Search
  • Follow NativePlanet
Share
» »ಮತ್ತೆ ಪ್ರವಾಸಿಗರಿಗೆ ತೆರೆದಿದೆ ಎಡಕಲ್ಲು ಗುಹೆ

ಮತ್ತೆ ಪ್ರವಾಸಿಗರಿಗೆ ತೆರೆದಿದೆ ಎಡಕಲ್ಲು ಗುಹೆ

ಕೇರಳವು ನಮ್ಮ ದೇಶದಲ್ಲಿನ ಪ್ರಮುಖ ಪ್ರವಾಸಿ ತಾಣ ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ. ಪ್ರತಿಯೊಬ್ಬರೂ ಕೇರಳದ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಆದರೆ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಕೇರಳ ತತ್ತರಿಸಿ ಹೋಗಿತ್ತು. ಈಗಷ್ಟೇ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ. ಇದೀಗ ಒಂದೊಂದೇ ಪ್ರವಾಸಿ ತಾಣಗಳು ಜನರರ ಭೇಟಿಗೆ ತೆರೆದುಕೊಳ್ಳುತ್ತಿದೆ. ವಯನಾಡಿನಲ್ಲಿರುವ ಎಡಕ್ಕಲ್ಲು ಗುಹೆಗಳು ಇದೀಗ ಜನರ ಭೇಟಿಗೆ ತೆರೆದುಕೊಂಡಿದೆ.

ಎಡಕ್ಕಲ್ಲು

ಎಡಕ್ಕಲ್ಲು

PC: Arav

ಕೇರಳದ ವಯನಾಡ್ ಜಿಲ್ಲೆಯಲ್ಲಿ ಕಾಲಪೆಟ್ಟಾದಿಂದ ಸುಮಾರು ೨೫ ಕಿ.ಮೀ ದೂರದಲ್ಲಿ ಜನನಿಬಿಡ ಪ್ರದೇಶದಲ್ಲಿ ಎಡಕ್ಕಲ್ಲುನಲ್ಲಿ ಎರಡು ನೈಸರ್ಗಿಕ ಗುಹೆಗಳಿವೆ. ಈ ಗುಹೆಗಳು ಸಮುದ್ರ ಮಟ್ಟಕ್ಕಿಂತ 1 ಸಾವಿರ 200 ಮೀಟರ್‌ ಎತ್ತರದಲ್ಲಿದೆ.

ಬೆಂಗಳೂರಿನ ಈ ಮಿಲಿಟರಿ ಹೋಟೆಲ್ ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕುಬೆಂಗಳೂರಿನ ಈ ಮಿಲಿಟರಿ ಹೋಟೆಲ್ ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕು

ಗುಹೆಯಲ್ಲಿನ ಚಿತ್ರಗಳು

ಗುಹೆಯಲ್ಲಿನ ಚಿತ್ರಗಳು

PC: Vengolis

ಈ ಗುಹೆಗಳಲ್ಲಿ ಚಿತ್ರಗಳ ಮುಖಾಂತರ ಬರೆಯಲಾಗಿರುವುದು ೬ ಸಾವಿರ ವರ್ಷ ಹಳೆಯದು ಎನ್ನಲಾಗುತ್ತದೆ. ಇಲ್ಲಿನ ಚಿತ್ರಕಲೆಗಳು ನಕ್ಷೆಗಳು ಅಸಾಮಾನ್ಯವಾದುದು . ಇದು ದಕ್ಷಿಣ ಭಾರತದ ಪ್ರಾಚೀನ ಸಂಸ್ಕೃತಿಯನ್ನು ತಿಳಿಸುತ್ತದೆ.

