ್ಥಳಗಳಲ್ಲಿ ಬೇಸಿಗೆಯು ತೀವ್ರವಾಗಿ ಬಿಸಿಯಾಗಿರುವುದರಿಂದ ಈ ಸಮಯದಲ್ಲಿ ಈ ಸ್ಟೀಲ್ ನಗರಕ್ಕೆ ಭೇಟಿ ಕೊಡುವುದು ಅಷ್ಟು ಸೂಕ್ತವಲ್ಲ. ನೀವು ದಟ್ಟವಾದ ಹಸಿರುಮಯ ಪರಿಸರವನ್ನು ಅದರ ಬೆಟ್ಟಗಳ ಮತ್ತು ಬಯಲುಗಳಲ್ಲಿ ನೋಡಬೇಕೆಂದಿರುವಿರಾದಲ್ಲಿ ಜೆಮ್‌್ಶೆಡ್ ಪುರಕ್ಕೆ ಅಕ್ಟೋಬರ ತಿಂಗಳಿನಿಂದ ಮಾರ್ಚ್ ತಿಂಗಳ ಕೊನೆಯವರೆಗೆ ಭೇಟಿ ಕೊಡಲು ಸೂಕ್ತವಾದ ಸಮಯವಾಗಿದೆ.

2. ಕೊಲ್ಕತ್ತಾದಿಂದ ಜೆಮ್‌ಶೆಡ್ ಪುರ ತಲುಪುವುದು ಹೇಗೆ?

2. ಕೊಲ್ಕತ್ತಾದಿಂದ ಜೆಮ್‌ಶೆಡ್ ಪುರ ತಲುಪುವುದು ಹೇಗೆ?

ವಾಯುಮಾರ್ಗ: ನೀವು ಜೆಮ್‌್ಶೆಡ್ ಪುರ ವಿಮಾನ ನಿಲ್ದಾಣಕ್ಕೆ ನೇರವಾಗಿ ವಿಮಾನದಲ್ಲಿ ಪ್ರಯಾಣ ಮಾಡಬಹುದು. ಕೋಲ್ಕತ್ತಾ ದಿಂದ ಜೆಮ್‌್ಶೆಡ್ ಪುರ ತಲುಪಲು ಸುಮಾರು 2 ತಾಸುಬೇಕಾಗಬಹುದು.
ರೈಲು ಮೂಲಕ : ಜೆಮ್‌್ಶೆಡ್ ಪುರವು ಕೊಲ್ಕತ್ತಾ ಹಾಗು ಇನ್ನಿತರ ನಗರಗಳಿಗೆ ರೈಲಿನ ಮಾರ್ಗದ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ನೀವು ಕೊಲ್ಕತ್ತಾ ರೈಲ್ವೇ ನಿಲ್ದಾಣದಿಂದ ಜೆಮ್‌್ಶೆಡ್ ಪುರ ರೈಲ್ವೇ ನಿಲ್ದಾಣಕ್ಕೆ ನೇರವಾಗಿ ರೈಲು ಮೂಲಕ ಪ್ರಯಾಣ ಮಾಡಬಹುದು.
ರಸ್ತೆಯ ಮೂಲಕ: ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಜೆಮ್‌್ಶೆಡ್ ಪುರವನ್ನು ರಸ್ತೆ ಮೂಲಕ ಸುಲಭವಾಗಿ ತಲುಪಬಹುದು. ಕೊಲ್ಕತ್ತಾದಿಂದ ಸುಮಾರು 280 ಕಿ.ಮೀ ದೂರದಲ್ಲಿದೆ ಆದ್ದರಿಂದ ನೀವು ಜೆಮ್‌್ಶೆಡ್ ಪುರವನ್ನು 6 ಗಂಟೆ 30 ನಿಮಿಷಗಳಲ್ಲಿ ತಲುಪಬಹುದು

