Search
  • Follow NativePlanet
Share
» »ರಾಯಚೂರಿನ ಕರಿಯಪ್ಪ ತಾತನ ದರ್ಶನ ಮಾಡಿ

ರಾಯಚೂರಿನ ಕರಿಯಪ್ಪ ತಾತನ ದರ್ಶನ ಮಾಡಿ

By Vijay

ಸರ್ಪ ದೋಷ ನಿವಾರಣೆಗೆಂದೆ ಭಾರತದಲ್ಲಿ ಸಾಕಷ್ಟು ಹೆಸರುವಾಸಿಯಾದ ಸ್ಥಳಗಳಿವೆ. ಕರ್ನಾಟಕ ದಲ್ಲಿರುವ ಕುಕ್ಕೆಯೂ ಸಹ ಒಂದು ಪ್ರಖ್ಯಾತ ಸ್ಥಳವಾಗಿದೆ. ಆದರೆ ನಿಮಗಿದು ಗೊತ್ತೆ...ಉತ್ತರ ಕರ್ನಾಟಕ ಭಾಗದಲ್ಲೂ ಸಹ ಒಂದು ಅಂತಹ ಅದ್ಭುತವಾದ ಸ್ಥಳವಿದ್ದು ಸರ್ಪ ದೋಷ ನಿವಾರಣೆಗೆ ಖ್ಯಾತಿ ಪಡೆದಿದೆ. ಅಷ್ಟೆ ಏಕೆ, ಹಾವು, ಚೇಳು ಕಚ್ಚಿದರೂ ಇಲ್ಲಿಗೆ ತೆರಳಿದರೆ ವಿಷ ನಿವಾರಣೆಯಾಗುತ್ತದಂತೆ!

ನಿಮಗಿಷ್ಟವಾಗಬಹುದಾದ : ಪಂಚಮುಖಿ ಆಂಜನೇಯ ಕ್ಷೇತ್ರ

ಈ ಸುಕ್ಷೇತ್ರವನ್ನು "ಉತ್ತರ ಕರ್ನಾಟಕದ ಕುಕ್ಕೆ" ಎಂತಲೂ ಸಹ ಸಂಭೋದಿಸಲಾಗುತ್ತದೆ. ಹೌದು ಆ ಕ್ಷೇತ್ರವೆ ಕರಿಯಪ್ಪ ತಾತ ನೆಲೆಸಿರುವ ರಾಯಚೂರಿನ ಕಲ್ಮಲ ಕ್ಷೇತ್ರ. ರಾಯಚೂರು ನಗರದಿಂದ ಕೇವಲ 16 ಕಿ.ಮೀ ಗಳಷ್ಟು ದೂರದಲ್ಲಿ ಈ ಗ್ರಾಮವಿದ್ದು ರಾಯಚೂರಿನಿಂದ ಸಾಕಷ್ಟು ಬಸ್ಸುಗಳು ಇಲ್ಲಿಗೆ ತೆರಳಲು ದೊರೆಯುತ್ತವೆ.

ಸ್ಥಳ ಪುರಾಣದ ಪ್ರಕಾರ, ಹಿಂದೆ, ಈ ಸ್ಥಳದಲ್ಲಿ ಕಲ್ಲೊಂದರ ಮೇಲೆ ಪಾದಗಳು ಒಡಮೂಡಿದ್ದವು. ಹೀಗೆ "ಕಲ್ಲಿನ ಮೇಲೆ" ಎನ್ನುತ್ತ ಎನ್ನುತ್ತ ಕ್ರಮೇಣವಾಗಿ ಕಲ್ಮಲ ಎಂಬ ಹೆಸರು ಬಂದಿತೆನ್ನಲಾಗಿದೆ. ಇನ್ನೂ ಇಲ್ಲಿರುವ ಕರಿಯಪ್ಪ ತಾತನ ಮಹಿಮೆ ಅಪಾರ. ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಹಟ್ಚೊಳ್ಳಿ ಹಳ್ಳಿಯವರು. ಬಾಲ್ಯದಲ್ಲೆ ಅಸ್ಪೃಶ್ಯತೆಯನ್ನು ಅನುಭವಿಸಿದವರು.

