» »ಈ ಸ್ತಂಭ ಉರುಳಿದರೆ ಯುಗಾಂತ್ಯವಾಗುವುದು ಖಚಿತ

ಈ ಸ್ತಂಭ ಉರುಳಿದರೆ ಯುಗಾಂತ್ಯವಾಗುವುದು ಖಚಿತ

Written By:

ಆದಿ ಅಂತ್ಯ ಎನ್ನುವುದು ಪ್ರತಿಯೊಂದು ಜೀವಿಗೂ ಇರುತ್ತದೆ. ಸೂಕ್ಷ್ಮ ಜೀವಿಯಿಂದ ಹಿಡಿದು ಸಮಸ್ತ ಸೃಷ್ಠಿಯು ಈ ನಿಯಮಕ್ಕೆ ಒಳಪಡುತ್ತದೆ. ಅಂತ ಸಮೀಪವಾಗುವ ಮುಂಚೆ ಈ ಸೃಷ್ಟಿಯು ನಮಗೆ ತಿಳಿಯುವ ಹಾಗೆ ಕೆಲವು ಸಂಕೇತಗಳನ್ನು ತೋರಿಸುತ್ತದೆ. ನಮ್ಮ ಹಿಂದೂ ಪುರಾಣಗಳ ಪ್ರಕಾರ ಭೂಮಿ ಎಲ್ಲಾ ಕಾಲಾಮಾನವನ್ನು 4 ಯುಗಗಳಾಗಿ ವಿಂಗಡಿಸಿದ್ದಾರೆ.

ಅವುಗಳೇ ಕೃತ ಯುಗ, ತ್ರೇತ ಯುಗ, ದ್ವಾಪರ ಯುಗ ಹಾಗೂ ಕಲಿಯುಗ. ನಾವಿರುವುದು ಕಲಿಯುಗದಲ್ಲಿ ಈ ಯುಗಾಂತದಲ್ಲಿ ಸೃಷ್ಟಿಯು ಅಂತ್ಯವಾಗಿ ಮತ್ತೊಂದು ಹೊಸ ಯುಗದ ಸೃಷ್ಟಿ ಆರಂಭವಾಗುತ್ತದೆ ಎಂದು ಹಲವಾರು ವರ್ಷಗಳಿಂದ ಕೇಳುತ್ತಲೇ ಬರುತ್ತಿದ್ದಿವೆ. ಆಶ್ಚರ್ಯಕರವಾದ ಸಂಗತಿ ಏನೆಂದರೆ ಮಾಹಾರಾಷ್ಟ್ರದ ಕೇದರನಾಥ ಶಿವನ ಒಂದು ದೇವಾಲಯದಲ್ಲಿ ಕಲಿಯುಗದ ಅಂತ್ಯ ಯಾವಾಗ ನಡೆಯುತ್ತದೆ ಎಂದು ನಿಖರವಾಗಿ ತಿಳಿಸುತ್ತದೆ.

ಪ್ರಸ್ತುತ ಲೇಖನದಲ್ಲಿ ಆ ಚಮತ್ಕಾರಿ ದೇವಾಲಯದ ಬಗ್ಗೆ ತಿಳಿಯಿರಿ.

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ಈ ರಹಸ್ಯಮಯವಾದ ಈ ದೇವಾಲಯವು ಮಹಾರಾಷ್ಟ್ರದ ಅಹಮದಾ ನಗರ ಜಿಲ್ಲೆಯ ಹರಿಶ್ಚಂದ್ರ ಘಡ್‍ನ ಕೋಟೆಯಲ್ಲಿದೆ. ಈ ದೇವಾಲಯವು ಬೆಟ್ಟದ ಮೇಲೆ ಬೋಲಾ ಶಂಕರನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ.
PC:rohit gowaikar

