Search
  • Follow NativePlanet
Share
» »ಭಾರತ ದೇಶದಲ್ಲಿನ ಅತ್ಯಂತ ಭಯಂಕರವಾದ ಕಳಾವತಿ ಕೋಟೆಯ ರಹಸ್ಯ

ಭಾರತ ದೇಶದಲ್ಲಿನ ಅತ್ಯಂತ ಭಯಂಕರವಾದ ಕಳಾವತಿ ಕೋಟೆಯ ರಹಸ್ಯ

ಭಾರತ ದೇಶದಲ್ಲಿ ಹಲವಾರು ಅದ್ಭುತವಾದ ಕೋಟೆಗಳು ಹಾಗು ಕಟ್ಟಡಗಳು ಇವೆ.

ಅವುಗಳ ಹಿಂದೆ ಇರುವ ರಹಸ್ಯಗಳು ಇಂದಿಗೂ ಬಗೆ ಹರಿಸಲಾಗದಂತಹ ನಿಗೂಢವಾಗಿಯೇ ಉಳಿದುಬಿಟ್ಟಿವೆ.

ಈ ಲೇಖನದಲ್ಲಿ ಭಾರತ ದೇಶದಲ್ಲಿಯೇ ಅತ್ಯಂತ ಭಯಂಕರವಾದ ಕಳಾವತಿ ಕೋಟೆ ಅಥವಾ ಪ್ರಬಲ್ ಕೋಟೆ ಕೂಡ ಒಂದಾಗಿದೆ.

ಈ ಕೋಟೆಯಲ್ಲಿ ರಾತ್ರಿಯ ಸಮಯದಲ್ಲಿ ಇಬ್ಬರು ನೃತ್ಯಕಾರರು ಎಂದರೆ ದಂಪತಿಗಳು ಆತ್ಮಗಳಾಗಿ ಇಲ್ಲಿ ತಿರುಗುತ್ತಾ ಇರುತ್ತವೆ ಎಂದು ಹಲವಾರು ಕಥೆಗಳನ್ನು ಇಲ್ಲಿ ಭೇಟಿ ಮಾಡಿದರೆ ತಿಳಿಯಬಹುದು.

ಆದರೆ ಇದರ ಕುರಿತು ಚರಿತ್ರೆಯಲ್ಲಿ ಯಾವುದೇ ಆಧಾರಗಳು ಇಲ್ಲ.

ಆದರೆ ಕೆಲವು ಪುರಾಣಕಥೆಗಳ ಪ್ರಕಾರ ಮಾತ್ರ ಹಾಗು ಕೆಲವರ ಕಥೆಗಳ ಪ್ರಕಾರ ಇಲ್ಲಿ ರೋಧನೆಯಿಂದ ಹಾಡುವ ಅಸ್ಪಷ್ಟವಾದ ಹಾಡುಗಳ ಧ್ವನಿಗಳನ್ನು ಹಲವಾರು ಮಂದಿ ಕೇಳಿಸಿಕೊಂಡಿದ್ದಾರಂತೆ.

ಹಾಗಾಗಿ ಈ ಕೋಟೆಯ ಹಿಂದೆ ಇರುವ ಆಸ್ತಿಕರವಾದ ವಿಷಯಗಳನ್ನು ತಿಳಿದುಕೊಳ್ಳೊಣ.

ಕಳಾವತಿ ಕೋಟೆಯಲ್ಲಿ ದಂಪತಿಗಳ ಆತ್ಮ ತಿರುಗುತ್ತಾ ಇದೆಯೇ?

ಎಲ್ಲಿದೆ?

ಎಲ್ಲಿದೆ?

ಈ ಭಯಾನಕವಾದ ಕೋಟೆಯು ಮಹಾರಾಷ್ಟ್ರ ರಾಜ್ಯದಲ್ಲಿದೆ. ಇದನ್ನು 500 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಪ್ರಬಲವಾದ ಕೋಟೆ ಇದಾಗಿದೆ. ಈ ಕೋಟೆಯನ್ನು ಅತ್ಯಂತ ಎತ್ತರದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಕೋಟೆಗೆ 7 ದ್ವಾರಗಳು ಇವೆ.

