Search
  • Follow NativePlanet
Share
» »ಕನಕಗಿರಿಯಲ್ಲಿ ನೆಲೆಸಿರುವ ಕನಕಾಚಲಪತಿ

ಕನಕಗಿರಿಯಲ್ಲಿ ನೆಲೆಸಿರುವ ಕನಕಾಚಲಪತಿ

By Vijay

ಈ ಸ್ಥಳ ಹಾಗೂ ಇಲ್ಲಿರುವ ದೇವಾಲಯಕ್ಕೆ ಹೊಂದಿಕೊಂಡಂತೆ ಒಂದು ಸ್ಥಳೀಯವಾಗಿ ಚಾಲ್ತಿಯಲ್ಲಿರುವ ನಾಣ್ಣುಡಿಯೊಂದಿದೆ ಮತ್ತು ಅದು ಹೀಗೆ ಸಾಗುತ್ತದೆ..."ಕಣ್ಣಿದ್ದವರು ಕನಕಗಿರಿಗೆ ಭೇಟಿ ನೀಡಬೇಕು ಹಾಗೂ ಕಾಲಿದ್ದವರು ಹಂಪಿಗೆ ಭೇಟಿ ನೀಡಬೇಕು" ಎಂದು.

ತಿರುಮಲ ಬೆಟ್ಟಗಳ ಅದ್ಭುತ ದಂತಕಥೆ

ಅಂದರೆ ಈ ಒಂದು ದೇವಾಲಯ ಹಾಗೂ ಇದು ಇರುವ ಸ್ಥಳ ಜೀವನದಲ್ಲಿ ಒಮ್ಮೆಯಾದರೂ ದರ್ಶಿಸಲೇಬೇಕ್ಕೆಂದು ತಿಳಿ ಹೇಳುತ್ತದೆ. ಅಷ್ಟಕ್ಕೂ ಈ ದೇವಾಲಯವಿರುವುದು ಕರ್ನಾಟಕದಲ್ಲೆ. ಈ ಸುಂದರ ಹಾಗೂ ನಯನಮನೋಹರವಾದ ದೇವಾಲಯ ವಿಷ್ಣುವಿನ ಅವತಾರ ವೆಂಕಟೇಶ್ವರನಿಗೆ ಮುಡಿಪಾದ ದೇವಾಲಯವಾಗಿದೆ.

ಹಾಗಾದರೆ ಬನ್ನಿ ಪ್ರಸ್ತುತ ಲೇಖನದ ಮೂಲಕ ಈ ವೆಂಕಟೇಶ್ವರನ ದೇವಾಲಯದ ಕುರಿತು ಸಾಕಷ್ಟು ಪಡೆಯಿರಿ ಹಾಗೂ ಸಮಯಾವಕಾಶ ದೊರೆತರೆ ಖ್ಂಡಿತವಾಗಿಯೂ ಈ ಸ್ಥಳ ಹಾಗೂ ದೇವಾಲಯವನ್ನೊಮ್ಮೆ ದರ್ಶಿಸಿ ಬನ್ನಿ.

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯ ಕನಕಾಚಲಪತಿ:

ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಕನಕಗಿರಿ ಎಂಬ ಸ್ಥಳವಿದ್ದು ಅಲ್ಲಿನ ಪುಟ್ಟ ಗುಡ್ಡ ಪ್ರದೇಶವೊಂದರ ಮೇಲೆ ವೆಂಕಟೇಶ್ವರನು ಕನಕಾಚಲಪತಿಯಾಗಿ ನೆಲೆಸಿರುವ ಈ ಸುಂದರ ಹಾಗೂ ಭವ್ಯವಾದ ದೇವಾಲಯವಿದೆ.

ಚಿತ್ರಕೃಪೆ: Dineshkannambadi

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯ ಕನಕಾಚಲಪತಿ:

ಗಂಗಾವತಿಯಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿರುವ ಕನಕಗಿರಿಯು ಕೊಪ್ಪಳ ನಗರ ಕೇಂದ್ರದಿಂದ ಕೇವಲ 4 ಕಿ.ಮೀ ಗಳಷ್ಟು ಅಂತರದಲ್ಲಿ ಮಾತ್ರವೆ ನೆಲೆಸಿದ್ದು ತೆರಳಲು ಬಸ್ಸುಗಳು ಹಾಗೂ ಬಾಡಿಗೆ ರಿಕ್ಷಾಗಳು ಸುಲಭವಾಗಿ ದೊರೆಯುತ್ತವೆ.

