Search
  • Follow NativePlanet
Share
» »ಬೇಡಿದನ್ನು ಕೊಡುವ ಕಲ್ಪವೃಕ್ಷ ಎಲ್ಲಿದೆ ಗೊತ್ತಾ?

ಬೇಡಿದನ್ನು ಕೊಡುವ ಕಲ್ಪವೃಕ್ಷ ಎಲ್ಲಿದೆ ಗೊತ್ತಾ?

ಕಲ್ಪ ವೃಕ್ಷದ ಬಗ್ಗೆ ಪ್ರತಿಯೊಬ್ಬರೂ ಕೇಳಿರುತ್ತೀರಾ. ಸಾಮಾನ್ಯವಾಗಿ ತೆಂಗನ್ನು ಕಲ್ಪವೃಕ್ಷ ಎನ್ನುತ್ತಾರೆ. ಆದರೆ ನಿಜವಾದ ಕಲ್ಪವೃಕ್ಷ ಯಾವುದು ಅದು ಎಲ್ಲಿದೆ ಎನ್ನುವುದು ನಿಮಗೆ ಗೊತ್ತಾ? ಸಮುದ್ರಮಂಥನದ ಸಂದರ್ಭದಲ್ಲಿ ಬಂದಂತಹ ವಸ್ತುಗಳಲ್ಲಿ ಕಲ್ಪವೃಕ್ಷ ಕೂಡಾ ಒಂದು. ಪುರಾಣದ ಪ್ರಕಾರ ಕಲ್ಪವೃಕ್ಷವು ಸ್ವರ್ಗದ ಒಂದು ವಿಶೇಷ ವೃಕ್ಷ ಎನ್ನಲಾಗುತ್ತದೆ .

ಬೇಡಿದ ವರ ನೀಡುತ್ತೆ

ಬೇಡಿದ ವರ ನೀಡುತ್ತೆ

PC:Photo Dharma

ಕಲ್ಪವೃಕ್ಷದ ಕೆಳಗೆ ಕುಳಿತು ಯಾವುದೇ ವರವನ್ನು ಬೇಡಿದರೂ ಅದು ಪೂರ್ಣಗೊಳ್ಳುತ್ತದಂತೆ. ಆದಿಗುರು ಶಂಕರಾಚಾರ್ಯರು ಇದೇ ಮರದ ಅಡಿಯಲ್ಲಿ ಕೂತು ತಪಸ್ಸು ಮಾಡಿದ್ದರು ಎನ್ನಲಾಗುತ್ತದೆ.

ಕಲ್ಪವೃಕ್ಷ

ಕಲ್ಪವೃಕ್ಷ

PC:Gurpreet Singh Ranchi

ನಿಜವಾಗಿಯೂ ಈ ಕಲ್ಪವೃಕ್ಷವಿದೆಯಾ ಎನ್ನುವ ಕುತೂಹಲ ಮೂಡುವುದು ಸಹಜ. ಕಲ್ಪವೃಕ್ಷದ ವಿಶೇಷತೆ ಎಂದರೆ ಯಾವುದೇ ಮನೋಕಾಮನೆ ಪೂರ್ಣಗೊಳ್ಳುತ್ತಂತೆ. ಉತ್ತರಖಂಡ ರಾಜ್ಯದಲ್ಲಿ ಜ್ಯೋತಿರ್‌ಮಠ ಅಥವಾ ಜ್ಯೋಶಿಮಠ ಎನ್ನುವ ನಗರವಿದೆ. ಅಲ್ಲಿ ೮ನೇ ಶತಮಾನದಲ್ಲಿ ಶಂಕರಾಚಾರ್ಯರಿಗೆ ಜ್ಞಾನ ಪ್ರಾಪ್ತಿಯಾಗಿತ್ತು. ಇಲ್ಲೇ ಪ್ರಥಮ ಮಠವನ್ನು ಸ್ಥಾಪನೆ ಮಾಡಿದ್ದರು.

ಇಲ್ಲಿ ನದಿಯಲ್ಲಿ ಹರಿದು ಬಂದ ಚಿನ್ನ ಮಾರಿ ಕೋಟ್ಯಾಧಿಪತಿಗಳಾಗ್ತಾರೆ ಜನರು

ಶಂಕರಾಚಾರ್ಯರು ಧ್ಯಾನ ಮಾಡಿದ್ದರು

ಶಂಕರಾಚಾರ್ಯರು ಧ್ಯಾನ ಮಾಡಿದ್ದರು

PC: Shishir Sharma

ಸನಾತನ ಧರ್ಮದ ಪುನರುದ್ದಾರಕ್ಕೆ ಶಂಕರಾಚಾರ್ಯರು ಉತ್ತರಖಂಡ ಬಂದಾಗ ಇದೇ ವೃಕ್ಷದ ಕೆಳಗೆ ಪೂಜೆ ಮಾಡಿದ್ದರು. ಇವರು ರಾಜರಾಜೇಶ್ವರಿಯನ್ನು ಇಷ್ಟದೇವಿ ಯಾಗಿ ಸ್ವೀಕರಿಸಿದ್ದರು ಎನ್ನಲಾಗುತ್ತದೆ.