ಕರಿಯಪ್ಪ ತಾತನ ಕಲ್ಮಲ:

ಕರಿಯಪ್ಪ ತಾತನ ಕಲ್ಮಲ:

ಒಂದು ಕಥೆಯ ಪ್ರಕಾರ, ಅತಿ ಚಿಕ್ಕ ವಯಸ್ಸಿನಲ್ಲೆ ಜೀವನದಲ್ಲಿ ಜಿಗುಪ್ಸೆಗೊಂಡು ಕಾಡುಸಿದ್ಧರ ಜೊತೆ ಕೆಲ ಕಾಲ ಅಲೆದು ಅಪಾರವಾದ ಜ್ಞಾನ ಹಾಗೂ ಪವಾಡ ಶಕ್ತಿಯನ್ನು ಗಳಿಸಿದರಂತೆ. ಗ್ರಾಮದಲ್ಲಿ ವಿಷಜಂತುಗಳ ಕಾಟದಿಂದ ಜೀವ ಹಾನಿಯಾಗುವುದು ಸಾಮಾನ್ಯವಾಗಿತ್ತು.

ಕರಿಯಪ್ಪ ತಾತನ ಕಲ್ಮಲ:

ಕರಿಯಪ್ಪ ತಾತನ ಕಲ್ಮಲ:

ಇದನ್ನು ಮನಗಂಡ ಕರಿಯಪ್ಪನವರು ತಮ್ಮ ದೈವಿ ಶಕ್ತಿಯಿಂದ ವಿಷವನ್ನು ನಿವಾರಿಸಿ ಮರುಜೀವ ಕೊಡುತ್ತಿದ್ದರಂತೆ.

ಕರಿಯಪ್ಪ ತಾತನ ಕಲ್ಮಲ:

ಕರಿಯಪ್ಪ ತಾತನ ಕಲ್ಮಲ:

ಈ ವಿಚಾರ ಎಲ್ಲೆಡೆ ಗೊತ್ತಾಗಿ ಗ್ರಾಮದ ಹಿರಿಯರೆಲ್ಲ ಸೇರಿ ಇವರನ್ನು ಪರೀಕ್ಷಿಸಲು ಮುಂದಾದಾಗ ಕರಿಯಪ್ಪನವರು ಭಕ್ತಿಯಿಂದ ಗಂಗೆಯನ್ನೆ ಕರೆಸಿ ತೋರಿಸಿದಾಗ ಎಲ್ಲರೂ ಸ್ಥಂಬಿಭೂತರಾದರಂತೆ. ಆದರೆ ಗಂಗೆಯು ಚಿಕ್ಕ ವಿಚಾರಕ್ಕೆ ಕರೆಸಿದ್ದರಿಂದ ಅವರನ್ನು ಶಪಿಸಿ ಹೋದಳಂತೆ.

ಕರಿಯಪ್ಪ ತಾತನ ಕಲ್ಮಲ:

ಕರಿಯಪ್ಪ ತಾತನ ಕಲ್ಮಲ:

ನಂತರ ಇವರು ನರೆಗಡ್ಡಿಯ ಚೆನ್ನಬಸವ ಕ್ಷೇತ್ರಕ್ಕೆ ತೆರಳಿ ಅಲ್ಲಿನ ಶ್ರೀಗಳ ಸೇವೆಯಲ್ಲಿ ನಿರತರಾದರು. ಹೀಗೆ ಕೆಲವು ಸಮಯ ಕಳೆದ ನಂತರ ನರೆಗಡ್ಡಿ ಚೆನ್ನ ಬಸವ ಶ್ರೀಗಳು ಇವರ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಇನ್ನೊಬ್ಬ ಭಕ್ತರಾದ ಗಿರಿಯಪ್ಪನವರ ಜೊತೆ ಕರಿಯಪ್ಪನವರನ್ನು ಇಂದಿನ ಸುಕ್ಷೇತ್ರ ಕಲ್ಮಲಕ್ಕೆ ಕಳುಹಿಸಿದರು.

ಕರಿಯಪ್ಪ ತಾತನ ಕಲ್ಮಲ:

ಕರಿಯಪ್ಪ ತಾತನ ಕಲ್ಮಲ:

ನಂತರ ಇಲ್ಲಿಗೆ ಬಂದು ನೆಲೆನಿಂತ ಕರಿಯಪ್ಪ, ಗಿರಿಯಪ್ಪನವರ ಮಗಳನ್ನು ಮದುವೆಯಾಗಿ ಸಂಸಾರ ಮಾಡಿದರು ಆದರೆ ಪತ್ನಿಯು ಬಹಳ ಕಾಲ ಇವರೊಂದಿಗಿರಲಾರದೆ ತೀರಿ ಹೋದರು. ಕ್ರಮೇಣ ಇವರು ಕರಿಯಪ್ಪ ತಾತನಾಗಿ ಗ್ರಾಮದ ಎಲ್ಲ ಜನರಿಗೆ ತಮ್ಮ ಪವಾಡಗಳ ಮೂಲಕ ಒಳ್ಳೆಯದನ್ನು ಮಾಡಿದರು.

