Search
  • Follow NativePlanet
Share
» »ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ

ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ

ಕೇರಳ ಕರ್ನಾಟಕದ ಜನರು ಈ ಕ್ಷೇತ್ರವನ್ನು ಅಪಾರವಾಗಿ ನಂಬುತ್ತಾರೆ. ಈ ಕ್ಷೇತ್ರವು ದೇವರ ನ್ಯಾಯಾಲಯ ಎಂದೇ ಹೆಸರಯವಾಸಿಯಾಗಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಪ್ರಕರಣಗಳು ಇಲ್ಲಿ ಇತ್ಯರ್ಥವಾಗುತ್ತವಂತೆ. ಅದಕ್ಕಾಗಿ ದೂರದೂರದ ಊರಿನ ಜನರು ಇಲ್ಲಿಗೆ ಆಗಮಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸುತ್ತಾರೆ.

ಯಾವುದೀ ಕ್ಷೇತ್ರ

ಯಾವುದೀ ಕ್ಷೇತ್ರ

PC:bharat kumar

ಕರ್ನಾಟಕದ ಗಡಿಭಾಗದಲ್ಲಿರುವ ಕಾಸರಗೋಡಿನಲ್ಲಿರುವ ಈ ಕ್ಷೇತ್ರವನ್ನು ಕಾನತ್ತೂರು ಕ್ಷೇತ್ರ ಎಂದು ಕರೆಯುತ್ತಾರೆ. ಇದು ಕಾನತ್ತೂರು ನಾಲ್ವರು ದೈವಗಳ ಕ್ಷೇತ್ರ. ಜನರು ಈ ಕ್ಷೇತ್ರದ ಹೆಸರು ಕೇಳಿದ್ರೆನೇ ಭಯ ಪಡ್ತಾರೆ. ಅಷ್ಟೊಂದು ಪವರ್‌ಫುಲ್ ಕ್ಷೇತ್ರ ಇದಾಗಿದೆ.

ಇಲ್ಲಿ ಸುಳ್ಳು ಹೇಳಿದವರಿಗೆ ಸಾವೇ ಗತಿ

ಇಲ್ಲಿ ಸುಳ್ಳು ಹೇಳಿದವರಿಗೆ ಸಾವೇ ಗತಿ

PC:bharat kumar

ವಿಷ್ಣುಮೂರ್ತಿ, ರಕ್ತೇಶ್ವರಿ, ರಕ್ತ ಚಾಮುಂಡಿ, ಉಗ್ರಮೂರ್ತಿ, ಪ್ರಧಾನ ದೈವಗಳಾಗಿದ್ದಾರೆ. ಹಾಗಾಗಿ ಇದನ್ನು ನಾಲ್ವರು ದೈವಗಳ ಕ್ಷೇತ್ರ ಎನ್ನಲಾಗುತ್ತದೆ. ನ್ಯಾಯಾಲಯದಲ್ಲಿ ತೀರ್ಮಾನವಾಗದ ಪ್ರಕರಣಗಳು ಇಲ್ಲಿ ತೀರ್ಮಾನವಾಗುತ್ತವೆ.

ಬೆಂಗಳೂರು ಸಮೀಪದ ಗುಡಿಬಂಡೆಗೆ ಹೋಗಿದ್ದೀರಾ?ಬೆಂಗಳೂರು ಸಮೀಪದ ಗುಡಿಬಂಡೆಗೆ ಹೋಗಿದ್ದೀರಾ?

ಪ್ರೇತಾತ್ಮಗಳ ವಿಮೋಚನೆ

ಪ್ರೇತಾತ್ಮಗಳ ವಿಮೋಚನೆ

Pc: sabarinath kp

ಪ್ರೇತಾತ್ಮಗಳ ವಿಮೋಚನೆಯೂ ಇಲ್ಲಿ ನಡೆಯುತ್ತದೆ. ಹಣ ಬರಬೇಕಿದ್ದಲ್ಲಿ ಅದು ನ್ಯಾಯವಾದವರಿಗೆ ತಲುಪುತ್ತದೆ. ವಿವಾಹ ಕೈ ತಪ್ಪಿದಾಗ ಇಲ್ಲಿ ಬಂದು ಕೈಮುಗಿದರೆ ಆ ಸಮಸ್ಯೆ ಪರಿಹಾರವಾಗುತ್ತದೆ. ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ಇಲ್ಲಿ ಸಿಗುತ್ತದೆ.

