Search
  • Follow NativePlanet
Share
» »ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

By Sowmyabhai

ಕೇಧಾರನಾಥದಲ್ಲಿರುವ ಆಕರ್ಷಣಿಯವಾದ ಹಾಗು ಶಕ್ತಿಯ ಬಗ್ಗೆ ನಿಮಗೆ ಈಗಾಗಲೇ ತಿಳಿದೇ ಇದೆ. ಹಿಂದೂ ಸನಾತನ ಧರ್ಮದ ಮುಖ್ಯ ಗುರುವಾದ ವಿಶ್ವ ವಿಖ್ಯಾತಿ ಅದ್ವೈತ ಸಿದ್ದಾಂತದ ಗುರುವಾದ ಶಂಕರಾಚಾರ್ಯರು ತಮ್ಮ 32 ನೇ ವಯಸ್ಸಿನಲ್ಲಿ ತಮ್ಮ ಪ್ರಾಣವನ್ನು ಬಿಟ್ಟ ಅತ್ಯಂತ ಮಹಿಮಾನ್ವಿತವಾದ ದಿವ್ಯಕ್ಷೇತ್ರ ಇದಾಗಿದೆ. ಹಿಂದೂಗಳಿಗೆ ಅತ್ಯಂತ ಶ್ರೇಷ್ಟವಾದ ಯಾತ್ರೆಗಳಲ್ಲಿ ಈ ಚಾರ್ ಧಾಂ ಯಾತ್ರೆ ಕೂಡ ಒಂದು. ಕೇಧಾರನಾಥ ತೀರ್ಥಕ್ಷೇತ್ರವನ್ನು ಪಾಂಡವರು ಸ್ಥಾಪಿಸಿದ ದೇವಾಲಯವೆಂದೇ ಪ್ರಸಿದ್ಧಿಯನ್ನು ಪಡೆದಿದೆ. ಆದರೆ ಆದಿ ಶಂಕರಾಚಾರ್ಯರಿಂದಲೇ ಈ ದೇವಾಲಯವು ಅತ್ಯಂತ ಉಚ್ಛ ಸ್ಥಿತಿಯಲ್ಲಿ ಪ್ರಖ್ಯಾತಿ ಹೊಂದಿತು ಎಂದು ಇನ್ನು ಕೆಲವರ ಅಭಿಪ್ರಾಯವಾಗಿದೆ. ಲೇಖನದಲ್ಲಿ ಕೇಧಾರನಾಥ ದೇವಾಲಯ ಬಗ್ಗೆ ಕೆಲವು ಆಸಕ್ತಿಕರವಾದ ಅಂಶಗಳನ್ನು ತಿಳಿಯೋಣ.

1.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

1.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

ಸಾಕ್ಷಾತ್ ಆ ಪರಮಶಿವನು ನೆಲೆಸಿರುವ ಕ್ಷೇತ್ರವಾದ್ದರಿಂದ ಇಲ್ಲಿನ ವಾತಾವರಣ ಶಿವಮಯವಾಗಿರುತ್ತದೆ. ಆದರೆ 2013 ರಲ್ಲಿ ಸಾವಿರಾರು ಪ್ರಾಣಿಗಳು ಗಾಳಿಯಲ್ಲಿ ಸೇರಿದ್ದರಿಂದ ಅತ್ಯಂತ ಬಾದೆಯನ್ನು ಉಂಟುಮಾಡುವ ವಿಷಯವಾಗಿದೆ. ಎಷ್ಟೊ ವಿಧವಾದ ದುಷ್‍ಪ್ರಭಾವಗಳು ಅಂತಾರಾಷ್ಟ್ರೀಯ ಮಾಧ್ಯಮ ಸೃಷ್ಟಿಸಿದ ಕಾರಣವಾಗಿ ಹಾಗು ಸಂಪೂರ್ಣ ವಿಶ್ಲೇಷಣೆಯ ಆಧಾರವಾಗಿ ಶಾಸ್ತ್ರವೆತ್ತರು ಆ ವಿಪತ್ತಿನ ಹಿಂದೆ ಮಾನವನ ತಪ್ಪಿನಿಂದಾಗಿ ಪ್ರಕೃತಿ ವಿಕೋಪವಾಗುತ್ತದೆ ಎಂದು ಗುರುತಿಸಲಾಯಿತು.

