Search
  • Follow NativePlanet
Share
» »ಶಬರಿಮಲೆಗೆ ಮಹಿಳೆಯರಿಗೆ ನಿಷೇಧ; ಆದ್ರೆ ಇಲ್ಲಿ ಋತುಸ್ರಾವವಾಗುವ ದೇವಿಯನ್ನೇ ಪೂಜಿಸ್ತಾರೆ

ಶಬರಿಮಲೆಗೆ ಮಹಿಳೆಯರಿಗೆ ನಿಷೇಧ; ಆದ್ರೆ ಇಲ್ಲಿ ಋತುಸ್ರಾವವಾಗುವ ದೇವಿಯನ್ನೇ ಪೂಜಿಸ್ತಾರೆ

ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಕುರಿತು ಹಲವಾರು ಪರವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಋತುಸ್ರಾವ ಉಂಟಾಗುವ ಮಹಿಳೆಯರು ಅಲ್ಲಿಗೆ ಪ್ರವೇಶಿಸಬಾರದು ಎಂದು ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಾ ಇವೆ. ಹೀಗಿರುವಾಗ ಇಲ್ಲೊಂದು ದೇವಾಲಯವಿದೆ. ಇಲ್ಲಿ ದೇವಿ ಮುಟ್ಟಾಗುತ್ತಾಳೆ. ಇಲ್ಲಿ ಬರುವ ಭಕ್ತರಿಗೂ ಆ ಮುಟ್ಟಿನ ಬಟ್ಟೆಯೇ ಪ್ರಸಾದವಾಗಿ ನೀಡಲಾಗುತ್ತದೆ.

ಅಸ್ಸಾಂನ ಗುವಾಹಟಿ

ಅಸ್ಸಾಂನ ಗುವಾಹಟಿ

ನೀವು ಗುವಾಹಟಿ ಪಟ್ಟಣವನ್ನು ಭೇಟಿ ಮಾಡುತ್ತಿದ್ದರೆ ಕಾಮಾಖ್ಯ ದೇವಾಲಯಕ್ಕೆ ಹೋಗದೆ ನೀವು ಹಿಂದಿರುಗಿದರೆ ನಿಮ್ಮ ಪ್ರವಾಸ ಸಂಪೂರ್ಣವಾಗುವುದಿಲ್ಲ ಎಂದೇ ಹೇಳಬಹುದು. ಹಿಂದೂ ಆಧ್ಯಾತ್ಮಿಕ ಸಂಸ್ಕೃತಿಯ ಪ್ರಕಾರ ಈ ದೇವಾಲಯವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯವು ನಗರದ ಕೇಂದ್ರದಿಂದ 7 ಕಿ.ಮೀ ದೂರದಲ್ಲಿದೆ. ಅಂತಹ ಅದ್ಭುತವಾದ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ.

ಕೊಹಿನೂರ್ ವಜ್ರದ ಮೂಲ ಯಾವುದು? ಈ ಭದ್ರಕಾಳಿಗೂ ವಜ್ರಕ್ಕೂ ಸಂಬಂಧವೇನು?

ನರಕಾಸುರ

ನರಕಾಸುರ

ಕಾಮಾಖ್ಯ ದೇವತೆಗೆ ದೊಡ್ಡ ಭಕ್ತನಾದ ನರಕಾಸುರನು, ಕಾಮಾಖ್ಯ ದೇವಿಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಿದನು. ಅದೆ ದೇವಾಲಯವೇ ಪ್ರಸ್ತುತವಿರುವ ಗುವಹಾಟಿಯಲ್ಲಿನ ಕಾಮಾಖ್ಯ ದೇವಾಲಯ.

10 ದೇವಾಲಯಗಳು

10 ದೇವಾಲಯಗಳು

ಕಾಮಾಖ್ಯ ದೇವಾಲಯದಲ್ಲಿ 10 ದೇವಾಲಯಗಳು ಇವೆ. ಮಹಾವಿದ್ಯೆಗೆ ಅಂಕಿತವಾಗಿವೆ. ಆ ದೇವಾಲಯಗಳು ಕಾಳಿ, ತಾರ, ಸೋದಶಿ, ಭುವನೇಶ್ವರಿ, ಭೈರವಿ, ಚಿನ್ನ, ಮಸ್ತಾ, ದೂಮವತಿ, ಬಂಗಳಮುಖಿ, ಮಾತಂಗಿ ಮತ್ತು ಕಮಲ ದೇವಾಲಯವಾಗಿದೆ.

ಹಿಮಾಚಲ ಪ್ರದೇಶ: ಇಲ್ಲಿಗೆ ಹೋದ್ರೆ ಉಳಿಯೋದು ಎಲ್ಲಿ? ತಿನ್ನೋದು ಎಲ್ಲಿ?