ಕ್ಷೇತ್ರದಿಂದ ನೋಟಿಸ್

ಕ್ಷೇತ್ರದಿಂದ ನೋಟಿಸ್

Pc: sabarinath kp

ಒಂದು ಕಡೆಯವರು ಕ್ಷೇತ್ರಕ್ಕೆ ಬಂದು ದೂರು ನೀಡಿದರೆ, ಇನ್ನೊಂದು ಕಡೆಯವರನ್ನು ಕ್ಷೇತ್ರದ ಆಡಳಿತ ಮಂಡಳಿ ನೋಟೀಸ್ ಕಳಿಸುತ್ತದೆ. ಆ ನೋಟೀಸ್‌ನ್ನು ಯಾರೂ ಅಲ್ಲಗಳೆಯುವಂತಿಲ್ಲ. ನೋಟಿಸ್ ಕೈ ಸೇರಿದ ತಕ್ಷಣ ನಿಗಧಿತ ದಿನಾಂಕದಂದು ಈ ಎರಡು ಕಡೆಯವರೂ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಇಲ್ಲಿ ವಿವಾಹಿತ ಮಹಿಳೆಯರು ಐದು ದಿನಗಳ ಕಾಲ ಬೆತ್ತಲಾಗಿರಬೇಕು ಯಾಕೆ?ಇಲ್ಲಿ ವಿವಾಹಿತ ಮಹಿಳೆಯರು ಐದು ದಿನಗಳ ಕಾಲ ಬೆತ್ತಲಾಗಿರಬೇಕು ಯಾಕೆ?

ಆರೋಪಿಗೆ ಶಿಕ್ಷೆ

ಆರೋಪಿಗೆ ಶಿಕ್ಷೆ

ಒಂದು ವೇಳೆ ಕ್ಷೇತ್ರದ ನೋಟಿಸ್ ನಿರಾಕರಿಸಿದ್ದಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಮೂರು ಬಾರಿ ನೋಟಿಸ್ ಕಳಿಸುತ್ತದೆ. ಮೂರು ಬಾರಿಯೂ ನೋಟಿಸ್‌ನ್ನು ಕಡೆಗಣಿಸಿದ್ದಲ್ಲಿ ಕ್ಷೇತ್ರದ ಮೋಕ್ತೇಸರರು ಅದನ್ನು ದೇವರಿಗೆ ಬಿಟ್ಟು ಬಿಡುತ್ತಾರೆ. ಅದಾದ ಕೆಲವೇ ದಿನಗಳಲ್ಲಿ ಆರೋಪಿಗೆ ಶಿಕ್ಷೆಯಾಗಿರುವ ಹಲವಾರು ಘಟನೆಗಳು ನಡೆದಿವೆ.

ಎಲ್ಲಾ ಧರ್ಮದವರು ಬರುತ್ತಾರೆ

ಎಲ್ಲಾ ಧರ್ಮದವರು ಬರುತ್ತಾರೆ

ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬರುವ ವ್ಯಕ್ತಿಗಳು ಇಲ್ಲಿನ ತೀರ್ಪಿಗೆ ತಲೆಬಾಗಲೇ ಬೇಕು. ಇಲ್ಲಿನ ನಾಲ್ವರು ದೈವರು ತಮ್ಮನ್ನು ತಮ್ಮ ಕುಟುಂಬದವರನ್ನು ನೆಮ್ಮದಿಯಾಗಿ ಬದುಕಲು ಬಿಡೋದಿಲ್ಲ ಎನ್ನುವ ಭಯದಿಂದ ಇಲ್ಲಿನ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತಾರೆ.