2.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

2.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

ಹಾಗಾಗಿ ಆ ಪಾಪವನ್ನು ದೇವರ ಮೇಲೆ ಅಪಾಧಿಸುವುದು ತಪ್ಪೇ ಸರಿ. ಇನ್ನು ಹೆಚ್ಚು ಪ್ರಾಣ, ಆಸ್ತಿನಷ್ಟ ನಡೆಯದೇ ಇರುವುದು ಕೂಡ ಅಲೋಚಿಸಬೇಕಾದ ವಿಷಯ. ಮಹಾಕುರುಕ್ಷೇತ್ರಯುದ್ಧದ ನಂತರ ಪಾಂಡವರು ತಾವು ಮಾಡಿದ ಪಾಪಗಳನ್ನು ವಿಮೋಚನೆ ಹೊಂದಬೇಕು ಎಂಬ ಅಲೋಚನೆಯಿಂದಾಗಿ ಕಾಶಿಗೆ ಹೋದರು ಎಂದೂ, ಅಲ್ಲಿ ಶಿವನು ಇಲ್ಲ ಎಂದು ಗ್ರಹಿಸಿದ ಹಾಗೆ ತಿಳಿಸುತ್ತಾರೆ.

3.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

3.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

ನಂದಿರೂಪ ಧರಿಸಿ ಇಂದಿಗೂ ಉತ್ತರಾಖಂಡದಲ್ಲಿನ ಗುಪ್ತಕಾಶಿ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂದೂ, ಶಿವನ ಸ್ಥಳವನ್ನು ಆಕಾಶವಾಣಿಯ ಮೂಲಕ ತಿಳಿದುಕೊಂಡು ಪಾಪಗಳನ್ನು ಕಳೆದುಕೊಂಡರು ಎಂದು ತಿಳಿಯುತ್ತದೆ. ಆದರೆ ಯಮಪುರಿಗೆ ಹೋಗುವ ದಾರಿಯಲ್ಲಿ ಯಾವುದೇ ಸಾಹಯ ತಾನು ಮಾಡುತ್ತೇನೆ ಎಂದಾಗ ಪಾಂಡವರಲ್ಲಿ ಒಬ್ಬನಾದ ಭೀಮಸೇನನು ಇದರಿಂದ ಸತುಂಷ್ಟನಾಗಿ ಸುತ್ತ-ಮುತ್ತವಿರುವ ಕಲ್ಲು ಹಾಗು ಪರ್ವತಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ಅಲ್ಲಿ ಶಿವನನ್ನು ಆರಾಧಿಸಿದನು ಎಂದು ಕೆಲವರು ಹೇಳುತ್ತಾರೆ, ಅಂದಿನಿಂದಲೇ ಅತ್ಯಂತ ಪವಿತ್ರವಾದ ಸ್ಥಳವಾಗಿ ಕೇದಾರನಾಥ ದೇವಾಲಯವು ಚರಿತ್ರೆಯಲ್ಲಿ ಉಳಿಯಿತು.