ಚಿತ್ರಕೃಪೆ: Dineshkannambadi

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯ ಕನಕಾಚಲಪತಿ:

ಐತಿಹ್ಯದಂತೆ ಹಿಂದೆ ಕನಕ ಮಹಾಮುನಿಗಳೆಂಬುವವರು ಈ ಸ್ಥಳದಲ್ಲಿ ಕಠಿಣವಾದ ತಪಸ್ಸನ್ನಾಚರಿಸಿ ವಿಷ್ಣು ದೇವರನ್ನು ಪ್ರಸನ್ನಗೊಳಿಸಿದ್ದರಂತೆ. ಅದರ ಪ್ರಕಾರವಾಗಿ ವಿಷ್ಣು ಇಲ್ಲಿ ಕನಕಾಚಲಪತಿಯಾಗಿ ನೆಲೆಸಿ ಈ ಕ್ಷೇತ್ರಕ್ಕೆ ಕನಕಗಿರಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಚಿತ್ರಕೃಪೆ: Dineshkannambadi

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯ ಕನಕಾಚಲಪತಿ:

ಇನ್ನೊಂದು ಕಥೆಯ ಪ್ರಕಾರವಾಗಿ, ಬಹು ಹಿಂದೆ ಆಚಾರ್ಯ ಪೂಜ್ಯಪಾದ ಎಂಬುವವರು ಈ ಗಿರಿ ಪ್ರದೇಶವನ್ನು ಸಂಪೂರ್ಣವಾಗಿ ಬಂಗಾರವನ್ನಾಗಿ ಪರವರ್ತಿಸಿದರಂತೆ. ಇದರಿಂದ ಇದಕ್ಕೆ ಸ್ವರ್ಣಗಿರಿ ಎಂಬ ಹೆಸರು ಬಂದಿತಾದರೂ ಕ್ರಮೇಣ ಕನಕಗಿರಿ ಎಂದಾಯಿತು. ಕನಕ ಎಂದರೆ ಬಂಗಾರ ಎಂಬರ್ಥವೂ ಇರುವುದರಿಂದ ಇದಕ್ಕೆ ಕನಕಗಿರಿ ಎಂಬ ಹೆಸರು ಬಂದಿತೆನ್ನಲಾಗಿದೆ.

ಚಿತ್ರಕೃಪೆ: Manjunath Doddamani Gajendragad

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯ ಕನಕಾಚಲಪತಿ:

ಇನ್ನೂ ಇಲ್ಲಿರುವ ಕನಕಾಚಲಪತಿ ದೇವಾಲಯ ಸಾಕಷ್ಟು ಆಕರ್ಷಕವಾಗಿದೆ. ವಿಜಯನಗರ ಸಾಮ್ರಾಜ್ಯದ ದ್ರಾವಿಡ ವಾಸ್ತುಅಶೈಲಿಯನ್ನು ಹೊಂದಿರುವ ಈ ದೇವಾಲಯ ಅಗಾಧ ಶ್ರೀಮಂತಿಕೆಯಿಂದ ಕೂಡಿದ ಶಿಲ್ಪಕಲೆ ಹಾಗೂ ಕಲಾಕೃತಿಗಳನ್ನು ಹೊಂದಿದೆ. ಸುಂದರವಾಗಿ ಕೆತ್ತಲಾದ ದೇವಾಲಯದ ಖಂಬಗಳು.

ಚಿತ್ರಕೃಪೆ: Dineshkannambadi

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯ ಕನಕಾಚಲಪತಿ:

ಕನಕಗಿರಿ ಪಾಳೆಗಾರರು ಇನ್ನೂ ಜನಪ್ರೀಯವಾಗಿ ಹೇಳೆಬೇಕೆಂದರೆ ಕನಕಗಿರಿ ನಾಯಕರಿಂದ ಈ ದೇವಾಲಯದ 15-16 ನೇಯ ಶತಮಾನದಲ್ಲಿ ನಿರ್ಮಾಣವಾದ ರಚನೆಯಾಗಿದೆ. ಇಲ್ಲಿ ಇತರೆ ದೇಗುಲಗಳು ಇದ್ದರೂ ಸಹ ಕನಕಾಚಲಪತಿ ದೇವಾಲಯ ತನ್ನ ಸೂಕ್ಷ್ಮ ಹಾಗೂ ಶ್ರೀಮಂತ ಕೆತ್ತನೆಗಳು ಹಾಗೂ ವಿಶಾಲತೆಯಿಂದ ಹೆಚ್ಚಿನ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Manjunath Doddamani Gajendragad

