Search
  • Follow NativePlanet
Share
» »ಇಲ್ಲಿನ ದೇವಿಗೆ ಎಮ್ಮೆ ಹಾಲು, ಆಮೆಗೆ ಅನ್ನ ನೀಡಿದ್ರೆ ಚರ್ಮರೋಗ ಗುಣವಾಗುತ್ತಂತೆ !

ಇಲ್ಲಿನ ದೇವಿಗೆ ಎಮ್ಮೆ ಹಾಲು, ಆಮೆಗೆ ಅನ್ನ ನೀಡಿದ್ರೆ ಚರ್ಮರೋಗ ಗುಣವಾಗುತ್ತಂತೆ !

ಕೇರಳವನ್ನು ದೇವರನಾಡು ಎಂದೇ ಕರೆಯುತ್ತಾರೆ. ಹೀಗಿರುವಾಗ ದೇವರ ನಾಡಲ್ಲಿ ದೇವಸ್ಥಾನಕ್ಕೇನು ಕಮ್ಮಿ ಇಲ್ಲ. ಪ್ರತಿಯೊಂದು ಜಿಲ್ಲೆಯಲ್ಲೂ ನೂರಾರು ಪ್ರಸಿದ್ಧ ದೇವಸ್ಥಾನಗಳಿವೆ. ಪ್ರತಿಯೊಂದಕ್ಕೂ ಅದರದ್ದೇ ಆದ ವಿಶೇಷತೆಗಳಿವೆ. ಇಂದು ನಾವು ಕೇರಳದ ಒಂದು ವಿಶೇಷ ದೇವಾಲಯದ ಬಗ್ಗೆ ತಿಳಿಸಿಕೊಡಲಿದ್ದೇವೆ. ಇಲ್ಲಿಗೆ ಜನರು ತಮಗಿರು ಚರ್ಮ ಸಂಬಂಧಿ ರೋಗವನ್ನು ಗುಣಮುಖವಾಗಿಸುವ ಸಲುವಾಗಿ ಬರುತ್ತಾರಂತೆ. ಇಲ್ಲಿನ ದೇವಿಯನ್ನು ಪ್ರಾರ್ಥಿಸಿದರೆ ಚರ್ಮ ರೋಗ ಗುಣವಾಗುತ್ತದಂತೆ.

ಎಲ್ಲಿದೆ ಈ ದೇವಸ್ಥಾನ?

ಎಲ್ಲಿದೆ ಈ ದೇವಸ್ಥಾನ?

PC: Unnikrishnan K

ಅಡಕ್ಕಟ್ಟು ಭಗವತಿ ದೇವಸ್ಥಾನವು ಕೇರಳದ ಕಾಸರಗೋಡು ಜಿಲ್ಲೆಯ ಬಂದ್ಯಡ್ಕ ಹಾಗೂ ಪೈನಡ್ಕ ರಸ್ತೆ ಮಧ್ಯೆಯಿರುವ ಬಿಂಬುಗಲ್‌ನಿಂದ 2 ಕಿ.ಮೀ ದೂರದಲ್ಲಿದೆ. ಕಾಸರಗೋಡಿನಿಂದ 32 ಕಿ.ಮೀ ದೂರದಲ್ಲಿದೆ. ಇಲ್ಲಿ ಮಹಿಷಾಸುರ ಮರ್ಧಿನಿ ರೂಪದಲ್ಲಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಸರಸ್ವತಿಯನ್ನು ಇಲ್ಲಿ ಉಪ ದೇವತೆಯನ್ನಾಗಿ ಪೂಜಿಸಲಾಗುತ್ತದೆ.

ವಿಶ್ವದ ಮೊದಲ ಮನುಷ್ಯನನ್ನು ದೇವರು ಸೃಷ್ಠಿಸಿದ್ದು ಎಲ್ಲಿ ಗೊತ್ತಾ?ವಿಶ್ವದ ಮೊದಲ ಮನುಷ್ಯನನ್ನು ದೇವರು ಸೃಷ್ಠಿಸಿದ್ದು ಎಲ್ಲಿ ಗೊತ್ತಾ?

ಎಲ್ಲಿದೆ ಈ ದೇವಸ್ಥಾನ?

ಎಲ್ಲಿದೆ ಈ ದೇವಸ್ಥಾನ?

PC: Ashwinnambiarm

ಪ್ರತಿನಿತ್ಯವು ಈ ದೇವಸ್ಥಾನದಲ್ಲಿ ಮೂರು ಪೂಜೆಗಳು ನಡೆಯುತ್ತದೆ. ಇಲ್ಲಿನ ದೇವಿಯ ಮೂರ್ತಿಯು ಪೂರ್ವಾಭಿಮುಖವಾಗಿದೆ. ಈ ದೇವಸ್ಥಾನವು ಎರಡು ಕಾರಣಗಳಿಂದ ಬಹಳ ವಿಶೇಷವಾಗಿದೆ. ಅವು ಎಂದರೆ ಒಂದು ಎಮ್ಮೆಯ ಹಸಿ ಹಾಲು ಹಾಗೂ ಇನ್ನೊಂದು ಇಲ್ಲಿರುವ ಆಮೆಗಳು.