ಅಪಾಯಕಾರಿ ಕೋಟೆ

ಅಪಾಯಕಾರಿ ಕೋಟೆ

ಪ್ರಬಲ್ ಘಡ್ ಕೋಟೆಯನ್ನು ಕಳಾವತಿ ಕೋಟೆ ಎಂದು ಕೂಡ ಕರೆಯುತ್ತಾರೆ. ಇದನ್ನು 2300 ಅಡಿ ಎತ್ತರದಲ್ಲಿ ನಿರ್ಮಾಣ ಮಾಡಿದ್ದಾರೆ. ಇದು ಭಾರತದ ಅತ್ಯಂತ ಅಪಾಯಕಾರಿ ಕೋಟೆಯಾಗಿ ಗುರುತಿಸಿಕೊಂಡಿದೆ.

ಕೋಟೆಯ ಬಗ್ಗೆ

ಕೋಟೆಯ ಬಗ್ಗೆ

ಮುಖ್ಯವಾಗಿ ಈ ಕೋಟೆಯ ಬಗ್ಗೆ ಹೇಳಬೇಕೆಂದರೆ ಕೋಟೆಯ ಮಾರ್ಗವು ಎಷ್ಟೊ ಕಷ್ಟಕರವಾಗಿದ್ದರಿಂದ ಕೆಲವರು ಮಾತ್ರ ಈ ಕೋಟೆಯನ್ನು ಹತ್ತುವ ಪ್ರಯತ್ನವನ್ನು ಮಾಡುತ್ತಾರೆ. ಯಾರೇ ಇಲ್ಲಿ ಭೇಟಿ ನೀಡಿದರು ಕೂಡ ಸೂರ್ಯಾಸ್ತದ ಮುನ್ನವೇ ಕೋಟೆಯಿಂದ ಕೆಳಗಿಳಿಯಬೇಕು.

ಸೌಕರ್ಯ

ಸೌಕರ್ಯ

ಏಕೆಂದರೆ ಕೋಟೆಯು ಅತ್ಯಂತ ಎತ್ತರವಾಗಿದ್ದು, ಅಸೌಕರ್ಯತೆ ಇಲ್ಲಿ ಕಾಣಬಹುದಾಗಿದೆ. ಇಲ್ಲಿ ನೀರು, ಬೆಳಕುನಂತಹ ಯಾವುದೇ ಸೌಲಭ್ಯಗಳು ಕೂಡ ನೀವು ಇಲ್ಲಿ ಪಡೆಯಲು ಸಾಧ್ಯವಿಲ್ಲ.

ರಾತ್ರಿಯಾಗುತ್ತಿದ್ದಂತೆ

ರಾತ್ರಿಯಾಗುತ್ತಿದ್ದಂತೆ

ರಾತ್ರಿಯಾಗುತ್ತಿದ್ದಂತೆ ಭಯಂಕರವಾದ ನಿಶ್ಯಬ್ಧತೆ ಈ ಪ್ರದೇಶವನ್ನು ಆವರಿಸುತ್ತದೆ. ಸಾಮಾನ್ಯವಾಗಿ ನೀವು ನೋಡುವ ಹಾರರ್ ಸಿನಿಮಗಳಂತೆ ಈ ಕೋಟೆ ರಾತ್ರಿಯ ಸಮಯದಲ್ಲಿ ಕಾಣುತ್ತದೆ.

ಕೋಟೆಯ ರಹಸ್ಯ

ಕೋಟೆಯ ರಹಸ್ಯ

ಈ ಕೋಟೆಯಲ್ಲಿ ರಾತ್ರಿಯ ಸಮಯದಲ್ಲಿ ದಂಪತಿಗಳು ಇಲ್ಲಿ ನೃತ್ಯ ಮಾಡುತ್ತಾರಂತೆ. ಅವು ದಂಪತಿಗಳ ಆತ್ಮಗಳು ಎಂದು ಅಲ್ಲಿನ ಸ್ಥಳೀಯ ಕಥೆಯಾಗಿದೆ. ಆದರೆ ಈ ಬಗ್ಗೆ ಚರಿತ್ರೆಯಲ್ಲಿ ಯಾವುದೇ ಆಧಾರಗಳು ಇಲ್ಲ.

ಆದರೆ!!

ಆದರೆ!!