4.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

4.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

ಪ್ರಮುಖ ಶೈವ ಕ್ಷೇತ್ರಗಳಲ್ಲಿಯೇ ಅಂಡಾಕಾರವಾಗಿ ,ಓವಲ್ ಶೇಪ್‍ನಲ್ಲಿ ಇರುವ ಶಿವಲಿಂಗವನ್ನು ಪೂಜಿಸುವುದು ಕೆಲವು ಯುಗಗಳಿಂದಲೂ ಬಂದಿರುವ ಪದ್ಧತಿಯೇ ಆಗಿದೆ. ಆದರೆ ಕೇದಾರನಾಥ ದೇವಾಲಯದಲ್ಲಿ ಶಿವಲಿಂಗ ಮಾತ್ರ ತ್ರಿಭುಜಾಕಾರ ಅಥವಾ ಟ್ರಯಾಂಗಿಲ್ ಆಕಾರದಲ್ಲಿ ಇರುವುದನ್ನು ಕಾಣಬಹುದು. ಪವಿತ್ರವಾದ ಮನಸ್ಸಿನಿಂದ ಈ ಸ್ವಾಮಿಯನ್ನು ಆರಾಧಿಸಿದರೆ ಸಕಲ ಪಾಪಗಳು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ. ಸ್ವಾಮಿಯನ್ನು ದರ್ಶಿಸಿ ಮತ್ತೇ ಪಾಪವನ್ನು ಮಾಡಲು ಪ್ರಾರಂಭ ಮಾಡಿದರೆ ಪ್ರಳಯ ರುದ್ರನ ಕೋಪಾಗ್ನಿಗೆ ಗುರಿಯಾಗುತ್ತಾರೆ ಎಂದು ಭಕ್ತರ ನಂಬಿಕೆಯಾಗಿದೆ.

5.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

5.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

ಅನೇಕ ಮಂದಿ ತಮ್ಮ ಜೀವನ ಕಾಲದಲ್ಲಿ ನಡೆದ ವಿಷಯಗಳನ್ನು ಇಲ್ಲಿ ವಿವರಿಸಿ ಯಾವುದೇ ಪರಿಸ್ಥಿತಿಯಲ್ಲಿಯೇ ಆಗಲಿ ಈ ನಂಬಿಕೆಯನ್ನು ಅಪಹಾಸ್ಯವನ್ನು ಮಾಡಬಾರದು ಎಂದು ಅಲ್ಲಿನ ಪಂಡಿತರು ವಿವರಿಸುತ್ತಾರೆ. 2013 ಜುಲೈನಲ್ಲಿ ಪ್ರಕೃತಿ ಕೋಪಾಗ್ನಿಗೆ ಗುರಿಯಾದ ಈ ಪ್ರದೇಶದಲ್ಲಿ ಅನೇಕ ಮಂದಿ ಪ್ರಾಣವನ್ನು ಬಿಟ್ಟರು.

6.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

6.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

ಅಂತಹ ವಿಪತ್ತು ಸಮಯದಲ್ಲಿ ಬೆಟ್ಟದ ಮೇಲಿನಿಂದ ಉರುಳಿಕೊಂಡು ಬಂದ ಒಂದು ಬಂಡೆಕಲ್ಲು ಅಡ್ಡವಾಗಿ ಇರುವುದರಿಂದ ದೇವಾಲಯದ ಮುಖ್ಯ ಭಾಗಕ್ಕೆ ಯಾವುದೇ ಹಾನಿ ಆಗಲಿಲ್ಲ. ಇದು ಖಚಿತವಾಗಿ ಭೋಳಶಂಕರನ ಲೀಲೆ ಎಂದೇ ಭಕ್ತರು ನಂಬಿಕೆ ಇಟ್ಟಿದ್ದಾರೆ. ಒಂದು ವೇಳೆ ಬಂಡೆಕಲ್ಲು ಅಡ್ಡವಾಗಿ ನಿಂತಿಲ್ಲ ಎಂದರೆ ಎಷ್ಟೋ ಜನರ ಪ್ರಾಣ ನಷ್ಟವಾಗುತ್ತಿತ್ತು ಎಂದು ಶಾಸ್ತ್ರಕಾರರು ಕೂಡ ಧೃಡೀಕರಿಸುತ್ತಾರೆ. ಪ್ರಕೃತಿ ವಿಕೋಪ ಯಾವಾಗ ಸಂಭವಿಸುತ್ತದೆಯೋ ತಿಳಿಯದ ಹಾಗು ಅತ್ಯಂತ ಅಪಾಯಕರವಾದ ದೇವಾಲಯವೇ ಕೇದಾರನಾಥ.