ಎಮ್ಮೆಯ ಹಸಿ ಹಾಲು

ಎಮ್ಮೆಯ ಹಸಿ ಹಾಲು

PC:AdeelChoudhary

ಈ ದೇವರಿಗೆ ಮುಖ್ಯವಾಗಿ ಎಮ್ಮೆಯ ಹಸಿ ಹಾಲನ್ನು ಅರ್ಪಿಸಲಾಗುತ್ತದೆ. ಅಲ್ಲೊಂದು ಕಲ್ಲಿನಿಂದ ಕೆತ್ತಿ ನಿರ್ಮಿಸಲಾದ ಕೆರೆ ಇದೆ. ಅದರಲ್ಲಿ ಆಮೆಗಳು ತುಂಬಿವೆ. ಆ ಆಮೆಗಳಿಗೆ ಅನ್ನವನ್ನು ನೀಡುವ ಸಂಪ್ರದಾಯವು ಬಹಳ ಕಾಲದಿಂದ ನಡೆಯುತ್ತಾ ಬಂದಿದೆ. ಇದರ ಹಿಂದೆಯೂ ಒಂದು ಕಥೆ ಇದೆ.

ಚರ್ಮರೋಗ ನಿವಾರಣೆ

ಚರ್ಮರೋಗ ನಿವಾರಣೆ

PC: Ashwinnambiarm

ಈ ದೇವಸ್ಥಾನದಲ್ಲಿ ಬೇಡಿಕೊಂಡರೆ ಅಲ್ಲಿನ ಕೆರೆಯಲ್ಲಿರುವ ಆಮೆಗಳಿಗೆ ಅನ್ನವನ್ನು ನೀಡಿದರೆ ನಿಮಗಿರುವ ಚರ್ಮ ಸಂಬಂಧಿಕಾಲೆಗಳೆಲ್ಲಾ ಗುಣವಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಇಲ್ಲಿನ ಆಮೆಗಳನ್ನು ಅಮಕುಲಮ್ ಎನ್ನಲಾಗುತ್ತದೆ. ಅದೇ ಬೇಸಿಗೆಗಾಲದಲ್ಲಿ ಈ ಕರೆಯ ನೀರೆಲ್ಲಾ ಒಣಗಿ ಹೋಗುತ್ತದೆ. ಆಗ ನಮಗೆ ಯಾವುದೇ ಆಮೆಗಳು ಕಾಣ ಸಿಗುವುದಿಲ್ಲ. ಮತ್ತೆ ಆಮೆಗಳು ಕೆರೆಯಲ್ಲಿ ಕಾಣಿಸಿಕೊಳ್ಳಬೇಕಾದರೆ ಮಳೆಗಾಲವೇ ಬರಬೇಕು.

ಸಾವಿನ ಕೊನೆಘಳಿಗೆಯಲ್ಲಿರುವವರಿಗಾಗಿ ಮುಕ್ತಿ ಭವನ; ಇದರೊಳಗಿದೆ ಕರುಣಾಜನಕ ಕಥೆ ಸಾವಿನ ಕೊನೆಘಳಿಗೆಯಲ್ಲಿರುವವರಿಗಾಗಿ ಮುಕ್ತಿ ಭವನ; ಇದರೊಳಗಿದೆ ಕರುಣಾಜನಕ ಕಥೆ

ಪ್ರಮುಖ ಉತ್ಸವ

ಪ್ರಮುಖ ಉತ್ಸವ

PC: Sreejesh M

ಇಲ್ಲಿನ ಪ್ರಮುಖ ಉತ್ಸವಗಳೆದರೆ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ನವರಾತ್ರಿ ಸಂದರ್ಭ ನಡೆಯುವ ಸರಸ್ವತಿ ಪೂಜೆ. ವೃಶ್ಚಿಕ ತಿಂಗಳ ಕಾರ್ತಿಕ ನಕ್ಷತ್ರದಲ್ಲೂ ಉತ್ಸವವನ್ನು ಆಚರಿಸಲಾಗುತ್ತದೆ. ನೀವು ಕೇರಳದ ಕಾಸರಗೋಡು ಜಿಲ್ಲೆಗೆ ಭೇಟಿ ನೀಡಿದಾಗ ಇಲ್ಲಿನ ಈ ದೇವಸ್ಥಾನದ ಆಮೆಯನ್ನು ನೋಡಲು ಮಾತ್ರ ಮರೆಯದಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X