ಮಾರ್ಗ 1 : ಕೊಲ್ಕತ್ತಾ - ಜಾರ್ ಗ್ರಮ್- ಜೆಮ್‌್ಶೆಡ್ ಪುರ
ಮಾರ್ಗ 2 : ಕೊಲ್ಕತ್ತಾ - ಬಿಷ್ಣುಪುರ್- ಜೆಮ್‌್ಶೆಡ್ ಪುರ
ಮಾರ್ಗ 3: ಕೊಲ್ಕತ್ತಾ - ದುರ್ಗಾಪುರ್- ಜೆಮ್‌್ಶೆಡ್ ಪುರ

ಮಾರ್ಗ 1 ವೇಗವಾಗಿ ತಲುಪಬಹುದಾದ ಮಾರ್ಗವಾಗಿದ್ದು ಬೇರೆ ದಾರಿಗಳಿಗೆ ಹೋಲಿಸಿದರೆ ಈ ದಾರಿಯಲ್ಲಿ ಪ್ರಯಾಣ ಮಾಡಿದರೆ ಅರ್ಧ ಗಂಟೆ ಮುಂಚಿತವಾಗಿಯೇ ತಲುಪಬಹುದು. ಜೆಮ್‌್ಶೆಡ್ ಪುರದ ಮಾರ್ಗದಲ್ಲಿ ನೀವು ಜಾರ್ ಗ್ರಮ್ ನಲ್ಲಿ ವಿರಾಮವನ್ನು ಪಡೆಯಬಹುದು ಮತ್ತು ಅದರ ನೈಸರ್ಗಿಕ ಮತ್ತು ಐತಿಹಾಸಿಕ ಸೌಂದರ್ಯವನ್ನು ಅನ್ವೇಷಿಸಬಹುದಾಗಿದೆ.

3. ಜಾರ್ ಗ್ರಾಮ್

3. ಜಾರ್ ಗ್ರಾಮ್

PC- Vikramaditya Malladeb

ನೀವೇನಾದರೂ ಐತಿಹಾಸಿಕ ಗಡಿಗಳೊಳಗೆ ಅಥವಾ ಶಾಂತಿಯುತವಾದ ಪ್ರಕೃತಿಯ ಮಧ್ಯೆ ವಿಶ್ರಾಂತಿಯನ್ನು ಪಡೆಯಲು ಇಚ್ಚಿಸುವಿರಾದಲ್ಲಿ ಕೊಲ್ಕತ್ತಾದಿಂದ ಸುಮಾರು 170 ಕಿಮೀ ಹಾಗೂ ಜೆಮ್‌್ಶೆಡ್ ಪುರದಿಂದ ಸುಮಾರು 110 ಕಿಮೀ ಅಂತರದಲ್ಲಿರುವ ಜಾರ್ ಗ್ರಾಮ್ ಒಂದು ಭೇಟಿ ಕೊಡಲೇ ಬೇಕಾದ ಸ್ಥಳವಾಗಿದೆ . ಇದು ಇಲ್ಲಿಯ ಜಾರ್ ಗ್ರಾಮ್ ಅರಮನೆ ಮತ್ತು ರಾಯಲ್ ಅರಮನೆಗಳಿಗೆ ಹೆಸರುವಾಸಿಯಾಗಿದೆ ಅಲ್ಲದೆ ಜಾರ್ ಗ್ರಾಮ್ ಕಾಡುಗಳು ಮತ್ತು ಜಿಂಕೆ ಉದ್ಯಾನವನಕ್ಕೂ ಹೆಸರುವಾಸಿಯಾಗಿದೆ. ಜಾರ್ ಗ್ರಾಮ್ ನ ನಿಖರವಾದ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲವಾದರೂ ಇದನ್ನು ಮೊಘಲರ ಯುಗದಲ್ಲಿ ಸ್ಥಾಪಿಸಲಾಯಿತು ಎಂದು ಹೇಳಲಾಗುತ್ತದೆ. ಮತ್ತು ನೀವು ಇಲ್ಲಿ ಅನೇಕ ಐತಿಹಾಸಿಕ ಕಟ್ಟಡಗಳನ್ನು ದೇವಾಲಯಗಳ ರೂಪದಲ್ಲಿ ನೋಡಬಹುದು. ಅಲ್ಲದೆ ನೀವು ಇಲ್ಲಿ ಸುತ್ತಮುತ್ತಲಿರುವ ಅರಣ್ಯ ಪ್ರದೇಶಗಳನ್ನೂ ಅನ್ವೇಷಿಸಬಹುದಾಗಿದೆ ಮತ್ತು ಅನೇಕ ಜಾತಿಯ ಪ್ರಾಣಿಗಳು ಮತ್ತು ಸಸ್ಯಗಳನ್ನು ಕಾಣಬಹುದಾಗಿದೆ.

