» »ಮನ ರಂಜಿಸುವ ಕಾರಂಜಿ ಕೆರೆ

ಮನ ರಂಜಿಸುವ ಕಾರಂಜಿ ಕೆರೆ

By: Divya Pandit

ಮೈಸೂರು ಎಂದರೆ ಸಾಕು ಮನಮೋಹಕ ಪ್ರವಾಸ ಸ್ಥಳಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಅದರಲ್ಲಿ ಕಾರಂಜಿ ಕೆರೆಯ ಪಾತ್ರ ಹಿರಿದು. ಕೇವಲ ಪ್ರಕೃತಿ ಸೌಂದರ್ಯದಿಂದಲೇ ಆಕರ್ಷಿಸುವ ಈ ಕೆರೆಯ ಸುತ್ತಲೂ ಹಚ್ಚ ಹಸುರಿನ ಸಿರಿ ಕೈಕಟ್ಟಿ ನಿಂತಂತಿದೆ. ಮೈಸೂರಿನಲ್ಲೊಂದು ಸುಂದರ ಕೆರೆ

ಈ ಕೆರೆಯು ಸುಮಾರು 90 ಎಕರೆಯಷ್ಟು ವಿಶಾಲವಾಗಿದೆ. ಇದರಲ್ಲಿ 55 ಎಕರೆಯಷ್ಟು ಭಾಗ ನೀರಿನಿಂದ ತುಂಬಿಕೊಂಡಿದೆ. ಈ ಕೆರೆಯ ಸುತ್ತ ಚಿತ್ತಾಕರ್ಷಣೆ ಮಾಡುವ ಚಿಟ್ಟೆ ಮತ್ತು ಪಕ್ಷಿಗಳ ಉದ್ಯಾನವನ ಇದೆ. ಕಾರಂಜಿ ಕೆರೆಯು ಮೈಸೂರು ಪ್ರಾಣಿ ಸಂಗ್ರಾಲಯದವರ ಅಧೀನದಲ್ಲಿದೆ. ಹಾಗಾಗಿ ಈ ಕೆರೆಯ ನೀರು ಶುದ್ಧವಾಗಿದೆ. ಪ್ರವಾಸಿಗರಿಗಾಗಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇಷ್ಟ ಪಡುವ ಮಂದಿ ಬೋಟ್ಅಲ್ಲಿ ಕುಳಿತು ಕೆರೆಯ ಸುತ್ತ ಸುತ್ತಬಹುದು.

Karanji Lake Mysore

Photos Courtesy : www.itslife.in

ವಲಸೆ ಹಕ್ಕಿಗಳು
ಇಲ್ಲಿರುವ ನೀರು, ದಟ್ಟವಾದ ಗಿಡಮರಗಳ ರಾಶಿಯಿಂದ ಬೇರೆ ಬೇರೆ ಪ್ರದೇಶಗಗಳಿಂದ ಬಂದಿರುವ ಪೆಲಿಕಾನ್ಸ್, ಐಬಿಸ್, ಇಗ್ರೇಟ್ಸ್, ಹೆರಾನ್, ಸ್ಯಾಂಡ್ಪೈಪರ್ಸ್, ಬ್ಲ್ಯಾಕ್ ಡ್ರೋಂಗೊ ಸೇರಿದಂತೆ ವಿಶೇಷ ಪಕ್ಷಿಗಳನ್ನು ನೋಡಬಹುದು.

ಪಕ್ಷಿಗಳ ಉದ್ಯಾನವನ
ಭಾರತದಲ್ಲಿರುವ ಅತಿದೊಡ್ಡ ಪಕ್ಷಿಗಳ ಉದ್ಯಾನವನ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಪಕ್ಷಿಧಾಮದ ನಿರ್ಮಾಣಕ್ಕೆ 3.8 ಮಿಲಿಯನ್ ವ್ಯಯಿಸಲಾಗಿದೆ. ಪಕ್ಷಿಗಳ ಇರುವಿಕೆಗೆ ಬೇಕಾದ ಪರಿಸರವನ್ನು ಒದಗಿಸಲಾಗಿದೆ. ಇಲ್ಲಿ ನವಿಲು, ಹಾರನ್ಬಿಲ್ಸ್, ಟರ್ಕಿ, ಬ್ಲ್ಯಾಕ್ ಸ್ವಾನ್ಗಳು ಸೇರಿದಂತೆ ಹಲವು ಬಗೆಯ ಪಕ್ಷಿಗಳಿವೆ.

ಚಿಟ್ಟೆ ಉದ್ಯಾನವನ
ಕಾರಂಜಿ ಕೆರೆಯ ಇನ್ನೊಂದು ಆಕರ್ಷಣೆಯಾದ ಚಿಟ್ಟೆ ಪಾರ್ಕ್ ಪ್ರವಾಸಿಗನಿಗೊಂದು ಸಮಾಧಾನದ ಅನುಭವವನ್ನು ನೀಡುತ್ತದೆ. ಚಿಟ್ಟೆಗಳಿಗೆ ಬೇಕಾದಂತಹ ಪರಿಸರ ಒದಗಿಸಲು ವಿವಿಧ ಬಗೆಯ ಹೂಗಿಡಗಳನ್ನು ನೆಡಲಾಗಿದೆ.

ಇತರೆ ಮಾಹಿತಿ
ಇಲ್ಲಿ ಬೆಳಗ್ಗೆ 8.30 ರಿಂದ ಸಂಜೆ 5.30ರ ವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುತ್ತದೆ. ಬೆಂಗಳೂರಿನಿಂದ ಮೈಸೂರಿಗೆ ಬಂದರೆ, ಮೈಸೂರಿನ ಅನೇಕ ಸಿಟಿ ಬಸ್ಗಳ ವ್ಯವಸ್ಥೆಯಿದೆ. ಹತ್ತಿರದಲ್ಲಿ ಮೈಸೂರು ಪ್ರಾಣಿ ಸಂಗ್ರಹಾಲಯವನ್ನು ನೋಡಬಹುದು.

Read more about: mysore
Please Wait while comments are loading...