ಈ ದೇವಸ್ಥಾನದ ಒಳಗೆ ನಾಯಿಗಳಿಗಿದೆ ಪ್ರವೇಶ, ಮಾಂಸಾಹಾರವೇ ನೈವೇದ್ಯಈ ದೇವಸ್ಥಾನದ ಒಳಗೆ ನಾಯಿಗಳಿಗಿದೆ ಪ್ರವೇಶ, ಮಾಂಸಾಹಾರವೇ ನೈವೇದ್ಯ

ಕಡಿಯಾಳಿ ಮಹೋತ್ಸವ

ಕಡಿಯಾಳಿ ಮಹೋತ್ಸವ

Pc: sabarinath kp

ಈ ಕ್ಷೇತ್ರದಲ್ಲಿ ಕಡಿಯಾಳಿ ಮಹೋತ್ಸವದಲ್ಲಿ ದೈವಗಳನ್ನು ಕಣ್ಣಾರೆ ನೋಡಬಹುದು. ಕಾನತ್ತೂರು ಕ್ಷೇತ್ರದಲ್ಲಿ ನಾಲ್ವರು ದೈವರುಗಳಿಗೆ ಭೂತಾರಾಧನೆ ನಡೆಯುತ್ತದೆ. ಇಲ್ಲಿನ ಪವಾಡಗಳು ನಿಜಕ್ಕೂ ಆಶ್ಚರ್ಯಕರವಾಗಿರುವುದು.

ದೈವದ ಕೃಪೆ

ದೈವದ ಕೃಪೆ

ಕಳಿಯಾಟ ನಡೆಸುವವರು ಒಂದು ವಾರ ಸಸ್ಯಾಹಾರ ಸೇವಿಸುತ್ತಾರೆ. ಕಡಿಯಾಟದ ಹಿಂದಿನ ದಿನ ಕೇವಲ ದ್ರವ್ಯವನ್ನು ಮಾತ್ರ ಸೇವಿಸುತ್ತಾರೆ. ಅಷ್ಟೊಂದು ಭಾರದ ಎತ್ತರದ ಕಿರಿಟಗಳನ್ನು, ಕವಚಗಳನ್ನು ಮೈ ಮೇಲೆ ಹೊತ್ತುಕೊಳ್ಳೊದು ಸಾಮಾನ್ಯ ಮನುಷ್ಯರಿಂದ ಸಾಧ್ಯವಿಲ್ಲ. ಇದೆಲ್ಲವೂ ದೃವದ ಕೃಪೆಯಿಂದಲೇ ಎನ್ನುತ್ತಾರೆ ಜನರು.

ಹರಕೆ ತೀರಿಸಲೇ ಬೇಕು

ಹರಕೆ ತೀರಿಸಲೇ ಬೇಕು

ಇನ್ನು ಈ ದೇವಾಲಯಕ್ಕೆ ಹರಕೆ ಕಟ್ಟಿಕೊಂಡು ತಮ್ಮ ಸಮಸ್ಯೆ ಪರಿಹಾರವಾದ ಮೇಲೆ ಜನರು ಇಲ್ಲಿಗೆ ಬಂದು ಸೇವೆ ಸಲ್ಲಿಸುತ್ತಾರೆ. ಒಂದು ವೇಳೆ ನಿಮ್ಮ ಸಮಸ್ಯೆಗಳು ಬಗೆಹರಿದ ಮೇಲೆ ಹರಕೆ ತೀರಿಸಲು ಕ್ಷೇತ್ರಕ್ಕೆ ಹೋಗದಿದ್ದಲ್ಲಿ, ಹರಕೆ ತೀರಿಸದೇ ಇದ್ದಲ್ಲಿ ದೈವ ಸುಮ್ಮನೆ ಬಿಡೋದಿಲ್ಲ. ಹಾಗಾಗಿ ಇಲ್ಲಿಗೆ ಹರಕೆ ಕಟ್ಟಿಕೊಂಡವರು ತಪ್ಪದೇ ಬಂದು ಹರಕೆ ತೀರಿಸುತ್ತಾರೆ.

ಕೋಲಾರದ ತಾಯಿ ಚೌಡೇಶ್ವರಿ ಮಹಿಮೆಯನ್ನು ಕಂಡಿದ್ದೀರಾ?ಕೋಲಾರದ ತಾಯಿ ಚೌಡೇಶ್ವರಿ ಮಹಿಮೆಯನ್ನು ಕಂಡಿದ್ದೀರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X