4. ಅಂತಿಮ ಗಮ್ಯಸ್ಥಾನ- ಜೆಮ್‌್ಶೆಡ್ ಪುರ

4. ಅಂತಿಮ ಗಮ್ಯಸ್ಥಾನ- ಜೆಮ್‌್ಶೆಡ್ ಪುರ

PC- Soham Banerjee

ಕೊಲ್ಕತ್ತಾ ದಿಂದ 280 ಕಿ.ಮೀ ಗಳ ದಾರಿಯ ಮೂಲಕ ಪ್ರಯಾಣಿಸಿ ಒಮ್ಮೆ ನೀವು ಜೆಮ್ಶೆಡ್ ಪುರದ ಗಡಿಯೊಳಗೆ ಪ್ರವೇಶಿಸಿದರೆ ನೀವು ನಿಮ್ಮ ಪಾದವನ್ನು ಕಾರ್ಖಾನೆಗಳ, ಉದ್ಯಾನವನಗಳ, ಬೆಟ್ಟಗಳು ಮತ್ತು ಸರೋವರಗಳ ನೆಲಕ್ಕೆ ಇರಿಸಿರುವಿರಿ ಎಂದು ಅರ್ಥ. ನೀವು ಜೆಮ್‌್ಶೆಡ್ ಪುರ ಅಥವಾ ಅದರ ಆಸುಪಾಸಿನಲ್ಲಿರುವಾಗ ಭೇಟಿ ಕೊಡಲು ಮರೆಯದಿರುವಂತಹ ಕೆಲವು ಪ್ರಮುಖ ಸ್ಥಳಗಳಿವೆ ಇಂತಹ ಆಸಕ್ತಿದಾಯಕ ಸ್ಥಳಗಳ ಬಗ್ಗೆ ಓದಿ ತಿಳಿಯಿರಿ.