ಇತಿಹಾಸ

ಇತಿಹಾಸ

ಈ ದೇವಾಲಯದ ಇತಿಹಾಸವು ಮತ್ಸಪುರಾಣ, ಸ್ಕಂದ ಪುರಾಣ ಮತ್ತು ಅಗ್ನಿ ಪುರಾಣಗಳಲ್ಲಿ ಹರಿಶ್ಚಂದ್ರ ಘಡ್ ಪ್ರದೇಶದ ಉಲ್ಲೇಖವಿದೆ. ಈ ಪುರಾಣಗಳ ಪ್ರಕಾರ 6 ನೇ ಶತಮಾನದಲ್ಲಿ ಕುಲಚೂರಿಯ ಸಾಮ್ರಾಜ್ಯಕಾರರು ಈ ಪ್ರದೇಶವನ್ನು ಆಳುತ್ತಿದ್ದರು.
PC:Cj.samson

ಗುಹೆಗಳು

ಗುಹೆಗಳು

ಲ್ಲಿನ ಗುಹೆಗಳು ಅತ್ಯಂತ ಸುಂದರವಾಗಿದ್ದು ಸುಮಾರು 11 ನೇ ಶತಮಾನದಲ್ಲಿ ಗುಹೆಗಳು ತನ್ನ ಅಪೂರ್ವ ಸೊಬಗನ್ನು ವೃದ್ಧಿಸಿಕೊಳ್ಳಲು ಡೊಂಕಾಗಿವೆ. ಈ ಗುಹೆಯಲ್ಲಿ ಮೊದಲಿಗೆ ಮಹಾ ವಿಷ್ಣುವಿನ ಮೂರ್ತಿ ಇತ್ತು. ಚಂಗದೇವ ಎಂಬ ಸನ್ಯಾಸಿಯು 14 ನೇ ಶತಮಾನದಲ್ಲಿ ಈ ಗುಹೆಯಲ್ಲಿ ತಪಸ್ಸನ್ನು ಆಚರಿಸುತ್ತಿದ್ದನು.
PC:rohit gowaikar

ಹರಿಶ್ಚಂದ್ರರೇಶ್ವರ ದೇವಾಲಯ

ಹರಿಶ್ಚಂದ್ರರೇಶ್ವರ ದೇವಾಲಯ

ಇಲ್ಲಿನ ಹರಿಶ್ಚಂದ್ರೇಶ್ವರ ದೇವಾಲಯ ಹಾಗೂ ಕೇದಾರೇಶ್ವರ ಗುಹೆಯನ್ನು ಕೊಳಿ ಮಹದೇವ ಎಂಬ ಬುಡಕಟ್ಟಿನವರ ಅಧೀನದಲ್ಲಿತ್ತು. ಮೊಗಲ್ ಚಕ್ರವರ್ತಿಗಳ ಪೂರ್ವದಲ್ಲಿಯೇ ಬುಡಕಟ್ಟು ಜನರು ಈ ಸುಂದರವಾದ ದೇವಾಲಯ ಹಾಗೂ ಗುಹೆಯನ್ನು ನೋಡಿಕೊಳ್ಳುತ್ತಿದ್ದರು. ನಂತರ ಇದು ಮೊಗಲರ ಕೈವಶವಾಯಿತು. 1747ರಲ್ಲಿ ಮರಾಠ ಈ ಪ್ರದೇಶವನ್ನು ಆಕ್ರಮಿಸಿಕೊಂಡರು.
PC:YOUTUBE

ಸಪ್ತ ತೀರ್ಥ ಪುಷ್‍ಕರಣೀ

ಸಪ್ತ ತೀರ್ಥ ಪುಷ್‍ಕರಣೀ

ದೇವಾಲಯದ ಪೂರ್ವ ಭಾಗದಲ್ಲಿ ಸಪ್ತ ತೀರ್ಥವಿದೆ. ಈ ತೀರ್ಥದ ಸಮೀಪ ಮಹಾ ವಿಷ್ಣುವಿನ ಮೂರ್ತಿ ಇದೆ. ಇತ್ತೀಚಿಗೆ ವಿಷ್ಣುವಿನ ಮೂರ್ತಿಯನ್ನು ಹರಿಶ್ಚಂದೇಶ್ವರ ದೇವಾಲಯದ ಗುಹೆಗೆ ವರ್ಗಾಯಿಸಲಾಯಿತು. ಇಲ್ಲಿಗೆ ಬರುವ ಹಲವಾರು ಪ್ರವಾಸಿಗರು ಸಪ್ತ ತೀರ್ಥವನ್ನು ಮಾಲಿನ್ಯ ಮಾಡಿದರು.
PC:YOUTUBE

