Search
  • Follow NativePlanet
Share
» »ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ರಂಗೋಲಿ ಪುಣ್ಯಕ್ಷೇತ್ರ....

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ರಂಗೋಲಿ ಪುಣ್ಯಕ್ಷೇತ್ರ....

ನಮ್ಮ ಪೂರ್ವಿಕರು ನಾವು ವಾಸಿಸುವ ಮನೆ, ಪರಿಸರ ಪರಿಶುಭ್ರವಾಗಿ, ಸುಂದರವಾಗಿ ಅಲಂಕರಕ್ಕಾಗಿ ಬಳಸುವುದಕ್ಕೆ ಎಂದು ಭೋದಿಸಿದ್ದಾರೆ. ಮನೆಯ ಅಲಂಕಾರ ಹಾಗು ಸೌಂದರ್ಯದ ವಿಷಯಕ್ಕೆ ಬಂದರೆ ರಂಗೋಲಿ ಕೂಡ ಒಂದು. ಒಂದು ಕಾಲದಲ್ಲಿ ರಂಗೋಲಿಯನ್ನು ಅಕ್ಕಿಯ ಹಿಟ್ಟಿನಲ್ಲಿ ಚಿತ್ತಾರಗಳನ್ನು ಮನೆಯ ಬಾಗಿಲ ಮುಂದೆ ಹಾಕುತ್ತಿದ್ದರು. ಕಾರಣ ಇರುವೆಗಳಂತಹ ಸೂಕ್ಷ್ಮವಾದ ಜೀವಿಗಳು ಆಹಾರವನ್ನು ತಿಂದು ಆ ಮನೆಗೆ ಹಾರೈಸಲಿ ಎಂದು.

ಈ ಆಧುನಿಕ ಪ್ರಪಂಚದಲ್ಲಿ ಆನೇಕ ಅದ್ಭುತವಾದ ಚಿತ್ರಗಳ ಅವಿಷ್ಕರಣಗಳನ್ನು ಕಾಣಬಹುದು. ಆ ಚಿತ್ರಗಳನ್ನು ಕಂಡಾಗ ಏನು ಒಂದು ರೀತಿಯ ಆನಂದ ನಮ್ಮಲ್ಲಿ ಉಂಟು ಮಾಡುತ್ತದೆ. ನಮ್ಮ ಭಾರತ ದೇಶ ಅತ್ಯಂತ ಸಂಪ್ರದಾಯಿಕವಾದ ದೇಶವಾಗಿದೆ. ನಮ್ಮ ದೇಶದ ಸಂಸ್ಕøತಿ, ಸಂಪ್ರದಾಯದ ಮುಂದೆ ಬೇರೆಯಾವ ದೇಶವು ಇಲ್ಲ ಎಂದೇ ಹೇಳಬಹುದು.

ಸಾಮಾನ್ಯವಾಗಿ ನಮ್ಮ ಭಾರತೀಯ ಹೆಣ್ಣು ಮಕ್ಕಳಿಗೆ ರಂಗೋಲಿಗಳು ಹಾಕುವುದು ಎಂದರೆ ತುಂಬ ಇಷ್ಟ. ಇದೆನಪ್ಪ ಇಂದು ರಂಗೋಲಿಗಳ ಬಗ್ಗೆ ಇಷ್ಟೊಂದು ಮಾಹಿತಿ ನೀಡುತ್ತಿದ್ದೇನೆ ಎಂದು ಭಾವಿಸುತ್ತಿದ್ದೀರಾ? ಹಾಗಾದರೆ ಕೇಳಿ ನಮ್ಮ ದೇಶದಲ್ಲಿ ರಂಗೋಲಿಗೆ ಎಂದೇ ಪ್ರತ್ಯೇಕವಾದ ದೇವಾಲಯವಿದೆ.

ಪ್ರಸ್ತುತ ರಂಗೋಲಿಗೆ ಎಂದೇ ಮೀಸಲಾಗಿರುವ ಆ ವಿಚಿತ್ರವಾದ ದೇವಾಲಯದ ಬಗ್ಗೆ ಮಾಹಿತಿಯನ್ನು ಪಡೆಯೋಣ.

 ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿಯಾಗಿದೆ. ಇದು ಪ್ರಪಂಚದಲ್ಲಿ ರೆರ್ಕಾಡ್ ಕೂಡ ಸಂಪಾದನೆ ಮಾಡಿದೆ.

 ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ ಕ್ಷೇತ್ರ ಎಂಬ ಮನ್ನಣೆಯನ್ನು ಪಡೆದಿದೆ.

 ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಕೇಳಿ ಕೋಲ್ಕತ್ತಾದಲ್ಲಿ ದುರ್ಗಾ ದೇವಿಯ ದೇವಾಲಯವಿದೆ. ಈ ದೇವಾಲಯದಲ್ಲಿ ಅತ್ಯಂತ ದೊಡ್ಡ ರಂಗೋಲಿಯನ್ನು ಹಾಕುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.

 ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ದಸರಾವನ್ನು ಅತ್ಯಂತ ವಿಜೃಂಬಣೆಯಿಂದ ಕೋಲ್ಕತ್ತದಲ್ಲಿ ಆಚರಿಸಲಾಗುತ್ತದೆ. ಏಕೆಂದರೆ ಈ ರಾಜ್ಯದವರು ದುರ್ಗಾ ಮಾತೆಯ ಆರಾಧಕರಾಗಿರುವುರಿಂದ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ.

 ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಈ ದೇವಾಲಯದ ಮುಂದೆ ಹಾಕಿರುವ ಆ ರಂಗೋಲಿಯು ಸುಮಾರು 1.03 ಕಿ.ಮೀ ಉದ್ದವಿದೆ. ಅಂದರೆ ರಸ್ತೆಯ ಉದ್ದಕ್ಕೂ ರಂಗು ರಂಗಿನ ಆಶ್ಚರ್ಯ ಪಡುವ ರೀತಿಯಲ್ಲಿ ರಂಗೋಲಿಯನ್ನು ಹಾಕಿದ್ದಾರೆ.

 ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಈ ಅದ್ಭುತವಾದ ರಂಗೋಲಿಯನ್ನು ಸುಮಾರು 325 ಮಂದಿ ಆರ್ಟ್ಸ್ ಕಲಾಶಾಲೆಯ ವಿದ್ಯಾರ್ಥಿಗಳು ಸೇರಿ 18 ಗಂಟೆಗಳ ಕಾಲ ಹಾಕಿದ್ದಾರೆ ಎನ್ನಲಾಗಿದೆ. ಈ ಸುಂದರವಾದ ಪೇಟಿಂಗ್ ಮಾಡಲು ಸುಮಾರು 280 ಲೀಟರ್ ಖರ್ಚು ಮಾಡಿದ್ದಾರೆ.

 ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಆಶ್ಚರ್ಯ ಏನಪ್ಪ ಎಂದರೆ ಈ ಬಣ್ಣ ಬಣ್ಣದ ರಂಗೋಲಿಯಲ್ಲಿ ಬೆಂಗಾಲಿ ಬಾಷೆಯನ್ನು ಉಪಯೋಗಿಸಿದ್ದಾರೆ.

 ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಆರ್ಟ್ಸ್ ಕಲಾಶಾಲ ವಿದ್ಯಾರ್ಥಿಗಳು ಸತತ 18 ಗಂಟೆಗಳ ಕಾಲ ಅಂದರೆ ಸೋಮವಾರ ರಾತ್ರಿ ಪ್ರಾರಂಭ ಮಾಡಿ ಮಂಗಳವಾರದ ಬೆಳಗಿನ ಜಾವದವರೆವಿಗೂ ಈ ಕಾರ್ಯಕ್ರಮವನ್ನು ಪೂರ್ತಿ ಮಾಡಿದ್ದಾರೆ.

 ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಪಶ್ಚಿಮ ಬಂಗಾಳದಲ್ಲಿ ಪ್ರಜೆಗಳ ದಸರಾ ಸಂಭ್ರಮ ಮತ್ತಷ್ಟು ಹೆಚ್ಚಿಸಲು ಈ ಬಣ್ಣದ ವೈಭವವನ್ನು ಅಲಂಕರಿಸಿದ್ದಾರೆ. ಇದು ಪ್ರಪಂಚದಲ್ಲಿ ರೆಕಾರ್ಡ್ ಮಾಡಲು ದಾರಿಯಾಯಿತು ಎಂದೇ ಹೇಳಬಹುದು.

 ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಂಗೋಲಿ

ಇದನ್ನು ಕಾಣುತ್ತಾ ಇದ್ದರೆ ಯಾರಿಗೆ ಆಗಲಿ ಒಂದು ಸೃಜನಾತ್ಮಕವಾದ ಅಲೋಚನೆ ಮೂಡುವುದಂತು ನಿಜ. ನೀವು ಸಹ ಕೋಲ್ಕತ್ತಗೆ ಭೇಟಿ ನೀಡಿದರೆ ಒಮ್ಮೆ ಈ ದುರ್ಗಾ ಮಾತಾ ದೇವಾಲಯಕ್ಕೂ ಭೇಟಿ ನೀಡಿ ಬನ್ನಿ.

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more