ಕಾಮಾಖ್ಯ ದೇವಾಲಯ

ಕಾಮಾಖ್ಯ ದೇವಾಲಯ

ಸಾಧಾರಣಾವಾಗಿ ಹಿಂದೂ ಭಕ್ತರು ಮತ್ತು ತಾಂತ್ರಿಕ ಭಕ್ತರಿಗೆ ಅತ್ಯಂತ ಶಕ್ತಿವಂತವಾದ ದೇವಾಲಯವೆಂದರೆ ಅದು ಕಾಮಾಖ್ಯ ದೇವಾಲಯ. ಇದೊಂದು ಪ್ರಮುಖವಾದ ಯಾತ್ರಸ್ಥಳವಾಗಿದೆ. ಕಾಳಿಕಾ ಪುರಾಣದ ಪ್ರಕಾರ ಕಾಮಾಖ್ಯ ಭಕ್ತರ ಕೋರಿಕೆಗಳನ್ನು ತೀರಿಸಿ. ಶಿವನ ಚಿಕ್ಕ ಹೆಂಡತಿಯಾಗಿ ಮುಕ್ತಿಯನ್ನು ಪ್ರಸಾಧಿಸುವ ಶಕ್ತಿ ದೇವತೆ ಎಂದು ವರ್ಣಿಸಲಾಗಿದೆ.

ಕಾಳಿಕಾ ಪುರಾಣ

ಕಾಳಿಕಾ ಪುರಾಣ

ಕಾಳಿಕಾ ಪುರಾಣದ ಪ್ರಕಾರ, ಈ ದೇವಾಲಯವು ಶಿವನಿಗಾಗಿ ಸತಿದೇವಿ ತನ್ನ ಸೊಗಸ್ಸನ್ನು ಅರ್ಪಿಸಿದ ರಹಸ್ಯ ಏಕಾಂತ ಪ್ರದೇಶವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ ಸತಿದೇವಿ ಶವವನ್ನು ಹಿಡಿದು ನೃತ್ಯ ಮಾಡುವಾಗ ಆಕೆಯ ಯೋನಿ ಭಾಗವು ಬಿದ್ದ ಸ್ಥಳವೇ ಈ ಕಾಮಾಖ್ಯ ದೇವಾಲಯವಾಗಿದೆ ಎಂದು ಹೇಳುತ್ತಾರೆ.

ಕೇರಳದ ಈ ಸೀ ಫುಡ್‌ ತಿಂದ್ರೆ ಬಾಯಿ ಚಪ್ಪರಿಸುತ್ತಾ ಇರುತ್ತೀರಿ

ನೀಲಚಲ ಪರ್ವತ

ನೀಲಚಲ ಪರ್ವತ

ಪಾರ್ವತಿ ದೇವಿಯ ಯೋನಿ ಭಾಗವು ಗುವಾಹಟಿಯ ನೀಲಚಲ ಪರ್ವತದ ಮೇಲೆ ಬೀಳುತ್ತದೆ. ಮಾನವ ಸೃಷ್ಠಿಗೆ ಮೂಲ ಕಾರಣ ಯೋನಿಯಾದ್ದರಿಂದ ಈ ಪ್ರದೇಶವನ್ನು ಎಲ್ಲಾ ಶಕ್ತಿ ಪೀಠಗಳಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅದೇ ಅಲ್ಲದೇ ಎಲ್ಲಾ ಶಕ್ತಿ ಪೀಠಗಳಿಗೆ ಆಧಾರ ಸ್ಥಾನ ಎಂದು ಭಾವಿಸುತ್ತಾರೆ. ಇಲ್ಲಿ ಪಾರ್ವತಿ ದೇವಿಯ ಯೋನಿ ಭಾಗ ಬಿದ್ದರಿಂದ ಈ ಪರ್ವತವು ನೀಲಿಯಾಗಿ ಮಾರ್ಪಾಟಾಗಿದೆ.

 ಕಾಮಾಕ್ಯ ದೇವಿ ನಿವಾಸ

ಕಾಮಾಕ್ಯ ದೇವಿ ನಿವಾಸ

ಇಲ್ಲಿನ ಕಲ್ಲಿನಾಕಾರದ ಯೋನಿಯೇ ಕಾಮಾಕ್ಯ ದೇವಿಯ ನಿವಾಸ ಎಂದು ಹೇಳಲಾಗುತ್ತದೆ. ಒಮ್ಮೆ ಈ ಪರ್ವತಕ್ಕೆ ಬಂದು ಈ ತಾಯಿಯನ್ನು ದರ್ಶನ ಮಾಡಿದರೆ ಅಮರತ್ವ ಪಡೆಯುತ್ತಾರೆ ಎಂಬುದು ಪುರಾಣಗಳಲ್ಲಿ ಇದೆ.