ಕರಿಯಪ್ಪ ತಾತನ ಕಲ್ಮಲ:

ಕರಿಯಪ್ಪ ತಾತನ ಕಲ್ಮಲ:

ಇವರು ಮುಖ್ಯವಾಗಿ ವಿಭೂತಿ/ಆಧಾರವನ್ನು ಬಳಸಿಯೆ ಎಲ್ಲ ವಿಷವನ್ನು ಹೋಗಲಾಡಿಸುತ್ತಿದ್ದರಂತೆ. ಹೀಗಾಗಿ ಈ ಕ್ಷೇತ್ರದಲ್ಲಿ ಇಂದಿಗೂ ವಿಭೂತಿಗೆ ಅತ್ಯಂತ ಮಹತ್ವ ನೀಡಲಾಗಿದೆ. ಇನ್ನೂ ಕೆಲವು ಭಕ್ತರು ಹೇಳುವಂತೆ ಕರಿಯಪ್ಪ ತಾತನ ಚಿತ್ರ ಯಾವ ಮನೆಯಲ್ಲಿರುತ್ತದೊ ಆ ಮನೆಯಲ್ಲಿ ಎಂದಿಗೂ ಯಾವುದೆ ರೀತಿಯ ವಿಷ ಜಂತುಗಳು ನುಸುಳುವುದಿಲ್ಲವಂತೆ.

ಕರಿಯಪ್ಪ ತಾತನ ಕಲ್ಮಲ:

ಕರಿಯಪ್ಪ ತಾತನ ಕಲ್ಮಲ:

ಇವರು ಕೊನೆಗೆ ಇಲ್ಲಿಯೆ ಸಮಾಧಿ ತೆಗೆದುಕೊಂಡು ಕರಿಯಪ್ಪ ತಾತನಾಗಿ ಎಲ್ಲರಿಗೂ ಮಂಗಳವನ್ನುಂಟು ಮಾಡುತ್ತಿದ್ದಾರೆ.ದೇವಾಲಯದಲ್ಲಿ ಹುತ್ತವೊಂದಿದ್ದು ಕರಿಯಪ್ಪನವರಿಗೆ ಸರ್ಪದೊಂದಿಗಿದ್ದ ಅಪಾರ ಭಕ್ತಿಯನ್ನು ಸೂಚಿಸುತ್ತದೆ.

ಕರಿಯಪ್ಪ ತಾತನ ಕಲ್ಮಲ:

ಕರಿಯಪ್ಪ ತಾತನ ಕಲ್ಮಲ:

ಸುತ್ತಮುತ್ತಲಿನ ಪ್ರದೇಶಗಳಿಂದ ಹಾವು ಚೇಳುಗಳಿಂದ ಕಡೆಸಿಕೊಂಡವರು ಇಲ್ಲಿಗೆ ಬಂದು ನಿವಾರಣೆ ಹೊಂದುತ್ತಾರೆ ಎಂದು ಇಲ್ಲಿಗೆ ಬರುವ ಭಕ್ತಾಗಿಗಳು ಹೇಳುತ್ತಾರೆ. ಅಲ್ಲದೆ ಶ್ರಾವಣ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ ಹಾಗೂ ಅಂದು ಜನಸಾಗರವೆ ಇಲ್ಲಿ ನೆರೆದಿರುತ್ತದೆ.

ಕರಿಯಪ್ಪ ತಾತನ ಕಲ್ಮಲ:

ಕರಿಯಪ್ಪ ತಾತನ ಕಲ್ಮಲ:

ಸರ್ಪದೋಷ ಇರುವವರು, ಕಂಕಣ ಭಾಗ್ಯ, ಸಂತಾನ ಭಾಗ್ಯ ಬಯಸುವವರೂ ಸಹ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಏಕೆಂದರೆ ತಾತಪ್ಪನವರಿಗೆ ಬೇಡಿಕೊಂಡರೆ ಮದುವೆಯಿಲ್ಲದವರಿಗೆ ಮದುವೆ ಹಾಗೂ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವಂತೆ. ಹೀಗೆ ಒಳಿತು ಕಂಡವರು ಮತ್ತೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ತಾತಪ್ಪನವರ ಪವಾಡವನ್ನು ಕೊಂಡಾಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X