 2500 ವರ್ಷಗಳಿಂದ ಇಲ್ಲೇ ಇದೆ

2500 ವರ್ಷಗಳಿಂದ ಇಲ್ಲೇ ಇದೆ

PC: Faizhaider

ಈ ಮರ 2500 ವರ್ಷಗಳಿಂದ ಇಲ್ಲೇ ಇದೆ. ಇದೊಂದು ವಿಶಾಲ ಕಾಯವಾದ ಮರವಾಗಿದ್ದು. ಗಣೇಶ, ಹನುಮಾನ್ ಸೇರಿದಂತೆ ವಿವಿಧ ದೇವಿ, ದೇವತೆಗಳ ಆಕೃತಿ ಕಾಣಸಿಗುತ್ತದೆ. ಆಲದ ಮರದಂತೆ ವಿಶಾಲಾವಾಗಿ ಬೆಳೆಯುತ್ತದೆ. ವೇದವ್ಯಾಸರು , ಕಲಿಯುಗದಲ್ಲಿ ಶಂಕರಾಚಾರ್ಯರು ಈ ಮರದ ಕೆಳಗೆ ತಪಸ್ಸು ಮಾಡಿದ್ದಾರೆ. ಈ ವೃಕ್ಷದ ಕೆಳಗೆ ಒಂದು ಗುಹೆ ಇದೆ. ಇದನ್ನು ನೋಡಲು ದೂರದೂರದಿಂದ ಜನರು ಆಗಮಿಸುತ್ತಾರೆ.

ಮಣಿ ಮಹೇಶ್‌ ಕೈಲಾಸ ಪರ್ವತದ ಮಣಿಯ ರಹಸ್ಯ ಗೊತ್ತಾ?

ಔಷಧೀಯ ಗುಣ ಹೊಂದಿದೆ

ಔಷಧೀಯ ಗುಣ ಹೊಂದಿದೆ

ಔಷಧೀಯ ಗುಣದ ಕಾರಣದಿಂದ ಕಲ್ಪವೃಕ್ಷದ ಪೂಜೆ ಮಾಡಲಾಗುತ್ತದೆ. ಭಾರತದಲ್ಲಿ ರಾಚಿ, ಅಲ್ಮೋರಾ, ಕಾಶಿ, ನರ್ಮದಾ ತೀರ, ಕರ್ನಾಟಕ ಹಾಗೂ ಇನ್ನಿತರ ಪ್ರದೇಶದಲ್ಲಿ ಈ ವೃಕ್ಷ ಕಾಣಸಿಗುತ್ತದೆ. ಪದ್ಮಪುರಾಣದ ಪ್ರಕಾರ ಪಾರಿಜಾತವನ್ನೇ ಕಲ್ಪವೃಕ್ಷ ಎನ್ನಲಾಗುತ್ತದೆ. ಮನಸ್ಸಿನಲ್ಲಿ ತೀವೃವಾದ ಇಚ್ಚೇ ಹೊಂದಿದ್ದಾಗ ಮಾತ್ರ ಆಸೆ ಈಡೇರುತ್ತದೆ.

ಅಜ್ಮೀರ್‌ನ ಮೇಳವೇ ನಡೆಯುತ್ತದೆ

ಅಜ್ಮೀರ್‌ನ ಮೇಳವೇ ನಡೆಯುತ್ತದೆ

PC:Gunawan Kartapranata

ವೈದ್ಯಕೀಯ ವೃಕ್ಷವಾಗಿದೆ. ಎಲ್ಲಾ ರೀತಿಯ ವಿಟಮಿನ್‌ಗಳು ಇದರಲ್ಲಿದೆ. ಅಜ್ಮೀರ್‌ನಲ್ಲೂ ಈ ಕಲ್ಪವೃಕ್ಷವಿದೆ. ಇದಕ್ಕಾಗಿ ಒಂದು ಮೇಳವೂ ನಡೆಯುತ್ತದೆ. ಅದರ ಪ್ರತಿಯೊಂದು ವಸ್ತುವು ಆರೋಗ್ಯಕ್ಕೆ ಒಳ್ಳೆಯದು. ಎಲೆ, ಹೂವು, ಕಾಯಿ ಹೀಗೆ ಎಲ್ಲವೂ ಉಪಯೋಗಕಾರಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more