ಬೆಂಗಳೂರಿಗೆ ಬಂದಿದೆ ಹಾರುವ ರೆಸ್ಟೋರೆಂಟ್ : ಒಂದು ಊಟದ ಬೆಲೆ ಎಷ್ಟು ಗೊತ್ತಾ?

ಋತುಚಕ್ರ

ಋತುಚಕ್ರ

ಇಲ್ಲಿನ ತಾಯಿಯು ಪ್ರತಿವರ್ಷ ಜೂನ್ ತಿಂಗಳ 2 ನೇ ವಾರದಲ್ಲಿ ಋತುಚಕ್ರ ಆಗುತ್ತಾಳೆ. ಆ ಸಮಯದಲ್ಲಿ ದೇವಾಲಯವನ್ನು 4 ದಿನಗಳು ಮುಚ್ಚುತ್ತಾರೆ. 5 ನೇ ದಿನದಂದು ದೇವಾಲಯವನ್ನು ಶುಚಿಗೊಳಿಸಿ ಭಕ್ತರಿಗೆ ಪ್ರವೇಶವನ್ನು ನೀಡುತ್ತಾರೆ. ಅಸ್ಸಾಂ ಭಾಷೆಯಲ್ಲಿ ಇದನ್ನು"ಅಂಬುಬಾಚಿ" ಎಂದು ಕೂಡ ಕರೆಯುತ್ತಾರೆ. ಆ ಸಮಯದಲ್ಲಿ ನಡೆಯುವ ಉತ್ಸವವನ್ನು "ಅಂಬುಬಾಚಿ ಮೇಳ" ಎಂದು ಕರೆಯುತ್ತಾರೆ.

ಮಧ್ಯ ಮಂಟಪ

ಮಧ್ಯ ಮಂಟಪ

ಗುಡಿಯಲ್ಲಿನ ಮಧ್ಯ ಮಂಟಪವು ಅತ್ಯಂತ ಪವಿತ್ರವಾದುದು ಎಂದು ಭಕ್ತರು ಭಾವಿಸುತ್ತಾರೆ. ಸಹಜವಾಗಿಯೇ ಏರ್ಪಟ್ಟ ನೀರು ಯೋನಿ ಆಕಾರದಲ್ಲಿ ಪ್ರವಹಿಸುತ್ತದೆ. ಅಂಬುಬಾಚಿ ಎಂಬ ಹಬ್ಬವನ್ನು ಈ ಸಂದರ್ಭದಲ್ಲಿಯೇ ನಡೆಸುತ್ತಾರೆ. ಕಾಮಾಖ್ಯ ದೇವತೆಯ ರಸಜ್ವಲೆಯನ್ನು ಉತ್ಸವವಾಗಿ ನಿರ್ವಹಿಸುತ್ತಾರೆ. ಆ ಸಮಯದಲ್ಲಿ ಗರ್ಭಗುಡಿಯಿಂದ ಪ್ರವಹಿಸುವ ನೀರು ಕೆಂಪು ಬಣ್ಣದ ರೀತಿಯಲ್ಲಿ ಋತುಸ್ರಾವದಂತೆಯೇ ಕಾಣಿಸುತ್ತದೆ.

ಕೊಲ್ಲೂರು ಮೂಕಾಂಬಿಕೆ: ಇಲ್ಲಿ ಕೈ ಮುಗಿದರೆ ಸಾವಿರ ದೇವಸ್ಥಾನಕ್ಕೆ ಕೈ ಮುಗಿದಂತೆ

ತಲುಪುವುದು ಹೇಗೆ?

ತಲುಪುವುದು ಹೇಗೆ?

ಗುವಾಹಟಿಗೆ ತಲುಪಲು ವಿಮಾನ, ರೈಲು ಮತ್ತು ರಸ್ತೆ ಮಾರ್ಗಗಳ ವ್ಯವಸ್ಥೆ ಇದೆ. ದೇಶದಲ್ಲಿಯೇ ಎಲ್ಲಾ ಪ್ರಧಾನ ನಗರಗಳಿಂದ ಇಲ್ಲಿಗೆ ವಿಮಾನಗಳು, ರೈಲುಗಳು ಮತ್ತು ಬಸ್ಸುಗಳು ಬರುತ್ತಿರುತ್ತದೆ. ನಗರದಲ್ಲಿ ಯಾವುದೇ ಪ್ರದೇಶದಲ್ಲಿಯಾದರೂ ಕಾಮಾಖ್ಯ ದೇವಾಲಯಕ್ಕೆ ಸುಲಭವಾಗಿ ಸೇರಿಕೊಳ್ಳಬಹುದು. ಕ್ಯಾಬ್, ಟ್ಯಾಕ್ಸಿ ಅಥವಾ ಆಟೋ ರೀಕ್ಷದ ಮೂಲಕ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more