7.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

7.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

ಧಾರಾಕಾರವಾಗಿ ಮಳೆ ಏನಾದರೂ ಬಿದ್ದರೆ ಖಚಿತವಾಗಿ ಆ ಪ್ರದೇಶವೆಲ್ಲಾ ನೀರಿನ ಪ್ರವಾಹವಾಗಿ ಪ್ರಕೃತಿ ಸಮತೋಲನವಾಗುತ್ತದೆ. ಇನ್ನು ಮಳೆಯು ಪೂರ್ತಿಯಾಗಿ ಆ ಸುತ್ತಲಿನ ಪ್ರದೇಶವೆಲ್ಲಾ ಮುಳುಗುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ. ಇದರ ಕುರಿತು ಅಲ್ಲಿನ ಸೈನ್ಯವು ಮುಂಜಾಗ್ರತೆ ಕ್ರಮವಾಗಿ ಅನೇಕ ಸವಲತ್ತುಗಳನ್ನು ಮಾಡುತ್ತಿದೆ.

8.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

8.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

ಮಂದಾಕಿನಿ ನದಿ ತೀರದಲ್ಲಿರುವ ಈ ದೇವಾಲಯವು ಏಪ್ರಿಲ್‍ನಿಂದ ಸೆಪ್ಟೆಂಬರ್ ತಿಂಗಳವರೆಗೆ ಮಾತ್ರವೇ ದರ್ಶನಕ್ಕೆ ಯೋಗ್ಯವಾದ ಸಮಯವೆಂದು ಹೇಳುತ್ತಾರೆ. ಸುಮಾರು 20 ಕಿ.ಮೀ ಮೆರು ಪರ್ವತದ ಅಧಿರೋಹಣ ಚರ್ಯೆ ಮೌಂಟೆನ್ ಟ್ರೆಕ್ಕಿಂಗ್ ಮಾಡಬೇಕಾಗುತ್ತದೆ.

9.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

9.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

PC:Vaibhavchandak

ಚಳಿಗಾಲದಲ್ಲಿ ಮುಚ್ಚಿಹಾಕುವ ದೇವಾಲಯ ಇದಾದ್ದರಿಂದ ಬದರಿನಾಥ ಕ್ಷೇತ್ರದಲ್ಲಿ ರೂಢಿಸಿಕೊಂಡು ಬಂದಿರುವ ಎಲ್ಲಾ ನಿಯಮಗಳನ್ನು ಇಲ್ಲಿ ಆಚರಿಸುತ್ತಾರೆ. ಹೀಗೆ ಕೆಲವು ಲಕ್ಷ ವರ್ಷಗಳಿಂದ ಪೂಜೆಗಳನ್ನು ಮಾಡಿಕೊಳ್ಳುತ್ತಿರುವ ಈ ದೇವಾಲಯವು ಕಾರ್ತಿಕ ಪೌರ್ಣಮಿ ದಿನದಂದು ಮಂಜಿನಿಂದ ಹೊರಬಂದು ಅತ್ಯಂತ ತೇಜೋಮಯವಾಗಿ ಪ್ರಕಾಶಿಸುತ್ತಿರುವ ಶಿವಲಿಂಗ ಎಂದು ಅಭಿವರ್ಣಿಸುತ್ತಾರೆ.

10.ಎಲ್ಲಿದೆ?

10.ಎಲ್ಲಿದೆ?

