• Follow NativePlanet
Share
» »ಹಾರತಿ ಸಮಯದಲ್ಲಿ ಕಣ್ಣು ತೆರಯುವ ಸ್ವಾಮಿಯ ದೇವಾಲಯ ಎಲ್ಲಿದೆ ಗೊತ್ತ?

ಹಾರತಿ ಸಮಯದಲ್ಲಿ ಕಣ್ಣು ತೆರಯುವ ಸ್ವಾಮಿಯ ದೇವಾಲಯ ಎಲ್ಲಿದೆ ಗೊತ್ತ?

Written By:

ನಾಮಗಳು ಹಲವು ಆದರೆ ದೇವನು ಒಬ್ಬನೇ ಎಂಬಂತೆ ದೇವಾಲಯಗಳು ಹಲವು ಆದರೆ ದೇವನು ಒಬ್ಬನೇ ಎಂಬ ತತ್ವ ಸಾಮಾನ್ಯವಾಗಿ ಎಲ್ಲಿರಿಗೂ ತಿಳಿದಿರುವ ವಿಷಯವೇ ಆಗಿದೆ. ನಮ್ಮ ಜನರು ದೇವರಿಗಿಂತ ದೆವ್ವಗಳನ್ನೇ ಹೆಚ್ಚಾಗಿ ಕಂಡಿದ್ದಾರೆ. ಹಾಗೆಯೇ ದೇವರುಗಳು ಕೂಡ ಕನಸ್ಸಿನಲ್ಲಿ ಬಿಟ್ಟು ನಾವು ಕಷ್ಟ ಎಂದು ಬಂದಾಗ ಕಣ್ಣು ತೆರದು ನಮಗೆ ಕರುಣಿಸಬಾರದೇ ಎಂದು ಅನಿಸದಿರದು. ತಮ್ಮ ಕಷ್ಟ, ನಷ್ಟಗಳನ್ನು ದೇವರಿಗೆ ಒಪ್ಪಿಸಿ ನೀನೆ ಎಲ್ಲಾ ಎಂದು ಬೇಡಿ ಬರುತ್ತೇವೆ.

ಏನಿದು ದೇವರ ಬಗ್ಗೆ ಇಷ್ಟೊಂದು ಹೇಳುತ್ತಿದ್ದೇನೆ ಎಂದು ಯೋಚಿಸುತ್ತೀದ್ದೀರಾ?. ಹಾಗಾದರೆ ಕೇಳಿ ತಮಿಳು ನಾಡಿನ ಒಂದು ಮಾಹಿಮಾನ್ವಿತವಾದ ದೇವಾಲಯದಲ್ಲಿ ಹಾರತಿ ಮಾಡುವ ಸಮಯದಲ್ಲಿ ಸ್ವಾಮಿಯು ಕಣ್ಣನ್ನು ತೆರೆಯುತ್ತಾನೆ. ಈ ಆಶ್ಚರ್ಯವನ್ನು ಕಾಣಲು ದೇಶದ ಮೂಲೆ ಮೂಲೆಗಳಿಂದ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಕಲಿಯುಗದಲ್ಲಿಯೂ ಇವೆಲ್ಲಾ ನಡೆಯುತ್ತದೆಯೇ ಎಂದು ಉದ್ಗಾರ ತೆಗೆಯುವುದು ಸಾಮಾನ್ಯ. ಆದರೆ ಒಮ್ಮೆ ನೀವು ಕೂಡ ಈ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಕಣ್ಣಾರೆ ನೀವೆ ನಂಬಿ.....