ಆದರೆ ಕೆಲವರ ಅಭಿಪ್ರಾಯದ ಪ್ರಕಾರ ಇಲ್ಲಿ ದಂಪತಿಗಳು ತಮ್ಮ ಅಸ್ಪಷ್ಟವಾದ ಧ್ವನಿಯಿಂದ ಅತ್ಯಂತ ನೋವಿನಿಂದ ಹಾಡು ಹಾಡುತ್ತಾರೆ ಎಂದು ಹೇಳುತ್ತಾರೆ. ಇದರ ಬಗ್ಗೆ ಆಸ್ತಿಕರವಾದ ವಿಷಯ ಕೂಡ ಅಡಗಿದೆ. ಅದೇನೆಂದರೆ....

ಪ್ರಬಲ್ ಘಡ್

ಪ್ರಬಲ್ ಘಡ್

ಆಕಾಲದಲ್ಲಿ ಪ್ರಬಲ್ ಘಡ್ ಎಂಬುದು ಒಂದು ಕಾಲದಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ರಾಜಧಾನಿಯಾಗಿತ್ತು. ಆದರೆ ಅಲ್ಲಿದ್ದ ಒಂದು ಯುವ ಜೋಡಿ ಅತ್ಯಂತ ಎತ್ತರ ತಾಣದಲ್ಲಿ ಸಾಹಸವನ್ನು ಮಾಡುತ್ತಿದ್ದರು ಎಂಬ ವಿಷಯ ಅಂದಿನ ರಾಜ್ಯದ ರಾಜನಿಗೆ ತಿಳಿಯಿತು.

ಸಾಹಸ ಘಟ್ಟ

ಸಾಹಸ ಘಟ್ಟ

ಇದರಿಂದಾಗಿ ಆ ರಾಜ ಕೂಡ ಆ ಸಾಹಸ ಪಟುಗಳನ್ನು ಒಮ್ಮೆ ಕಾಣಬೇಕು ಎಂದು ಕೊಂಡನು. ಇದರಿಂದಾಗಿ ಅವರನ್ನು ರಾಜ ದರ್ಭಾರಿಗೆ ಬರಬೇಕೆಂದು ಬೇರೆಯವರಿಂದ ತಿಳಿಸಿ ಹೇಳಿದನು. ಆಗ ಆ ಜೋಡಿ ರಾಜ ಮಹಲ್‍ಗೆ ಬರುತ್ತಾರೆ.

ನರ್ತಕನ ಪತ್ನಿ

ನರ್ತಕನ ಪತ್ನಿ

ಆಗ ಆ ನರ್ತಕನ ಪತ್ನಿ ಅಪೂರ್ವವಾದ ಸೌಂದರ್ಯವತಿಯಾಗಿದ್ದಳು. ಅವಳನ್ನು ಕಂಡ ರಾಜನು ಹೇಗಾದರು ಮಾಡಿ ಅವಳನ್ನು ಪಡೆಯಬೇಕು ಎಂದು ಅಂದುಕೊಂಡನು. ಆ ರ್ದುಬುದ್ಧಿಯಿಂದಾಗಿ ರಾಜನು ಅವರಿಬ್ಬರನ್ನು ಅತ್ಯಂತ ಎತ್ತರದಲ್ಲಿ ನಿಮ್ಮ ಸಾಹಸವನ್ನು ಕಾಣಬೇಕು ಎಂದು ಆಸೆ ವ್ಯಕ್ತ ಪಡಿಸುತ್ತಾನೆ.

ಪ್ರಕಟಿಸುವುದು

ಪ್ರಕಟಿಸುವುದು

ಆದರೆ ಆ ಸಾಹಸದಲ್ಲಿ ಆತನು ವಿಜಯ ಹೊಂದಿದರೆ ಅರ್ಧ ರಾಜ್ಯವನ್ನು ನೀಡುತ್ತೇನೆ ಎಂದು ಪ್ರಕಟಿಸುತ್ತಾನೆ. ಆದರೆ ಆ ಸ್ಥಳ ಅಷ್ಟು ಸಾಧಾರಣವಾದುದಾಗಿರಲ್ಲಿಲ್ಲ. ಯಾರೇ ಆಗಲಿ ಆ ಸ್ಥಳದಲ್ಲಿ ಸಾಹಸ ಮಾಡಿದರೆ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ ಎಂಬುದು ರಾಜನಿಗೆ ಚೆನ್ನಾಗಿ ತಿಳಿದಿತ್ತು.