ಕೇದರೇಶ್ವರ ದೇವಾಲಯ

ಕೇದರೇಶ್ವರ ದೇವಾಲಯ

ಹರಿಶ್ಚಂದೇಶ್ವರ ದೇವಾಲಯಕ್ಕೆ ಹೋಗುವ ದಾರಿಯ ಸಮೀಪದಲ್ಲಿಯೇ ಬೃಹತ್ ಗುಹೆಯು ದೊರೆಯುತ್ತದೆ ಅದುವೇ ಕೇದಾರನಾಥನು ನೆಲೆಸಿದ್ದಾನೆ. ಈ ಪವಿತ್ರವಾದ ಗುಹೆಯಲ್ಲಿಯೇ ಕಲಿಯುಗ ಅಂತ್ಯವನ್ನು ಸೂಚಿಸುವ ಲಕ್ಷಣಗಳಿವೆ.
PC:YOUTUBE

ಕಲಿಯುಗ ಅಂತ್ಯ

ಕಲಿಯುಗ ಅಂತ್ಯ

ಈ ಕೇದಾರೇಶ್ವರ ದೇವಾಲಯದಲ್ಲಿ ಸ್ಮಶಾಣರುದ್ರ ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಲಿಂಗಕ್ಕೆ ಸುತ್ತಲು ಜಲವೃತ್ತಗೊಂಡಿದೆ. ಸುಮಾರು ಈ ಒಳ ಗುಹೆಯು 5 ಅಡಿ ಎತ್ತರ ಇದೆ.
PC:YOUTUBE

ಕಠಿಣ

ಕಠಿಣ

ಈ ದೇವಾಲಯದ ಒಳಗೆ ಹೋಗುವುದು ಕೊಂಚ ಕಠಿಣವಾದುದು. ಏಕೆಂದರೆ ಇಲ್ಲಿನ ನೀರು ಅತ್ಯಂತ ತಂಪಾಗಿರುತ್ತದೆ. ಮಳೆಗಾಲದಲ್ಲಿ ಈ ದೇವಾಲಯದ ಪ್ರವೇಶ ಅಸಾಧ್ಯವಾದುದು ಹಾಗೂ ಅಪಾಯಕರವಾದುದು.
PC:YOUTUBE

ನಾಲ್ಕು ಸ್ತಂಭ

ನಾಲ್ಕು ಸ್ತಂಭ

ಕೇದಾರನಾಥ ಶಿವಲಿಂಗ ನೆಲೆಸಿರುವ ಈ ದೇವಾಲಯದಲ್ಲಿ 4 ಸ್ತಂಭಗಳಿವೆ. ಒಂದೊಂದು ಸ್ತಂಭ ಒಂದೊಂದು ಯುಗವನ್ನು ಬಿಂಬಿಸುತ್ತದೆ. ಅವುಗಳೆಂದರೆ ಕೃತ ಯುಗ, ತ್ರೇತ ಯುಗ, ದ್ವಾಪರ ಯುಗ ಹಾಗೂ ಕಲಿಯುಗಕ್ಕೆ ಸರಿಸಮವಾಗಿದೆ.
PC:YOUTUBE

ಕೊನೆಯ ಸ್ತಂಭ

ಕೊನೆಯ ಸ್ತಂಭ

ನಾಲ್ಕು ಸ್ತಂಭಗಳಲ್ಲಿ ಕೇವಲ ಒಂದೇ ಸ್ತಂಭವಿದೆ. ಈ ಸ್ತಂಭವೇ ಕಲಿಯುಗದ ಅಂತ್ಯವನ್ನು ತಿಳಿಸುತ್ತದೆ. ಕಾಲಾಕ್ರಮೇಣ ಯುಗಗಳಲ್ಲಿ ಧರ್ಮವು ನಾಶವಾದ ಕಾರಣ ಮೂರು ಸ್ತಂಭಗಳು ಉರುಳಿವೆ. ಇರುವುದು ಒಂದೇ ಸ್ತಂಭ.
PC:YOUTUBE