5. ಜುಬಿಲೀ ಉದ್ಯಾನವನ

5. ಜುಬಿಲೀ ಉದ್ಯಾನವನ

PC- Soham Banerjee

ಜೆಮ್‌್ಶೆಡ್ ಪುರದಲ್ಲಿಯ ಅತ್ಯಂತ ಆಕರ್ಷಣೀಯ ಮತ್ತು ಹೆಚ್ಚಾಗಿ ಭೇಟಿ ಕೊಡಲ್ಪಡುವ ಸ್ಥಳವೆಂದರೆ ಅದು ಜುಬಿಲೀ ಪಾರ್ಕ್. ಇಲ್ಲಿ ಕಾರಂಜಿಗಳು, ಹುಲ್ಲಿನ ಪ್ರದೇಶ, ನಡೆದಾಡಲು ದಾರಿ, ಮನೋರಂಜನಾ ತಾಣಗಳು, ಮತ್ತು ಝೂವನ್ನು ಹೊಂದಿರುವ ಜುಬಿಲೀ ಪಾರ್ಕ ಖಚಿತವಾಗಿಯೂ ಜೆಮ್‌್ಶೆಡ್ ಪುರದಲ್ಲಿನ ಒಂದು ಅತ್ಯಂತ ಸುಂದರವಾದ ಸ್ಥಳವಾಗಿದ್ದು ಇಲ್ಲಿಗೆ ಭೇಟಿ ಕೊಡಲು ತಪ್ಪಿಸಲೇಬಾರದು. 500 ಚದರ ಕಿಲೋಮೀಟರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನ್ನು 1958 ರಲ್ಲಿ ಜಮ್ಸೆಟ್ ಜಿ ಟಾಟಾ ನಿರ್ಮಿಸಿದರು. ಇಂದು ಇದು ತಾಜಾ ಗಾಳಿ ಸೇವರೆ ಮತ್ತು ತಮ್ಮ ಸಮಯವನ್ನು ಹಸಿರಿನ ಮಧ್ಯೆ ಕಳೆಯಲು ಬಯಸುವ ಸಾವಿರಾರು ಸ್ಥಳೀಯರು ಮತ್ತು ಕಾಲೋಚಿತ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ಜೆಮ್‌್ಶೆಡ್ ಪುರದಲ್ಲಿರುವ ಇದು ಒಂದು ಸೂಕ್ತವಾದ ಪಿಕ್ನಿಕ್ ತಾಣವಾಗಿದೆ.

6. ಡಿಮ್ನಾ ಸರೋವರ

6. ಡಿಮ್ನಾ ಸರೋವರ

PC- Aratrik Dasgupta

ದಾಲ್ಮಾ ಶ್ರೇಣಿಯ ತಪ್ಪಲಿನಲ್ಲಿ ಶಾಂತಿಯುತವಾಗಿ ನೆಲೆಸಿರುವ ಡಿಮ್ನಾ ಸರೋವರಮು ಜೆಮ್‌್ಶೆಡ್ ಪುರದಲ್ಲಿಯ ಒಂದು ಉತ್ತಮವಾದ ಸ್ಥಳವೆನಿಸಿದೆ ನೀವು ನಗರದ ಉಸಿರುಕಟ್ಟಿಸುವ ವಾತಾವರಣದಿಂದ ಸ್ವಲ್ಪ ಸಮಯ ದೂರವಿರಲು ಬಯಸುವಿರಾದಲ್ಲಿ ಈ ಜಾಗವು ಸೂಕ್ತವಾದುದಾಗಿದೆ . ಇದು ಕೃತಕ ಸರೋವರವಾಗಿದ್ದು ತನ್ನಲ್ಲಿಯ ಸಂದರ್ಶಕರಿಗೆ ದೋಣಿ ವಿಹಾರದಿಂದ ಹಿಡಿದು ಸ್ಕೈಯಿಂಗ್ ವರೆಗೆ ಅನೇಕ ಬಗೆಯ ಚಟುವಟಿಕೆಗಳನ್ನು ಒದಗಿಸಿಕೊಡುತ್ತದೆ. ಜೆಮ್‌್ಶೆಡ್ ಪುರದ ಶಾಂತತೆಯ ಹಿಡಿತವನ್ನು ಡಿಮ್ನಾ ಸರೋವರದಲ್ಲಿ ಖಂಡಿತವಾಗಿಯೂ ಅನುಭವಿಸಬಹುದಾಗಿದೆ. ಆದುದರಿಂದ ಡಿಮ್ನಾ ಸರೋವರದ ಈ ಸ್ಥಿರತೆಯ ಮಧ್ಯೆ ಸ್ವಲ್ಪ ಅಡ್ಡಾಡಿದರೆ ಹೇಗೆ ?