PC:Venkats278

ಕೇದಾರನಾಥ ಉತ್ತರಖಂಡದಲ್ಲಿನ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಈ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು 3584 ಮೀಟರ್ ಎತ್ತರದ ಗರ್ವಾಲ್ ಹಿಮಾಲಯದಲ್ಲಿ ಇದೆ. ಹಿಂದೂ ಧರ್ಮದವರು ಪವಿತ್ರವಾದ ಪ್ರದೇಶವಾಗಿ ಭಾವಿಸುತ್ತಾರೆ. ಕೇದಾರನಾಥ ದೇವಾಲಯವು 12 ಜ್ಯೋತಿರ್‍ಲಿಂಗಗಲ್ಲಿ ಇದು ಅತ್ಯುನ್ನತವಾದುದು. ಅದ್ಭುತವಾದ ಮಂದಾಕಿನಿ ನದಿ ದೇವಾಲಯದ ಸಮೀಪದಲ್ಲಿ ಪ್ರವಹಿಸುತ್ತದೆ.

11.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

11.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

PC:Naresh Balakrishnan

ಈ ಪುಣ್ಯ ಕ್ಷೇತ್ರವು ಶಿವ ಆಶೀರ್ವಾದ ಹೊಂದುವುಕ್ಕಾಗಿ ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. 1000 ವರ್ಷಗಳ ಪುರಾತನ ಚರಿತ್ರೆಯನ್ನು ಹೊಂದಿರುವ ಈ ದೇವಾಲಯವನ್ನು ದರ್ಶನ ಮಾಡಿಕೊಳ್ಳುವ ಸಲುವಾಗಿ ವಿದೇಶದಿಂದಲೂ ಕೂಡ ತೆರಳುತ್ತಿರುತ್ತಾರೆ. ಭಕ್ತರು ಈ ಪುಣ್ಯಕ್ಷೇತ್ರಕ್ಕೆ ಹೋಗುವ ಮೆಟ್ಟಲಿನ ಮೇಲೆ ಪಾಳಿ ಭಾಷೆಯಲ್ಲಿ ಬರೆದ ಶಾಸನಗಳನ್ನು ಕಾಣಬಹುದು.

12.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

12.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

ಸಮುದ್ರ ಮಟ್ಟಕ್ಕೆ ಸುಮಾರು 3584 ಮೀಟರ್ ಎತ್ತರದಲ್ಲಿರುವ ಈ ಪ್ರದೇಶಕ್ಕೆ ಸೇರಿಕೊಳ್ಳುವುದು ಎಲ್ಲಾ ಛಾರ್ ಧಾಂ ಪುಣ್ಯಕ್ಷೇತ್ರಗಳಿಗಿಂತಲೂ ಕಷ್ಟಕರವಾದುದು. ಈ ದೇವಾಲಯವನ್ನು ಕೇವಲ ಬೇಸಿಗೆ ಕಾಲದ ಸಮಯದಲ್ಲಿ 6 ತಿಂಗಳ ಕಾಲ ಮಾತ್ರವೇ ಇರುತ್ತದೆ. ಚಳಿಗಾಲದಲ್ಲಿ ಭಾರಿ ಮಂಜಿನಿಂದ ಮಳೆಯು ಇರುವುದರಿಂದ ಈ ಪುಣ್ಯಕ್ಷೇತ್ರವನ್ನು ಮುಚ್ಚಿಹಾಕುತ್ತಾರೆ.

13.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

13.ತ್ರಿಭುಜಾಕಾರದಲ್ಲಿ ಶಿವಲಿಂಗವಿರುವ ಏಕೈಕ ದೇವಾಲಯವಿದು..!

PC:Atarax42

ಕೇದಾರನಾಥ ಪ್ರಯಾಣಿಸುವ ಪ್ರಯಾಣಿಕರು ತಪ್ಪದೇ ಕೇದಾರನಾಥ ದೇವಾಲಯದ ಸಮೀಪದಲ್ಲಿರುವ ಶಂಕರಾಚಾರ್ಯ ಸಮಾಧಿಯನ್ನು ತಪ್ಪದೇ ಭೇಟಿ ನೀಡಬೇಕು. ಶಂಕರಾಚಾರ್ಯ ಪ್ರಮುಖ ಹಿಂದೂ ಮತ ಮಹರ್ಷಿ, ಅದ್ವೈತ ಸಿದ್ಧಾಂತದ ಅವಗಹನೆ ಮೂಢಿಸಿದ ಮಹಾನ್ ಪುರುಷ. ಈತ ತಮ್ಮ 32 ನೇ ವಯಸ್ಸಿನಲ್ಲಿ ಇಲ್ಲಿಯೇ ಸಮಾಧಿಯಾದರು ಎನ್ನಲಾಗಿದೆ.