ಕರ್ಪೂರ ಕಾಂತಿಯಲ್ಲಿ ಸ್ವಾಮಿಯು ಕಣ್ಣು ತೆರೆದಿರುವ ಹಾಗೆ ದರ್ಶನ ನೀಡುವ ಏಕೈಕ ದೇವಾಲಯ

ಕರ್ಪೂರ ಕಾಂತಿಯಲ್ಲಿ ಸ್ವಾಮಿಯು ಕಣ್ಣು ತೆರೆದಿರುವ ಹಾಗೆ ದರ್ಶನ ನೀಡುವ ಏಕೈಕ ದೇವಾಲಯ

ಶಿವ ಎಂದರೆ ಸೃಷ್ಟಿ ಕರ್ತನು ಅವನೇ ಸೃಷ್ಟಿ ನಾಶ ಮಾಡಬೇಕಾದರೂ ಅವನೇ. ಅವನೊಬ್ಬ ನಿಷ್ಕಳಂಕ, ಸರ್ವಾಂತರಯಾಮಿ, ಮಾನವರ ಪಾಪವನ್ನು ಕ್ಷಮಿಸುವ ದಯಾ ಮೂರ್ತಿ. ಬ್ರಹ್ಮ, ವಿಷ್ಣು, ಮಹೇಶ್ವರರು ಸೃಷ್ಠಿ, ಪಾಲನೆ, ನಾಶ ಇವುಗಳ ಪಾಲನೆ ಮಾಡುವ ಸೃಷ್ಠಿ ಕರ್ತರು.

ಕರ್ಪೂರ ಕಾಂತಿ

ಕರ್ಪೂರ ಕಾಂತಿ

ಕರ್ಪೂರ ಕಾಂತಿಯಲ್ಲಿ ಸ್ವಾಮಿಯು ಕಣ್ಣು ತೆರೆದಿರುವ ಹಾಗೆ ದರ್ಶನ ನೀಡುವ ಏಕೈಕ ದೇವಾಲಯ. ಈ ಮಾಹಿಮಾನ್ವಿತವಾದ ದೇವಾಲಯವಿರುವುದು ತಮಿಳು ನಾಡಿನ ಚೆನ್ನೈನಲ್ಲಿ.

ಕರಿವರದರಾಜು ಪೆರುಮಾಳ್

ಕರಿವರದರಾಜು ಪೆರುಮಾಳ್

ಈ ದೇವಾಲಯವು ಚೆನ್ನೈನಲ್ಲಿನ ಕೊಯಂಬಿಡು ಬಸ್ಸು ನಿಲ್ದಾಣದಿಂದ ಕೇವಲ ಒಂದುವರೆ ಕಿ.ಮೀ ದೂರದಲ್ಲಿ ನೆರುಕುಂಡ್ರದಲ್ಲಿನ ಕರಿವರದರಾಜು ಪೆರುಮಾಳ್ ಎಂಬ ದೇವಾಲಯವಿದೆ. ಅ ದೇವಾಲಯದಲ್ಲಿ ವೆಂಕಟೇಶ್ವರ ಸ್ವಾಮಿಯು ನೆಲೆಸಿದ್ದಾನೆ. ಅವನನ್ನು ಇಲ್ಲಿ ಕರಿವರದರಾಜು ಪೆರುಮಾಳ್ ಎಂದು ಕರೆಯುತ್ತಾರೆ.

ಕರ್ಪೂರ ಹಾರತಿ

ಕರ್ಪೂರ ಹಾರತಿ

ಆದರೆ ಯಾವ ದೇವಾಲಯದಲ್ಲಿಯೂ ಕಾಣದ ಆಶ್ಚರ್ಯ ಈ ದೇವಾಲಯದಲ್ಲಿದೆ. ಅದೇನೆಂದರೆ ಎಲ್ಲರೂ ನೋಡುವ ಸಮಯದಲ್ಲಿ ಸ್ವಾಮಿ ಕಣ್ಣನ್ನು ಮುಚ್ಚಿರುತ್ತಾರೆ. ಅದೇ ಹಾರತಿ ಸಮಯದಲ್ಲಿ ಮಾತ್ರ ಕಣ್ಣು ತೆರೆಯುತ್ತಾರೆ.

ಕರ್ಪೂರ ಹಾರತಿ

ಕರ್ಪೂರ ಹಾರತಿ

ಕರ್ಪೂರದ ಹಾರತಿ ಬೆಳಗುವ ಸಮಯದಲ್ಲಿ ಹಾರತಿಯು ಯಾವ ಕಡೆಗೆ ಹೋಗುತ್ತದೆಯೋ ಆ ಕಡೆಗೆ ಸ್ವಾಮಿಯ ಕಣ್ಣು ತಿರುಗುತ್ತದೆ ಎಂತೆ. ಈ ಆಶ್ಚರ್ಯವನ್ನು ಕಾಣಲು ಹಲವಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಅದ್ಭುತವಾಗಿ ನಿರ್ಮಾಣ ಮಾಡಿರುವ ವಿಗ್ರಹ