ನಾಟ್ಯ

ನಾಟ್ಯ

ಅದ್ದರಿಂದಲೇ ಅಂತಹ ಸಾಹಸವನ್ನು ಮಾಡು ಎಂದು ಕೋರಿಕೊಳ್ಳುತ್ತಾನೆ. ಪ್ರಸ್ತುತ ಆ ರಾಜ್ಯದಲ್ಲಿನ ಕೋಟೆಯವರೆವಿಗೂ ನಾಟ್ಯವನ್ನು ಮಾಡುತ್ತಾ ಅಲ್ಲಿಗೆ ಸೇರಿಕೊಳ್ಳುವ ಸಾಹಸವನ್ನು ಮಾಡಬೇಕು ಎಂದು ಕೇಳಿಕೊಳ್ಳುತ್ತಾನೆ. ಆ ಸಮಯದಲ್ಲಿ ಆ ಜೋಡಿಗಳಿಗೆ ಏನು ಮಾಡಬೇಕು? ಎಂದು ಅರ್ಥವಾಗುವುದಿಲ್ಲ.

ಯಾರು ಮಾಡಿಲ್ಲದ ಸಾಹಸ

ಯಾರು ಮಾಡಿಲ್ಲದ ಸಾಹಸ

ಏಕೆಂದರೆ ಇದಕ್ಕಿಂತ ಹಿಂದೆ ಅ ಜೋಡಿಗಳು ಎಂದೂ ಸಹ ಆ ರೀತಿಯ ಸಾಹಸವನ್ನು ಮಾಡಿರಲೇ ಇಲ್ಲ. ಯಾರು ಕೂಡ ಆ ಸಾಹಸವನ್ನು ಮಡಿರಲಿಲ್ಲ ಹಾಗು ಮಾಡುಲು ಸಾಧ್ಯವಿರಲಿಲ್ಲ. ಒಂದು ವೇಳೆ ಈ ಸಾಹಸವನ್ನು ಒಪ್ಪಿಕೊಳ್ಳಲಿಲ್ಲವೆಂದರೆ ರಾಜನಿಗೆ ಕೋಪ ಬರುತ್ತದೆ. ಹಾಗೆ ಮಾಡಲು ಹೊರಟರೆ ಪ್ರಾಣ ಸಂಕಟ ಒದಗಿ ಬರುತ್ತದೆ.

ಕೊನೆಯ ರಾತ್ರಿ

ಕೊನೆಯ ರಾತ್ರಿ

ಕೊನೆಯದಾಗಿ ಸರಿ ಎಂದು ಒಪ್ಪಿಕೊಳ್ಳುತ್ತಾರೆ. ಆ ನರ್ತಕನು ಆ ರಾತ್ರಿ ನಿದ್ರೆ ಮಾಡದೆಯೇ ಇದ್ದನು. ರಾತ್ರಿಯೆಲ್ಲಾ ಹಾಡು ಹಾಡುತ್ತಾ ನೃತ್ಯ ಮಾಡುತ್ತಲೇ ಕಾಲ ಕಳೆದರು. ಏಕೆಂದರೆ ಆ ರಾತ್ರಿಯೇ ಅವರ ಕೊನೆಯ ರಾತ್ರಿಯಾಗಿತ್ತು.

ಮುಗಿಯುತ್ತಿರುವ ಜೀವನ

ಮುಗಿಯುತ್ತಿರುವ ಜೀವನ

ಆದರೆ ಆ ರಾತ್ರಿ ಅವರ ಕೊನೆಯ ರಾತ್ರಿ ಎಂದು ಕೊಂಡು ರೋಧನೆಯ ಹಾಡನ್ನು ಆ ಜೋಡಿಗಳು ಹಾಡುತ್ತಾ ಆ ರಾತ್ರಿ ಕಳೆಯುತ್ತಾರೆ. ಆದರೆ ಆ ದಿನ ರಾತ್ರಿಯೇ ರಾಜನ ಕುಮಾರ ರಾಜ್ಯಾಧಿಕಾರಕ್ಕಾಗಿ ತನ್ನ ತಂದೆಯನ್ನೇ ಕೊಲೆ ಮಾಡಬೇಕು ಎಂದು ಅಂದುಕೊಳ್ಳುತ್ತಾನೆ.