14.ಭೇಟಿ ನೀಡಲು ಅತ್ಯುತ್ತಮವಾದ ಸಮಯ

14.ಭೇಟಿ ನೀಡಲು ಅತ್ಯುತ್ತಮವಾದ ಸಮಯ

ಮೇ ಮತ್ತು ಅಕ್ಟೋಬರ್ ತಿಂಗಳ ಮಧ್ಯಕಾಲದಲ್ಲಿ ಉಷ್ಣಗ್ರತೆ ಈ ಸಮಯದಲ್ಲಿ ಆಹ್ಲಾದಕರವಾಗಿರುತ್ತದೆ. ಆ ಸಮಯದಲ್ಲಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಲು ಅನುಕೂಲಕರವಾಗಿರುತ್ತದೆ. ಈ ಪ್ರದೇಶಕ್ಕೆ ಸ್ಥಳೀಯರು ಶೀತಕಾಲದಲ್ಲಿ ಮಂಜಿನಿಂದ ಕೂಡಿರುವುದರಿಂದ ಕೇದಾರನಾಥವು ಖಾಲಿ ಮಾಡುತ್ತಾರೆ.

15.ರೈಲು ಮಾರ್ಗದ ಮೂಲಕ

15.ರೈಲು ಮಾರ್ಗದ ಮೂಲಕ

ಕೇದಾರನಾಥದಿಂದ 221 ಕಿ.ಮೀ ದೂರದಲ್ಲಿ ರಿಷಿಕೇಶ್ ರೈಲ್ವೆ ನಿಲ್ದಾಣ. ಯಾತ್ರಿಕರು ರೈಲ್ವೆ ಸ್ಟೇಷನ್‍ನಿಂದ ಕೇದಾರನಾಥಗೆ ಅನೇಕ ಟ್ಯಾಕ್ಸಿಗಳು ಲಭಿಸುತ್ತದೆ. ಪ್ರಯಾಣಿಕರು ಕೇದಾರನಾಥ ಸೇರಿಕೊಳ್ಳುವುದಕ್ಕೆ 207 ಕಿ.ಮೀ ದೂರದಲ್ಲಿದೆ. ಟ್ಯಾಕ್ಸಿಗಳ ಮೂಲಕ ಸುಲಭವಾಗಿ ಸೇರಿ ಅಲ್ಲಿಂದ 14 ಕಿ.ಮೀ ಕಾಲು ನಡಿಗೆಯಿಂದ ಸೇರಬೇಕು.

16.ವಿಮಾನ ನಿಲ್ದಾಣ

16.ವಿಮಾನ ನಿಲ್ದಾಣ

ಕೇದಾರನಾಥ ಸಮೀಪದಲ್ಲಿ ವಿಮಾನನಿಲ್ದಾಣವು 239 ಕಿ.ಮೀ ದೂರದಲ್ಲಿರುವ ಡೆಹ್ರಾಡೂನ್ ಜಾಲಿಗ್ರಾಂಟ್. ಈ ವಿಮಾನ ನಿಲ್ದಾಣವು ನೇರವಾಗಿ ಭಾರತ ದೇಶದಲ್ಲಿನ ಎಲ್ಲಾ ಪ್ರಧಾನವಾದ ನಗರಗಳ ವಿಮಾನಗಳು ಸಂಪರ್ಕ ಹೊಂದಿದೆ. ಇಂದಿರಾಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣವು ಕೂಡ ಸಮೀಪದ ವಿಮಾನ ನಿಲ್ದಾಣವೇ ಆಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more