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯ ಕನಕಾಚಲಪತಿ:

ಕನಕಾಚಲಪತಿ ದೇವಾಲಯ ಆವರಣದಲ್ಲಿ ಸಾಕಷ್ಟು ಇತರೆ ರಚನೆಗಳಿವೆ. ಅಂತಹ ಒಂದು ರಚನೆ ಪ್ರತ್ಯೇಕ ಮಂಟಪ. ಇದು ಸಾಕಷ್ಟು ವಿಶಾಲವಾಗಿದ್ದು ನೋಡಲು ಸುಂದರವಾಗಿದೆ. ಇಲ್ಲಿರುವ ಖಂಬಗಳ ಶಿಲಪಕಲೆಗಳು ಬೇಲೂರು ಹಳೆಬೀಡುಗಳನ್ನು ನೆನಪಿಸುವಂತಿದೆ.

ಚಿತ್ರಕೃಪೆ: Manjunath Doddamani Gajendragad

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯ ಕನಕಾಚಲಪತಿ:

ಕನಕಾಚಲಪತಿಯ ದೇವಾಲಯ ಪ್ರವೇಶಿಸಿದ ನಂತರ ಗರ್ಭ ಸ್ಥಳಕ್ಕೆ ಕರೆದೊಯ್ಯುವ ಮಾರ್ಗ. ಸುಂದರ ಚಿತ್ತಾರಗಳ ಆಕರ್ಷಕ ವಿಗ್ರಹಗಳಿಂದ ಇದು ಮನೋಜ್ಞವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Dineshkannambadi

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯ ಕನಕಾಚಲಪತಿ:

ಕನಕಾಚಲಪತಿ ದೇವಾಲಯದ ಆವರಣದಲ್ಲಿರುವ ಇತರೆ ದೇಗುಲ ಸನ್ನಿಧಿಗಳು.

ಚಿತ್ರಕೃಪೆ: Dineshkannambadi

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯ ಕನಕಾಚಲಪತಿ:

ದೇವಾಲಯವು ಸಾಕಷ್ಟು ಪುರಾತನವಾಗಿದ್ದರೂ ಇಲ್ಲಿನ ಕೆಲ ನವೀನ ವರ್ಣಗಳ ಕಲಾಕೃತಿಗಳನ್ನು ಆನಂತರ ನಿರ್ಮಿಸಿ ದೇವಾಲಯದಲ್ಲಿ ಸೇರಿಸಲಾಗಿದೆ. ದೇವಾಲಯದ ಮುಖ್ಯ ಕೋಣೆಯು ವಿಶಾಲವಾಗಿದ್ದು ಸಾಕಷ್ಟು ಶಾಂತತೆಯಿಂದ ಕೂಡಿದೆ. ದೇವರನ್ನು ದರ್ಶಿಸಿ ಕೆಲ ಕಾಲ ಧ್ಯಾನ ಮಗ್ನರಾಗಲು ಈ ಆದರ್ಶಮಯವಾಗಿದೆ.

ಚಿತ್ರಕೃಪೆ: Manjunath Doddamani Gajendragad

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯ ಕನಕಾಚಲಪತಿ:

ಕನಕಗಿರಿಯಲ್ಲಿರುವ ರಾಜವಂಶಸ್ಥರ ಸ್ನಾನ ಕೇಂದ್ರ. ಕೊಪ್ಪಳವು ಬೆಂಗಳೂರಿನಿಂದ 380 ಕಿ.ಮೀ, ಬೆಳಗಾವಿಯಿಂದ 200 ಕಿ.ಮೀ ಹಾಗೂ ಹುಬ್ಬಳ್ಳಿಯಿಂದ 151 ಕಿ.ಮೀ ಗಳಷ್ಟು ದೂರದಲ್ಲಿದೆ ಹಾಗೂ ತೆರಳಲು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Manjunath Doddamani Gajendragad

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X