ರಾಜ್ಯ

ರಾಜ್ಯ

ರಾಜನ ಪತ್ನಿಯು ಕೂಡ ಎಲ್ಲಿ ಅರ್ಥ ರಾಜ್ಯವನ್ನು ನರ್ತಕ ಹಾಗು ನರ್ತಕಿಗೆ ನೀಡಬೇಕು ಎಂದು ಬಾಧಿಸುತ್ತಿರುತ್ತಾಳೆ. ರಾಜನ ಒಬ್ಬ ಪುತ್ರಿಯು ಆತಳು ಪ್ರೇಮಿಸಿದ ವ್ಯಕ್ತಿಯ ಜೊತೆ ರಾಜ್ಯವನ್ನು ಬಿಟ್ಟು ಹೊರಡಬೇಕು ಎಂದು ಅಂದುಕೊಳ್ಳುತ್ತಾಳೆ.

 ಸಾಹಸವನ್ನು ಕಾಣಲು

ಸಾಹಸವನ್ನು ಕಾಣಲು

ಆದರೆ ಅವರು ಹಾಡಿದ ರೋಧನೆಯ ಹಾಡನ್ನು ಕೇಳಿ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುತ್ತಾರಂತೆ. ಮರುದಿನ ಸಾವಿರಾರು ಮಂದಿ ಪ್ರಜೆಗಳು ಆ ಸಾಹಸವನ್ನು ಕಾಣಲು ಬರುತ್ತಾರಂತೆ. ಈ ಕೋಟೆಯಿಂದ ಪ್ರಬಲ್ ಘಡ್ ಕೋಟೆಯವರೆಗೆ ಎರಡು ದಾರದ ಮೇಲೆ ಸಾಹಸವನ್ನು ಮಾಡಲು ಪ್ರಾರಂಭ ಮಾಡುತ್ತಾರೆ.

ಆ ಜೋಡಿ

ಆ ಜೋಡಿ

ಆದರೆ ರಾಜ ತನ್ನ ಪರಿವಾರದ ಸಮೇತ ರಾಜ ಮಹಲ್ ಮೇಲೆಯಿಂದ ಈ ಸಾಹಸವನ್ನು ನೋಡುತ್ತಾ ಇರುತ್ತಾರಂತೆ. ಆ ಯುವ ಜೋಡಿಗಳು ಎಷ್ಟೊ ಚಾಕಚಕ್ಯತೆಯಿಂದ ಆ ಸಾಹಸವನ್ನು ಪೂರ್ತಿ ಮಾಡುತ್ತಾರೆ. ಆದರೆ ರಾಜ ಮಾತ್ರ ನರ್ತಕನು ನಡೆಯುವ ದಾರವನ್ನು ಕತ್ತರಿಸಿ ನರ್ತಕಿಯನ್ನು ತನ್ನ ಸ್ವಂತ ಮಾಡಿಕೊಳ್ಳಲು ಬಯಸುತ್ತಾನೆ.

ನರ್ತಕಿಯ ಮರಣ

ನರ್ತಕಿಯ ಮರಣ

ಆದರೆ ಮಹಾರಾಣಿ ಮಾತ್ರ ಅವರು ಗೆದ್ದರೆ ಅರ್ಧ ರಾಜ್ಯವನ್ನು ನೀಡಬೇಕಲ್ಲ ಎಂದು ರೋಧಿಸುತ್ತಿರುತ್ತಾಳೆ. ಹಾಗಾಗಿ ಮಹಾರಾಣಿ ಆ ನರ್ತಕಿಯ ದಾರವನ್ನು ಕತ್ತರಿಸುತ್ತಾಳೆ. ಹಾಗಾಗಿ ಆ ನರ್ತಕಿ ಮೇಲಿಂದ ಬಿದ್ದು ಮರಣಿಸುತ್ತಾಳೆ.

