Search
  • Follow NativePlanet
Share
» »ಭಕ್ತಿಯಿಂದ ಇಲ್ಲಿ ನಿಮ್ಮ ಇಷ್ಟದ ವಸ್ತು ತ್ಯಜಿಸಿದ್ರೆ ಕೋರಿಕೆ ಈಡೇರುತ್ತಂತೆ!

ಭಕ್ತಿಯಿಂದ ಇಲ್ಲಿ ನಿಮ್ಮ ಇಷ್ಟದ ವಸ್ತು ತ್ಯಜಿಸಿದ್ರೆ ಕೋರಿಕೆ ಈಡೇರುತ್ತಂತೆ!

ಕಾಣಿಪಾಕಂ ಇದು ವಿನಾಯಕನಿರುವ ಪವಿತ್ರವಾದ ಸ್ಥಳವಾಗಿದೆ. ಆಂಧ್ರಪ್ರದೇಶದಲ್ಲಿ ಪ್ರಾಮುಖ್ಯತೆ ಹೊಂದಿರುವ ಹಲವು ಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿನ ವಿಶೇಷತೆ ಎಂದರೆ, ಇಲ್ಲಿನ ವಿನಾಯಕನನ್ನು ಯಾರೂ ಪ್ರತಿಷ್ಠಾಪಿಸಿಲ್ಲ, ಬದಲಾಗಿ ಅದು ಸ್ವಯಂಭೂ ವಿಗ್ರಹವಾಗಿದೆ.

ಈ ಅರ್ಧನಾರೀಶ್ವರ ಲಿಂಗದಲ್ಲಿ ಶಿವರಾತ್ರಿಯಂದು ನಡೆಯುತ್ತೆ ಚಮತ್ಕಾರ!ಈ ಅರ್ಧನಾರೀಶ್ವರ ಲಿಂಗದಲ್ಲಿ ಶಿವರಾತ್ರಿಯಂದು ನಡೆಯುತ್ತೆ ಚಮತ್ಕಾರ!

ನೀವು ಅಂದುಕೊಂಡಿದ್ದು ನೆರವೇರುತ್ತದೆ

ನೀವು ಅಂದುಕೊಂಡಿದ್ದು ನೆರವೇರುತ್ತದೆ

PC:Adityamadhav83
ನಿಮ್ಮ ಯಾವುದಾದರೂ ಕೋರಿಕೆ ನೆರವೇರಬೇಕೆಂಬ ಇಚ್ಛೆ ಇದ್ದರೆ ನೀವು ಈ ದೇವಸ್ಥಾನಕ್ಕೆ ಬಂದು ನಿಮಗೆ ಅತ್ಯಂತ ಇಷ್ಟವಾದ ಯಾವುದಾದರೂ ತಿನಿಸನ್ನು ತ್ಯಾಗ ಮಾಡುವುದಾಗಿ ದೇವರ ಮುಂದೆ ಪ್ರಮಾಣ ಮಾಡಬೇಕು. ಆಗ ನಿಮ್ಮ ಕೋರಿಕೆ ನೆರವೇರುತ್ತದೆ.

ಮಾತಿಗೆ ತಪ್ಪಬಾರದು

ಮಾತಿಗೆ ತಪ್ಪಬಾರದು

PC:Dareavii
ನೀವು ನಿಮ್ಮ ಇಷ್ಟವಾದನ್ನು ತ್ಯಾಗ ಮಾಡಿ ನಿಮ್ಮ ಕೋರಿಕೆ ನೆರವೇರಿದ ಬಳಿಕ ಮತ್ತೆ ಆ ವಸ್ತುವನ್ನು ಸ್ವೀಕರಿಸಿದ್ದಲ್ಲಿ ನಿಮ್ಮ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎನ್ನುವುದು ಭಕ್ತರ ನಂಬಿಕೆ. ಒಮ್ಮೆ ಕೊಟ್ಟ ಮಾತನ್ನು ತಪ್ಪಬಾರದು.

ಆ ಹೆಸರು ಬಂದಿದ್ದು ಹೇಗೆ?

ಆ ಹೆಸರು ಬಂದಿದ್ದು ಹೇಗೆ?

ಬಾಲಿವುಡ್ ಫಿಲ್ಮ್ ಸ್ಟಾರ್ಸ್ ಜೊತೆ ಸೆಲ್ಫಿ ಬೇಕಾದರೆ ಇಲ್ಲಿಗೆ ಹೋಗಿಬಾಲಿವುಡ್ ಫಿಲ್ಮ್ ಸ್ಟಾರ್ಸ್ ಜೊತೆ ಸೆಲ್ಫಿ ಬೇಕಾದರೆ ಇಲ್ಲಿಗೆ ಹೋಗಿ

ಕಟ್ಟಿಸಿದ್ದು ಯಾರು ?

ಕಟ್ಟಿಸಿದ್ದು ಯಾರು ?

PC:Adityamadhav83
ಪುರಾಣ ಕಾಲದಲ್ಲಿ ಜನುಮಜಯುಡು ಎನ್ನುವ ರಾಜ ಕಟ್ಟಿಸಿದ್ದನಂತೆ. ನಂತರ ೧೧ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದವರು ಆ ದೇವಾಲಯವನ್ನು ಅಭಿವೃದ್ಧಿಗೊಳಿಸಿದರು.

ದೊಡ್ಡದಾಗುತ್ತಾ ಹೋಗುತ್ತದೆ

ದೊಡ್ಡದಾಗುತ್ತಾ ಹೋಗುತ್ತದೆ

PC:Adityamadhav83
ಈ ಗಣೇಶನ ಮೂರ್ತಿಯು ದಿನದಿಂದ ದಿನಕ್ಕೆ ಗಾತ್ರದಲ್ಲಿ ದೊಡ್ಡದಾಗುತ್ತಾ ಇದೆಯಂತೆ. ಇದಕ್ಕೆ ಸಾಕ್ಷಿಯೆಂದರೆ 50 ವರ್ಷಗಳ ಹಿಂದೆ ಗಣೇಶನ ಈ ವಿಗ್ರಹಕ್ಕಾಗಿ ಮಾಡಿಸಿದ್ದ ಕವಚ ಈಗ ಸಣ್ಣದಾಗುತ್ತಿದೆ.

ಸುಳ್ಳು ಹೇಳಲು ಹೆದರುತ್ತಾರೆ

ಸುಳ್ಳು ಹೇಳಲು ಹೆದರುತ್ತಾರೆ

PC:Vin09
ಈ ಕ್ಷೇತ್ರದಲ್ಲಿ ಸುಳ್ಳು ಹೇಳಲು ಹೆದರುತ್ತಾರೆ. ಬ್ರಿಟಿಷರ ಕಾಲದಿಂದಲೂ ಕಳ್ಳರನ್ನು ಸತ್ಯ ಹೇಳಿಸಲು ಈ ಕ್ಷೇತ್ರಕ್ಕೆ ಕರೆತರುತ್ತಿದ್ದರು ಎನ್ನಲಾಗುತ್ತದೆ. ಇಲ್ಲಿ ಆಣೆ ಪ್ರಮಾಣ ಮಾಡಿಸಲು ಬರುತ್ಥಾರೆ. ಈ ಕ್ಷೇತ್ರದಲ್ಲಿ ಯಾರೂ ಕೂಡಾ ಸುಳ್ಳು ಪ್ರಮಾಣ ಮಾಡೋದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X