Search
  • Follow NativePlanet
Share
» » ಕಮಲ್‌ಘಡ್‌ ಕೋಟೆಗೆ ಟ್ರಕ್ಕಿಂಗ್ ಹೋದರಷ್ಟೇ ಅಲ್ಲಿನ ಸೌಂದರ್ಯ ಸೆರೆಹಿಡಿಯಲು ಸಾಧ್ಯ

ಕಮಲ್‌ಘಡ್‌ ಕೋಟೆಗೆ ಟ್ರಕ್ಕಿಂಗ್ ಹೋದರಷ್ಟೇ ಅಲ್ಲಿನ ಸೌಂದರ್ಯ ಸೆರೆಹಿಡಿಯಲು ಸಾಧ್ಯ

ಮಹಾರಾಷ್ಟ್ರದಲ್ಲಿ ಟ್ರಕ್ಕಿಂಗ್ ಹೋಗಬಹುದಾದಂತ ಹ ಅನೇಕ ಬೆಟ್ಟಗಳು ಕೋಟೆಗಳು ಇವೆ. ಸ್ಥಳೀಯರಿಗೆ ಈ ಸ್ಥಳಗಳು ಅಷ್ಟೊಂದು ಫೇಮಸ್ ಅಲ್ಲದಿದ್ದರೂ ಆಫ್‌ಬೀಟ್ ಪ್ರವಾಸಿಗರಿಗೆ ಈ ಸ್ಥಳ ಬಹಳ ಫೇಮಸ್ ಆಗಿದೆ. ಯಾವುದೇ ಕೋಟೆಗೆ ಹೋಗಿ ಅಲ್ಲಿ ಸುತ್ತಾಡೋದರಿಂದ ಅಲ್ಲಿನ ಇತಿಹಾಸದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ನೀವು ನಿಮ್ಮ ವೀಕೇಂಡ್‌ನ್ನು ಮಜಾವಾಗಿಸಬೇಕೆಂದಾದರೆ ಕಮಲ್‌ಘಡ್‌ ಕೋಟೆಗೆ ಭೇಟಿ ನೀಡಿ.

ಕಮಲ್‌ಘಡ್‌ ಕೋಟೆ

ಕಮಲ್‌ಘಡ್‌ ಕೋಟೆ

PC: Ccmarathe

ಕಮಲ್‌ಘಡ್‌ ಕೋಟೆಯ ಒಳಗೆ ಹಾಗೂ ಹೊರಗಿನ ವಾತಾವರಣ ಬಹಳ ಪ್ರಶಾಂತವಾಗಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯವೆಂದರೆ ಚಳಿಗಾಲ. ಅಕ್ಟೋಬರ್‌ ನಿಂದ ಮಾರ್ಚ್‌ ವರೆಗೆ. ನೀವು ಮಳೆಗಾಲದಲ್ಲೂ ಇಲ್ಲಿಗೆ ಭೇಟಿ ನೀಡಬಹುದು. ಈ ಸಂದರ್ಭದಲ್ಲಿ ಕಮಲ್‌ಘಡ್‌ ಕೋಟೆಯ ಸುತ್ತಮುತ್ತಲೂ ಹಚ್ಚಹಸಿರಿನಿಂದ ಕೂಡಿರುತ್ತದೆ.

ಕೋಟೆಯ ಇತಿಹಾಸ

ಕೋಟೆಯ ಇತಿಹಾಸ

PC: Ccmarathe

ಮಹಾರಾಷ್ಟ್ರದ ಸತರಾ ಜಿಲ್ಲೆಯಲ್ಲಿ ಪಂಚಗಣಿ ಹಾಗೂ ಮಹಬಲೇಶ್ವರದಂತಹ ಸುಂದರವಾದ ತಾಣಗಳ ಸಮೀಪದಲ್ಲೇ ಕಮಲ್‌ಘಡ್‌ ಕೋಟೆ ಇದೆ. 4000 ಫೀಟ್ ಎತ್ತರದಲ್ಲಿರುವ ಈ ಕೋಟೆಯು ಈ ಕ್ಷೇತ್ರದಲ್ಲಿರುವ ಅತ್ಯಂತ ಎತ್ತರದ ಕೋಟೆಯಾಗಿದೆ. ಹಾಗಾಗಿ ಸ್ಥಳೀಯರು ಹೆಚ್ಚಾಗಿ ಇಲ್ಲಿ ಟ್ರಕ್ಕಿಂಗ್‌ಗೆ ಆಗಮಿಸುತ್ತಾರೆ. ಈ ಕೋಟೆಯನ್ನು ಭಾರತದ ಮಧ್ಯಕಾಲಿನ ಯುಗದಲ್ಲಿ ನಿರ್ಮಿಸಲಾಗಿತ್ತು ಎನ್ನಲಾಗುತ್ತದೆ.