ಪ್ರವಾಹದಿಂದ ನಿಷೇಧಿಸಲಾಗಿತ್ತು

ಪ್ರವಾಹದಿಂದ ನಿಷೇಧಿಸಲಾಗಿತ್ತು

PC: Asif K Karim

ಕೇರಳದ ಅಂಬುಕುಟ್ಟಿ ಬೆಟ್ಟಗಳಲ್ಲಿರುವ ಎಡಕ್ಕಲ್ಲು ಗುಹೆಗಳನ್ನು ವಿಪರೀತ ಮಳೆ ಹಾಗೂ ಕಲ್ಲುಗಳು ಬಿದ್ದಿರುವ ಕಾರಣದಿಂದ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಮೊದಲ ಗುಹೆಯೊಳಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದ್ದರಿಂದ ಪ್ರವಾಸಿಗರು ಬೇರೆ ರಸ್ತೆಯ ಮೂಲಕ ಎರಡನೇ ಗುಹೆಯನ್ನು ತಲುಪುತ್ತಿದ್ದರು. ಅದರಲ್ಲೂ ಕೆಲವೇ ಕೆಲವು ಪ್ರವಾಸಿಗರಿಗಷ್ಟೇ ಎರಡನೇ ಗುಹೆಯೊಳಗೆ ಪ್ರವೇಶ ಕಲ್ಪಿಸಲಾಗಿತ್ತು.

 ಪಂಜನ್ನು ಮೈಮೇಲೆ ಎಸೆಯುವ ಬೆಂಕಿಯ ಕಾಳಗ ನಡೆಸ್ತಾರಂತೆ ಈ ಕ್ಷೇತ್ರದಲ್ಲಿ ಪಂಜನ್ನು ಮೈಮೇಲೆ ಎಸೆಯುವ ಬೆಂಕಿಯ ಕಾಳಗ ನಡೆಸ್ತಾರಂತೆ ಈ ಕ್ಷೇತ್ರದಲ್ಲಿ

ಪ್ರವಾಸೋಧ್ಯಮದ ಮೇಲೆ ಪ್ರಭಾವ

ಪ್ರವಾಸೋಧ್ಯಮದ ಮೇಲೆ ಪ್ರಭಾವ

PC: Shareef Taliparamba

ಕೇರಳದಲ್ಲಿ ಇತ್ತಿಚಿಗೆ ಉಂಟಾದ ಪ್ರವಾಹ ದ ಕಾರಣದಿಂದ ಪ್ರವಾಸೋಧ್ಯಮದ ಮೇಲೂ ಪ್ರಭಾವ ಬೀರಿತ್ತು. ಈಗ ಕೇರಳದ ಜನರ ಜನ ಜೀವನ ನಿಧಾನವಾಗಿ ಸುಧಾರಿಸುತ್ತಿದೆ. ಹಾಗೆಯೇ ಪ್ರವಾಸಿಗರಿಗೆ ಎಡಕ್ಕಲ್ಲು ಗುಹೆಗೆ ಪ್ರವೇಶವನ್ನು ಕಲ್ಪಿಸಲಾಗಿದೆ.

ಗುಹೆಯೊಳಗೆ ಪ್ರವೇಶ

ಗುಹೆಯೊಳಗೆ ಪ್ರವೇಶ

PC: Drajay1976

ಪ್ರಾರಂಭದಲ್ಲಿ ಕೇವಲ ಸಾವಿರದ ಒಂಬೈನ್ನೂರು ಜನರಿಗೆ 30-30 ಗುಂಪಿನಲ್ಲಿ ಎರಡನೇ ಗುಹೆಯೊಳಗೆ ಸುತ್ತಾಡಲು ಅವಕಾಶ ನೀಡಲಾಗುವುದು. ಆದರೆ ಮೊದಲ ಗುಹೆಯೊಳಗೆ ಈಗಲೂ ಎಂಟ್ರಿ ಗೆ ಅವಕಾಶವಿಲ್ಲ. ಗುಹೆಯೊಳಗೆ ಕಲ್ಲುಗಳು ಬಿದ್ದಿರುವುದರಿಂದ ಗುಹೆಗೆ ಸಾಕಷ್ಟು ನಷ್ಟವಾಗಿದೆ ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X