ನಾಶ

ನಾಶ

ಉಳಿದಿರುವ ಕೊನೆಯ ಸ್ತಂಭ ಉರುಳಿದರೆ ಪ್ರಪಂಚವೇ ಉರುಳಿದಂತೆ. ಅಂದರೆ ಸೃಷ್ಟಿ ನಿಯಮದ ಪ್ರಕಾರ ಕಲಿಯುಗ ಅಂತ್ಯವಾದಂತೆ. ಶಿವನ ಲಿಂಗದ ಮೇಲಿರುವ ಸ್ತಂಭ ಉರುಳಿದರೆ ಗುಹೆಯೇ ಲಿಂಗದ ಮೇಲೆ ಬೀಳುವುದರಿಂದ ಸೃಷ್ಟಿಗೆ ಕೇಡಾಗುತ್ತದೆ ಎಂದು ತಿಳಿಸುತ್ತಾರೆ.
PC:YOUTUBE

ರಹಸ್ಯವಾದ ಜಲ

ರಹಸ್ಯವಾದ ಜಲ

ಶಿವನ ದೇವಾಲಯದಲ್ಲಿ ನಿತ್ಯವು ಜಲದಿಂದ ಅವೃತ್ತಗೊಂಡಿರುತ್ತದೆ. ಈ ಪವಿತ್ರ ಜಲವು ಗೋಡೆಗಳಿಂದ ಬರುತ್ತದೆ ಎಂದು ಹೇಳಲಾಗಿದೆ.
PC:YOUTUBE

ಹರಿಶ್ಚಂದ್ರ ಗುಹೆ

ಹರಿಶ್ಚಂದ್ರ ಗುಹೆ

ಹರಿಶ್ಚಂದ್ರ ಗುಹೆಯು ಹಲವಾರು ಕಡೆ ಹರಡಿಕೊಂಡಿದೆ. ಕೆಲವು ಗುಹೆಗಳು ಕೇದಾರನಾಥನ ದೇವಾಲಯದ ಬಳಿ ಇರುವುದನ್ನು ಕೂಡ ಕಾಣಬಹುದಾಗಿದೆ.
PC:YOUTUBE

ಭಕ್ತರು

ಭಕ್ತರು

ಈ ದೇವಾಲಯದ ರಹಸ್ಯವನ್ನು ನೋಡಲು ದೇಶ ವಿದೇಶಗಳಿಂದ ಹಲವಾರು ಜನರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
PC:YOUTUBE

ಹರಿಶ್ಚಂದ್ರೇಶ್ವರ ದೇವಾಲಯ

ಹರಿಶ್ಚಂದ್ರೇಶ್ವರ ದೇವಾಲಯ

ಈ ದೇವಾಲಯವು ಅತ್ಯದ್ಭುತವಾದ ಶಿಲ್ಪಗಳನ್ನು ಹೊಂದಿದ್ದು ಮನಸೊರೆಗೊಳ್ಳುವ ಸೌಂದರ್ಯ. ಈ ದೇವಾಲಯವು 16 ಮೀಟರ್‍ನಷ್ಟು ಎತ್ತರದಲ್ಲಿದೆ. ಇಲ್ಲಿ ಹಲವಾರು ಗುಹೆಗಳು ಹಾಗೂ ಪವಿತ್ರವಾದ ನದಿಗಳನ್ನು ಕಾಣಬಹುದಾಗಿದೆ.
PC:YOUTUBE

ಸಮೀಪದಲ್ಲಿರುವ ಹಲವು ಸ್ಥಳಗಳು

ಸಮೀಪದಲ್ಲಿರುವ ಹಲವು ಸ್ಥಳಗಳು

ಇಲ್ಲಿ ಹಲವಾರು ವಿವಿಧ ಗುಹೆಗಳಿವೆ. ಮುಖ್ಯವಾಗಿ ನಾಗೇಶ್ವರ ದೇವಾಲಯ, ತಾರಾಮತಿ ಶಿಖರ, ಕೋನಕ್ ಕಾಡ ಇನ್ನೂ ಹಲವಾರು.
PC:YOUTUBE

Please Wait while comments are loading...