7. ದಾಲ್ಮಾ ವನ್ಯಜೀವಿ ಧಾಮ

7. ದಾಲ್ಮಾ ವನ್ಯಜೀವಿ ಧಾಮ

PC- Joydeep 87

ಇದು ದಾಲ್ಮಾ ಬೆಟ್ಟಗಳ ಶ್ರೀಮಂತ ಪ್ರದೇಶದ ಸುತ್ತ ನೆಲೆಸಿದ್ದು, ದಾಲ್ಮಾ ವನ್ಯಜೀವಿ ಧಾಮವು ಭಾರತದ ಆನೆಗಳ ಸಂಖ್ಯೆಗೆ ಹೆಸರುವಾಸಿಯಾಗಿದೆ. ಇದು ವನ್ಯಜೀವಿಗಳನ್ನು ಆಕ್ರಮಣ ಮತ್ತು ಭೇಟೆಗಳಿಂದ ರಕ್ಷಿಸುವ ಸಲುವಾಗಿ 1976 ರಲ್ಲಿ ಸ್ಥಾಪಿಸಲಾಯಿತು. ದಾಲ್ಮಾ ವನ್ಯಜೀವಿ ಧಾಮದ ಸೌಂದರ್ಯತೆಯು ಇದರ ಹಸಿರುಮಯ ಕಾಡಿನಲ್ಲಿದ್ದು, ಸುಂದರವಾದ ಕೊಳಗಳು ಮತ್ತು ವನ್ಯಜೀವಿಗಳನ್ನು ಹೊಂದಿದೆ. ಇಲ್ಲಿ ಕಂಡುಬರುವ ಮುಖ್ಯವಾದ ಪ್ರಾಣಿಗಳು ಮತ್ತು ಪಕ್ಷಿಗಳ ಪೈಕಿ ಭಾರತದ ಆನೆಗಳು ಮತ್ತು ಭಾರತೀಯ ಇರುಳು ಹಕ್ಕಿ ಮತ್ತು ಕಪ್ಪು ಕರಡಿಗಳನ್ನು ಹೆಚ್ಚಿನ ಪ್ರಮಾನದಲ್ಲಿ ಕಾಣಬಹುದಾಗಿದೆ.

8. ಟಾಟಾ ಸ್ಟೀಲ್ ಝೂವಲಾಜಿಕಲ್(ಪ್ರಾಣಿಶಾಸ್ತ್ರ) ಪಾರ್ಕ್

8. ಟಾಟಾ ಸ್ಟೀಲ್ ಝೂವಲಾಜಿಕಲ್(ಪ್ರಾಣಿಶಾಸ್ತ್ರ) ಪಾರ್ಕ್

PC- Anupmahato

ಟಾಟಾ ಸ್ಟೀಲ್ ಝುವಾಲಾಜಿಕಲ್ ಉದ್ಯಾನವನವು ಜುಬಿಲೀ ಪಾರ್ಕ್ ನ ಒಂದು ಭಾಗವಾಗಿದೆ ಮತ್ತು ಇದು ಝೂ ವನ್ನು ಹೊಂದಿದ್ದು ಇಲ್ಲಿ ನೀವು ಪ್ರಾಣಿಗಳು ಸ್ವತಂತ್ರವಾಗಿ ತಿರುಗಾಡುವುದನ್ನು ಕಾಣಬಹುದಾಗಿದೆ. ಜುಬಿಲೀ ಪಾರ್ಕ್ ನಿಂದ ದೋಣಿ ವಿಹಾರ ಮಾಡುತ್ತಾ ನೀವು ಕಾಡುಗಳ ಮೂಲಕ ಸಫಾರಿಯ ಆನಂದವನ್ನು ಸವಿಯಬಹುದಾಗಿದೆ ಮತ್ತು ಟಾಟಾ ಸ್ಟೀಲ್ ಜುವಾಲಾಜಿಕಲ್ ಉದ್ಯಾನವನದಲ್ಲಿ ಮಾಡಬಹುದಾದ ಇನ್ನೂ ಅನೇಕ ಚಟುವಟಿಕೆಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X