ಟ್ರಕ್ಕಿಂಗ್ ಮಾಡಬೇಕು

ಟ್ರಕ್ಕಿಂಗ್ ಮಾಡಬೇಕು

PC:rohit gowaikar

ಇಂದು ಈ ಕೋಟೆಗೆ ತಲುಪಬೇಕಾದರೆ ಟ್ರಕ್ಕಿಂಗ್ಗ್ ಮೂಲಕವೇ ಹೋಗಬೇಕು. ಪ್ರಾಚೀನ ಕಾಲದಲ್ಲಿ ಕಾಲುವೆಗಳ ಮೂಲಕ ಇಲ್ಲಿಗೆ ತಲುಪುತ್ತಿದ್ದರು. ಇಲ್ಲಿಗೆ ಸಮೀಪದ ನಗರವೆಂದರೆ ಬೋರ್ ಹಾಗೂ ವಾಯಿ. ಇದು ಸುಮಾರು 30ಕಿ.ಮಿ ದೂರದಲ್ಲಿದೆ.

ಇಲ್ಲಿಗೆ ಯಾಕೆ ಭೇಟಿ ನೀಡಬೇಕು?

ಇಲ್ಲಿಗೆ ಯಾಕೆ ಭೇಟಿ ನೀಡಬೇಕು?

PC: rohit gowaikar

ಟ್ರಕ್ಕಿಂಗ್, ಕ್ಯಾಂಪಿಂಗ್‌ನ್ನು ಹೊರತುಪಡಿಸಿ ನೀವು ಇಲ್ಲಿ ಗುಹೆಯನ್ನು ಕಾಣಬಹುದು. ವೀಕೆಂಡ್‌ನಲ್ಲಿ ನೀವು ಯಾವುದಾದರೂ ಶಾಂತ ವಾತಾವರಣವಿರುವ ಸ್ಥಳಕ್ಕೆ ಹೋಗಬೇಕೆಂದಿದ್ದರೆ ನೀವು ಕಮಲ್‌ಘಡ್ ಕೋಟೆಗೆ ಭೇಟಿ ನೀಡಿ. ಈ ಕೋಟೆಯಿಂದ ಸುತ್ತಮುತ್ತಲಿನ ಬೆಟ್ಟಗಳು ಹಾಗೂ ಹಳ್ಳಿಗಳ ಸುಂದರವಾದ ನೊಟವನ್ನು ಕಾಣಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

ವಾಯುಮಾರ್ಗ: ಕಮಲಘಡ್‌ಗೆ ಸಮೀಪವಿರುವ ಏರ್‌ಪೋರ್ಟ್ ಎಂದರೆ ಪುಣೆ ಏರ್ಪೋಟ್. ಇದು ಕಮಲಘಡ್‌ನಿಂದ137 ಕಿ.ಮಿ ದೂರದಲ್ಲಿದೆ. ಪುಣೆಯಿಂದ ಟ್ಯಾಕ್ಸಿ ಮೂಲಕ ನೀವು ಕಮಲಘಡ್‌ಗೆ ತಲುಪಬಹುದು.
ರೈಲು ಮಾರ್ಗ: ಸತರಾವರೆಗೆ ರೈಲಿನ ಮೂಲಕ ಬಂದು ನಂತರ ಕ್ಯಾಬ್ ಹಿಡಿಯಬಹುದು.
ರಸ್ತೆ ಮಾರ್ಗ: ಬೆಟ್ಟ, ಕೋಟೆ ಇರುವ ಜೊತೆಗೆ ರಸ್ತೆ ಮಾರ್ಗವು ಸ್ವಲ್ಪ ಕಠಿಣವಾಗಿದೆ. ನೀವು ಕೋಟೆಯನ್ನು ತಲುಪಬೇಕಾದರೆ ಬೆಟ್ಟವನ್ನು ಹತ್ತಬೇಕು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+