ಅದ್ಭುತವಾಗಿ ನಿರ್ಮಾಣ ಮಾಡಿರುವ ವಿಗ್ರಹ

ಹಾರತಿ ಸಮಯದಲ್ಲಿ ಕಣ್ಣು ತೆರೆಯುವಂತೆ ಅದ್ಭುತವಾಗಿ ನಿರ್ಮಾಣ ಮಾಡಿದ ವಿಗ್ರಹ ಇದಾಗಿದೆ. ಅಂದಿನ ಕಲಾ ಚಾತುರ್ಯಕ್ಕೆ ತಲೆ ಬಾಗಲೇ ಬೇಕಾಗಿದೆ. ಆದರೆ ಕೆಲವರು ಇದನ್ನು ಅಲ್ಲಗೆಳೆದಿದ್ದಾರೆ.

ಸೈನ್ಸ್ ಪ್ರಕಾರ

ಸೈನ್ಸ್ ಪ್ರಕಾರ

ಸೈನ್ಸ್ ಪ್ರಕಾರ ನೊಡಿದರೆ ದೇವರು, ದೈವತ್ವ ಯಾವುದು ಇಲ್ಲ ಎಂದೇ ನಂಬುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ನೀಡಿದರೂ ಕೂಡ ದೇವರ ನಂಬಿಕೆ ಅವರಲ್ಲಿ ಇಲ್ಲ. ಅವರ ಪ್ರಕಾರ ದೇವರು ಎಂಬುದು ಕೇವಲ ಮತಪರವಾದ ವಿಶ್ವಾಸವೇ ಹೊರತು ಬೇರೆಯಾವುದೂ ಅಲ್ಲ ಎಂದು ಹೇಳುತ್ತಾರೆ.

ಒಂದು ಅದೃಶ್ಯ ಶಕ್ತಿ

ಒಂದು ಅದೃಶ್ಯ ಶಕ್ತಿ

ಸೈನ್ಸ್ ಪ್ರಕಾರ ನೋಡುವವರು ದೇವರು ಇಲ್ಲ ಎಂದೇ ಉತ್ತರ ಬರುತ್ತದೆ. ಆದರೆ ನೂರಕ್ಕೆ 90 ಭಾಗ ಜನರು ತಾವು ನಂಬಿದ ಮತ, ಧರ್ಮ ಮೇಲೆ ಹೆಚ್ಚಾಗಿ ನಂಬಿಕೆ ಇಟ್ಟವರಾಗಿದ್ದಾರೆ.

ಸಮೀಪದ ಪ್ರಸಿದ್ಧವಾದ ದೇವಾಲಯಗಳು

ಸಮೀಪದ ಪ್ರಸಿದ್ಧವಾದ ದೇವಾಲಯಗಳು

ಜಗನ್ನಾಥ ದೇವಾಲಯ
ಒರಿಸ್ಸಾದಲ್ಲಿನ ಪುರಿ ಜಗನ್ನಾಥ ಯಾತ್ರೆಗೆ ತೆರಳಬೇಕು ಎಂಬ ಭಕ್ತರಿಗೆ ಈ ಜಗನ್ನಾಥ ದೇವಾಲಯವನ್ನು ಚೆನ್ನೈನಲ್ಲಿ ನಿರ್ಮಾಣ ಮಾಡಿದರು. ಇಲ್ಲಿ ಜಗನ್ನಾಥ ಸ್ವಾಮಿ ವಿಗ್ರಹ, ಸುಭಧ್ರ ದೇವಿ ವಿಗ್ರಹ ಮತ್ತು ಬಲರಾಮನ ವಿಗ್ರಹವನ್ನು ದರ್ಶನ ಮಾಡಿಕೊಳ್ಳಬಹುದು. ಇಲ್ಲಿ ಇನ್ನೂ ಹಲವಾರು ದೇವತಾ ಮೂರ್ತಿಗಳು ಇವೆ.