ಅಸ್ತವ್ಯಸ್ತವಾದ ರಾಜ್ಯ

ಅಸ್ತವ್ಯಸ್ತವಾದ ರಾಜ್ಯ

ಪತ್ನಿಯೆಂದರೆ ಅಪರಿಮಿತವಾದ ಪ್ರೇಮವಿದ್ದ ಆ ನರ್ತಕನು ಕೂಡ ತನ್ನ ಪತ್ನಿಯ ಮರಣವನ್ನು ಸಾಹಿಸಿಕೊಳ್ಳಲಾರದೆ ಅವನೂ ಕೂಡ ಕೆಳಗೆ ಬಿದ್ದು ಪ್ರಾಣವನ್ನು ಬಿಡುತ್ತಾನೆ. ಈ ವಿಧವಾಗಿ ಈ ಘಟನೆ ನಡೆದ ಕೆಲವು ಕಾಲಕ್ಕೆ ಆ ರಾಜ ಕೂಡ ಮರಣ ಹೊಂದುತ್ತಾನೆ. ಹಾಗಾಗಿ ರಾಜ್ಯರೆಲ್ಲಾ ಅಸ್ತವ್ಯಸ್ತವಾಗುತ್ತಾರೆ.

ಪ್ರಚಾರದಲ್ಲಿರುವ ಕಥೆ

ಪ್ರಚಾರದಲ್ಲಿರುವ ಕಥೆ

ಪ್ರಬಲ್ ಘಡ್ ರಾಜ್ಯ ಎಂಬುದು ಕಾಲಕ್ರಮೇಣ ನಾಶವಾಗುತ್ತಾ ಬಂದಿತು. ಆನೇಕ ಮಂದಿ ಪ್ರಬಲ್ ಘಡ್ ಹತ್ತುವ ದಾರಿಯಲ್ಲಿ ಮೇಲಿನಿಂದ ಕೆಳಗೆ ನೋಡಿದರೆ ಒಂದು ಮಹಿಳೆ ಹಾಗು ಪುರುಷನ ಆತ್ಮ ಸ್ಪಷ್ಟವಾಗಿ ಕಾಣುತ್ತದೆ ಎಂದು ನಂಬುತ್ತಾರೆ.

ಮೆಟ್ಟಿಲು

ಮೆಟ್ಟಿಲು

ಈ ಬೆಟ್ಟದ ಮೇಲೆ ಕೋಟೆಯಲ್ಲಿ ಸೇರಿಕೊಳ್ಳಲು ಬೆಟ್ಟವನ್ನು ಕೊರೆದು ಮೆಟ್ಟಿಲು ನಿರ್ಮಾಣ ಮಾಡಿದ್ದಾರೆ. ಆದರೆ ಆ ಮೆಟ್ಟಿಲು ಅತ್ಯಂತ ಭಯಂಕರವಾಗಿರುತ್ತದೆ. ಈ ಮೆಟ್ಟಿಲು ಹತ್ತಲು ಸುಲಭ ಎಂದು ಅಂದುಕೊಂಡರೆ ಅದು ಮುರ್ಖತನವಾಗುತ್ತದೆ.

2300 ಅಡಿ ಎತ್ತರ

2300 ಅಡಿ ಎತ್ತರ

ಯಾವುದೇ ಜಾಗ್ರತೆ ಇಲ್ಲದೇ ಹೋದರೂ ಕೂಡ ತಮ್ಮ ಪ್ರಾಣಿ ಪಕ್ಷಿ ಹಾರುವುದಂತು ಖಂಡಿತ. ಆ ಮೆಟ್ಟಿಲು ಹತ್ತಲು ಯಾವುದೇ ರೀತಿಯ ಆಧಾರಗಳು ಅಲ್ಲಿ ಇಲ್ಲ. ಅಪ್ಪಿ ತಪ್ಪಿ ಕಾಲು ಜಾರಿದರೆ ಅಷ್ಟೇ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಬೆಂಗಳೂರಿನಿಂದ ಮಹಾರಾಷ್ಟ್ರಕ್ಕೆ ನೇರವಾದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗು ಖಾಸಗಿ ಬಸ್ಸುಗಳ ಸೂಕ್ತವಾದ ಸೌಕರ್ಯವಿದೆ. ಹಾಗಾಗಿ ಮಹಾರಾಷ್ಟ್ರದ ಹಲವಾರು ತಾಣಗಳ ಜೊತೆಗೆ ಈ ಕಳಾವತಿ ಕೋಟೆ(ಪ್ರಬಲ್ ಕೋಟೆ) ಒಮ್ಮೆ ಭೇಟಿ ನೀಡಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more