ಬೆಸೆಂಟ್ ಬೀಚ್

ಬೆಸೆಂಟ್ ಬೀಚ್

ಚೆನ್ನೈನಲ್ಲಿನ ಬೆಸೆಂಟ್ ನಗರದಲ್ಲಿ ಈ ಬೀಚ್ ಇದೆ. ಮರೀನಾ ಬೀಚ್ ಪೂರ್ತಿಯಾದ ಬಳಿಕ ಈ ಬೀಚ್ ಪ್ರಾರಂಭವಾಯಿತು. ಈ ಬೀಚ್‍ಗೆ ಸಮೀಪದಲ್ಲಿನ ಕೆಲವು ಪ್ರವಾಸಿ ಆಕರ್ಷಣೆಗಳು ಅಷ್ಟಲಕ್ಷ್ಮೀ ಕೊವಿಲ್ ಮತ್ತು ಚರ್ಚ್.

ಬಿರ್ಲಾ ಪ್ಲಾನೆಟೆರಿಯಂ

ಬಿರ್ಲಾ ಪ್ಲಾನೆಟೆರಿಯಂ

ಚೆನ್ನೈನ ಬಿರ್ಲಾ ಪ್ಲಾನೆಟೆರಿಯಂ ತಮಿಳುನಾಡಿನ ಸೈನ್ಸ್ ಆಂಡ್ ಟೆಕ್ನಾಲಜಿ ಸೆಂಟರ್ (ಟಿ.ಎನ್.ಎಸ್.ಟಿ.ಸಿ). ಇದು ಗಾಂಧಿ ಮಂಟಪ ರಸ್ತೆಯ ಮೇಲೆ ಇರುವ ಪೆರಿಯಾರ್ ಸೈನ್ಸ್ ಆಂಟ್ ಟೆಕ್ನಾಲಜಿ ಸೆಂಟರ್ ಪ್ರಾಂಗಣದಲ್ಲಿ ಇದೆ. ಈ ಬಿರ್ಲಾ ಪ್ಲಾನೆಟೆರಿಯಂನನ್ನು 1988 ರಲ್ಲಿ ಸ್ಥಾಪನೆ ಮಾಡಿದರು.

ಚೆನ್ನೈ ಮಾಲ್

ಚೆನ್ನೈ ಮಾಲ್

ತಮಿಳುನಾಡು ರಾಜ್ಯದಲ್ಲಿನ ಚೆನ್ನೈನ ಮಾಲ್ ಅತ್ಯಂತ ಸುಂದರವಾಗಿದೆ. ಇಲ್ಲಿಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಈ ಮಾಲ್ ಅನ್ನು ಇಂಡಿಯನ್ ಎಕ್ಸಪ್ರೆಸ್ಸ್ ಎಸ್ಟೇಟ್ ಭಾಗವಾಗಿ ನಿರ್ಮಾಣ ಮಾಡಿದ್ದಾರೆ.

ಮರೀನಾ ಬೀಚ್

ಮರೀನಾ ಬೀಚ್

ಚೈನ್ನೈನಲ್ಲಿ ಪ್ರಸಿದ್ಧವಾದ ಬೀಚ್‍ಗಳಲ್ಲಿ ಮರೀನಾ ಬೀಚ್ ಅತ್ಯಂತ ಪ್ರಸಿದ್ಧವಾದುದು. ಈ ಬೀಚ್ ನಗರಕ್ಕೆ ಉತ್ತರ ದಿಕ್ಕಿಗೆ ಇದೆ. ಮರೀನಾ ಬೀಚ್ ಸುಮಾರು 13 ಕಿ.ಮೀ ಇದೆ. ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಬೀಚ್‍ಗಳಲ್ಲಿ ಮರೀನಾ ಬೀಚ್ ಎರಡನೇ ಸ್ಥನ ಪಡೆದಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಬೆಂಗಳೂರಿನಿಂದ ಚೆನ್ನೈಗೆ ಸುಮಾರು 345 ಕಿ.ಮೀ ದೂರದಲ್ಲಿದೆ. ಸುಮಾರು 7 ಗಂಟೆಗಳ ಪ್ರಯಾಣ ಮಾಡಬೇಕಾಗಿರುತ್ತದೆ. ಚೆನ್ನೈಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಚೆನ್ನೈ ವಿಮಾನ ನಿಲ್ದಾಣವೇ ಆಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